ಇತ್ತೀಚೆಗೆ ಮುಂಬೈನ ವ್ಯಕ್ತಿಯೊಬ್ಬರಿಗೆ ತಾವು ಆರ್ಡರ್ ಮಾಡಿದ ಪಿಜ್ಜಾದಲ್ಲಿ ಗಾಜಿನ ಚೂರುಗಳು ಸಿಕ್ಕಿದ್ದು, ಇದರ ಫೋಟೋ ತೆಗೆದು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಈಗ ಡೊಮಿನೋಸ್ ಸಂಸ್ಥೆ ಪ್ರತಿಕ್ರಿಯಿಸಿದ್ದು ಘಟನೆ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದೆ.
ಮುಂಬೈ: ಇತ್ತೀಚೆಗೆ ಮುಂಬೈನ ವ್ಯಕ್ತಿಯೊಬ್ಬರಿಗೆ ತಾವು ಆರ್ಡರ್ ಮಾಡಿದ ಪಿಜ್ಜಾದಲ್ಲಿ ಗಾಜಿನ ಚೂರುಗಳು ಸಿಕ್ಕಿದ್ದು, ಇದರ ಫೋಟೋ ತೆಗೆದು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಈಗ ಡೊಮಿನೋಸ್ ಸಂಸ್ಥೆ ಪ್ರತಿಕ್ರಿಯಿಸಿದ್ದು ಘಟನೆ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದೆ.
ಮಹಾರಾಷ್ಟ್ರದ ಅರುಣ್ ಕೊಲ್ಲೂರಿ (Arun Kolluri) ಎಂಬ ವ್ಯಕ್ತಿ ಶನಿವಾರ (ಅಕ್ಟೋಬರ್ 8) ಅರ್ಧ ತಿಂದ ಪಿಜ್ಜಾ ಮತ್ತು ಪಕ್ಕದಲ್ಲಿ ಗಾಜಿನ ತುಂಡು ಇರುವ ಫೋಟೋವನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಮುಂಬೈ ಪೊಲೀಸ್ (Mumbai police), ಡೊಮಿನೋಸ್ (Domino), ಫುಡ್ ಸೇಫ್ಟಿ (Food Safety)ಅಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾಕ್ಕೆ ತಮ್ಮ ಟ್ವಿಟ್ ಅನ್ನು ಟ್ಯಾಗ್ ಮಾಡಿದ್ದರು. ಜೊತೆಗೆ @ಡೊಮಿನೋಸ್_ಇಂಡಿಯಾ ಫಿಜ್ಜಾದಲ್ಲಿ 2 ರಿಂದ 3 ಗಾಜಿನ ತುಂಡುಗಳು ಸಿಕ್ಕಿವೆ. ಇದು ನಾವು ಪಡೆಯುತ್ತಿರುವ ಜಾಗತಿಕ ಬ್ರ್ಯಾಂಡ್‌ನ ಆಹಾರದ ಗುಣಮಟ್ಟದ ಬಗ್ಗೆ ಹೇಳುತ್ತದೆ ಎಂದು ಅವರು ಬರೆದುಕೊಂಡಿದ್ದರು. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೇ ಜನ ಆಕ್ರೋಶ ವ್ಯಕ್ತಪಡಿಸಿದ್ದರು.
ಬೆಂಗಳೂರು: ಡಾಮಿನೋಸ್ ಪಿಜ್ಜಾ ತಟ್ಟೆ ಮೇಲೆ ಟಾಯ್ಲೆಟ್ ಬ್ರಷ್..!
ಇತ್ತೀಚಿನ ದಿನಗಳಲ್ಲಿ ಡೊಮಿನೋಸ್ ಪಿಜ್ಜಾ ಗುಣಮಟ್ಟವು ಕೆಟ್ಟದಾಗಿದೆ ಮತ್ತು ಅವರ ಸಿಬ್ಬಂದಿ ಗ್ರಾಹಕರನ್ನು ಚೆನ್ನಾಗಿ ನಡೆಸಿಕೊಳ್ಳುತ್ತಿಲ್ಲ. 15 ದಿನಗಳ ಹಿಂದೆ ನಾನು ಡೊಮಿನೋಸ್‌ನಿಂದ ತಿನ್ನುವುದನ್ನು ನಿಲ್ಲಿಸಿದ್ದೇನೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದರು. ಗ್ರಾಹಕರು ದೂರು ನೀಡಿರುವುದರಿಂದ ಮುಂಬೈ ಪೊಲೀಸರು ಡೊಮಿನೋಸ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈಗ ಡೊಮಿನೋಸ್ ಕೆಸರೆರಚಾಟ ಮಾಡಲು ಶುರು ಮಾಡುತ್ತದೆ. ಪ್ಯಾಕೆಟ್ ಸೀಲ್ ಅನ್ನು ತೆರೆಯಲಾಗಿದೆ ಮಾಡಲಾಗಿದೆ ಎಂದು ಹೇಳುವ ಮೂಲಕ ತಮ್ಮ ಮೇಲಿನ ಆರೋಪವನ್ನು ಡೆಲಿವರಿ ಸಂಸ್ಥೆ ಝೊಮ್ಯಾಟೋಗೆ ವರ್ಗಾಯಿಸುತ್ತದೆ ಎಂದು ಮತ್ತೊಬ್ಬರು ದೂರಿದ್ದಾರೆ.
