ಸಕ್ರೆ ಬಿಟ್ರೆ ಆರೋಗ್ಯವೇ ಭಾಗ್ಯ, ಕಾಫಿ-ಟೀ ಹೇಗಪ್ಪಾ ಕುಡಿಯೋದು? ಇಲ್ಲಿವೆ ಟಿಪ್ಸ್!

By Suvarna News  |  First Published Oct 21, 2023, 3:09 PM IST

ಸಕ್ಕರೆಯಿಂದ ಸಾಧ್ಯವಾದಷ್ಟು ದೂರವಿದ್ರೆ ನಾವು ಆರೋಗ್ಯವಾಗಿರ್ತೇವೆ. ಇದು ತಿಳಿದಿದ್ರೂ ಅದನ್ನು ಬಿಡೋಕೆ ಸಾಧ್ಯವಾಗ್ತಿಲ್ಲ. ಟೀ – ಕಾಫಿ ವಿಷ್ಯದಲ್ಲೂ ಇದು ಸತ್ಯ. ಸಿಹಿ ಸಿಹಿ ಕಾಫಿ – ಟೀಗೆ ನೀವು ಸಕ್ಕರೆನೇ ಬಳಸ್ಬೇಕಾಗಿಲ್ಲ.. ಮತ್ತೇನು ಬಳಸ್ಬಹುದು ?
 


ಸಕ್ಕರೆ ತಿನ್ನಲು ಎಷ್ಟು ರುಚಿಯಾಗಿದ್ರೂ ಆರೋಗ್ಯ ಹಾಳು ಮಾಡುವ ಗುಣವನ್ನು ಅದು ಹೊಂದಿದೆ. ಸಕ್ಕರೆಯಲ್ಲಿ ಯಾವುದೇ ಪೋಷಕಾಂಶವಿಲ್ಲ. ಸಕ್ಕರೆ ತಿನ್ನೋದರಿಂದ ನಮಗೆ ಲಾಭ ಶೂನ್ಯ. ಆದ್ರೆ ಸಕ್ಕರೆ ಸೇವನೆ ಮಾಡೋದ್ರಿಂದ ದೊಡ್ಡ ಹಾನಿಯಿದೆ. ಇದು ಕ್ಯಾಲೋರಿ ಹೆಚ್ಚಿಸುವ ಕೆಲಸವನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತದೆ. ತೂಕ ಹೆಚ್ಚಳದ ಜೊತೆ ಮಧುಮೇಹ,     ಹೃದಯ ಸಂಬಂಧಿ ಖಾಯಿಲೆಗಳಿಗೆ ಇದು ಕಾರಣವಾಗುತ್ತದೆ. ಈಗಿನ ದಿನಗಳಲ್ಲಿ ಸಕ್ಕರೆ ಸೇವನೆ ನಿಲ್ಲಿಸುವಂತೆ ಅಥವಾ ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವಂತೆ ಸಾಕಷ್ಟು ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸುವ ಜನರು ಸಕ್ಕರೆ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡ್ತಿದ್ದಾರೆ. 

ಟೀ (Tea) ಹಾಗೂ ಕಾಫಿ ಸೇವನೆ ಮಾಡುವವರ ಸಂಖ್ಯೆ ನಮ್ಮಲ್ಲಿ ಹೆಚ್ಚಿದೆ. ಅನೇಕರಿಗೆ ಸಕ್ಕರೆ (Sugar) ಯಿಲ್ಲದ ಕಾಫಿ ಮತ್ತು ಟೀ ಕುಡಿಯೋದು ಇಷ್ಟವಾಗೋದಿಲ್ಲ. ಆದ್ರೆ ಸಕ್ಕರೆ ಆರೋಗ್ಯ (Health) ಹಾಳು ಮಾಡುತ್ತೆ ಎನ್ನುವ ಸತ್ಯ ಗೊತ್ತಿರುವ ಕಾರಣ, ಕಾಫಿ, ಟೀ ರುಚಿಯನ್ನು ಸಿಹಿಗೊಳಿಸಲು ಸಕ್ಕರೆ ಬದಲು ಏನನ್ನು ಬಳಕೆ ಮಾಡ್ಬಹುದು ಎನ್ನುವ ಆಲೋಚನೆಯಲ್ಲಿರುತ್ತಾರೆ. ನೀವೂ ಸಕ್ಕರೆ ಪರ್ಯಾಯ ಹುಡುಕ್ತಿದ್ದರೆ ನಾವಿಂದು ಅದ್ರ ಬಗ್ಗೆ ಮಾಹಿತಿ ನೀಡ್ತೇವೆ.

Latest Videos

undefined

ಡಯಾಬಿಟಿಸ್ ಇರೋರು ಯಾವ ಬೇಳೆಕಾಳು ತಿನ್ಬೇಕು? ಯಾವುದನ್ನು ತಿನ್ಬಾರ್ದು?

