ಕಣ್ಮರೆಯಾಗುತ್ತಿರುವ ಅಕ್ಕಿ ತಳಿಗಳಲ್ಲಿ ಮೂಡಿ ಬಂದ ವೈವಿಧ್ಯಮಯ ತಿನಿಸುಗಳು

By Gowthami K  |  First Published Nov 22, 2022, 3:31 PM IST

ಸಮುದಾಯವನ್ನು ಹವಾಮಾನ ವೈಪರೀತ್ಯಗಳಿಗೆ ಒಗ್ಗಿಕೊಳ್ಳುವಂತಹ  ಬೆಳೆಗಳ ಸೇವನೆಯತ್ತ ಪ್ರೋತ್ಸಾಹಿಸುವ ಮತ್ತು ಅಪೌಷ್ಟಿಕತೆಯ ವಿರುದ್ಧ ಹೋರಾಡುವ ಉದ್ದೇಶದಿಂದ ಗ್ರೀನ್‌ಪೀಸ್ ಇಂಡಿಯಾ ಕುಕ್ಕಿಂಗ್‌ ಅಪ್‌ ಚೇಂಜ್‌- ಅಕ್ಕಿ ತಳಿಗಳ ಮರುಶೋಧನೆ ಎಂಬ ಕಾರ್ಯಕ್ರಮವನ್ನು    ಆಯೋಜಿಸಿತ್ತು. ಇದು ಕಣ್ಮರೆಯಾಗುತ್ತಿರುವ ವಿವಿಧ ದೇಸೀ ಅಕ್ಕಿ ತಳಿಗಳನ್ನು ಬಳಸಿಕೊಂಡು ಮಾಡಲಾದ ವೈವಿಧ್ಯಪೂರ್ಣ ಅಡುಗೆಗೆ ಸಾಕ್ಷಿಯಾಯಿತು.


ಬೆಂಗಳೂರು (ಅ.22): ಗ್ರೀನ್‌ಪೀಸ್ ಇಂಡಿಯಾ ಆಯೋಜಿಸಿದ ಕುಕ್ಕಿಂಗ್‌ ಅಪ್‌ ಚೇಂಜ್‌- ಅಕ್ಕಿ ತಳಿಗಳ ಮರುಶೋಧನೆ ಕಾರ್ಯಕ್ರಮ ಕಣ್ಮರೆಯಾಗುತ್ತಿರುವ ವಿವಿಧ ದೇಸೀ ಅಕ್ಕಿ ತಳಿಗಳನ್ನು ಬಳಸಿಕೊಂಡು ಮಾಡಲಾದ ವೈವಿಧ್ಯಪೂರ್ಣ ಅಡುಗೆಗೆ ಸಾಕ್ಷಿಯಾಯಿತು.  ಸಮುದಾಯವನ್ನು ಹವಾಮಾನ ವೈಪರೀತ್ಯಗಳಿಗೆ ಒಗ್ಗಿಕೊಳ್ಳುವಂತಹ  ಬೆಳೆಗಳ ಸೇವನೆಯತ್ತ ಪ್ರೋತ್ಸಾಹಿಸುವ ಮತ್ತು ಅಪೌಷ್ಟಿಕತೆಯ ವಿರುದ್ಧ ಹೋರಾಡುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮ  ಭಾನುವಾರ  ಯಲಹಂಕದ ಆರ್‌ಎಂಝಡ್ ಗ್ಯಾಲೇರಿಯಾದಲ್ಲಿ ನಡೆಯಿತು. ಆರೋಗ್ಯಕರ ಮತ್ತು ರಾಸಾಯನಿಕ-ಮುಕ್ತ ಆಹಾರ ಸೇವನೆ ಕುರಿತಂತೆ ಸಾರ್ವಜನಿಕರಲ್ಲಿ ಸಾಕಷ್ಟು ಉತ್ಸಾಹ ಮತ್ತು ಕಾಳಜಿ ಇದ್ದರೂ, ಈ ನಿಟ್ಟಿನಲ್ಲಿ ಸ್ಥಳೀಯ ಆಹಾರ ಪದಾರ್ಥಗಳನ್ನು  ದೊಡ್ಡ ಪ್ರಮಾಣದಲ್ಲಿ ಸೂಕ್ತವಾಗಿ ಬಳಕೆ ಮಾಡಿಕೊಳ್ಳಲಾಗಿಲ್ಲ. ಇದಕ್ಕೆ ಅವುಗಳ ಅಲಭ್ಯತೆ, ಹೆಚ್ಚು ಪರಿಚಿತವಲ್ಲದ ಈ ತಳಿಗಳೆಡೆಗೆ ಆತಂಕಗಳು, ತಪ್ಪು ಮಾಹಿತಿ  ಹೀಗೆ ಹಲವಾರು ಕಾರಣಗಳಿವೆ. ಪ್ರಸ್ತುತ ಪರಿಸ್ಥಿತಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ಗ್ರೀನ್‌ಪೀಸ್‌ ಇಂಡಿಯಾ ಹೆಜ್ಜೆ ಇಡುತ್ತಿದೆ. ಭಾರತದಲ್ಲಿ ಕಣ್ಮರೆಯಾಗುತ್ತಿರುವ ಭತ್ತದ ತಳಿಗಳನ್ನು ಜನರಿಗೆ ಪರಿಚಯಿಸಿ, ಅದನ್ನು ಬಳಸುವಂತೆ ಪ್ರೇರೇಪಿಸುವ ಸಲುವಾಗಿ ಗ್ರೀನ್‌ ಪೀಸ್‌ ಇಂಡಿಯಾ ʻಕುಕ್ಕಿಂಗ್‌ ಅಪ್‌ ಚೇಂಜ್‌ʼ ಎಂಬ ವಿನೂತನ ಪರಿಕಲ್ಪನೆಯೊಂದಿಗೆ ದೇಸೀ ಅಕ್ಕಿಯಿಂದ ಅನ್ನ ತಯಾರಿಸುವುದು ಹೇಗೆ ಎಂಬುದರಿಂದ ಮೊದಲುಗೊಂಡು, ವಿವಿಧ ಬಗೆಯ ತಿನಿಸುಗಳ ತಯಾರಿಕಾ ವಿಧಾನವನ್ನು ಸಾದರಪಡಿಸಿತು.

