
ಜಗತ್ತಿನಲ್ಲಿ ನಾನಾ ಬಗೆಯ ಆಹಾರ – ಖಾದ್ಯಗಳಿವೆ. ಜನರು ಕೆಲವೊಂದು ಆಹಾರವನ್ನು ಬಾಯಿ ಚಪ್ಪಿರಿಸಿ ತಿನ್ನುತ್ತಾರೆ. ಈ ಆಹಾರದಲ್ಲಿ ಯಾವುದು ಕೆಟ್ಟ ಆಹಾರ ಎಂದಾಗ ನಾವು ಒಂದಿಷ್ಟು ಆಹಾರವನ್ನು ಫಟಾ ಫಟ್ ಅಂತ ಹೇಳ್ತೇವೆ. ಆದ್ರೆ ತಿನ್ನೋದನ್ನು ಬಿಡೋದಿಲ್ಲ. ಈ ನಮ್ಮ ಪಟ್ಟಿಯಲ್ಲಿ ಆಲೂಗಡ್ಡೆ ಚಿಪ್ಸ್, ಕುಕ್ಕೀಸ್, ಐಸ್ ಕ್ರೀಮ್, ಫಾಸ್ಟ್ ಫುಡ್ ಸೇರಿದಂತೆ ಸಂಸ್ಕರಿಸಿದ ಆಹಾರ ಇರುತ್ತದೆ. ಇದ್ರ ಜೊತೆಗೆ ಹೆಚ್ಚು ಕ್ಯಾಲೋರಿ, ಕೊಬ್ಬು ಹೊಂದಿರುವ ಎಣ್ಣೆಯಲ್ಲಿ ಕರಿದ ಆಹಾರದಿಂದ ದೂರ ಇರಬೇಕೆಂದು ಸಲಹೆ ನೀಡ್ತೇವೆ. ಸಂಶೋಧಕರು ಕೂಡ ಈಗ ಅನಾರೋಗ್ಯಕರ ಆಹಾರದ ಪಟ್ಟಿ ಮಾಡಿದ್ದಾರೆ. ಈ ಪಟ್ಟಿ ತಯಾರಿಸುವ ಮುನ್ನ ಸಾಕಷ್ಟು ಸಂಶೋಧನೆ ನಡೆದಿದೆ. ಅಧ್ಯಯನದಲ್ಲಿ ನೂರಕ್ಕಿಂತಲೂ ಹೆಚ್ಚು ಅನಾರೋಗ್ಯಕರ ಆಹಾರವನ್ನು ಪಟ್ಟಿ ಮಾಡಲಾಗಿದೆ. ಆರೋಗ್ಯಕ್ಕೆ ಒಳ್ಳೆಯದು ಅಂದ್ಕೊಂಡಿದ್ದ ಆಹಾರ ಕೂಡ ಕೆಟ್ಟ ಪಟ್ಟಿಯಲ್ಲಿದೆ. ಅದನ್ನು ನೋಡಿದ್ರೆ ನೀವು ಅಚ್ಚರಿಗೊಳ್ತೀರಿ. ನಾವಿಂದು ಅಮೆರಿಕಾ ಆಹಾರ ತಜ್ಞರು ಹೇಳಿದ ಐದು ಅನಾರೋಗ್ಯಕರ ಆಹಾರದ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಮೈಕ್ರೋವೇವ್ (Microwave) ಪಾಪ್ ಕಾರ್ನ್ (Popcorn): ಈಗಿನ ದಿನಗಳಲ್ಲಿ ಮೈಕ್ರೋವೇವ್ ನಿತ್ಯ ಬಳಕೆಯ ವಸ್ತುಗಳಲ್ಲಿ ಒಂದಾಗಿದೆ. ಬಹುತೇಕ ಎಲ್ಲರ ಮನೆಯಲ್ಲಿ ಇದನ್ನು ನೋಡಬಹುದು. ಅನೇಕ ಆಹಾರ (Food) ತಯಾರಿಸಲು ಓವನ್ ಬಳಸುವ ಜನ, ಪಾಪ್ ಕಾರ್ನ್ ತಯಾರಿಸಲೂ ಓವನ್ ಮೈಕ್ರೋವೇವ್ ಬಳಸ್ತಾರೆ. ನಾವು ಕುಕ್ಕರ್ ಅಥವಾ ಮೈಕ್ರೋವೇವ್ ನಲ್ಲಿ ಪಾಪ್ ಕಾರ್ನ್ ತಯಾರಿಸುತ್ತೇವೆ. ಇದ್ರಲ್ಲಿ ಪಾಮ್ ಆಯಿಲ್ ಮತ್ತು ಅತಿಯಾದ ಸೋಡಿಯಂ ಇರುತ್ತದೆ. ನಾವು ಮೈಕ್ರೋವೇವ್ ನಲ್ಲಿ ಪಾಪ್ ಕಾರ್ನ್ ಬೇಯಿಸಿ ತಿಂದಾಗ ಅದು ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದಂತಹ ಸಮಸ್ಯೆಗೆ ಕಾರಣವಾಗುತ್ತದೆ. ನೀವು ಪಾಮ್ ಆಯಿಲ್ ಬಳಸಿದ ಪಾಪ್ ಕಾರ್ನ್ ಅನ್ನು ಕುಕ್ಕರ್ ನಲ್ಲಿ ಬೇಯಿಸಿದ್ರೂ ಯೋಗ್ಯವಲ್ಲ. ಹಾಗಾಗಿ ನೀವು ಶುದ್ಧ ಕಾರ್ನ್ ಗೆ ಹೆಚ್ಚು ಆದ್ಯತೆ ನೀಡಿ.
ಉಸ್ಸಪ್ಪಾ..ಸಿಕ್ಕಾಪಟ್ಟೆ ಬಿಸಿಲು ಅಂತ ಫ್ರಿಡ್ಜ್ ವಾಟರ್ ಕುಡಿಯೋ ಮುನ್ನ ಇವಿಷ್ಟು ಗೊತ್ತಿರ್ಲಿ
ಆರೋಗ್ಯಕರ ಸ್ಮೂಥಿ (Healthy Smoothy): ಸ್ಮೂಥಿ ಹೆಸರು ಕೇಳ್ತಿದ್ದಂತೆ ಅನೇಕರ ಬಾಯಲ್ಲಿ ನೀರು ಬರುತ್ತದೆ. ಮಾವಿನಕಾಯಿ ಸ್ಮೂಥಿ (Raw Mango Smoothy), ಚೆರ್ರಿ ಸ್ಮೂಥಿ ಸೇರಿದಂತೆ ಹಲವು ಬಗೆಯ ಸ್ಮೂಥಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇದು ಕೂಡ ಅನಾರೋಗ್ಯಕರ ಆಹಾರದಲ್ಲಿ ಜಾಗ ಪಡೆಯುತ್ತದೆ. ಇದಕ್ಕೆ ಸಂಯೋಜಕ ಸಕ್ಕರೆಯನ್ನು ಬಳಸಲಾಗುತ್ತದೆ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ, ಒಬ್ಬ ಪುರುಷನು ದಿನಕ್ಕೆ 36 ಗ್ರಾಂಗಿಂತ ಹೆಚ್ಚು ಸಕ್ಕರೆಯನ್ನು ಸೇವಿಸಬಾರದು. ಮಹಿಳೆಯರು 25 ಗ್ರಾಂಗಿಂತ ಹೆಚ್ಚು ತಿನ್ನಬಾರದು.
