ಅಬ್ಬಬ್ಬಾ..ಮಹಿಳೆ ಆರ್ಡರ್ ಮಾಡಿದ ಟೇಸ್ಟೀ ಬರ್ಗರ್‌ ಒಳಗಿತ್ತು ಶಾರ್ಪ್‌ ಪೆನ್ಸಿಲ್..!

By Suvarna NewsFirst Published Oct 7, 2022, 3:32 PM IST
Highlights

ಬರ್ಗರ್ ಅಂದ್ರೆ ಸಾಕು ಹೆಚ್ಚಿನವರು ಇಷ್ಟಪಟ್ಟು ತಿನ್ತಾರೆ. ಹಾಗೆಯೇ ಇಲ್ಲೊಬ್ಬಳು ಮಹಿಳೆ ಬರ್ಗರ್‌ನ್ನು ಆರ್ಡರ್‌ ಮಾಡಿ ಬಾಯಿ ಚಪ್ಪರಿಸಿಕೊಂಡು ತಿನ್ತಿದ್ಲು. ಆದ್ರೆ ಬರ್ಗರ್‌ ಜೊತೆ ಒಳಗಡೆ ಸ್ಟಫಿಂಗ್ಸ್ ಜೊತೆ ಸಿಕ್ಕಿರೋ ವಸ್ತುವನ್ನು ನೋಡಿ ಬೆಚ್ಚಿಬಿದ್ಲು. ಅಷ್ಟಕ್ಕೂ ಬರ್ಗರ್ ಒಳಗಿದ್ದಿದ್ದು ಮತ್ತೇನೂ ಅಲ್ಲ ಪೆನ್ಸಿಲ್. 

ಇತ್ತೀಚಿನ ದಿನಗಳಲ್ಲಿ ಪಿಜ್ಜಾ, ಸ್ಯಾಂಡ್‌ವಿಚ್, ಬರ್ಗರ್‌ ಮೊದಲಾದ ಜಂಕ್‌ಫುಡ್‌ಗಳನ್ನು ತಿನ್ನೋಕೆ ಜನರು ಹೆಚ್ಚು ಇಷ್ಟ ಪಡ್ತಾರೆ. ಅದರಲ್ಲೂ ಬರ್ಗರ್ ಹಲವರ ಫೇವರಿಟ್‌. ಸ್ಟ್ರೀಟ್ ಸೈಡ್ 100 ರೂ.ಗೆ ದೊರಕುವ ಬರ್ಗರ್‌ ಬೆಲೆ ಮಾಲ್‌ಗಳಲ್ಲಿ 300 ರೂ. ವರೆಗೂ ತಲುಪುತ್ತದೆ. ಹಲವು ತರಕಾರಿಗಳ ಮಿಶ್ರಣ, ಚೀಸ್ ಸೇರಿಸಿರುವ ಬರ್ಗರ್ ತಿನ್ನಲು ರುಚಿಯಾಗಿರುವ ಕಾರಣ ಹಲವರು ಬೆಲೆ ಹೆಚ್ಚಾದರೂ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಆಲೂ ಬರ್ಗರ್, ಎಗ್‌ ಬರ್ಗರ್, ಚಿಕನ್ ಬರ್ಗರ್‌ ಹೀಗೆ ಇಷ್ಟವಾದುದನ್ನು ಆಯ್ಕೆ ಮಾಡಿ ತಿನ್ನುತ್ತಾರೆ. ಬರ್ಗರ್‌ಗಳಲ್ಲಿ ಸಾದಾ ಬರ್ಗರ್‌ನಿಂದ ತೊಡಗಿ ಬೆಲೆಬಾಳುವ ಬರ್ಗರ್‌ಗಳು ಸಹ ಲಭ್ಯವಿರುತ್ತವೆ. ಬರ್ಗರ್‌ಗಳಲ್ಲಿ ಸಾಮಾನ್ಯವಾಗಿ ವೆಜ್‌ ಬರ್ಗರ್‌ಗಳಲ್ಲಿ ತರಕಾರಿಗಳ ಸ್ಟಫಿಂಗ್‌, ನಾನ್‌ ವೆಜ್‌ ಬರ್ಗರ್‌ನಲ್ಲಿ ಚಿಕನ್, ಎಗ್ ಸ್ಟಫಿಂಗ್ ಇರುತ್ತದೆ. ಆದ್ರೆ ಇಲ್ಲೊಬ್ಬ ಮಹಿಳೆ ಆರ್ಡರ್ ಮಾಡಿದ ಬರ್ಗರ್‌ನಲ್ಲಿ ಇವೆರಡೂ ಇರಲ್ಲಿಲ್ಲ. ಬದಲಿಗೆ ಪೆನ್ಸಿಲ್ ಸಿಕ್ಕಿತ್ತು.