ಗ್ರೀನ್‌ಪೀಸ್ ಇಂಡಿಯಾದ ಬಾಣಸಿಗರಾದ ಚೆಫ್‌ ರುತ್ವಿಕ್ ಖಾಸ್ನಿಸ್ ಮತ್ತು ಚೆಫ್‌ ವಿಕಾಸ್ ಪೃಥ್ವಿನಾಥ್  ಅಪ್ಪಟ ದೇಸೀ, ರುಚಿಕರ, ಸುವಾಸನೆಯುಳ್ಳ, ಪರಿಸರ ಸ್ನೇಹಿ ಮತ್ತು ಆರೋಗ್ಯಕರ ಭತ್ತದ ತಳಿಗಳಾದ ನಿಜಾವರ, ಗಂಧಕಶಾಲ, ವಲಿಯಾಚೆನ್ನೆಲ್ಲು ಮತ್ತು ಮುಲ್ಲಂಕೈಮಾ ಮುಂತಾದ ಅಕ್ಕಿಗಳನ್ನು ಬಳಸಿಕೊಂಡು ಸ್ವಾದಿಷ್ಟಭರಿತ ತಿಂಡಿಗಳನ್ನು ತಯಾರಿಸಿದರು. ಈ ಕಾರ್ಯಕ್ರಮವು ರೈತರಿಂದ ಸಾವಯವ ಭತ್ತದ ತಳಿಗಳ ಪ್ರದರ್ಶನ ಮತ್ತು ಮಾರಾಟವನ್ನು ಸಹ ಒಳಗೊಂಡಿತ್ತು.