ಕಾಫಿ - ಟೀಗೆ ಸಕ್ಕರೆ ಬದಲು ಇದನ್ನು ಬಳಸಿ : 

ಬೆಲ್ಲದ ಕಾಫಿ (Jaggery Coffee) : ಬೆಲ್ಲ ಹಾಗೂ ಸಕ್ಕರೆ ಎರಡೂ ಕಬ್ಬಿನಿಂದಲೇ ಸಿದ್ಧವಾಗುವ ಆಹಾರ ಪದಾರ್ಥವಾಗಿದೆ. ಆದ್ರೆ ಇವೆರಡರ ಮಧ್ಯೆ ಅಜಗಜಾಂತರ ವ್ಯತ್ಯಾಸವಿದೆ. ಒಂದು ಆರೋಗ್ಯ ವೃದ್ಧಿಸಿದ್ರೆ ಇನ್ನೊಂದು ಆರೋಗ್ಯ ಹಾಳು ಮಾಡುತ್ತದೆ. ನೀವು ಸಕ್ಕರೆ ಬದಲು ಬೆಲ್ಲವನ್ನು ಬಳಸಿ ಕಾಫಿ ಅಥವಾ ಟೀ ತಯಾರಿಸಬಹುದು. ಇದು ಕಾಫಿ – ಟೀ ರುಚಿಯನ್ನು ಸಿಹಿಗೊಳಿಸುತ್ತದೆ. ಬೆಲ್ಲವು ಅತ್ಯಂತ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ದೇಹಕ್ಕೆ ಶಕ್ತಿಯನ್ನು ಒದಗಿಸುವ ಕಬ್ಬಿಣ, ಖನಿಜ ಸೇರಿದಂತೆ ವಿವಿಧ ಪೋಷಕಾಂಶಗಳನ್ನು ಬೆಲ್ಲ ಹೊಂದಿರುತ್ತದೆ. ಬೆಲ್ಲವು ನಮ್ಮ ಜೀವಕೋಶಗಳನ್ನು ರಕ್ಷಿಸುವ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ನೀವು ಬೆಲ್ಲ ಸೇವನೆ ಮಾಡೋದ್ರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.  

Health Tips : ಚಳಿಗಾಲದಲ್ಲಿ ಹೆಚ್ಚಾಗುತ್ತೆ ಮೈಗ್ರೇನ್, ಓಡಿಸಲು ಹೀಗ್ ಮಾಡಿದ್ರೂ ಓಕೆ!

ಜೇನುತುಪ್ಪದ ಬಳಕೆ (Honey) : ಜೇನುತುಪ್ಪ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ನೈಸರ್ಗಿಕವಾಗಿ ದೊರೆಯುವ ಸಿಹಿಯಾಗಿದೆ. ಜೇನುತುಪ್ಪ ಕಡಿಮೆ ಕ್ಯಾಲೋರಿ ಹೊಂದಿದೆ. ಇದ್ರಲ್ಲಿ ಪೋಷಕಾಂಶ ಕೂಡ  ಸಮೃದ್ಧವಾಗಿದೆ. ಆಂಟಿಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಜೇನುತುಪ್ಪದಲ್ಲಿ ಕಂಡುಬರುತ್ತವೆ. ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಜೇನುತುಪ್ಪ ಸೇವನೆಯಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ನೀವು ಕಾಫಿ - ಟೀಗೆ ಸಕ್ಕರೆ ಬದಲು ಜೇನುತುಪ್ಪವನ್ನು ಬಳಸಬಹುದು. ಆದ್ರೆ ಕಾಫಿ ಅಥವಾ ಟೀ ತಯಾರಿಸುವಾಗ ಜೇನುತುಪ್ಪವನ್ನು ಕುದಿಸಬೇಡಿ. ಕಾಫಿ ಅಥವಾ ಟೀ ಇಲ್ಲವೆ ಯಾವುದೇ ಕಷಾಯ ಸಿದ್ಧವಾದ್ಮೇಲೆ ಅಗತ್ಯವಿರುವಷ್ಟು ಜೇನುತುಪ್ಪ ಬೆರೆಸಿ ಸೇವನೆ ಮಾಡಿ.

ತೆಂಗಿನಕಾಯಿ ಸಕ್ಕರೆ (Coconut Sugar) : ಕೊಕನಟ್ ಶುಗರ್ ಎಂದೇ ಇದು ಪ್ರಸಿದ್ಧಿ ಪಡೆದಿದೆ. ತೆಂಗಿನಕಾಯಿಯಿಂದ ಸಕ್ಕರೆ ಅಂಶವನ್ನು ತೆಗೆಯಲಾಗುತ್ತದೆ. ಗ್ಲೂಕೋಸ್, ಫ್ರಕ್ಟೋಸ್ ಮತ್ತು ಸುಕ್ರೋಸ್‌ನಂತಹ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಹ ಇದರಲ್ಲಿ ಕಂಡುಬರುತ್ತವೆ. ಇದು ಚಹಾ ಮತ್ತು ಕಾಫಿಯನ್ನು ಸಕ್ಕರೆಯಂತೆ ಸಿಹಿಗೊಳಿಸುತ್ತದೆ. ತೆಂಗಿನಕಾಯಿ ಶುಗರ್ ಕೂಡ ಕಡಿಮೆ ಕ್ಯಾಲೋರಿ ಹೊಂದಿರುತ್ತದೆ. ತೆಂಗಿನಕಾಯಿ ಸಕ್ಕರೆಯಲ್ಲಿ ಗ್ಲೈಸೆಮಿಕ್ ಸೂಚ್ಯಂಕವು ತುಂಬಾ ಕಡಿಮೆಯಾಗಿದೆ. ಇದು ಮಧುಮೇಹ ರೋಗಿಗಳಿಗೂ ಒಳ್ಳೆಯದು.  
 

click me!