ಟೇಸ್ಟೀ ಬರ್ಗರ್‌ನೊಳಗಿತ್ತು ಪೆನ್ಸಿಲ್‌
ಅಯ್ಯೋ ಪೆನ್ಸಿಲಾ ಅನ್ಬೇಡಿ, ಅಚ್ಚರಿಯಾದರೂ ಇದು ನಿಜ. ಲೀನೆ ಡಾಲಿ ಎಂಬವರು ಬರ್ಗರ್ ಕಿಂಗ್ ಊಟವನ್ನು ಆರ್ಡರ್ ಮಾಡಿದ್ದಾರೆ. ಆದರೆ ಈ ಚಿಕನ್ ಬರ್ಗರ್ ಸವಿಯುವಾಗ ಮಧ್ಯೆ ಪೆನ್ಸಿಲ್ ಸಿಕ್ಕಿದೆ. 'ಮಗ ಬರ್ಗರ್ ಗಟ್ಟಿಯಾಗಿದೆಯೆಂದು ನನಗೆ ನೀಡಿದನು. ನಾನು ಇದನ್ನು ಸವಿದು ನೋಡಲು ಹೊರಟಾಗ ಗಟ್ಟಿಯಾದ ಏನೋ ಅದರಲ್ಲಿ ಸಿಕ್ಕಿತು. ನಾನು ಮೊದಲು ಅದು ಐಲೈನರ್ ಎಂದು ತಿಳಿದುಕೊಂಡೆ. ಆದರೆ ಬರ್ಗರ್ ಓಪನ್ ಮಾಡಿದಾಗ ಅದು ಪೆನ್ಸಿಲ್ ಆಗಿತ್ತು' ಎಂದು ಮಹಿಳೆ (Woman) ತಿಳಿಸಿದ್ದಾಳೆ. 'ತಕ್ಷಣ ನಾನು ಅವರನ್ನು ಕರೆದು ವಿವರಣೆಯನ್ನು ಕೇಳಿದೆ ಮತ್ತು ನನ್ನ ಬರ್ಗರ್‌ನಲ್ಲಿ ಏನೋ ಇದೆ ಎಂದು ಅವರಿಗೆ ಹೇಳಿದೆ.  ಶಾಪ್‌ನವರು ಪೆನ್ಸಿಲ್‌ ನೋಡಿ ಇದು ಅಂಗಡಿಯವರು ಬಳಸುವ ಗ್ರೀಸ್ ಪೆನ್ಸಿಲ್. ಅಚಾತುರ್ಯದಿಂದ ಬರ್ಗರ್ ಒಳಗೆ ಸೇರಿದೆ ಎಂದು ತಪ್ಪೊಪ್ಪಿಕೊಂಡರು. ಇದರಿಂದ ಆರೋಗ್ಯಕ್ಕೆ ಹಾನಿಯಾಗುವುದಿಲ್ಲ ಎಂದರು' ಎಂದು ಮಹಿಳೆ ತಿಳಿಸಿದ್ದಾಳೆ. 

ಮಗುವಿನ ಕೈಯಲ್ಲಿತ್ತು ಅಮ್ಮನ ಮೊಬೈಲ್, ಮನೆಗೆ ಡೆಲಿವರಿ ಆಯ್ತು ರಾಶಿ ರಾಶಿ ಬರ್ಗರ್ !

ಬರ್ಗರ್‌ ತಯಾರಿಸುವಾಗ ಮೇಕಪ್ ಮಾಡುತ್ತಿದ್ದರಾ ?
ಲೀನೆ ಮಕ್ಕಳು ಬರ್ಗರ್‌ನ್ನು ಹಿಂದಿರುಗಿಸಿ ಹಣ ಪಡೆದುಕೊಂಡರು. ಬರ್ಗರ್ ಮಾಡುತ್ತಿರುವಾಗ ಯಾರಾದರೂ ಮೇಕ್‌ಅಪ್ ಮಾಡುತ್ತಿದ್ದರೆ ಅಥವಾ ಮೇಕಪ್‌ ಮಾಡುವಾಗಲೇ ಬರ್ಗರ್ ತಯಾರಿಸಿದರೇ ಗೊತ್ತಿಲ್ಲ. ಆದರೆ ಗ್ರಾಹಕರಿಗೆ ಇಂಥಾ ಬರ್ಗರ್ ವಿತರಿಸುವುದು ತಪ್ಪು ಎಂದು ಲೀನೆ ಹೇಳಿದ್ದಾರೆ. 