Tap to resize

Latest Videos

ಕಾರ್ಯಕ್ರಮದ ಕುರಿತು ಮಾತನಾಡಿದ  ಗ್ರೀನ್‌ಪೀಸ್ ಇಂಡಿಯಾದ ಪ್ರಚಾರಕ ರುತ್ವಿಕ್ ಅಜಿತ್ ಖಾಸ್ನಿಸ್, “ನಾವು ಹೆಚ್ಚಾಗಿ ಸಾವಯವ ಆಹಾರವನ್ನು ಉತ್ತೇಜಿಸಲು ನಗರವಾಸಿಗಳನೇ ಆಯ್ಕೆ ಮಾಡಿಕೊಂಡಿದ್ದೇವೆ. ಅವರು ತಂತ್ರಜ್ಞಾನ ಆಧಾರಿತ ಇಂದಿನ ಹೊಸ ಮಾದರಿಯ ಮಾರುಕಟ್ಟೆಗಳಿಗೆ ತೆರೆದುಕೊಳ್ಳುವ ಹಾಗು ನವೀನ ತಾಂತ್ರಿಕತೆಗಳನ್ನು ಬಳಸಿ ಹೊಸ ಮಾದರಿಗಳನ್ನು ನಿರ್ಮಿಸುವ ಮನೋಭಾವವನ್ನು ಹೊಂದಿದ್ದಾರೆ. ಸಾವಯವ ರೈತರು ಮತ್ತು ರೈತರು ಮತ್ತು ಉತ್ಪಾದಕರ ಸಂಸ್ಥೆಗಳು( ಎಫ್‌ಪಿಒ) ಗಳು ಈ ಪ್ರಕ್ರಿಯೆಯ ಪ್ರಮುಖ ಭಾಗವಾಗಿದೆ. ಅವರು ನಾಗರಿಕರ ಪೌಷ್ಟಿಕಾಂಶದ ಎಲ್ಲಾ ಅಗತ್ಯತೆಗಳನ್ನು ಪೂರೈಸುವ ಹಾಗು ಸುಸ್ಥಿರ, ಸ್ಥಳೀಯ ಆಹಾರ ವ್ಯವಸ್ಥೆಯನ್ನು ನಿರ್ಮಿಸುವ ನಮ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆʼʼ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಆಸಕ್ತರು ತಯಾರಿಸಿದ ಅಡುಗೆಯನ್ನು ಸಂಪೂರ್ಣವಾಗಿ ಸಾವಯವ ಧಾನ್ಯಗಳಿಂದಲೇ ಮಾಡಲಾಗಿದ್ದು, ಅದನ್ನು ಸಾವಯವ ಕೃಷಿಕರಿಂದಲೇ ಖರೀದಿಸಲಾಗಿದೆ.  ಕಾರ್ಯಕ್ರಮದಲ್ಲಿ ಭಾಗವಹಿಸಿದ ಆಸಕ್ತ ಬಾಣಸಿಗರಲ್ಲಿ ಒಬ್ಬರಾದ ಶ್ರೀಮತಿ ಪುಷ್ಪಾ ಬ್ಲೆಸ್ಸಿಂಗ್ಸ್‌ ಅವರು, ಕುಚ್ಚಲಕ್ಕಿ ಮಾದರಿಯ  ವಯನಾಡ್ ತೊಂಡಿ ಮತ್ತು ಚೆಂದಾಲಿ ಎಂಬ ಪಾಲಿಶ್ ಮಾಡದ ಕೇರಳದ ವಯನಾಡ್‌ ಮೂಲದ ಎರಡು ವಿಧದ ಅಕ್ಕಿಯನ್ನು ಬಳಸಿ ಇಡ್ಲಿಗಳನ್ನು ತಯಾರಿಸಿದರು.  ಇನ್ನೂ ಪ್ರೌಢಶಾಲೆಯಲ್ಲಿ ಓದುತ್ತಿರುವ ಚಿಕ್ಕ ಹುಡುಗ ಚಯಾನ್, ಮಂಡ್ಯ ಜಿಲ್ಲೆಯಿಂದ ಬಂದ ಗಂಧಸಾಲೆ ಎಂಬ ಪರಿಮಳಯುಕ್ತ ಭತ್ತದ ತಳಿಯನ್ನು ಬಳಸಿ ತಯಾರಿಸಿದ ಬಿರಿಯಾನಿ ಎಲ್ಲರ ಬಾಯಲ್ಲಿ ನೀರೂರಿಸಿತು. ಬೆಂಗಳೂರಿನ ಅಚ್ಚುಮೆಚ್ಚಿನ ಖಾದ್ಯ ಬಿಸಿಬೇಳೆಬಾತ್ ನ್ನು ತಯಾರಿಸಲು ಮುಂದಾದ ಬೆಂಗಳೂರಿನ ಪ್ರಿಯಾ  ಸಣ್ಣ ರಾಗಿ (ಗೋಂಧ್ಲಿ) ಜೊತೆಗೆ ಗಾಳಿಗೆಣಸಿನಂತಹ ಕೆಲವು ಮರೆಯಾಗಿರುವ ವಿಶೇಷ ಆರೋಗ್ಯಕರ ತಿನಿಸು ತಯಾರಿಸಿ ಎಲ್ಲರ ಮನಸೆಳೆದರು.

