ಚಳಿಗಾಲ ಶುರುವಾಗಿದೆ. ಮೈ ನಡುಗಿಸೋ ಚಳಿಯ ಜೊತೆ ಶೀತ, ಜ್ವರ ಮೊದಲಾದ ಅನಾರೋಗ್ಯವೂ ಹಲವರನ್ನು ಕಾಡುತ್ತಿದೆ. ಹೀಗಾಗಿ ಚಳಿಗಾಲದಲ್ಲಿ ಆರೋಗ್ಯ ಚೆನ್ನಾಗಿಡಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತಿನ್ನೋ ಆಹಾರ ಹಾಗೂ ಪಾನೀಯದ ಬಗ್ಗೆಯೂ ಗಮನಹರಿಸಬೇಉ. ಕೆಲವೊಂದು ಹೆಲ್ದೀ ಪಾನೀಯಗಳು ಡೀಟೈಲ್ಸ್ ಇಲ್ಲಿದೆ.
ಆಹಾರ ತಜ್ಞೆ ಶಿಖಾ ಅಗರ್‌ವಾಲ್ ಶರ್ಮಾ ಅವರು ಚಳಿಗಾಲ (Winter)ದಲ್ಲಿ ಸೇವಿಸಬಹುದಾದ ಕೆಲವು ಆರೋಗ್ಯಕರ ಪಾನೀಯಗಳ ಬಗ್ಗೆ ಹೇಳುತ್ತಾರೆ. ಇದು ನಿಮಗೆ ಚಳಿಗಾಲದ ರೋಗಗಳ (Disease) ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ದೇಹ (Body)ದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರೊಂದಿಗೆ ನೀವು ಕೋವಿಡ್-19 ಮತ್ತು ಇತರ ಕಾಲೋಚಿತ ರೋಗಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಇವುಗಳಲ್ಲಿ ಹಾಲು, ಬಿಸಿ ಚಾಕೊಲೇಟ್ ಮತ್ತು ಕಾಫಿಯಂತಹ ಟೇಸ್ಟೀ ಪಾನೀಯಗಳು ಸಹ ಸೇರಿವೆ. ಮಕ್ಕಳಿಂದ ಹಿರಿಯರ ವರೆಗೆ ಎಲ್ಲರಿಗೂ ಈ ಪಾನೀಯಗಳು (Drinks) ಇಷ್ಟವಾಗುತ್ತವೆ. ಈ ಆರೋಗ್ಯಕರ ಪಾನೀಯಗಳು ದೇಹವನ್ನು ಶೀತದಿಂದ ರಕ್ಷಿಸುವುದಲ್ಲದೆ, ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಸಹ ನೀಡುತ್ತದೆ. ಇವುಗಳನ್ನು ಕುಡಿದ ನಂತರ ಚಳಿಗಾಲದಲ್ಲಿಯೂ ಸಹ ಶಾಖದ ಅನುಭವವಾಗುತ್ತದೆ.
ಬಾದಾಮಿ ಹಾಲು: ಚಳಿಗಾಲದಲ್ಲಿ ಬಾದಾಮಿ ಹಾಲನ್ನು ತುಂಬಾ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಹಾಲು ಮತ್ತು ಬಾದಾಮಿಯಲ್ಲಿರುವ ಅನೇಕ ರೀತಿಯ ಪೋಷಕಾಂಶಗಳು ನಿಮಗೆ ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತವೆ. ಈ ಪಾನೀಯವನ್ನು ತಯಾರಿಸಲು, ರುಬ್ಬಿದ ಬಾದಾಮಿಯನ್ನು ಹಾಲಿನಲ್ಲಿ ಬೆರೆಸಿ ಮತ್ತು ಕೆಲವು ನಿಮಿಷಗಳ ಕಾಲ ಕುದಿಸಿಕೊಳ್ಳಬೇಕು. ಇದರ ರುಚಿಯನ್ನು ಇನ್ನಷ್ಟು ಹೆಚ್ಚಿಸಲು ಕೇಸರಿ, ಏಲಕ್ಕಿ ಮುಂತಾದ ಪರಿಮಳವನ್ನು ಕೂಡ ಸೇರಿಸಬಹುದು. ಪ್ರತಿಯೊಬ್ಬರೂ ಈ ಪಾನೀಯವನ್ನು ಇಷ್ಟಪಡುತ್ತಾರೆ. ಚಳಿಗಾಲದಲ್ಲಿ ಈ ಪಾನೀಯವ್ನು ಸೇವಿಸುವುದರಿಂದ ದೇಹ ಬೆಚ್ಚಗಿರುತ್ತದೆ.
Winter Tips: ಚಳಿಗಾಲದಲ್ಲಿ ಕಿವಿನೋವಿನ ಕಾಟನಾ ? ಇಲ್ಲಿದೆ ಪರಿಹಾರ
ಅರಿಶಿನ ಹಾಲು: ಅನಾರೋಗ್ಯಕ್ಕೆ ಒಳಗಾದ ತಕ್ಷಣ ಅರಿಶಿನ ಹಾಲು (Turmeric milk) ಕುಡಿಯುವುದು ಭಾರತದಲ್ಲಿ ಹಲವು ವರ್ಷಗಳಿಂದ ಆಚರಣೆಯಲ್ಲಿರುವ ಸಂಪ್ರದಾಯ. ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಈ ಪಾನೀಯವು ನಿಮ್ಮನ್ನು ಬೆಚ್ಚಗಿಡುವುದರ ಜೊತೆಗೆ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅರಿಶಿನದ ಹಾಲು ಶೀತ ಮತ್ತು ಕೆಮ್ಮನ್ನು ಬಹಳ ಬೇಗ ಗುಣಪಡಿಸುತ್ತದೆ. ಹೀಗಾಗಿಯೇ ಚಳಿಗಾಲದಲ್ಲಿ ಕಾಯಿಲೆಗಳಿಂದ ದೂರವಿರಲು ಅರಿಶಿನ ಹಾಲು ಕುಡಿಯೋ ಅಭ್ಯಾಸ ಒಳ್ಳೆಯದು.
