ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಆಹಾರದ ಬಿಲ್‌ಗಳ ಮೇಲೆ ಗ್ರಾಹಕರಿಗೆ ಸೇವಾ ಶುಲ್ಕ ವಿಧಿಸುವುದನ್ನು ನಿಷೇಧಿಸುವ ಸರಕಾರದ ಮಾರ್ಗಸೂಚಿಗೆ ದೆಹಲಿ ಹೈಕೋರ್ಟ್ ನಿಷೇಧ ಹೇರಿದೆ. ಸೇವಾ ಶುಲ್ಕ ಕೊಡಲಾಗದಿದ್ದರೆ, ರೆಸ್ಟೋರೆಂಟ್‌ಗೆ ಹೋಗಬೇಡಿ ಎಂದು ಚಾಟಿ ಬೀಸಿದೆ.
ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಆಹಾರದ ಬಿಲ್‌ಗಳ ಮೇಲೆ ಗ್ರಾಹಕರಿಗೆ ಸೇವಾ ಶುಲ್ಕ ವಿಧಿಸುವುದನ್ನು ನಿಷೇಧಿಸುವ ಸರಕಾರದ ಮಾರ್ಗಸೂಚಿಗೆ, ದೆಹಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ತಿಂಗಳ ಆರಂಭದಲ್ಲಿ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಹೊರಡಿಸಿದ ಮಾರ್ಗಸೂಚಿಗಳಿಗೆ ದೆಹಲಿ ಹೈಕೋರ್ಟ್ ತಡೆ ನೀಡಿತು, ಇದು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಆಹಾರ ಬಿಲ್‌ಗಳಿಗೆ ಸೇವಾ ಶುಲ್ಕವನ್ನು ಸೇರಿಸುವುದನ್ನು ನಿರ್ಬಂಧಿಸಿದೆ. ಸಿಸಿಪಿಎ ಮಾರ್ಗಸೂಚಿಗಳನ್ನು ಪ್ರಶ್ನಿಸಿ ನ್ಯಾಷನಲ್ ರೆಸ್ಟೊರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (ಎನ್‌ಆರ್‌ಎಐ) ಮತ್ತು ಫೆಡರೇಶನ್ ಆಫ್ ಹೊಟೇಲ್ ಮತ್ತು ರೆಸ್ಟೊರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ ಸಲ್ಲಿಸಿದ ಮನವಿಯನ್ನು ಆಲಿಸಿದ ನ್ಯಾಯಾಲಯ, ಮುಂದಿನ ವಿಚಾರಣೆಯವರೆಗೆ ಈ ಸಮಸ್ಯೆಯನ್ನು ಪರಿಗಣಿಸುವ ಅಗತ್ಯವಿದೆ ಎಂದು ಹೇಳಿ ಅಧಿಕಾರಿಗಳಿಗೆ ಸೂಚಿಸಿದೆ.