ಮರುಶೋಧಿಸಿದ ಅಕ್ಕಿ ತಳಿಗಳು: ಅಕ್ಕಿ ಭಾರತದಲ್ಲಿ ವ್ಯಾಪಕವಾಗಿ ಸೇವಿಸುವ ಏಕದಳ ಧಾನ್ಯ ಮತ್ತು ಉಪಖಂಡದಲ್ಲಿ ಇದು ಪ್ರಮುಖ ಆಹಾರ ಬೆಳೆಯಾಗಿದೆ. ಭಾರತವು ಭತ್ತ ಬೆಳೆಯುವ ಎರಡನೇ ಅತಿದೊಡ್ಡ ರಾಷ್ಟ್ರವಾಗಿದೆ ಮತ್ತು ಈ ಬೆಳೆಯನ್ನು  ಆಹಾರ ಭದ್ರತೆಯ ಪ್ರಮುಖ ಆಧಾರಸ್ತಂಭವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ಬೆಳೆಯುವ ಹಲವಾರು ಸಾಂಪ್ರದಾಯಿಕ ಭತ್ತದ ತಳಿಗಳು ಪೌಷ್ಟಿಕಾಂಶ ಮತ್ತು ಔಷಧೀಯ ಮೌಲ್ಯಗಳನ್ನು ಹೊಂದಿವೆ ಮತ್ತು ಅನೇಕ ರೋಗಗಳಿಗೆ ಚಿಕಿತ್ಸೆ ನೀಡಬಲ್ಲವು ಎಂದು ಅಧ್ಯಯನಗಳು ಸಾಬೀತುಪಡಿಸಿವೆ.

ಹಸಿರು ಕ್ರಾಂತಿಯ ಮೊದಲು ಭಾರತವು ಒಂದು ಲಕ್ಷಕ್ಕೂ ಹೆಚ್ಚು ಭತ್ತವನ್ನು ಬೆಳೆಯುತ್ತಿದ್ದರೂ, ಈಗ ಕೇವಲ 6,000 ಭತ್ತದ ತಳಿಗಳು ಮಾತ್ರ ಉಳಿದುಕೊಂಡಿವೆ. ಅವುಗಳಲ್ಲಿ, ಇಂದು ತಯಾರಿಸಲಾದ ವಿವಿಧ ಖಾದ್ಯಗಳಲ್ಲಿ ಈ ಕೆಳಗೆ ಪಟ್ಟಿ ಮಾಡಿದ ಈ ತಳಿಗಳನ್ನು ಬಳಸಲಾಯಿತು. ನಿಜಾವರ ಕೇರಳದ ಜನಪ್ರಿಯ ಔಷಧೀಯ ಕೆಂಪು ಅಕ್ಕಿಯಾಗಿದ್ದು ಇದನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ.

ಕುದಿಸಿದಷ್ಟೂ ಟೀ ರುಚಿಯಾಗೋದು ಹೌದು, ಆದರೆ ಎಷ್ಟು ಕುದಿಸಿದರೆ ಓಕೆ?

ಗಂಧಕಶಾಲವು ಸುವಾಸನೆಭರಿತವಾಗಿದ್ದು,  ಗಾತ್ರದಲ್ಲಿ ಚಿಕ್ಕದಾಗಿದ್ದು ದಪ್ಪವಾಗಿರುವ ಬಿಳಿ ಅಕ್ಕಿ. ಇದು ಮೂಲತಃ ವಯನಾಡ್‌ಗೆ ಸೇರಿದ್ದಾಗಿದ್ದು ಮಲಬಾರ್ ಬಿರಿಯಾನಿಯ ಅಂತ:ಸತ್ತ್ವವೇ ಇದರಲ್ಲಿ ಅಡಗಿದೆ.

ನೀವು ಎಷ್ಟೇ ಬಯಸಿದ್ರೂ ಡಯಟ್ ಫಾಲೋ ಮಾಡಲು ಆಗ್ತಿಲ್ವಾ?, ಈ ಹ್ಯಾಕ್ಸ್ ಟ್ರೈ ಮಾಡಿ!

ವಲಿಯಾಚೆನ್ನೆಲ್ಲು ಒಂದು ಔಷಧೀಯ ಅಕ್ಕಿ ಮತ್ತು ಇದರಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿದೆ. ಹೀಗಾಗಿ ಸಾಂಪ್ರದಾಯಿಕವಾಗಿ ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ಇದರ ನುಚ್ಚಕ್ಕಿಯನ್ನು ನೀಡಲಾಗುತ್ತದೆ. ರಕ್ತಹೀನತೆಯ ನಿವಾರಿಸಲು ಸಹ ಇದು ಉಪಯುಕ್ತವಾಗಿದೆ. ಮುಲ್ಲಂಕಿಮಾವನ್ನು ಇದರಲ್ಲಿ ಹೆಚ್ಚಿನ ವಿಟಮಿನ್ ಎ ಅಂಶವಿರುವುದರಿಂದ ಮಕ್ಕಳಿಗೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.

click me!