ಬೆಂಗಳೂರಿನ ಟ್ರಾಫಿಕ್ ಜಾಮ್ ಕಥೆ ಹೇಳೋದೆ ಬೇಡ. ಕಿಕ್ಕಿರಿದ ಜನಸಂದಣಿಯಲ್ಲಿ ಅರ್ಧ ದಿನಾನೇ ಮುಗಿದು ಹೋಗಿರುತ್ತೆ. ಹಾಗೆಯೇ ಇಲ್ಲೊಬ್ಬ ಗ್ರಾಹಕರು ಟ್ರಾಫಿಕ್‌ನಲ್ಲಿದ್ದಾಗಲೇ ಪಿಜ್ಜಾ ಆರ್ಡರ್ ಮಾಡಿದ್ದರು. ಈ ಟ್ರಾಫಿಕ್‌ನಲ್ಲಿ ಪಿಜ್ಜಾ ಅಡ್ರೆಸ್ ತಲುಪೋದು ಕಷ್ಟ ಅಂದ್ಕೊಂಡ್ರೆ ಅಲ್ಲಾಗಿದ್ದೇ ಬೇರೆ.
ಟೆಕ್ ಕಂಪೆನಿಗಳ ಫೇವರಿಟ್ ರಸ್ತೆಯಾಗಿರುವ ಹೊರವರ್ತುಲ ರಸ್ತೆ ಅಂದರೆ ಔಟರ್ ರಿಂಗ್ ರೋಡ್‌ನಲ್ಲಿ ನಿನ್ನೆ ಸಂಜೆ ಭಾರೀ ಪ್ರಮಾಣದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮುಂಬರುವ ರಜಾ ದಿನಗಳಿಂದಾಗಿ ಟ್ರಾಫಿಕ್ ಪ್ರಮಾಣದಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ ಎಂದು ಎಚ್‌ಎಎಲ್ ವಿಮಾನ ನಿಲ್ದಾಣದ ಅಧಿಕಾರಿಗಳು ಉಲ್ಲೇಖಿಸಿದ್ದರು. ಇದಲ್ಲದೆ, ಔಟರ್ ರಿಂಗ್ ರೋಡ್ ಕಂಪನಿಗಳ ಸಂಘವು ಓಆರ್‌ಆರ್‌ನಲ್ಲಿನ ದೊಡ್ಡ ಟ್ರಾಫಿಕ್ ಜಾಮ್‌ನ ಕಾರಣದಿಂದಾಗಿ ಕಂಪನಿಗಳಿಗೆ ಕೆಲಸ ಮುಕ್ತಾಯದ ಸಮಯವನ್ನು ವಿಸ್ತರಿಸುವಂತೆ ಮನವಿ ಮಾಡಿತ್ತು. ಅದಲ್ಲದೆ, ಸಾಕಷ್ಟು ಮಂದಿ ಟ್ರಾಫಿಕ್ ಜಾಮ್‌ನ ಬಗ್ಗೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಚಿಕೊಂಡಿದ್ದರು. ಇವೆಲ್ಲದರ ಮಧ್ಯೆ ಟ್ರಾಫಿಕ್ ಜಾಮ್‌ನಲ್ಲಿ ನಡೆದ ಘಟನೆಯೊಂದು ಎಲ್ಲರ ಮನಮುಟ್ಟುವಂತಿದೆ.