ಸಿಸಿಪಿಎ ಮಾರ್ಗಸೂಚಿ ಮುಂದಿನ ದಿನಾಂಕದವರೆಗೆ ತಡೆ
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು, ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವ ಅಗತ್ಯವಿದೆ. ಸಿಸಿಪಿಎ ಮಾರ್ಗಸೂಚಿಗಳನ್ನು ಮುಂದಿನ ದಿನಾಂಕದವರೆಗೆ ತಡೆಹಿಡಿಯಲಾಗುತ್ತದೆ ಎಂದು ಆದೇಶಿಸಿದರು. ಮುಂದಿನ ವಿಚಾರಣೆಯನ್ನು ನ. 25ಕ್ಕೆ ಮುಂದೂಡಲಾಗಿದೆ. ರೆಸ್ಟೋರೆಂಟ್‌ಗಳು ಸೇವಾ ಶುಲ್ಕವನ್ನು ವಿಧಿಸಿದರೆ, ಅವುಗಳನ್ನು ಮೆನುಗಳಲ್ಲಿ ಪ್ರಮುಖವಾಗಿ ಪ್ರದರ್ಶಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಹೊಟೇಲ್‌ಗಳಲ್ಲಿ ಹೆಚ್ಚುವರಿ ಸೇವಾ ಶುಲ್ಕ ವಸೂಲಿ: ಬೆಂಗಳೂರಿನಿಂದ 15 ದೂರು ದಾಖಲು
ಅರ್ಜಿದಾರರ ಸಂಘದ ಸದಸ್ಯರು ಹೆಚ್ಚುವರಿಯಾಗಿ ಸೇವಾ ಶುಲ್ಕವನ್ನು ವಿಧಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಅದನ್ನು ಪಾವತಿಸಲು ಗ್ರಾಹಕರ ಬಾಧ್ಯತೆಯನ್ನು ಸರಿಯಾಗಿ ಮತ್ತು ಪ್ರಮುಖವಾಗಿ ಮೆನುವಿನಲ್ಲಿ ಅಥವಾ ಇತರ ಸ್ಥಳದಲ್ಲಿ ಪ್ರದರ್ಶಿಸಲಾಗುತ್ತದೆ. ಅರ್ಜಿದಾರರ ಸದಸ್ಯರು ಯಾವುದೇ ಟೇಕ್‌ಅವೇ ಆರ್ಡರ್‌ಗಳ ಮೇಲೆ ಸೇವಾ ಶುಲ್ಕವನ್ನು ವಿಧಿಸುವುದಿಲ್ಲ ಅಥವಾ ಸೇರಿಸುವುದಿಲ್ಲ ಎಂದು ಸಂಘಗಳು ಮುಂದೆ ಕೈಗೊಳ್ಳುತ್ತವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಗ್ರಾಹಕ ಸಂರಕ್ಷಣಾ ಕಾನೂನಿನಡಿಯಲ್ಲಿ ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳು ಸೇವಾ ಶುಲ್ಕವನ್ನು ವಿಧಿಸುವುದು ಅಕ್ರಮ ವ್ಯಾಪಾರದ ಪದ್ಧತಿಯಾಗಿದೆ ಎಂದು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದ ವಕೀಲರು ನ್ಯಾಯಾಲಯದಲ್ಲಿ ವಾದಿಸಿದರು.
ಸೇವಾ ಶುಲ್ಕ ಕೊಡಲಾಗದಿದ್ದರೆ, ರೆಸ್ಟೋರೆಂಟ್‌ಗೆ ಹೋಗಬೇಡಿ
ನೀವು ಸೇವಾ ಶುಲ್ಕವನ್ನು ಪಾವತಿಸಲು ಬಯಸದಿದ್ದರೆ, ರೆಸ್ಟೋರೆಂಟ್‌ಗೆ ಪ್ರವೇಶಿಸಬೇಡಿ. ಇದು ಅಂತಿಮವಾಗಿ ಗ್ರಾಹಕರ ಆಯ್ಕೆಯ ಪ್ರಶ್ನೆಯಾಗಿದೆ ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ. ಸೇವಾ ಶುಲ್ಕವು ವೈಯಕ್ತಿಕವಾಗಿದ್ದು, ಗ್ರಾಹಕರ ವಿವೇಚನೆಗೆ ಬಿಟ್ಟಿದ್ದು ಎನ್ನುವ ಅಂಶವನ್ನು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಸ್ಪಷ್ಟಪಡಿಸಬೇಕು. ಈ ಬಗ್ಗೆ ಮೆನು ಅಥವಾ ಹೋಟೆಲ್‌ನ ಇತರ ಸ್ಥಳಗಳಲ್ಲಿ ಸರಿಯಾಗಿ ಮತ್ತು ಪ್ರಮುಖವಾಗಿ ಪ್ರದರ್ಶಿಸಬೇಕು. ಇದನ್ನು ಖಚಿತಪಡಿಸಿಕೊಳ್ಳಲೂ ನ್ಯಾಯಾಲಯ ಬಯಸುತ್ತದೆ ಎಂದು ನ್ಯಾಯಮೂರ್ತಿಗಳು ಹೇಳಿದರು.
