ಇತ್ತೀಚಿನ ವರ್ಷಗಳಲ್ಲಿ ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದ ಆರೋಗ್ಯ ಸಮಸ್ಯೆ ಎಲ್ಲರಲ್ಲೂ ಸಾಮಾನ್ಯವಾಗಿದೆ. ಅದರಲ್ಲೂ ಸ್ಥೂಲಕಾಯ, ಬೆಲ್ಲಿ ಫ್ಯಾಟ್ ಹಲವರನ್ನು ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಬೇಕಾಬಿಟ್ಟಿ ತಿನ್ನುವ ಅಭ್ಯಾಸ. ಕೆಲವೊಬ್ಬರಿಗೆ ರಾತ್ರಿ ಮಲಗಿದ ನಂತರವೂ ಮತ್ತೆ ಹಸಿವಾಗುತ್ತದೆ. ಎದ್ದು ಜಂಕ್‌ಫುಡ್‌ಗಳನ್ನು ತಿನ್ನಲು ತೊಡಗುತ್ತಾರೆ. ಹಾಗಿದ್ರೆ ರಾತ್ರಿ ವೇಳೆಯ ಈ ಹಸಿವು ತಪ್ಪಿಸಲು ಏನು ಮಾಡಬೇಕು ?
ಕೆಲವರಿಗೆ ರಾತ್ರಿ ತಡವಾಗಿ ಮಲಗುವ ಅಭ್ಯಾಸವಿರುತ್ತದೆ. ಹೀಗಾಗಿ ಮಲಗಿದರೂ ಮತ್ತೆ ಮತ್ತೆ ಹಸಿವಾಗುತ್ತಿರುತ್ತದೆ. ಎದ್ದು ಕುಳಿತುಕೊಂಡು ಮತ್ತೆ ಜಂಕ್‌ಫುಡ್ ತಿನ್ನಲು ತೊಡಗುತ್ತಾರೆ. ಹೀಗೆ ಮಾಡುವವರಲ್ಲಿ ನೀವು ಸಹ ಒಬ್ಬರಾಗಿದ್ದರೆ, ತಡರಾತ್ರಿಯ ಕಡುಬಯಕೆಯ ಅಭ್ಯಾಸವನ್ನು ತಕ್ಷಣ ಬದಲಾಯಿಸಿ. ಏಕೆಂದರೆ, ಈ ಅಭ್ಯಾಸವು ನಿಮ್ಮಲ್ಲಿ ಸ್ಥೂಲಕಾಯತೆಯನ್ನು ಹೆಚ್ಚಿಸಬಹುದು. ಇತ್ತೀಚಿನ ವರ್ಷಗಳಲ್ಲಿ ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದ ಆರೋಗ್ಯ ಸಮಸ್ಯೆ ಎಲ್ಲರಲ್ಲೂ ಸಾಮಾನ್ಯವಾಗಿದೆ. ಅದರಲ್ಲೂ ಸ್ಥೂಲಕಾಯ, ಬೆಲ್ಲಿ ಫ್ಯಾಟ್ ಹಲವರನ್ನು ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಬೇಕಾಬಿಟ್ಟಿ ತಿನ್ನುವ ಅಭ್ಯಾಸ. ಅದರಲ್ಲೂ ರಾತ್ರಿ ಮಲಗಿದ ಮೇಲೆ ಮತ್ತೆ ಎದ್ದು ತಿನ್ನುವ ಅಭ್ಯಾಸ ಬೆಲ್ಲಿ ಫ್ಯಾಟ್‌ಗೆ ಕಾರಣವಾಗುತ್ತಿದೆ. ಹಾಗಿದ್ರೆ ರಾತ್ರಿ ವೇಳೆಯ ಈ ಹಸಿವು ತಪ್ಪಿಸಲು ಏನು ಮಾಡಬೇಕು?
ಹಾರ್ವರ್ಡ್‌ನ ತಜ್ಞರ ಹೊಸ ಅಧ್ಯಯನವು ಮಧ್ಯರಾತ್ರಿಯಲ್ಲಿ ತಿನ್ನುವುದರಿಂದ ಹಸಿವು (Hunger) ಹೆಚ್ಚಾಗುತ್ತದೆ ಎಂದು ಬಹಿರಂಗಪಡಿಸಿದೆ. ಇದರೊಂದಿಗೆ, ಕ್ಯಾಲೊರಿಗಳನ್ನು ಸುಡುವ ದೇಹದ (Body) ಸಾಮರ್ಥ್ಯವು ಕಡಿಮೆಯಾಗಲು ಪ್ರಾರಂಭಿಸುತ್ತದೆ ಮತ್ತು ನೀವು ಕ್ರಮೇಣ ಸ್ಥೂಲಕಾಯತೆಗೆ (Obesity) ಬಲಿಯಾಗಬಹುದು. ಹೆಚ್ಚು ಹಸಿವಿನಿಂದ ನೀವು ತೊಂದರೆಗೊಳಗಾಗಿದ್ದರೆ, ಮಧ್ಯರಾತ್ರಿಯಲ್ಲಿ ಹಸಿವನ್ನು ನಿಯಂತ್ರಿಸಲು ನೀವು ಕೆಲವು ಪರಿಣಾಮಕಾರಿ ಸಲಹೆಗಳನ್ನು ಅಳವಡಿಸಿಕೊಳ್ಳಬಹುದು. ತಡರಾತ್ರಿಯ (Late night) ಹಸಿವನ್ನು ನೀಗಿಸುವುದು ಹೇಗೆ ಎಂದು ತಿಳಿಯೋಣ.
