ಗೋಲ್‌ಗಪ್ಪಾ (Golgappa) ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..ಅದ್ರಲ್ಲೂ ಹುಡುಗೀರಂತೂ ಗೋಲ್‌ಗಪ್ಪಾ ಸ್ಟಾಲ್‌ನ ಹತ್ತಿರ ಎಷ್ಟು ಹೊತ್ತು ಬೇಕಾದ್ರೂ ಕ್ಯೂ ನಿಂತು ಗೋಲ್‌ಗಪ್ಪಾ ತಿನ್ತಾರೆ. ನೀವು ಗೋಲ್‌ಗಪ್ಪಾ ಪ್ರಿಯರಾಗಿದ್ರೆ ಒಂದ್ ಗುಡ್ ನ್ಯೂಸ್ ಇದೆ ಕೇಳಿ. ಗೋಲ್‌ಗಪ್ಪಾ ತಿನ್ನೋದ್ರಿಂದ ತೂಕ ಇಳಿಸ್ಕೊಂಡು ಸಣ್ಣಗಾಗ್ಬೋದಂತೆ.
ಗೋಲ್‌ಗಪ್ಪಾ (Golgappa) ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಸ್ಟ್ರೀಟ್ ಫುಡ್ (Street Food) ಆಗಿದೆ. ಸಂಜೆಯಾದ್ರೆ ಸಾಕು ರಸ್ತೆ ಬದಿಗಳಲ್ಲಿ, ಗಲ್ಲಿಗಲ್ಲಿಗಳಲ್ಲಿ ಜನರು ನಿಂತು ಗೋಲ್‌ಗಪ್ಪಾ ತಿನ್ನುತ್ತಾರೆ. ಸ್ಪಲ್ಪ ಹುಳಿ, ಸ್ಪಲ್ಪ ಖಾರ, ಸ್ಪಲ್ಪ ಸಿಹಿಯಾಗಿರೋ ಟೇಸ್ಟ್‌ಗೆ ಬೇರ್ಯಾವುದೂ ಸಾಟಿಯಾಗಲಾರದು. ಅದರಲ್ಲೂ ಕೆಲವೊಬ್ರು ಭಯ್ಯಾ ಕುಚ್ ಆರ್ ಟೀಕಾ ಅಂತ್ಹೇಳಿ ಮತ್ತಷ್ಟು ಖಾರ ಹಾಕಿಸಿಕೊಂಡು ಕಣ್ಣಲ್ಲಿ, ಬಾಯಲ್ಲಿ ನೀರು ಬರಿಸಿಕೊಂಡು ಗೋಲ್‌ಗಪ್ಪಾ ತಿನ್ನೋದನ್ನು ನೋಡಿರಬಹುದು. ಖಾರ ಕಡಿಮೆ ಹಾಕಿಸಿಕೊಂಡು ಗೋಲ್‌ಗಪ್ಪಾ ಸ್ವಾದ ಸವಿಯುವವರು ಇನ್ನು ಕೆಲವರು. ಇವಿಷ್ಟೇ ಅಲ್ದೆ ಗೋಲ್‌ಗಪ್ಪಾದಲ್ಲಿ ಮಿಂಟ್, ಜೀರಾ, ಮಿರ್ಚಿ ಅಂತ ಕೆಲವೊಂದು ಸ್ಟಾಲ್‌ಗಳಲ್ಲಿ ಇನ್ನಷ್ಟು ವೆರೈಟಿಯಾಗಿ ಕೊಡ್ತಾರೆ.
ನೀವು ಕೂಡಾ ಗೋಲ್‌ಗಪ್ಪಾ ಪ್ರಿಯರಾಗಿದ್ರೆ, ಮನೇಲಿ ಡೈಲಿ ಎಷ್ಟು ಆ ರೋಡ್ ಸೈಡ್ ಫುಡ್ ತಿಂತೀಯಾ ಅನ್ನೋ ಬೈಗುಳ ಕೇಳ್ತಾ ಇದ್ರೆ, ಗೋಲ್‌ಗಪ್ಪಾದ ಬಗ್ಗೆ ಗೊತ್ತಾಗಿರುವ ಲೇಟೆಸ್ಟ್ ಸುದ್ದಿ ಕೇಳಿ. ಗೋಲ್‌ಗಪ್ಪಾ ತಿನ್ನೋದ್ರಿಂದ ತೂಕ ಇಳಿಸ್ಕೊಂಡು ಸಣ್ಣಗಾಗ್ಬೋದಂತೆ.
undefined
ಗೋಲ್ಗಪ್ಪಗೆ ಈ ವಿಧಾನದಿಂದ ಮನೆಯಲ್ಲೇ ಮಾಡಿ ಗರಿಗರಿ ಪುರಿ!