ಬರ್ಗರ್ ಕಿಂಗ್‌ನ ವಕ್ತಾರರು, 'ಈ ಘಟನೆಯು ಉಂಟಾದ ಪರಿಣಾಮಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ ಮತ್ತು ಈ ಬಗ್ಗೆ ವಿಚಾರಣೆ (Enquiry) ಮಾಡಿದ್ದೇವೆ. ಬರ್ಗರ್ ಕಿಂಗ್ ಯುಕೆ ಅತ್ಯುತ್ತಮ ಗ್ರಾಹಕ (Customer) ಅನುಭವವನ್ನು ಮತ್ತು ಎಲ್ಲಾ ಸಮಯದಲ್ಲೂ ಸಾಧ್ಯವಾದಷ್ಟು ಉತ್ತಮ ಗುಣಮಟ್ಟದ ಆಹಾರ (Food)ವನ್ನು ನೀಡಲು ಶ್ರಮಿಸುತ್ತದೆ ಎಂದು ನಾವು ಪುನರುಚ್ಚರಿಸಲು ಬಯಸುತ್ತೇವೆ. ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ನಾವು ಕೆಲಸ ಮಾಡುತ್ತೇವೆ ಮತ್ತು ಈ ಮಾನದಂಡಗಳನ್ನು ಪೂರೈಸಲು ಸಿಬ್ಬಂದಿ ತರಬೇತಿಯನ್ನು ಬಲಪಡಿಸಲಾಗಿದೆ' ಎಂದು ಹೇಳಿದ್ದಾರೆ. 

ನೂರು, ಇನ್ನೂರಲ್ಲ, ಬರೋಬ್ಬರಿ 19 ಲಕ್ಷ ರೂ. ಬೆಲೆ ಬಾಳುವ ಬರ್ಗರ್‌ ಇದು..!

50 ವರ್ಷಗಳಿಂದ ನಿರಂತರ ಬರ್ಗರ್ ತಿಂದು ಗಿನ್ನೆಸ್ ಪುಟ ಸೇರಿದ
ಫಾಸ್ಟ್ ಫುಡ್ ಯಾರಿಗೆ ಇಷ್ಟ ಇಲ್ಲ ಹೇಳಿ. ಇತ್ತೀಚೆಗಂತು ಬಹುತೇಕ ಯುವ ಸಮೂಹ ಫಾಸ್ಟ್ಫುಡ್‌ ಎಂದರೆ ಬಾಯ್ಬಿಡುತ್ತಾರೆ. ಬರ್ಗರ್‌ ಫ್ರಂಚ್ ಪ್ರೈಸ್‌ ಜೊತೆ ಕೊಕ್ ಕುಡಿಯುತ್ತಾ ಎಂಜಾಯ್ ಮಾಡುವುದನ್ನು ಬಹುತೇಕರು ಇಷ್ಟ ಪಡುತ್ತಾರೆ. ಆದರೆ ಅಮೆರಿಕಾದ ವ್ಯಕ್ತಿಯೊಬ್ಬರು 50 ವರ್ಷಗಳಿಂದ ನಿರಂತರ ಮೆಕ್‌ಡೊನಾಲ್ಡ್‌ ಬರ್ಗರ್ ತಿನ್ನುತ್ತಿದ್ದು ಈ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಡಾನ್ ಗೊರ್ಸ್‌ಕೆ (Don Gorske) ಎಂಬ ಅಮೆರಿಕನ್ ವ್ಯಕ್ತಿಯನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ ಸಂಸ್ಥೆ ತಮ್ಮ ಜೀವಮಾನದಲ್ಲೇ ಅತೀಹೆಚ್ಚು ಬರ್ಗರ್ ತಿಂದ ವ್ಯಕ್ತಿ ಎಂದು ಗುರುತಿಸಿ ಗಿನ್ನೆಸ್ ಪುಟಕ್ಕೆ ಸೇರಿಸಿದೆ. 

ಮೇ.17 ರಂದು ಇವರು ಮೆಕ್‌ಡೊನಾಲ್ಡ್‌ (McDonald) ಬರ್ಗರ್‌ (burger) ತಿನ್ನಲು ಶುರು ಮಾಡಿದ 50ನೇ ವರ್ಷವನ್ನು ಆಚರಿಸಲಾಗುತ್ತಿದೆ. ಈತ ಬಹುತೇಕ ನಿರಂತರ ಈ ಬರ್ಗರ್ ತಿನ್ನುತ್ತಿದ್ದರು ಎಂದು ತಿಳಿದು ಬಂದಿದೆ. ಕಳೆದ 50 ವರ್ಷದಲ್ಲಿ ಡಾನ್ ಗೊರ್ಸ್‌ಕೆ ಕೇವಲ ತಮ್ಮ ಜೀವಮಾನದಲ್ಲಿ 8 ದಿನ ಮಾತ್ರ ಬರ್ಗರ್ ತಿಂದಿಲ್ಲವಂತೆ. ಇವರು ಪ್ರತಿದಿನ ಎರಡು ದೊಡ್ಡ ಮೆಕ್ ಬರ್ಗರ್‌ನ್ನು ತಿಂದಿದ್ದಾರೆ. 

click me!