ಜಸ್ಟ್ 26 ರೂ..ಯಪ್ಪಾ..ಇಷ್ಟೊಂದು ಚೀಪಾ..1985ರ ರೆಸ್ಟೋರೆಂಟ್ ಬಿಲ್ ವೈರಲ್‌

By Vinutha Perla  |  First Published Nov 23, 2022, 4:01 PM IST

ಕಾಲ ಬದಲಾಗಿದೆ. ಕಾಲ ಬದಲಾಗುತ್ತಾ ಹೋದಂತೆ ಜನರ ಜೀವನಶೈಲಿ, ಆಹಾರಪದ್ಧತಿ, ಆಚಾರ-ವಿಚಾರ ಎಲ್ಲವೂ ಬದಲಾಗುತ್ತಾ ಹೋಗುತ್ತದೆ. ರೂಪಾಯಿಯ ಮೌಲ್ಯವೂ ಹಾಗೆಯೇ. ಹಿಂದೆಲ್ಲಾ ಪೈಸೆಯಲ್ಲೇ ಜನರು ಜೀವನ ನಿರ್ವಹಿಸುತ್ತಿದ್ದರು. ಆದರೆ ಈಗ ಸಾವಿರ, ಲಕ್ಷಗಟ್ಟಲೆ ದುಡ್ಡು ಜೀವನ ನಿರ್ವಹಣೆಗೆ ಬೇಕು. ಹೀಗಿರುವಾಗ 1985ರ ದಶಕದ ರೆಸ್ಟೋರೆಂಟ್ ಬಿಲ್‌ವೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.


ನವದೆಹಲಿ: ನಮ್ಮ ಹಿರಿಯರು ಹೇಳ್ತಾ ಬಂದಿರೋದನ್ನು ನಾವು ಕೇಳಿರಬಹುದು. ಹಿಂದೆಲ್ಲಾ ಐದು ಪೈಸೆಗೆ ಇಷ್ಟು ತಿಂಡಿ ಸಿಗ್ತಿತ್ತು, ಒಂದು ರೂಪಾಯಿಗೆ ಇಷ್ಟು ಗೋಧಿ ಸಿಗ್ತಿತ್ತು ಅನ್ನೋದನ್ನೆಲ್ಲಾ. ಆದರೆ ಈಗ ಕಾಲ ಬದಲಾಗಿದೆ. ಪೈಸೆ, ರೂಪಾಯಿಗೆಲ್ಲಾ ಏನು ಸಿಗಲ್ಲ. ಕಾಸ್ಟ್ಲೀ ಜಮಾನದಲ್ಲಿ ನಾವಿದ್ದೇವೆ. ಶಾಪಿಂಗ್‌, ರೆಸ್ಟೋರೆಂಟ್ ಎಲ್ಲಿಗೆ ಹೋಗೋದಾದ್ರೂ ಕಾರ್ಡ್ ಅಥವಾ ಪರ್ಸ್ ತುಂಬಾ ದುಡ್ಡಿರಲೇಬೇಕು. ನೂರು, ಇನ್ನೂರು ಸಾವಿರ ರೂಪಾಯಿಗಳಲ್ಲಿ ನಿರೀಕ್ಷಿಸಿದಂತೆ ಏನಾದರೂ ಸಿಗುವುದು ಕಷ್ಟ. ಅದರಲ್ಲೂ ಆಹಾರದ (Food) ವಿಷಯಕ್ಕೆ ಬಂದಾಗ ಎಲ್ಲವೂ ಕಾಸ್ಟ್ಲೀಯೆ. ಎಷ್ಟೇ ಕಡಿಮೆ ಎಂದರೂ ಇಂದು ಒಂದು ಊಟದ ಬೆಲೆ ರೆಸ್ಟೋರೆಂಟ್​ನಲ್ಲಿ ರೂ. 1,000-2,000 ಅಂತೂ ಇದ್ದೇ ಇರುತ್ತೆ. ಸಾದಾ ಹೊಟೇಲ್‌ನಲ್ಲೂ ಬೆಲೆ ಕಡಿಮೆಯೇನಿಲ್ಲ. ಒಂದು ಬಾರಿ ಹೊಟೇಲ್‌ಗೆ ಹೋಗ್ಬೇಕು ಅಂದ್ರೂ ಏನಿಲ್ಲಾಂದ್ರೂ ಐನೂರು ರೂ. ಅಂತೂ ಬೇಕೇ ಬೇಕು. ಆದ್ರೆ ಮೂವತ್ತು, ನಲವತ್ತು ವರ್ಷಗಳ ಹಿಂದೆ ಆಗಿರಲ್ಲಿಲ್ಲ. ಆಗ ನೂರು ರೂ, ಇದ್ದರೂ ಹೊಟೇಲ್‌ನಲ್ಲಿ ಭರ್ಜರಿಯಾಗಿ ತಿಂದು ಬರಬಹುದಿತ್ತು.