ನಿಜವಾಗಿಯೂ ತೂಕವನ್ನು ಕಳೆದುಕೊಳ್ಳಲು ಪಾನಿ ಪುರಿ ನಿಮಗೆ ಸಹಾಯ ಮಾಡಬಹುದೇ? ಗೋಲ್‌ಗಪ್ಪಾಗಳನ್ನು ತಿನ್ನುವುದು ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಜ್ಞರು ವಿವರಿಸುತ್ತಾರೆ. ಜೈಪುರದ ಶಾಲ್ಬಿ ಆಸ್ಪತ್ರೆಗಳ ಹಿರಿಯ ಕ್ಲಿನಿಕಲ್ ಡಯೆಟಿಷಿಯನ್ ನೇಹಾ ಭಾಟಿಯಾ ಮತ್ತು ಮುಂಬೈನ ಅಪೋಲೊ ಸ್ಪೆಕ್ಟ್ರಾ ಆಸ್ಪತ್ರೆಯ ಡಯೆಟಿಷಿಯನ್ ಡಾ.ಜಿನಾಲ್ ಪಟೇಲ್ ಈ ಬಗ್ಗೆ ಮಾಹಿತಿ ನೀಡುತ್ತಾರೆ.
ಗೋಲ್‌ಗಪ್ಪಾದಲ್ಲಿರುವ ಜೀರಿಗೆ (Cumin)ಯ ಅಂಶ ಉತ್ಕರ್ಷಣ ನಿರೋಧಕಗಳು ಮತ್ತು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿರುತ್ತವೆ. ಇದು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿರುವ ದೇಹದಲ್ಲಿನ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಗೋಲ್‌ಗಪ್ಪಾ ಕಡಿಮೆ ಕೊಲೆಸ್ಟ್ರಾಲ್ (Cholesterol), ಕಪ್ಪು ಉಪ್ಪು ಖನಿಜಗಳಿಂದ ತುಂಬಿರುತ್ತದೆ ಮತ್ತು ಟೇಬಲ್ ಉಪ್ಪಿಗಿಂತ ಕಡಿಮೆ ಪ್ರಮಾಣದ ಸೋಡಿಯಂ ಅನ್ನು ಹೊಂದಿರುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಚರ್ಮ ಮತ್ತು ಕೂದಲಿನ ಗುಣಮಟ್ಟವನ್ನು ಹೆಚ್ಚಿಸುತ್ತದೆ.
Viral Video: ಬಾಯಲ್ಲಿ ನೀರೂರಿಸೋ ಮಿರಿಂಡಾ ಗೋಲ್‌ಗಪ್ಪಾ ಬಗ್ಗೆ ಕೇಳಿದ್ದೀರಾ..!
ಗೋಲ್‌ಗಪ್ಪಾ ಮತ್ತು ತೂಕ ನಷ್ಟಕ್ಕೆ ಸಂಬಂಧವಿದ್ಯಾ ?
ಗೋಲ್‌ಗಪ್ಪಾ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳಿಂದ ತುಂಬಿದೆ. ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸತು, ವಿಟಮಿನ್ ಎ, ಬಿ6, ಬಿ12, ಸಿ ಮತ್ತು ಡಿ ಮೊದಲಾದ ಅಂಶಗಳು ಗೋಲ್‌ಗಪ್ಪಾದಲ್ಲಿ ಹೇರಳವಾಗಿದೆ. ಇದರಲ್ಲಿ ಬಳಸುವ ನೀರಿಗೆ ಜೀರಿಗೆ, ಪುದೀನ ಮತ್ತು ಹುಣಸೆಹಣ್ಣಿನ ರಸವನ್ನು ಸೇರಿಸಲಾಗುತ್ತದೆ. ಪುದೀನ ನೀರು ಮತ್ತು ಜೀರಿಗೆ ತೂಕ ನಷ್ಟ (Weight Loss)ಕ್ಕೆ ಒಳ್ಳೆಯದು. ಪುದೀನಾ ನೀರು ಅಜೀರ್ಣ ಸಮಸ್ಯೆಗೂ ಪರಿಹಾರವನ್ನು ನೀಡುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಗೋಲ್‌ಗಪ್ಪಾ ತಿನ್ನೋದ್ರಿಂದ ಏನೇನು ಪ್ರಯೋಜನವಿದೆ ?