2 to 3 pieces of glass found in This speaks volume about global brand food that we are getting Not sure of ordering ever from Domino's pic.twitter.com/Ir1r05pDQk
— AK (@kolluri_arun)ಡೊಮಿನೋಸ್ ನಿಜವಾಗಿಯೂ ತಮ್ಮ ಗ್ರಾಹಕರ ಬಗ್ಗೆ ಕಾಳಜಿ ವಹಿಸುವುದನ್ನು ನಿಲ್ಲಿಸಿದೆ. ಅವರು ಇಂದಿನ ದಿನಗಳಲ್ಲಿ ಸರಿಯಾದ ಗ್ರಾಹಕ ಸೇವೆಯನ್ನು (customer service) ಸಹ ನೀಡುತ್ತಿಲ್ಲ. ನಾನು ಡೊಮಿನೋಸ್ ಪಿಜ್ಜಾಗಳನ್ನು ಎಷ್ಟೇ ಇಷ್ಟಪಡುತ್ತಿದ್ದರೂ ಅವರ ಸೇವೆಯ ಅವ್ಯವಸ್ಥೆಯಿಂದಾಗಿ ಅವರ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿಲ್ಲ. ಗಾಜಿನ ತುಂಡುಗಳ ಈ ಘಟನೆಯು ನಿಜವಾಗಿಯೂ ಆಘಾತಕಾರಿಯಾಗಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಹೀಗೆ ಜನರ ಪ್ರತಿಕ್ರಿಯೆ ಹಾಗೂ ತಮ್ಮ ಉತ್ಪನ್ನದಲ್ಲಿ ಗ್ಲಾಸ್ ತುಂಡುಗಳು (Glass pieces)ಪತ್ತೆಯಾದ ವಿಚಾರವಾಗಿ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಡೊಮಿನೋಸ್, ಡೊಮಿನೋಸ್‌ನಲ್ಲಿ ನಾವು ನೈರ್ಮಲ್ಯ ಮತ್ತು ಆಹಾರ ಸುರಕ್ಷತೆಯ ( hygiene and food safety) ಉನ್ನತ ಗುಣಮಟ್ಟ ಖಚಿತಪಡಿಸಲು, ವಿಶ್ವ ದರ್ಜೆಯ ನಿಯಮಗಳಿಗೆ ಬದ್ಧರಾಗಿದ್ದೇವೆ. ಮುಂಬೈನಲ್ಲಿರುವ ನಮ್ಮ ರೆಸ್ಟೋರೆಂಟ್ ಒಂದರಲ್ಲಿ ವರದಿಯಾದ ಇತ್ತೀಚಿನ ಸಮಸ್ಯೆಗೆ ಸಂಬಂಧಿಸಿದಂತೆ, ನಾವು ಕೆಲ ವಿಚಾರಗಳನ್ನು ಹೇಳಲು ಬಯಸುತ್ತೇವೆ. ಒಂದು ಜವಾಬ್ದಾರಿಯುತ ಬ್ರ್ಯಾಂಡ್ ಆಗಿ, ವಿವಿಧ ಸಂವಹನ ಚಾನೆಲ್‌ಗಳ ಮೂಲಕ ವಿಷಯದ ಸತ್ಯತೆಯನ್ನು ಖಚಿತಪಡಿಸಿಕೊಳ್ಳಲು ತಕ್ಷಣ ನಾವು ಗ್ರಾಹಕರನ್ನು ಸಂಪರ್ಕಿಸಿದ್ದೇವೆ.
ಮಹಿಳೆಯ ವಯಸ್ಸು ಎಷ್ಟೆಂದು ಕೇಳಿದ್ದಕ್ಕೆ ಡೊಮಿನೋಸ್‌ಗೆ 3 ಲಕ್ಷ ದಂಡ !
ನಮ್ಮ ಆಹಾರ ಗುಣಮಟ್ಟ ತಂಡವು ಘಟನೆ ನಡೆದಿರುವ ರೆಸ್ಟೋರೆಂಟ್‌ನ ಸಂಪೂರ್ಣ ತನಿಖೆಯನ್ನು ಸಹ ನಡೆಸಿದೆ ಮತ್ತು ತಪಾಸಣೆಯ ವೇಳೆ ಯಾವುದೇ ದೋಷ ಕಂಡು ಬಂದಿಲ್ಲ. ನಮ್ಮ ಅಡುಗೆಮನೆ ಮತ್ತು ಕಾರ್ಯ ನಿರ್ವಹಣೆಯ ಸ್ಥಳದಲ್ಲಿ ನಾವು ಕಟ್ಟುನಿಟ್ಟಾದ ಗಾಜು ರಹಿತ ನೀತಿಯನ್ನು ಅನುಸರಿಸುತ್ತೇವೆ. ನಾವು ಗುಣಮಟ್ಟ ಮತ್ತು ಸುರಕ್ಷತೆಯ ಅತ್ಯುನ್ನತ ಮಾನದಂಡಗಳನ್ನು ಅನುಸರಿಸುತ್ತೇವೆ. ನಾವು ಬಳಕೆದಾರರಿಂದ ಮಾದರಿಗಳನ್ನು ಪಡೆದ ನಂತರ ನಾವು ವಿಷಯವನ್ನು ಮತ್ತಷ್ಟು ತನಿಖೆ ಮಾಡುತ್ತೇವೆ ಮತ್ತು ಅದಕ್ಕೆ ಅನುಗುಣವಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಡೊಮಿನೋಸ್ ತನ್ನ ಪ್ರತಿಕ್ರಿಯೆಯಲ್ಲಿ ಹೇಳಿದೆ.