ಪಾರ್ಲೆ- ಜಿ ಬಿಸ್ಕತ್ತಿನಲ್ಲಿ 'G' ಅಂದ್ರೇನು, ನಿಮಗೆ ಗೊತ್ತಾ?

By Bhavani BhatFirst Published Sep 9, 2024, 6:34 PM IST
Highlights

ಪಾರ್ಲೆ-ಜಿ ಬಿಸ್ಕತ್‌ ನಾವು ನೀವೆಲ್ಲ ಒಂದಲ್ಲ ಒಂದು ಬಾರಿಯಾದರೂ ಸವಿದೇ ಇರುತ್ತೇವೆ. ಬೀದಿ ಅಂಗಡಿಗಳಿಂದ ಹಿಡಿದು ಪಾರ್ಟಿ ಹಾಲ್‌ಗಳವರೆಗೂ ಇದು ಬೇಕು. ಆದ್ರೆ ಇದರ ಹೆಸರಲ್ಲಿರೋ 'G' ಅಂದ್ರೇನು, ಇಲ್ಲಿ ತಿಳಿಯಿರಿ.

ಪಾರ್ಲೆ- ಜಿ ಬಿಸ್ಕತ್‌ ಚಹಾದಲ್ಲಿ ಅದ್ದಿಕೊಂಡು ತಿನ್ನುವುದು ಹಲವರ ಅಭ್ಯಾಸ. ಹಲವರಿಗೆ ಪಾರ್ಲೆ-ಜಿ ಬಿಸ್ಕತ್‌ ಇಲ್ಲದೇ ಬೆಳಗಾಗುವುದೇ ಇಲ್ಲ. ಅದರ ಸುವಾಸನೆ ಮತ್ತು ರುಚಿ ಒಂದು ಬಗೆಯ ನಾಸ್ಟಾಲ್ಜಿಯಾ ಉಂಟುಮಾಡುತ್ತದೆ. ಕೊರೋನವೈರಸ್ ಸಾಂಕ್ರಾಮಿಕದ ಸಮಯದಲ್ಲಿ ದಾಖಲೆ ಮಾರಾಟ ದಾಖಲಿಸಿದೆ. ಪಾರ್ಲೆ-ಜಿ ಬಿಸ್ಕತ್ತಿನ ಬಗ್ಗೆ ತನಗೆ ಎಲ್ಲ ತಿಳಿದಿದೆ ಎಂದು ಹೇಳುವವರು ಇರಬಹುದಾ. ಕಷ್ಟ ಕಷ್ಟ. ಗೊತ್ತಿದ್ದರೆ ಹೇಳಿ ನೋಡೋಣ, ಪಾರ್ಲೆ-ಜಿಯಲ್ಲಿರುವ ಜಿ ಏನದು?   

ಭಾರತದ ಅತ್ಯಂತ ನೆಚ್ಚಿನ ಬಿಸ್ಕತ್ತಾದ ಪಾರ್ಲೆ-ಜಿಯನ್ನು ಮೊದಲು 1938ರಲ್ಲಿ ಪರಿಚಯಿಸಲಾಯಿತು. ಆಗ ಅದನ್ನು ಪಾರ್ಲೆ ಗ್ಲುಕೋ ಎಂದು ಕರೆಯಲಾಗುತ್ತಿತ್ತು. ಇತರ ಬಿಸ್ಕತ್ತು ಬ್ರಾಂಡ್‌ಗಳೊಂದಿಗಿನ ಸ್ಪರ್ಧೆಯನ್ನು ಅದು ಮುಂದುವರಿಸಿಕೊಂಡು ಬಂತು. 1985ರಲ್ಲಿ ಕಂಪನಿಯು ಉತ್ಪನ್ನವನ್ನು ಪಾರ್ಲೆ-ಜಿ ಎಂದು ಮರುನಾಮಕರಣ ಮಾಡಿತು. 'ಜಿ' ಆರಂಭದಲ್ಲಿ 'ಗ್ಲೂಕೋಸ್' ಅನ್ನು ಪ್ರತಿನಿಧಿಸುತ್ತಿತ್ತು. ನಂತರ ಅದನ್ನು ಬ್ರ್ಯಾಂಡ್ ಸ್ಲೋಗನ್ ಆಗಿಸಿ, 'ಜೀನಿಯಸ್' ಎಂದು ಕರೆಯಲಾಯಿತು. ಆದರೆ ಪ್ಯಾಕೇಜಿಂಗ್ ಅಥವಾ ರುಚಿಯಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ.