ಬೆಂಗಳೂರಿನ ಔಟರ್ ರಿಂಗ್ ರೋಡ್ ಬುಧವಾರ ಸಂಪೂರ್ಣ ಸ್ಥಗಿತವಾಗಿತ್ತು. ವಾಹನಗಳು (Vehicles) ಗಂಟೆಗಟ್ಟಲೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಹಾಕಿಕೊಂಡಿದ್ದವು. ಪ್ರಯಾಣಿಕರು (Passengers) ವಾಹನಗಳು ನಿಂತಲ್ಲಿಂದ ಮೂವ್ ಆಗದೆ ತೊಂದರೆ ಅನುಭವಿಸುವಂತಾಯ್ತು. ಇದೆಲ್ಲದರ ಮಧ್ಯೆ ಟ್ರಾಫಿಕ್‌ನಲ್ಲಿ ಸಿಲುಕಿ ಹಾಕಿಕೊಂಡಿದ್ದು, ಫುಡ್ ಆರ್ಡರ್ ಮಾಡಿದ ಗ್ರಾಹಕರಿಗೆ ಡೊಮಿನೊ ಡೆಲಿವರಿ ಎಕ್ಸಿಕ್ಯೂಟಿವ್‌ಗಳು ಪಿಜ್ಜಾ ಡೆಲಿವರಿ ಮಾಡಿದ್ದು ಎಲ್ಲರ ಗಮನ ಸೆಳೆಯಿತು.
undefined
99 ಟ್ರಾಫಿಕ್ ನಿಯಮ ಉಲ್ಲಂಘಿಸಿದ ಬೆಂಗಳೂರಿನ ಬೈಕ್ ಸವಾರನನ್ನು ಬಂಧಿಸಿದ ಪೊಲೀಸರು, 56 ಸಾವಿರ ದಂಡ!
ಟ್ರಾಫಿಕ್‌ನಲ್ಲಿ ರಸ್ತೆಯಲ್ಲೇ ಆಹಾರ ತಂದು ನೀಡಿದ ಡೆಲಿವರಿ ಬಾಯ್ಸ್
ಟ್ರಾಫಿಕ್‌ನಲ್ಲಿ ಜನರು ಸಿಲುಕಿಕೊಂಡಿದ್ದರಿಂದ, ಇಬ್ಬರು ಡೊಮಿನೊ ಡೆಲಿವರಿ ಎಕ್ಸಿಕ್ಯೂಟಿವ್‌ಗಳು ಪ್ರಯಾಣಿಕರಿಗೆ ಆಹಾರವನ್ನು ತರುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಡೆಲಿವರಿ ಏಜೆಂಟ್‌ಗಳ ಲೈವ್ ಲೊಕೇಶನ್ ಟ್ರ್ಯಾಕಿಂಗ್ ಬಳಕೆಯ ಮೂಲಕ ನ್ಯಾವಿಗೇಟ್ ಮಾಡಿ ಕಾರಿನಲ್ಲಿದ್ದ ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಪಿಜ್ಜಾಗಳನ್ನು ತಲುಪಿಸಿದರು.
ಈ ಬಗ್ಗೆ ಎಕ್ಸ್‌ನಲ್ಲಿ ಗ್ರಾಹಕರು ಮಾಹಿತಿಯನ್ನು ಶೇರ್ ಮಾಡಿಕೊಂಡಿದ್ದಾರೆ. 'ನಾವು ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಲುಕಿ ಹಾಕಿಕೊಂಡಿದ್ದೆವು. ಈ ಸಂದರ್ಭದಲ್ಲಿ ಡೊಮಿನೋಸ್‌ನಿಂದ ಪಿಜ್ಜಾ ಆರ್ಡರ್ ಮಾಡಿದೆವು. ಆದರೆ ನಾವಿನ್ನೂ ಮನೆ ತಲುಪಿರಲ್ಲಿಲ್ಲ. ಟ್ರಾಫಿಕ್‌ನಲ್ಲೇ ಇದ್ದೆವು. ಆದರೂ ಡೆಲಿವರಿ ಎಕ್ಸಿಕ್ಯೂಟಿವ್ಸ್ ನಮ್ಮ ಲೈವ್ ಲೊಕೇಶನ್‌ನ್ನು ಟ್ರ್ಯಾಕ್ ಮಾಡಿ ಆಹಾರ ಡೆಲಿವರಿ ಮಾಡಿದರು' ಎಂದು ಬಳಕೆದಾರರು ಹಂಚಿಕೊಂಡಿದ್ದಾರೆ.