ಬೌಲನ್ ಕ್ಯೂಬ್ : ಇದು ಅತ್ಯಂತ ಶ್ರೀಮಂತ ದೇಶದಲ್ಲಿ ಬಳಸುವ ಶ್ರೀಮಂತ ಆಹಾರ. ಮಾಂಸ ಮತ್ತು ಹಸಿರು ತರಕಾರಿಗಳನ್ನು ಸಂಸ್ಕರಿಸುವ ಮೂಲಕ ಇದನ್ನು ತಯಾರಿಸಲಾಗುತ್ತದೆ. ಇದು ಶುಷ್ಕವಾಗಿರುತ್ತದೆ. ಇದನ್ನು ಹಲವಾರು ದಿನಗಳವರೆಗೆ ಬಳಸಬಹುದು. ಈ ಬೌಲನ್ ಕ್ಯೂಬ್ ಗೆ ರಾಸಾಯನಿಕ ಬಳಸುವ ಕಾರಣ ಇದು ತುಂಬಾ ಅಪಾಯಕಾರಿ. ಇದರಲ್ಲಿರುವ ಕ್ಯಾರಮೆಲ್ ಬಣ್ಣ, ಪಾಮ್ ಆಯಿಲ್ ಸೇರಿದಂತೆ 6 ರಾಸಾಯನಿ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಹೃದ್ರೋಗ ಸಮಸ್ಯೆಗೆ ಕಾರಣವಾಗುತ್ತದೆ.
ಏನ್ ಹೇಳಿದ್ರೂ ಹೆಲ್ದೀ ಆಹಾರ ತಿನ್ನಲ್ಲ, ಮಕ್ಕಳ ಜಂಕ್‌ಫುಡ್ ಅಡಿಕ್ಷನ್ ಹೋಗಲಾಡಿಸುವುದು ಹೇಗೆ?
ಪ್ಲಾಸ್ಟಿಕ್ ಬಾಟಲ್ ನೀರು (Plastic Bottle Water) : ಪ್ರತಿ ನಿತ್ಯ ಕೋಟ್ಯಾಂತರ ಮಂದಿ ಬಳಸುವ ವಸ್ತು ಇದು. ಪ್ಲಾಸ್ಟಿಕ್ ಬಾಟಲಿಯನ್ನು ತುಂಬಿರುವ ನೀರು ಆರೋಗ್ಯಕ್ಕೆ ಅಪಾಯಕಾರಿ ಎಂದು ಸಂಶೋಧಕರು ಹೇಳಿದ್ದಾರೆ. ಕೊಲಂಬಿಯಾ ವಿಶ್ವವಿದ್ಯಾನಿಲಯದ ಸಂಶೋಧನೆಯು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಬಿಸ್ಫೆನಾಲ್ ಎ ಎಂಬ ಅತ್ಯಂತ ಹಾನಿಕಾರಕ ರಾಸಾಯನಿಕವಿರುತ್ತದೆ ಎಂದಿದೆ. ಪ್ಲಾಸ್ಟಿಕ್ ಬಾಟಲಿ ಬಿಸಿಯಾದಾಗ ಬಿಸ್ಫೆನಾಲ್ ಹೊರಗೆ ಬರುತ್ತದೆ. ಅದು ನೀರಿನಲ್ಲಿ ಬೆರೆಯುವ ಕಾರಣ ಸಂತಾನೋತ್ಪತ್ತಿಗೆ ಸಂಬಂಧಿಸಿದ ಸಮಸ್ಯೆ ಕಾಡುತ್ತದೆ. ಅಲ್ಲದೆ , ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುತ್ತದೆ.
ಡಯಟ್ ಸೋಡಾ (Diet Soda) : ಇದನ್ನು ಆರೋಗ್ಯಕರ ಪಾನೀಯ ಎಂದು ಅನೇಕರು ಪರಿಗಣಿಸಿದ್ದಾರೆ. ಆದ್ರೆ ಸಂಶೋಧಕರು ಕ್ಯಾನ್ಸರ್ ನಿಂದ ದೂರ ಇರಬೇಕು ಅಂದ್ರೆ ಡಯಟ್ ಸೋಡಾದಿಂದ ದೂರವಿರಿ ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.