ಕಾಶ್ಮೀರಿ ಕಾಫಿ: ನೀವು ಇಲ್ಲಿಯವರೆಗೆ ಆರೋಗ್ಯಕರ ಮತ್ತು ಟೇಸ್ಟಿ ಕಾಶ್ಮೀರಿ ಕಾಫಿಯನ್ನು ಸೇವಿಸದಿದ್ದರೆ, ಈ ಚಳಿಗಾಲದಲ್ಲಿ ಖಂಡಿತವಾಗಿಯೂ ಅದನ್ನು ಆನಂದಿಸಿ. ಕಹ್ವಾ ಇಲ್ಲದೆ ಚಳಿಗಾಲದ ಅಪೂರ್ಣವಾಗಿರುತ್ತದೆ. ಹಸಿರು-ಚಹಾ, ಕೇಸರಿ, ದಾಲ್ಚಿನ್ನಿ, ಜೇನುತುಪ್ಪ ಮತ್ತು ಏಲಕ್ಕಿಯಂತಹ ಆರೋಗ್ಯಕರ ಮತ್ತು ಪ್ರಯೋಜನಕಾರಿ ವಸ್ತುಗಳನ್ನು ಕಹ್ವಾ ತಯಾರಿಸಲು ಬಳಸಲಾಗುತ್ತದೆ. ಕಹ್ವಾವನ್ನು ಸರ್ವ್ ಮಾಡುವಾಗ ಅದಕ್ಕೆ ಬಾದಾಮಿ (Almond)ಯನ್ನು ಸಹ ಸೇರಿಸಲಾಗುತ್ತದೆ. ಶೀತ ವಾತಾವರಣದಲ್ಲಿ ದೇಹವನ್ನು ಸಂಪೂರ್ಣವಾಗಿ ಬೆಚ್ಚಗಾಗಿಸಲು ಇದು ನಿಮಗೆ ಸಹಾಯ ಮಾಡುತ್ತದೆ.
ಚಳಿಗಾಲದಲ್ಲಿ ಕಾಡೋ ಹಿಮ್ಮಡಿ ಒಡೆತ, ಹೀಗ್ ಮಾಡಿ ಮನೆ ಮದ್ದು
ಹಾಟ್ ಚಾಕೊಲೇಟ್: ಹಾಟ್ ಚಾಕೊಲೇಟ್ ಹೆಸರು ಕೇಳಿದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬಾಯಲ್ಲಿ ನೀರು ಬರುತ್ತೆ.ಯಾಕೆಂದರೆ ಎಲ್ಲರಿಗೂ ಚಾಕಲೇಟ್ ಇಷ್ಟ. ಚಳಿಗಾಲದಲ್ಲಿ ಹಾಟ್ ಚಾಕೋಲೇಟ್ ಕುಡಿಯುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಇದು ದೇಹವನ್ನು ಬೆಚ್ಚಗಾಗಿಸುವಾಗ ಮೂಲಕ ಶಕ್ತಿಯ ಮಟ್ಟವನ್ನು (Energy level) ಹೆಚ್ಚಿಸುತ್ತದೆ. ಇದಕ್ಕೆ ದಾಲ್ಚಿನ್ನಿ ಸೇರಿಸುವ ಮೂಲಕ ನೀವು ಅದನ್ನು ಇನ್ನಷ್ಟು ರುಚಿಯಾಗಿ ಮತ್ತು ಆರೋಗ್ಯಕರವಾಗಿ ಮಾಡಬಹುದು.
ಕಷಾಯ: ಕೋವಿಡ್ ಸಮಯದಲ್ಲಿ ಮತ್ತು ನಂತರ ಹೆಚ್ಚಿನವರು ರೋಗ ನಿರೋಧಕ ಶಕ್ತುಯನ್ನು ಹೆಚ್ಚಿಸುವ ಕಷಾಯ ಸವಿಯಲು ಇಷ್ಟಪಡುತ್ತಾರೆ. ಇದು ರುಚಿಯ (Taste) ಜೊತೆಗೆ ನಮ್ಮ ದೇಹಕ್ಕೆ ಸಾಕಷ್ಟು ಪೋಷಣೆಯನ್ನು ನೀಡುತ್ತದೆ. ನೀವು ಚಳಿಗಾಲದಲ್ಲಿ ರೋಗಗಳಿಂದ ದೂರವಿರಲು ಬಯಸಿದರೆ, ಏಲಕ್ಕಿ, ದಾಲ್ಚಿನ್ನಿ, ಶುಂಠಿ, ಕರಿಮೆಣಸು ಮತ್ತು ಕೆಲವು ತುಳಸಿ ಎಲೆಗಳನ್ನು ನೀರಿನಲ್ಲಿ ಬೆರೆಸಿ ಕುದಿಸಿ. ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಚಹಾದಂತೆ ಕುಡಿಯಿರಿ. ಇದರ ನಿಯಮಿತ ಸೇವನೆಯು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.