Latest Videos

ಮೊತ್ತಮೊದಲು ಪಾರ್ಲೆ-ಜಿ ಬಿಸ್ಕತ್ತುಗಳನ್ನು ಬಟರ್ ಪೇಪರ್‌ನಲ್ಲಿ ಸುತ್ತಿ ಮಾರಾಟ ಮಾಡಲಾಗುತ್ತಿತ್ತು. ನಂತರ ಅದು ಪ್ಯಾಕೇಜಿಂಗ್ ಪ್ಲಾಸ್ಟಿಕ್ ಪ್ಯಾಕೆಟ್‌ಗಳಾಗಿ ಬದಲಾಯಿತು. 

ಪಾರ್ಲೆ-ಜಿಯನ್ನು ದೇಶಕ್ಕೆ ಸ್ವಾತಂತ್ರ್ಯ ದೊರೆಯುವ ಮುಂಚೆಯೇ ಸ್ಥಾಪಿಸಲಾಗಿತ್ತು. ಪಾರ್ಲೆ-ಜಿ ಸಂಸ್ಥಾಪಕರಾದ ಮೋಹನ್ ಲಾಲ್ ದಯಾಳ್ ಅವರು 1929 ರಲ್ಲಿ ಮುಂಬೈನ ವಿಲೆ ಪಾರ್ಲೆಯಲ್ಲಿ ಮೊದಲ ಪಾರ್ಲೆ ಕಾರ್ಖಾನೆಯನ್ನು ಸ್ಥಾಪಿಸಿದರು. ಪಾರ್ಲೆ ಹೌಸ್ ಆಗ ಕೇವಲ 12 ಕಾರ್ಮಿಕರೊಂದಿಗೆ ಪ್ರಾರಂಭವಾಯಿತು. ಈಗ ಅದು 50,500ಕ್ಕೂ ಹೆಚ್ಚು ಉದ್ಯೋಗಿಗಳ ಕುಟುಂಬವಾಗಿದೆ.

ಪಾರ್ಲೆ ಜಿ ಪ್ಯಾಕೆಟ್‌ನ ಮೇಲಿರುವ ಹೆಣ್ಣು ಮಗುವಿನ ಚಿತ್ರ ಯಾರದು ಎಂಬ ಕುತೂಹಲ ಮೊದಲಿನಿಂದಲೂ ಇದೆ.  ನೀರು ದೇಶಪಾಂಡೆ ಎಂಬ ಹುಡುಗಿ ಎಂಬ ವದಂತಿ ಇತ್ತು. ಆಕೆ ಸುಮಾರು 4 ವರ್ಷದವಳಿದ್ದಾಗ ಆಕೆಯ ತಂದೆ ಈ ಚಿತ್ರವನ್ನು ಕ್ಲಿಕ್ಕಿಸಿದ್ದಾರೆ ಎನ್ನಲಾಗಿತ್ತು. ನಂತರ ಸುಧಾ ಮೂರ್ತಿ ಎನ್ನಲಾಯಿತು.  ಆದರೆ ಪಾರ್ಲೆ ಪ್ರಾಡಕ್ಟ್ಸ್‌ನ ಗ್ರೂಪ್ ಪ್ರಾಡಕ್ಟ್ ಮ್ಯಾನೇಜರ್ ಮಯಾಂಕ್ ಷಾ ಅವರು ಚಿತ್ರದಲ್ಲಿರುವ ಮಗು 60 ರ ದಶಕದಲ್ಲಿ ಎವರೆಸ್ಟ್ ಕ್ರಿಯೇಟಿವ್‌ನ ಕಲಾವಿದ ಮಗನ್‌ಲಾಲ್ ದೈಯಾ ಅವರು ಮಾಡಿದ ಚಿತ್ರಣ ಎಂದು ಹೇಳಿ ಎಲ್ಲಾ ವದಂತಿಗೆ ಕೊನೆ ಹಾಡಿದರು.