ಇಮ್ಯೂನಿಟಿ ಪವರ್ ಬೂಸ್ಟ್ ಮಾಡಲು ಇವು ತುಂಬಾನೆ ಅಗತ್ಯ !
ಸೇವಾ ಶುಲ್ಕ ಎಂದರೇನು?
ಸಿಬ್ಬಂದಿ ಮತ್ತು ಕೆಲಸಗಾರರಿಗೆ ಪಾವತಿಸಲು ರೆಸ್ಟೋರೆಂಟ್ ಅಥವಾ ಹೋಟೆಲ್‌ಗಳು ಸೇವಾ ಶುಲ್ಕವನ್ನು ವಿಧಿಸುತ್ತದೆ. ಗ್ರಾಹಕರಿಗೆ ಸಿಕ್ಕಿದ ಅನುಭವ ಅಥವಾ ಆಹಾರಕ್ಕಾಗಿ ಈ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಸಿಬ್ಬಂದಿಗೆ ಆಯಾ ರೆಸ್ಟೋರೆಂಟ್ ಸಂಬಳ ನೀಡುತ್ತದೆ. ಆದರೆ ಸೇವಾ ಶುಲ್ಕವು ಅವರಿಗೆ ಪ್ರೋತ್ಸಾಹದಾಯಕವಾಗಿ ಪರಿಗಣಿಸಲ್ಪಡುತ್ತೆ. ಹೀಗಾಗಿ ಆಹಾರ ಸೇವಿಸಿದ ನಂತರ ಗ್ರಾಹಕರು ಪಾವತಿಸಬೇಕಾದ ಬಿಲ್ ಮೊತ್ತಕ್ಕೆ ರೆಸ್ಟೋರೆಂಟ್ ಸೇವಾ ಶುಲ್ಕವನ್ನು ಸೇರಿಸುತ್ತದೆ. ಸೇವಾ ಶುಲ್ಕವನ್ನು ಪ್ರತಿ ಗ್ರಾಹಕರ ಬಿಲ್‌ಗೆ ಸೇರಿಸಲಾಗುತ್ತದೆ. ಒಂದು ವೇಳೆ ಗ್ರಾಹಕರು ಈ ಶುಲ್ಕವನ್ನು ಪಾವತಿಸಲು ಬಯಸದಿದ್ದರೆ, ಪಾವತಿಸಲೇಬೇಕು ಎಂದೇನಿಲ್ಲ. ಈ ಆಯ್ಕೆ ಗ್ರಾಹಕರಿಗೆ ಬಿಟ್ಟಿದ್ದು. ರೆಸ್ಟೋರೆಂಟ್ ಬಿಲ್ ಆಹಾರ ಶುಲ್ಕವನ್ನು ಒಳಗೊಂಡಿರುತ್ತದೆ..
ಮಾರ್ಗಸೂಚಿಗಳು ಏನು ಹೇಳುತ್ತವೆ
ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಸಿಸಿಪಿಎ ಜುಲೈ 4 ರಂದು ಅನ್ಯಾಯದ ವ್ಯಾಪಾರ ಅಭ್ಯಾಸಗಳು ಮತ್ತು ಸೇವಾ ಶುಲ್ಕಗಳನ್ನು ವಿಧಿಸುವ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಸಂಬಂಧಿಸಿದಂತೆ ಗ್ರಾಹಕರ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟಲು ಮಾರ್ಗಸೂಚಿಗಳನ್ನು ಹೊರಡಿಸಿದೆ, ಗ್ರಾಹಕರು ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ದೂರು ಸಲ್ಲಿಸಬಹುದು ಎಂದು ಹೇಳಿದೆ.