ನೀವು ಇವತ್ತಿನ ದಿನಗಳಲ್ಲಿ 1 ರೂಪಾಯಿಗೆ ಚಾಕೊಲೇಟ್ ಬಾರ್ ಅನ್ನು ಖರೀದಿಸಬಹುದೇ ? ಅಂಥಾ ವಿಷಯದ ಬಗ್ಗೆ ಮಾತನಾಡಿದ ನಗೆ ಪಾಟಲಿಗೀಡಾಗುವುದು ಖಂಡಿತ. ಆದರೆ 80 ರ ದಶಕದ ಮಧ್ಯಭಾಗದಲ್ಲಿ, ನೀವು ನಿಜವಾಗಿಯೂ ಎರಡು ಅಥವಾ ಮೂರು ಬಾರ್‌ಗಳನ್ನು ರೂ 1 ನೊಂದಿಗೆ ಖರೀದಿಸಬಹುದಿತ್ತು.

Latest Videos

undefined

ಅಬ್ಬಬ್ಬಾ.. 1.3 ಕೋಟಿ ರೂ. ಬಿಲ್‌ ನೀಡಿದ ಅಬು ಧಾಬಿ ರೆಸ್ಟೋರೆಂಟ್‌: ನೆಟ್ಟಿಗರ ಆಕ್ರೋಶ..!

1985ರ ದಶಕದ ರೆಸ್ಟೋರೆಂಟ್‌ ಬಿಲ್ ವೈರಲ್‌
80ರ ದಶಕದ ಮಧ್ಯಭಾಗದಲ್ಲಿ ಸಣ್ಣ ರೆಸ್ಟೋರೆಂಟ್ ಅಥವಾ ಕೆಫೆಯಲ್ಲಿ ಎಷ್ಟು ಬಿಲ್ ಆಗಬಹುದು ಎಂಬ ಕುತೂಹಲ ಸಾಮಾನ್ಯವಾಗಿ ಎಲ್ಲರಲ್ಲೂ ಮೂಡಬಹುದು. ಈ ಪ್ರಶ್ನೆಗೆ ಹೊಸ ದೆಹಲಿ ಮೂಲದ ರೆಸ್ಟೋರೆಂಟ್ ಉತ್ತರ ನೀಡಿದೆ, ಅದು ಇತ್ತೀಚೆಗೆ ಡಿಸೆಂಬರ್ 20, 1985ರ ಗ್ರಾಹಕರ ಬಿಲ್ ಅನ್ನು ಹಂಚಿಕೊಂಡಿದೆ. ಲಜಪತ್ ನಗರದಲ್ಲಿರುವ Lazeez ರೆಸ್ಟೋರೆಂಟ್ ಮತ್ತು ಹೋಟೆಲ್, ಬಿಲ್‌ನ ಫೋಟೋವನ್ನು ಹಂಚಿಕೊಂಡಿದ್ದು ಅದು 26.30 ರೂ. ಮೊತ್ತದ ಹಣವನ್ನು ತೋರಿಸುತ್ತದೆ. ಬಿಲ್‌ನ್ನು ಝೂಮ್ ಇನ್ ಮಾಡಿದರೆ, ಗ್ರಾಹಕರು (Customers) ಶಾಹಿ ಪನೀರ್, ದಾಲ್ ಮಖ್ನಿ, ರೈತಾ ಮತ್ತು ಕೆಲವು ಚಪಾತಿಗಳ ಪ್ಲೇಟ್ ಅನ್ನು ಆರ್ಡರ್ ಮಾಡಿರುವುದು ತಿಳಿದುಬರುತ್ತದೆ. ವಸ್ತುಗಳ ಬೆಲೆ ಕ್ರಮವಾಗಿ ರೂ 8 (ಮೊದಲ ಎರಡು ವಸ್ತುಗಳು), ರೂ 5 ಮತ್ತು ರೂ 6 ಆಗಿತ್ತು. ಹೌದು, ಎಲ್ಲದಕ್ಕೂ 26 ರೂ. ಆಗಿದೆ.

