ಆರ್ಡರ್‌ ಮಾಡಿ 30 ನಿಮಿಷ ಆದ್ರೂ ಪಿಜ್ಜಾ ಡೆಲಿವರಿ ಆಗಿಲ್ಲಾಂತ ಪೊಲೀಸರಿಗೆ ಕರೆ ಮಾಡಿದ ಭೂಪ !

By Suvarna News  |  First Published Jun 7, 2022, 9:58 AM IST

ಪೊಲೀಸರಿಗೆ (Police) ಯಾಕೆ ಕಾಲ್‌ ಮಾಡ್ತಾರೆ ಹೇಳಿ. ಏನಾದ್ರೂ ಪ್ರಾಬ್ಲಂ (Problem) ಆದಾಗ ಅಥವಾ ಜಗಳಗಳು ನಡೆದಾಗ ಅಲ್ವಾ ? ಆದ್ರೆ ಇಲ್ಲೊಬ್ಬಾತ ಪಿಜ್ಜಾ ಡೆಲಿವರಿ (Pizza Delivery) ಆಗೋದು 30 ನಿಮಿಷಕ್ಕೂ ಹೆಚ್ಚಾಯ್ತು ಅಂತ ಡೈರೆಕ್ಟ್‌ ಪೊಲೀಸ್‌ ಸ್ಟೇಷನ್‌ಗೆ ಕಾಲ್‌ ಮಾಡಿದ್ದಾನೆ. ಸಾರ್‌ ನನ್ನ ಪಿಜ್ಜಾನೇ ಡೆಲಿವರಿ ಆಗಿಲ್ಲ. ಏನಾದ್ರೂ ಮಾಡಿ ಅಂದಿದ್ದಾನೆ.


ಪೊಲೀಸರಿಗೆ (Police) ಯಾಕೆ ಕಾಲ್‌ ಮಾಡ್ತಾರೆ ಹೇಳಿ. ಏನಾದ್ರೂ ಪ್ರಾಬ್ಲಂ (Problem) ಆದಾಗ ಅಥವಾ ಜಗಳಗಳು ನಡೆದಾಗ ಅಲ್ವಾ ? ಆದ್ರೆ ಇಲ್ಲೊಬ್ಬಾತ ಪಿಜ್ಜಾ ಡೆಲಿವರಿ (Pizza Delivery) ಆಗೋದು 30 ನಿಮಿಷಕ್ಕೂ ಹೆಚ್ಚಾಯ್ತು ಅಂತ ಡೈರೆಕ್ಟ್‌ ಪೊಲೀಸ್‌ ಸ್ಟೇಷನ್‌ಗೆ ಕಾಲ್‌ ಮಾಡಿದ್ದಾನೆ. ಸಾರ್‌ ನನ್ನ ಪಿಜ್ಜಾನೇ ಡೆಲಿವರಿ ಆಗಿಲ್ಲ. ಏನಾದ್ರೂ ಮಾಡಿ ಅಂದಿದ್ದಾನೆ.

ಇವತ್ತಿನ ದಿನಗಳಲ್ಲಿ ಹಲವರಿಗೆ ಹೊತ್ತಿಗೆ ಸರಿಯಾಗಿ ಊಟ ಮಾಡೋದಕ್ಕಿಂತ ಪಿಜ್ಜಾ, ಬರ್ಗರ್ ಮೊದಲಾದ ಜಂಕ್‌ಫುಡ್ ತಿನ್ನೋದೆ ಇಷ್ಟವಾಗುತ್ತೆ. ಸಾಲ್ದು ಅಂತ ಇಂಥಾ ಡೊಮಿನೋಸ್‌, ಪಿಜ್ಜಾ ಹಟ್‌, ಮೆಕ್‌ ಡೊನಾಲ್ಡ್‌ ಮೊದಲಾದ ಕಡೆ ಬೈ ಒನ್‌ ಗೆಟ್‌ ಒನ್ ಎಂಬ ಆಫರ್‌ ಬೇರೆ ಕೊಟ್ಟಿರ್ತಾರೆ. ಮಾತ್ರವಲ್ಲ ಸ್ಪೀಡ್ ಡೆಲಿವರಿ ಅನ್ನೋ ಹೆಸರಿನಲ್ಲ ಕೆಲವೇ ನಿಮಿಷಗಳಲ್ಲಿ ಪಿಜ್ಜಾ ಮನೆ ಡೋರ್ ಮುಂದೆ ಇರುತ್ತೆ. ಹೀಗಾಗಿ ಎಲ್ರಿಗೂ ಹಸಿವಾದಾಗ ಥಟ್ಟಂತ ಪಿಜ್ಜಾ ಡೆಲಿವರಿ ಮಾಡೋದು ಸುಲಭವಾಗಿದೆ. ಆದ್ರೆ ಇಲ್ಲೊಂದೆಡೆ ಆರ್ಡರ್‌ ತೆಗೆದುಕೊಂಡ ಪಿಜ್ಜಾ ಕಂಪೆನಿ ಪಿಜ್ಜಾ ಡೆಲಿವರಿ ಮಾಡೋದು ಲೇಟಾಗಿದೆ. ಅಷ್ಟಕ್ಕೇ ಆತ ಪಿಜ್ಜಾ ಡೆಲಿವರಿ ಲೇಟಾಯ್ತು ಅಂತ ಪೊಲೀಸರಿಗೇ ಕಾಲ್ ಮಾಡಿದ್ದಾನೆ. 