ಸುಮಾರು 100 ಕೋಟಿ ಪಾರ್ಲೆ-ಜಿ ಪ್ಯಾಕೆಟ್‌ಗಳನ್ನು ಪ್ರತಿ ತಿಂಗಳು ಉತ್ಪಾದಿಸಲಾಗುತ್ತದೆ. ಇವುಗಳನ್ನು ದೇಶಾದ್ಯಂತ ಮತ್ತು ವಿಶ್ವದಾದ್ಯಂತ 50 ಲಕ್ಷ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಬಿಸ್ಕತ್ತುಗಳ ಮಾಸಿಕ ಉತ್ಪಾದನೆಯನ್ನು ಅಕ್ಕಪಕ್ಕದಲ್ಲಿ ಜೋಡಿಸಿದರೆ ಅದು ಭೂಮಿ ಮತ್ತು ಚಂದ್ರನ ನಡುವಿನ 7.25 ಲಕ್ಷ ಕಿಮೀ ದೂರವನ್ನು ಸರಿದೂಗಿಸಲು ಸಾಕಾಗುತ್ತದೆ ಎಂದು ನಂಬಲಾಗಿದೆ.

ಘಮ ಘಮ ಅನ್ನೋ ಅಮ್ಮ ರೀತಿಯೆ ಮನೆಯಲ್ಲಿಯೇ ತುಪ್ಪ ಮಾಡೋದು ಹೇಗೆ?
 

ನೀಲ್ಸನ್ ಸಮೀಕ್ಷೆಯ ಪ್ರಕಾರ, ಪಾರ್ಲೆ-ಜಿ ಚಿಲ್ಲರೆ ಮಾರಾಟದಲ್ಲಿ ರೂ 5,000 ಕೋಟಿ ಗಡಿ ದಾಟಿದ ಮೊದಲ ಭಾರತೀಯ ಎಫ್‌ಎಂಸಿಜಿ (ಫಾಸ್ಟ್-ಮೂವಿಂಗ್ ಕನ್ಸ್ಯೂಮರ್ ಗೂಡ್ಸ್) ಬ್ರ್ಯಾಂಡ್. ಅಲ್ಲದೆ, ಬ್ರ್ಯಾಂಡ್ ಚೀನಾದಲ್ಲಿ ಗ್ರಾಹಕರ ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ ಎಂದು ನಿಮಗೆ ತಿಳಿದಿದೆಯೇ? ಪಾರ್ಲೆ-ಜಿ ಚೀನಾದಲ್ಲಿ ಎಲ್ಲಾ ಬಿಸ್ಕತ್ತು ಬ್ರಾಂಡ್‌ಗಳಿಗಿಂತ ಹೆಚ್ಚು ಮಾರಾಟ ಮಾಡುತ್ತದೆ. ಅಷ್ಟೇ ಅಲ್ಲ, ಭಾರತದಲ್ಲಿ ಯಾವುದೇ ಬ್ರಾಂಡ್‌ಗಿಂತ ಹೆಚ್ಚು ಮಾರಾಟವಾಗುತ್ತದೆ. 

ಪಾರ್ಲೆ ಉತ್ಪನ್ನಗಳು ಪ್ರಪಂಚದಾದ್ಯಂತ ಜನಪ್ರಿಯ. ಇದು US, UK, ಕೆನಡಾ, ನ್ಯೂಜಿಲೆಂಡ್, ಮಧ್ಯಪ್ರಾಚ್ಯ ಮತ್ತು ಆಸ್ಟ್ರೇಲಿಯಾದ ಇತರ ಆರು ದೇಶಗಳಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ.

ಘಮಘಮಿಸುವ ಗರಂ ಮಸಾಲಾ ಪೌಡರ್ ಮನೆಯಲ್ಲೇ ಮಾಡೋದು ಹೇಗೆ?
 

click me!