
ಉಕ್ರೇನ್ ಮೂಲದ ಅಮೆರಿಕನ್ ಯೂಟ್ಯೂಬರ್ ನಿಕೊಕಾಡೊ ಆವಕಾಡೊ ಅವರು ಕೇವಲ 7 ತಿಂಗಳಲ್ಲಿ 250 ಪೌಂಡ್ ಎಂದರೆ ಸುಮಾರು 113 ಕೇಜಿ ತೂಕ ಇಳಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಇವರ ಮೊದಲು ಹಾಗೂ ನಂತರದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಯೂಟ್ಯೂಬರ್ ನಿಕೊಕಾಡೊ ಆವಕಾಡೊ ಅವರು ಹೆಚ್ಚಾಗಿ ತಮ್ಮ ಆಹಾರ ಸೇವನೆಗೆ ಸಂಬಂಧಿಸಿದ ದೊಡ್ಡ ದೊಡ್ಡ ಮಕ್‌ಬ್ಯಾಂಗ್ ವೀಡಿಯೋಗಳಿಗೆ ಹೆಸರಾಗಿದ್ದರು. (ಮಕ್‌ಬ್ಯಾಂಗ್ ವೀಡಿಯೋ ಎಂದರೆ ತನ್ನ ವೀಕ್ಷಕರ ಜೊತೆ ಮಾತನಾಡುತ್ತಾ ದೊಡ್ಡ ಪ್ರಮಾಣದಲ್ಲಿ ಆಹಾರವನ್ನು ಸೇವಿಸುವುದು, ಈ ಮಕ್ ಬ್ಯಾಂಗ್ ಪದ ದಕ್ಷಿಣ ಕೊರಿಯಾ ಮೂಲದ್ದಾಗಿದೆ.
ಆದರೆ ಸಿಕ್ಕಾಬಟ್ಟೆ ತಿನ್ನುವ ಕಾರಣಕ್ಕೆ ಫುಡ್ಡಿ ಎನಿಸಿಕೊಂಡಿದ್ದ ಯೂಟ್ಯೂಬರ್ ನಿಕೊಕಾಡೊ ಆವಕಾಡೊ ಅವರು ಈಗ ಕೇವಲ 7 ತಿಂಗಳಲ್ಲಿ ಇಷ್ಟೊಂದು ಕೇಜಿ ತೂಕ ಇಳಿಕೆ ಮಾಡಿಕೊಂಡಿರುವುದು ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಸೆಪ್ಟೆಂಬರ್ 7 ರಂದು ದೊಡ್ಡದಾದ ವೀಡಿಯೋವೊಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ತಮ್ಮ ಈ ಟ್ರಾನ್ಸ್‌ಫಾರ್ಮೇಶನ್ (transformation ರೂಪಾಂತರ) ಗೆ ಸಂಬಂಧಿಸಿದಂತೆ ವಿವರಣೆ ನೀಡಿದ್ದಾರೆ. ಇದು ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದ್ದು, ಜನ ತಲೆಚಚ್ಚಿಕೊಳ್ತಿದ್ದಾರೆ.