Healthy Food: ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗಿ ಯಡವಟ್ಟು ಮಾಡ್ಕೊಳ್ಬೇಡಿ
ಹಸಿವನ್ನು ಹೋಗಲಾಡಿಸಲು ನೀರು ಕುಡಿಯಬಹುದು: ರಾತ್ರಿ ತಡವಾಗಿ ಎದ್ದರೆ ಸ್ವಲ್ಪ ಹೊತ್ತಿನ ನಂತರ ಸ್ವಲ್ಪ ಹಸಿವಾಗುವುದು ಅನಿವಾರ್ಯ. ಈ ಹಸಿವನ್ನು ಹೋಗಲಾಡಿಸಲು ನೀರು (Water) ಕುಡಿಯಬಹುದು. ಸಾಕಷ್ಟು ನೀರು ಕುಡಿಯುವುದು ದೇಹವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ನಿಮ್ಮ ಹಸಿವನ್ನು ತಣಿಸುತ್ತದೆ ಎಂದು ಸಂಶೋಧನೆ ಸೂಚಿಸುತ್ತದೆ. ಅದೇ ಸಮಯದಲ್ಲಿ, ನೀರಿನಲ್ಲಿ ಯಾವುದೇ ಕ್ಯಾಲೊರಿಗಳಿಲ್ಲ ಮತ್ತು ಹೊಟ್ಟೆಯ (Stomach) ಕೊಬ್ಬನ್ನು ಹೆಚ್ಚಿಸುವ ಅಪಾಯವಿರುವುದಿಲ್ಲ.
ಊಟದ ಸಮಯವನ್ನು ಸರಿಪಡಿಸಿ: ತಿನ್ನಲು ಸರಿಯಾದ ಸಮಯವನ್ನು (Time) ನಿಗದಿಪಡಿಸಿ. ಇಲ್ಲದಿದ್ದರೆ ತಿನ್ನುವ ಸಮಯ ನಿಮ್ಮಲ್ಲಿ ಬೆಲ್ಲಿ ಫ್ಯಾಟ್, ಬೊಜ್ಜು ಮೊದಲಾದ ಆರೋಗ್ಯ ಸಮಸ್ಯೆ (Health problem)ಗಳನ್ನು ಉಂಟು ಮಾಡಬಹುದು. ಮಾತ್ರವಲ್ಲ, ಇದು ರಾತ್ರಿಯಲ್ಲಿ ಹಸಿವನ್ನು ಉಂಟುಮಾಡಬಹುದು. ಅದಕ್ಕಾಗಿಯೇ ನೀವು ಪ್ರತಿದಿನ ತಿನ್ನುವ ಸಮಯವನ್ನು ಹೊಂದಿಸಬೇಕು. ನಿಮ್ಮ ಆಹಾರದ ವೇಳಾಪಟ್ಟಿಯನ್ನು ಒಮ್ಮೆ ನೀವು ಟೈ ಮಾಡಿದ ನಂತರ, ರಾತ್ರಿಯಲ್ಲಿ ಹಸಿವಿನ ಭಾವನೆಯು ಹೋಗುತ್ತದೆ.
ರಾತ್ರಿಯ ಊಟದಲ್ಲಿ ಪ್ರೋಟೀನ್ ಆಹಾರ ಸೇರಿಸಿ: ರಾತ್ರಿಯಲ್ಲಿ ಆಗಾಗ ಹಸಿವಾಗುವುನ್ನು ತಪ್ಪಿಸಲು ಊಟದಲ್ಲಿ ಪ್ರೋಟೀನ್ ಭರಿತ ಆಹಾರಗಳನ್ನು ಸೇರಿಸಿ. ಜೀರ್ಣಾಂಗ ವ್ಯವಸ್ಥೆಯು ಪ್ರೋಟೀನ್‌ಗಳನ್ನು ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ ಮತ್ತು ಅವುಗಳನ್ನು ತಿನ್ನುವುದರಿಂದ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿದಂತಾಗುತ್ತದೆ. ಪ್ರೋಟೀನ್ ಸಮೃದ್ಧವಾಗಿರುವ ಆಹಾರ (Food)ಗಳಲ್ಲಿ ಕೋಳಿ, ಮಸೂರ, ಮೊಟ್ಟೆ, ಕ್ವಿನೋವಾ, ಮೀನು ಇತ್ಯಾದಿಗಳು ಸೇರಿವೆ.
