ಮೊನ್ನೆ ಸಮೋಸಾದಲ್ಲಿ ಕಾಂಡೋಮ್.. ಇಂದು ಹೊಟೇಲ್‌ಗಳಿಗೆ ಪೂರೈಕೆ ಮಾಡಿದ್ದ ಐಸ್‌ಬ್ಲಾಕ್‌ನಲ್ಲಿ ಸತ್ತ ಇಲಿ ಪತ್ತೆ

By Anusha KbFirst Published Apr 11, 2024, 11:42 AM IST
Highlights

ಎರಡು ದಿನಗಳ ಹಿಂದೆ ಸಂಸ್ಥೆಯೊಂದಕ್ಕೆ ಪೂರೈಕೆ ಮಾಡಿದ್ದ ಸಮೋಸಾದಲ್ಲಿ ಕಾಂಡೋಮ್, ಗುಟ್ಕಾ ಹಾಗೂ ಕಲ್ಲು ಪತ್ತೆಯಾದ ಬೆನ್ನಲೇ ಇಂದು ಮತ್ತೊಂದು ಆಹಾರ ಉದ್ಯಮಕ್ಕೆ ಸಂಬಂಧಿಸಿದಂತೆ ಅವಾಂತರ ನಡೆದಿದೆ. ಹೊಟೇಲ್‌ಗಳಿಗೆ ಪೂರೈಕೆ ಮಾಡುತ್ತಿದ್ದ ಐಸ್‌ ಬ್ಲಾಕ್‌ನಲ್ಲಿ ಸತ್ತ ಇಲ್ಲಿಯೊಂದು ಪತ್ತೆಯಾಗಿದೆ.

ಪುಣೆ: ಎರಡು ದಿನಗಳ ಹಿಂದೆ ಸಂಸ್ಥೆಯೊಂದಕ್ಕೆ ಪೂರೈಕೆ ಮಾಡಿದ್ದ ಸಮೋಸಾದಲ್ಲಿ ಕಾಂಡೋಮ್, ಗುಟ್ಕಾ ಹಾಗೂ ಕಲ್ಲು ಪತ್ತೆಯಾದ ಬೆನ್ನಲೇ ಇಂದು ಮತ್ತೊಂದು ಆಹಾರ ಉದ್ಯಮಕ್ಕೆ ಸಂಬಂಧಿಸಿದಂತೆ ಅವಾಂತರ ನಡೆದಿದೆ. ಹೊಟೇಲ್‌ಗಳಿಗೆ ಪೂರೈಕೆ ಮಾಡುತ್ತಿದ್ದ ಐಸ್‌ ಬ್ಲಾಕ್‌ನಲ್ಲಿ ಸತ್ತ ಇಲ್ಲಿಯೊಂದು ಪತ್ತೆಯಾಗಿದೆ.

ಏಪ್ರಿಲ್ 8 ರಂದು ಅಂದರೆ ಎರಡು ದಿನಗಳ ಹಿಂದೆಯಷ್ಟೇ ಪುಣೆಯ ಪಿಂಪ್ರಿ ಚಿಂಚವಾಡಿಯಲ್ಲಿರುವ ಆಟೋ ಮೊಬೈಲ್ ಸಂಸ್ಥೆಯೊಂದಕ್ಕೆ ಪೂರೈಕೆ ಮಾಡಲಾಗಿದ್ದ ಸಮೋಸಾದಲ್ಲಿ ಗುಟ್ಕಾ ಪ್ಯಾಕೇಟ್, ಕಾಂಡೋಮ್, ಸಣ್ಣ ಸಣ್ಣ ಕಲ್ಲುಗಳು ಪತ್ತೆಯಾಗಿದ್ದವು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ರಹೀಮ್ ಶೇಖ್, ಅಜರ್ ಶೇಖ್, ಮಜರ್ ಶೇಖ್, ಫಿರೋಜ್ ಶೇಖ್, ವಿಕ್ಕಿ ಶೇಖ್ ಎಂಬ ಐವರನ್ನು ಬಂಧಿಸಿದ್ದಾರೆ. ತಮಗೆ ಈ ಹಿಂದೆ ನೀಡಲಾಗಿದ್ದ ಆಹಾರ ಗುತ್ತಿಗೆಯನ್ನು ಆಹಾರದಲ್ಲಿ ಕಲಬೆರಕೆ ಕಂಡು ಬಂದ ಹಿನ್ನೆಲೆಯಲ್ಲಿ ಬೇರೆ ಸಂಸ್ಥೆಗೆ ಗುತ್ತಿಗೆ ನೀಡಿದ್ದಕ್ಕೆ ಹಾಗೂ ಹೊಸದಾಗಿ ಗುತ್ತಿಗೆ ಪಡೆದ ಆಹಾರ ಸಂಸ್ಥೆಯ ಹೆಸರು ಹಾಳು ಮಾಡಲು ಈ ಕೃತ್ಯವೆಸಗಿದ್ದಾರೆ ಎಂದು ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ.

ಹೈಫೈ ರೆಸ್ಟೋರೆಂಟ್‌ನಿಂದ ವೆಜ್‌ ಊಟ ಆರ್ಡರ್ ಮಾಡಿದ ವ್ಯಕ್ತಿ, ಆಹಾರದಲ್ಲಿತ್ತು ಸತ್ತ ಇಲಿ!