ಗೋಲ್‌ಗಪ್ಪಾ ತಿನ್ನೋದ್ರಿಂದ ಆರೋಗ್ಯ (Health)ಕ್ಕೆ ಹಲವು ಪ್ರಯೋಜನಗಳಿವೆ. ಗೋಲ್‌ಗಪ್ಪಾ ತಿನ್ನುವುದು ಬಾಯಲ್ಲಿ ಉಂಟಾಗುವ ಗುಳ್ಳೆಗಳ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಗೋಲ್‌ಗಪ್ಪಾದ ಪಾನಿಯಲ್ಲಿ ಸೇರಿಸುವ ಪುದೀನಾ, ಜೀರಾ ಅಂಶ ದೇಹದಲ್ಲಿ ಉಷ್ಣವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಬಾಯಿಹುಣ್ಣಿನ ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ.
ಗೋಲ್‌ಗಪ್ಪಾದಲ್ಲಿರುವ ಜೀರಾದ ಅಂಶ ಜೀರ್ಣಕ್ರಿಯೆಯನ್ನು ಸುಲಭಗೊಳಿಸಲು ಮತ್ತು ಆಮ್ಲೀಯತೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಮಧುಮೇಹ ಇರುವವರಿಗೆ ಗೋಲ್‌ಗಪ್ಪಾ ಉತ್ತಮ ಆಯ್ಕೆ. ಗೋಲ್‌ಗಪ್ಪಾ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಹೀಗಾಗಿ ರಕ್ತದಲ್ಲಿನ ಸಕ್ಕರೆ ಮಟ್ಟದ ಬಗ್ಗೆ ಚಿಂತಿಸದೆ ಮಧುಮೇಹಿಗಳು ಇದನ್ನು ತಿನ್ನಬಹುದು.
ಗೋಲ್‌ಗಪ್ಪಾ ತಿನ್ನೋದ್ರಿಂದ ಆಗೋ ತೊಂದರೆಗಳು
ಗೋಲ್‌ಗಪ್ಪಾ ಟ್ರಾನ್ಸ್ ಕೊಬ್ಬನ್ನು ಹೊಂದಿರುತ್ತದೆ. ಗೋಲ್‌ಗಪ್ಪಾಗಳನ್ನು ತಿನ್ನುವಾಗ ನೀವು ಜಾಗರೂಕರಾಗಿರಬೇಕು, ಏಕೆಂದರೆ ಕೆಲವು ಪೂರಿಗಳು ಎಣ್ಣೆಯಲ್ಲಿ ಡೀಪ್ ಫ್ರೈಡ್ ಆಗಿರಬಹುದು, ಅದು ಉತ್ತಮ ಗುಣಮಟ್ಟದ್ದಲ್ಲದಿರಬಹುದು ಮತ್ತು ಈ ಪೂರಿಗಳು ಆರೋಗ್ಯಕ್ಕೆ ಅಪಾಯಕಾರಿಯಾದ ಟ್ರಾನ್ಸ್ ಕೊಬ್ಬಿನಿಂದ ತುಂಬಿರುತ್ತವೆ.
ಗೋಲ್‌ಗಪ್ಪಾಗಳು ಬ್ಯಾಕ್ಟೀರಿಯಾವನ್ನು ಹೊಂದಿರಬಹುದು. ಯಾಕೆಂದರೆ ಇದನ್ನು ತೆರೆದ ಸ್ಥಳದಲ್ಲಿ ಇಡಲಾಗುತ್ತದೆ ಆದ್ದರಿಂದ ಪೂರಿಗಳ ಮೇಲೆ ಬ್ಯಾಕ್ಟೀರಿಯಾದ ಬೆಳವಣಿಗೆ ಇರುತ್ತದೆ. ಅವುಗಳಲ್ಲಿ ಬಳಸುವ ಆಲೂಗಡ್ಡೆಯಂತಹ ಪದಾರ್ಥಗಳು ಹಳಸಿದ ಮತ್ತು ಆಹಾರ ವಿಷದಂತಹ ಕಾಯಿಲೆಗಳಿಗೆ ಕಾರಣವಾಗಬಹುದು. ಅವು ನಿರ್ಜಲೀಕರಣ, ಕಾಮಾಲೆ, ಹೊಟ್ಟೆ ನೋವು, ಕರುಳಿನ ಊತ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು. ಗೋಲ್‌ಗಪ್ಪಾಗಳಲ್ಲಿ ಫಿಲ್ಟರ್ ಮಾಡದೆಯೇ ಬಳಸುವ ನೀರು ಅತಿಸಾರದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.