ರೆಸ್ಟೋರೆಂಟ್‌ನ ಪೋಸ್ಟ್ ಇದೀಗ ಸಾವಿರಾರು ಲೈಕ್ಸ್ ಮತ್ತು ಶೇರ್‌ಗಳನ್ನು ಗಳಿಸಿದೆ. 1,800 ಜನರು ಈ ಪೋಸ್ಟ್​ ಇಷ್ಟಪಟ್ಟಿದ್ದಾರೆ. ಸುಮಾರು 540 ಜನರು ಇದನ್ನು ಹಂಚಿಕೊಂಡಿದ್ದಾರೆ. ಈತನಕ 287 ಜನರು ಪ್ರತಿಕ್ರಿಯಿಸಿದ್ದಾರೆ. ಇಷ್ಟೊಂದು ಹಳೆಯ ಬಿಲ್​ ಅನ್ನು ಇನ್ನೂ ಇಟ್ಟುಕೊಂಡಿದ್ದೀರಿ ಧನ್ಯವಾದ ಎಂದಿದ್ದಾರೆ ಒಬ್ಬರು.

ಭಾರತದ ಕೊನೆಯ ಟೀ ಸ್ಟಾಲ್‌ನಲ್ಲಿ ಡಿಜಿಟಲ್ ಪೇಮೆಂಟ್‌ಗೆ ಅವಕಾಶ; ಆನಂದ್ ಮಹೀಂದ್ರಾ ಟ್ವೀಟ್

ನಾಲ್ಕೈದು ಫುಡ್ ಆರ್ಡರ್ ಮಾಡಿದ್ರೂ ಜಸ್ಟ್ 26 ರೂ. !
ಅನೇಕ ಬಳಕೆದಾರರು ಆಹಾರಕ್ಕೆ ಇಷ್ಟು ಕಡಿಮೆ ಬಿಲ್ ಬಂದಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು 1980ರ ದಶಕದಲ್ಲಿ ಭಾರತದಾದ್ಯಂತ ಇಷ್ಟು ಬೆಲೆಯಲ್ಲಿ ಆಹಾರ ದೊರಕುವುದು ಸಾಮಾನ್ಯವಾಗಿತ್ತು ಎಂದು ಹೇಳಿದ್ದಾರೆ.ಒಬ್ಬ ಬಳಕೆದಾರರು 'ಓಹ್ ಅವೆಷ್ಟು ಸುಂದರ ದಿನಗಳು. ನಾನು 1968 ರಲ್ಲಿ ಅಡ್ಯಾರ್‌ನಲ್ಲಿ 20 ಲೀಟರ್ ಪೆಟ್ರೋಲ್‌ಗೆ Rs18.60 ಪಾವತಿಸುತ್ತಿದ್ದೆ. 'ಚೋಕ್ರಾ' ಗೆ 10 ಪೈಗಳನ್ನು ನೀಡುತ್ತಿದ್ದೆ. ಎಸ್‌ಪಿಎಸ್‌ನಲ್ಲಿ ನನ್ನ ಸಂಬಳ ತಿಂಗಳಿಗೆ 550 ಆಗಿತ್ತು' ಎಂದಿದ್ದಾರೆ.  'ಇಂದಿನ ದಿನಗಳಲ್ಲಿ ನಾವು ಒಟ್ಟು ಬೆಲೆಗೆ ಒಂದು ರೋಟಿಯನ್ನು ಮಾತ್ರ ಪಡೆಯಬಹುದು' ಎಂದು ಇನ್ನೊಬ್ಬರು ಬರೆದಿದ್ದಾರೆ.

click me!