ಈ ಘಟನೆ ಮಾಸುವ ಮೊದಲೇ ಈಗ ಮಹಾರಾಷ್ಟ್ರದ ಜುನ್ನಾರ್‌ನಲ್ಲಿರುವ ಐಸ್ ಫ್ಯಾಕ್ಟರಿಯಿಂದ ಹೊಟೇಲ್‌ಗಳಿಗೆ ಪೂರೈಕೆ ಮಾಡಲಾಗಿದ್ದ ಐಸ್‌ ಬ್ಲಾಕ್‌ಗಳಲ್ಲಿ ಸತ್ತ ಇಲಿ  ಪತ್ತೆಯಾಗಿದೆ. ಈ ಘಟನೆ ಈಗ ಹೊಟೇಲ್‌ಗಳಲ್ಲಿ ಆಹಾರ ಸೇವಿಸುವ ಜನರ ಆರೋಗ್ಯದ ಬಗ್ಗೆ ಕಳವಳ ಉಂಟು ಮಾಡುವಂತೆ ಮಾಡಿದೆ. ಜುನ್ನಾರ್‌ನಲ್ಲಿರುವ ಐಸ್ ಫ್ಯಾಕ್ಟರಿಯಿಂದ ನಗರದ ಹೊಟೇಲ್‌ಗಳು ರೆಸ್ಟೋರೆಂಟ್‌ಗಳು ಹಾಗೂ ವಿವಿಧ ಬೀದಿ ಬದಿಯ ಆಹಾರ ಘಟಕಗಳಿಗೆ ಐಸ್‌ ಬ್ಲಾಕ್‌ಗಳನ್ನು ಪೂರೈಸಲಾಗುತ್ತಿತ್ತು. 

ಘಟನೆಗೆ ಸಂಬಂಧಿಸಿದಂತೆ ಪುಣೆಯ ಆಹಾರ ಹಾಗೂ ಔಷಧ ಆಡಳಿತದ ಜಂಟಿ ಆಯುಕ್ತ ಅರ್ಜುನ್‌ ಭುಜಬಲ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, 
ಈ ಬಗ್ಗೆ ದೂರು ಬಂದಿದ್ದು,ನಾವು ನಮ್ಮ ಅಧಿಕಾರಿಗಳನ್ನು ಜುನ್ನಾರ್‌ಗೆ ಕಳುಹಿಸಿ ಸಮಸ್ಯೆಯ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದೇವೆ ಎಂದು ಹೇಳಿದ್ದಾರೆ. ನಾವು ನಮ್ಮ ಎಫ್‌ಡಿಎ ಪುಣೆ ಕಚೇರಿಗೆ ಈ ವಿಷಯವನ್ನು ಆದ್ಯತೆಯ ಮೇರೆಗೆ ತನಿಖೆ ಮಾಡಲು ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇವೆ ಎಂದು ರಾಜ್ಯ ಆಹಾರ ಸಚಿವ ಧರ್ಮರಾವ್ ಬಾಬಾ ಅತ್ರಮ್ ತಿಳಿಸಿದ್ದಾರೆ.

ತನಗೆ ಕಡಿದ ಇಲಿಯನ್ನ ಹಿಡಿದು ಕಚ್ಚಿ ಸಾಯಿಸಿದ ಯುವತಿ ಆಸ್ಪತ್ರೆಗೆ!

ಬಿರು ಬೇಸಿಗೆಯಾದ ಕಾರಣ ರಾಜ್ಯದ ಹಲವೆಡೆ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಜನ ತಂಪು ಪಾನೀಯಗಳನ್ನು ಸೇವಿಸಲು ಇಷ್ಟಪಡುತ್ತಾರೆ. ಜ್ಯೂಸ್, ಮಿಲ್ಕ್‌ ಶೇಕ್ಸ್, ತಂಪು ಪಾನೀಯಗಳಂತಹ ಹಲವು ಪಾನೀಯಗಳಿಗೆ ಐಸ್ ಅನ್ನು ಸೇರಿಸಲಾಗುತ್ತದೆ. ಬೀದಿ ಬದಿಯ ವ್ಯಾಪಾರಿಗಳು ಕೂಡ ಹಣ್ಣು ಅಥವಾ ಒಣ ಹಣ್ಣಿನ ಜ್ಯೂಸ್, ಮಿಲ್ಕ್‌ಶೇಕ್‌ಗಳು, ಕಬ್ಬಿನ ಜ್ಯೂಸ್ ಲಸ್ಸಿ, ಸಿರಪ್ ಶರಬತ್ ಐಸ್ ಗೋಲ್, ಫಲೂಡಾ ಮುಂತಾದವುಗಳನ್ನು ತಯಾರಿಸುವಾಗ ಅದಕ್ಕೆ ಐಸ್ ಕ್ಯೂಬ್‌ನ್ನು ಹಾಕುತ್ತಾರೆ. ಪ್ರತಿದಿನವೂ ಸಾವಿರಾರು ಮಂದಿ ಈ ಪಾನೀಯಗಳನ್ನು ಸೇವಿಸುತ್ತಾರೆ. ಹೀಗಿರುವಾಗ ಇಂತಹ ಪ್ರದೇಶಗಳಿಗೆ ಐಸ್ ಬ್ಲಾಕ್‌ಗಳನ್ನು ಪೂರೈಕೆ ಮಾಡುತ್ತಿರುವ ಐಸ್ ಫ್ಯಾಕ್ಟರಿಯ ಬ್ಲಾಕ್‌ನಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ಜನರ ಆರೋಗ್ಯದ ಬಗ್ಗೆ ಕಳವಳ ಪಡುವಂತೆ ಮಾಡಿದೆ. 

click me!