Parenting Tips: ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ, ಫಿಟ್ ಆಗಿರುವಂತೆ ಮಾಡಲೇನು ಮಾಡಬೇಕು?
ಆಹಾರದಲ್ಲಿ ಆಲೂಗಡ್ಡೆಯನ್ನುಸೇರಿಸಿ: ಮಧ್ಯರಾತ್ರಿಯ ಹಸಿವನ್ನು ನಿಯಂತ್ರಿಸುವ ಆಹಾರವನ್ನು ನೀವು ಹುಡುಕುತ್ತಿದ್ದರೆ, ಆಲೂಗಡ್ಡೆ (Potato) ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. ಏಕೆಂದರೆ, ಸಿಡ್ನಿ ವಿಶ್ವವಿದ್ಯಾನಿಲಯದ ಸಾಮಾನ್ಯ ಆಹಾರಗಳ ಸಂತೃಪ್ತಿ ಸೂಚ್ಯಂಕ ವರದಿಯ ಪ್ರಕಾರ, ಆಲೂಗಡ್ಡೆ ತಿನ್ನುವುದರಿಂದ ನಿಮಗೆ ದೀರ್ಘಕಾಲ ಹಸಿವಾಗುವುದಿಲ್ಲ. ಅದೇ ಸಮಯದಲ್ಲಿ, ಆಲೂಗಡ್ಡೆಯೊಳಗಿನ ಕ್ಯಾಲೊರಿಗಳ ಪ್ರಮಾಣವು ತುಂಬಾ ಕಡಿಮೆಯಾಗಿದೆ.
ಆಹಾರ ಸೇವಿಸುವಾಗ ಟಿವಿ-ಮೊಬೈಲ್ ನಿಂದ ದೂರವಿರಿ: ಆಹಾರ ಸೇವಿಸುವಾಗ ಟಿವಿ, ಮೊಬೈಲ್‌ನಿಂದ ದೂರವಿದ್ದು ಆಹಾರದತ್ತ ಮಾತ್ರ ಗಮನ ಹರಿಸಬೇಕು ಎನ್ನುತ್ತಾರೆ ತಜ್ಞರು. ಇದನ್ನು ಬುದ್ದಿವಂತಿಕೆಯ ಆಹಾರ ಎಂದು ಕರೆಯಲಾಗುತ್ತದೆ. ಹೀಗೆ ಮಾಡುವುದರಿಂದ ನಿಮಗೆ ಅಗತ್ಯಕ್ಕಿಂತ ಹೆಚ್ಚು ಅಥವಾ ಕಡಿಮೆ ತಿನ್ನುವುದನ್ನು ನೀವು ತಪ್ಪಿಸುತ್ತೀರಿ. ಈ ಮೂಲಕ ನೀವು ಸುಲಭವಾಗಿ ಹೊಟ್ಟೆಯ ಕೊಬ್ಬನ್ನು ತೊಡೆದುಹಾಕಬಹುದು.
ಆರೋಗ್ಯಕರ ತಿಂಡಿಗಳನ್ನು ಸಿದ್ಧವಾಗಿಟ್ಟುಕೊಳ್ಳಿ: ತಡರಾತ್ರಿಯಲ್ಲಿ ಹಸಿವನ್ನು ಕಡಿಮೆ ಮಾಡಲು ಸಲಹೆಗಳನ್ನು ಅಳವಡಿಸಿಕೊಂಡ ನಂತರವೂ ನೀವು ಹಸಿವಿನಿಂದ ಬಳಲುತ್ತಿದ್ದರೆ, ನೀವು ಆರೋಗ್ಯಕರ ತಿಂಡಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬಹುದು. ರಾತ್ರಿಯಲ್ಲಿ ಈ ಆರೋಗ್ಯಕರ ತಿಂಡಿಗಳನ್ನು ತಿನ್ನುವುದು ಹಸಿವನ್ನು ಪೂರೈಸುವುದಲ್ಲದೆ, ನಿಮ್ಮ ದೇಹವನ್ನು ಸೀಮಿತ ಕ್ಯಾಲೊರಿಗಳೊಂದಿಗೆ ಪೋಷಿಸುತ್ತದೆ. ಮಖಾನ, ಜೋಳ, ಒಣ ಹಣ್ಣುಗಳು, ಮೊಸರು ಇತ್ಯಾದಿಗಳನ್ನು ನೀವು ತಡರಾತ್ರಿಯಲ್ಲಿ ಮಿತಿಯಲ್ಲಿ ಸೇವಿಸಬಹುದು. ಇದರಿಂದ ಕೊಬ್ಬು ಹೆಚ್ಚಳವಾಗುವ ಭಯವಿಲ್ಲ.