Bengaluru: ಟ್ರಾಫಿಕ್ ಜಾಮ್‌ನಲ್ಲೇ ಬಟಾಣಿ ಸಿಪ್ಪೆ ಸುಲಿದ ಮಹಿಳೆ, ಪೋಸ್ಟ್ ವೈರಲ್
ಟ್ರಾಫಿಕ್ ಜಾಮ್‌ನಲ್ಲಿ ನೆಕ್ಸ್ಟ್ ಟೈಂ ಮಸಾಜ್ ಬುಕ್ ಮಾಡುತ್ತೇನೆ ಎಂದ ನೆಟ್ಟಿಗರು
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ವಿಡಿಯೋ ಇಲ್ಲಿಯ ವರೆಗೆ ಸುಮಾರು 3 ಲಕ್ಷ ಲೈಕ್ಸ್‌ಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ಮುಂದಿನ ಬಾರಿ ನಾನು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಾಗ ಮಸಾಜ್ ಬುಕ್ ಮಾಡುತ್ತೇನೆ' ಎಂದಿದ್ದಾರೆ. ಇನ್ನೊಬ್ಬರು, 'ಡೊಮಿಸೋಸ್ ಡೆಲಿವರಿ ಬಾಯ್ ಕೆಲಸ ಮೆಚ್ಚುವಂತದ್ದು' ಎಂದು ಹೊಗಳಿದ್ದಾರೆ.
"ಮುಂದಿನ ಬಾರಿ ನಾನು ಅರ್ಬನ್ ಕಂಪನಿಯಿಂದ ಮಸಾಜ್ ಅನ್ನು ಬುಕ್ ಮಾಡುತ್ತಿದ್ದೇನೆ" ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. 'ಡೊಮಿನೊ ಅವರ 30-ನಿಮಿಷಗಳ ವಿತರಣಾ ಭರವಸೆಯನ್ನು ಪೂರೈಸುತ್ತಿದೆ. ಇದು ಅದ್ಭುತವಾಗಿದೆ. ಇನ್ನೊಂದು ಟಿಪ್ಪಣಿಯಲ್ಲಿ, ಈ ವಿತರಣಾ ಸಿಬ್ಬಂದಿಯನ್ನು ಪರಿಗಣಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಇದು ಅವರಿಗೆ ನಿಜವಾಗಿಯೂ ಸವಾಲಾಗಿದೆ, ಭಾರೀ ಟ್ರಾಫಿಕ್ ಮೂಲಕ ನ್ಯಾವಿಗೇಟ್ ಮಾಡುವುದು ಮತ್ತು ಗ್ರಾಹಕರ ನಿರೀಕ್ಷೆಗಳನ್ನು ನಿರಂತರವಾಗಿ ಪೂರೈಸುತ್ತಿದೆ" ಎಂದು ಮತ್ತೊಬ್ಬರು ಬರೆದಿದ್ದಾರೆ. ಬುಧವಾರ ಔಟರ್ ರಿಂಗ್ ರೋಡ್‌ನಲ್ಲಿ ದಟ್ಟಣೆ ಸಾಮಾನ್ಯ ದಿನಕ್ಕಿಂತ ಎರಡು ಪಟ್ಟು ಹೆಚ್ಚಾಗಿದ್ದು, ರಾತ್ರಿ 7:30 ರ ವೇಳೆಗೆ 3.5 ಲಕ್ಷ ವಾಹನಗಳು ರಸ್ತೆಯಲ್ಲಿದ್ದವು ಎಂದು ತಿಳಿದುಬಂದಿದೆ.
When we decided to order from during the Bangalore choke. They were kind enough to track our live location (a few metres away from our random location added in the traffic) and deliver to us in the traffic jam. pic.twitter.com/stnFDh2cHz
— Rishivaths (@rishivaths)