ಆಯುರ್ವೇದದ ಈ ಚಿಕಿತ್ಸೆ ಮೂಲಕ 14 ದಿನದಲ್ಲೇ 6 ಕೆ.ಜಿ ತೂಕ ಇಳಿಸಿಕೊಂಡ ನಟ
ಈ ವೀಡಿಯೋಗೆ 2 ಸ್ಟೆಪ್ ಎಹೆಡ್(ಎರಡು ಹೆಜ್ಜೆ ಮುಂದೆ) ಎಂದು ಕ್ಯಾಪ್ಷನ್ ನೀಡಲಾಗಿದ್ದು, ಸ್ವಲ್ಪ ಹೊತ್ತಿನಲ್ಲೇ ಸಖತ್ ವೈರಲ್ ಆಯ್ತು. ಅಲ್ಲದೇ ಈ ರೀತಿಯ ಹಠಾತ್ ಬದಲಾವಣೆಗೆ ಒಜೆಂಪಿಕ್(ozempic) ಕಾರಣವಾಗಿರಬಹುದೇ ಎಂದು ಜನ ಅನುಮಾನ ವ್ಯಕ್ತಪಡಿಸಿದ್ದರು. ( ಒಜೆಂಪಿಕ್ ಎಂದರೆ ತೂಕ ಇಳಿಕೆಗೆ ನೀಡುವ ಒಂದು ಚುಚ್ಚುಮದ್ದಿನ ಬ್ರಾಂಡ್)
25 ನಿಮಿಷಗಳ ವೀಡಿಯೋದಲ್ಲಿ, ನಿಕೋಲಸ್ ಪೆರ್ರಿ ಅಲಿಯಾಸ್ ನಿಕೊಕಾಡೊ ಆವಕಾಡೊ ಅವರು ತಮ್ಮ ತೂಕ ಇಳಿಕೆಯ ಬಗ್ಗೆ ಸ್ಪೂರ್ತಿ ನೀಡುವ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ. ಹಾಗಂತ ತೂಕ ಇಳಿಕೆಗೆ ಆವಕಾಡೊ ಮಾಡ್ತಿರುವ ಮೊದಲ ಪ್ರಯತ್ನವೇನು ಅಲ್ಲ, ಅವರು 2023ರಿಂದಲೂ ತಮ್ಮ ಕಂಟೆಂಟ್‌ಗಳಲ್ಲಿ ಬಹಳ ಬದಲಾವಣೆ ಮಾಡಿಕೊಂಡಿದ್ದು, ಒಟ್ಟು ಆಹಾರ ಸೇವನೆ ಮಾಡುವ ಬದಲು ಆರೋಗ್ಯಕರ ಡಯಟ್ ಬಗ್ಗೆ ಮಾಹಿತಿ ನೀಡಲು ಶುರು ಮಾಡಿದ್ದರು. ಜೊತೆಗೆ ಆರೋಗ್ಯಕರ ಡಯಟ್‌ನಿಂದ ತಾನು 89 ಪೌಂಡ್ ತೂಕ ಇಳಿಕೆ ಮಾಡಿಕೊಂಡಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆದರೆ ದೈಹಿಕ ಹಾಗೂ ಮಾನಸಿಕ ಒತ್ತಡಗಳಿಂದಾಗಿ ಈ ತೂಕ ಇಳಿಕೆಯ ಪ್ರಯಾಣ ಬಹಳ ಸವಾಲಿನದ್ದಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
ವಿಶ್ವದ ಧಡೂತಿ ವ್ಯಕ್ತಿ ಎನಿಸಿಕೊಂಡಿದ್ದವ ಈಗ ಹೇಗಿದ್ದಾನೆ ನೋಡಿ: 6 ತಿಂಗಳಲ್ಲಿ 542 ಕೇಜಿ ಇಳಿಕೆ
ಇತ್ತೀಚಿನ ವೀಡಿಯೋದಲ್ಲಿ ಅವರು ತಾನು 250 ಕೇಜಿ ತೂಕ ಇಳಿಕೆ ಮಾಡಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ನಿನ್ನೆಯಷ್ಟೇ ಜನ ನನ್ನನ್ನು ಡುಮ್ಮ , ಆರೋಗ್ಯ ಇಲ್ಲದವನು ಎಂದೆಲ್ಲಾ ಕರೆಯುತ್ತಿದ್ದರು. ಆದರೆ ಇಂದು ನಾನು 250 ಪೌಂಡ್ ತೂಕ ಇಳಿಕೆ ಮೂಲಕ ನನ್ನ ಟೀಕಾಕಾರೆಲ್ಲರೂ ತಪ್ಪು ಮಾಡಿದ್ದಾರೆ ಎಂದು ಸಾಬೀತುಪಡಿಸಿದ್ದೇನೆ ಎಂದು ಆವಕಾಡೋ ಹೇಳಿಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.