Tap to resize

Latest Videos

ಹೆಂಡ್ತಿ ಮಟನ್‌ ಕರಿ ಮಾಡ್ಲಿಲ್ಲ ಸಾರ್‌..100 ಡಯಲ್ ಮಾಡಿ ದೂರು ಕೊಟ್ಟ ಗಂಡ !

ಅಲ್ಲ..ಎಂಥೆಂಥವರು ಇರ್ತಾರೆ ನೋಡಿ. ಪೊಲೀಸರು ಇರೋದು ಕಾನೂನು ಸುವ್ಯವಸ್ಥೆ ಕಾಪಾಡೋಕೆ. ಗಲಾಟೆ, ಘರ್ಷಣೆಗಳಾದಾಗ ಸಮಸ್ಯೆಗಳನ್ನು ಬಗೆಹರಿಸೋಕೆ. ಆದ್ರೆ ಈ ಭೂಪ ಮಾತ್ರ ಅದೇನ್ ಅಂದ್ಕೊಂಡಿದ್ದಾನೋ ಪಿಜ್ಜಾ ಡೆಲಿವರಿ ಆಗಿಲ್ಲಾಂತ 100ಕ್ಕೆ ಕರೆ ಮಾಡಿ ಕಾಟ ಕೊಟ್ಟಿದ್ದಾನೆ. ಹೊಟೇಲ್‌ ಹೋದಾಗ ಆಗಿರಲಿ ಅಥವಾ ಫುಡ್ ಆರ್ಡರ್ ಮಾಡಿದಾಗ ಆಗಿರಲಿ, ಆಹಾರ ಸಮಯಕ್ಕೆ ಸರಿಯಾಗಿ ಮನೆಗೆ ತಲುಪಲಿ ಎಂದು ನಾವೆಲ್ಲರೂ ಕಾಯುತ್ತೇಬೆ. ಆ ರೀತಿ ಆಗದಿದ್ದಾಗ ವೈಟರ್‌ನ್ನು ಕರೆಯುತ್ತೇವೆ. ಆರ್ಡರ್ ಮಾಡಿದ್ದ ಸಂದರ್ಭದಲ್ಲಿ ರೆಸ್ಟೋರೆಂಟ್‌ಗೆ ಕರೆ ಮಾಡುತ್ತೇವೆ. ಆನ್‌ಲೈನ್‌ನಲ್ಲಿ ಕೆಟ್ಟ ವಿಮರ್ಶೆಯನ್ನು ಮಾಡುತ್ತೇವೆ. ಆದ್ರೆ ಇಲ್ಲೊಬ್ಬ ಒಬ್ಬ ವ್ಯಕ್ತಿ ಆರ್ಡರ್ ಮಾಡಿದ ಆಹಾರಕ್ಕಾಗಿ 30 ನಿಮಿಷಗಳ ಕಾಲ ಕಾದ ನಂತರ ಪೊಲೀಸರನ್ನು ಕರೆಯಲು ನಿರ್ಧರಿಸಿದನು.

ವ್ಯಕ್ತಿ ಪಿಜ್ಜಾ ಆರ್ಡರ್ ಮಾಡಿದ ವ್ಯಕ್ತಿ ಪಿಜ್ಜಾ ತನ್ನ ಬಾಗಿಲಿಗೆ ಬರಲು '30 ನಿಮಿಷಕ್ಕೂ ಹೆಚ್ಚು ಕಾಲ ಕಾಯುತ್ತಿದ್ದ. ಕಾದು ಕಾದು ಬೇಸತ್ತು ಕೊನೆಗೆ ಪೊಲೀಸರಿಗೆ ಕರೆ ಮಾಡಿದ್ದಾನೆ. ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಪೊಲೀಸರಿಗೆ ಕರೆ ಮಾಡಿದ್ದಾನೋ ಅಥವಾ ತಮಾಷೆಗೆ ಕರೆ ಮಾಡಿದ್ದಾನೋ ಗೊತ್ತಿಲ್ಲ, ಆದ್ರೆ ಈ ವಿಚಾರ ಮಾತ್ರ ಎಲ್ಲೆಡೆ ನಗೆಪಾಟಲಿಗೆ, ಗಂಭೀರ ಚರ್ಚೆಗೆ ಕಾರಣವಾಗಿದೆ. 

ಘಟನೆಯ ನಂತರ ಪೊಲೀಸ್ ಇಲಾಖೆಯು ಸಾರ್ವಜನಿಕರು ಅಗತ್ಯವಿದ್ದಾಗ ಮಾತ್ರ 100ಗೆ ಕರೆ ಮಾಡುವಂತೆ, ಸಂಖ್ಯೆಯನ್ನು ದುರುಪಯೋಗ ಪಡಿಸಿಕೊಳ್ಳದಂತೆ ಎಚ್ಚರಿಕೆ ನೀಡಿದೆ. ಸಿಬ್ಬಂದಿಗೂ ಈ ಕುರಿತು ಮಾಹಿತಿ ನೀಡಲಾಗಿದೆ. ಪೊಲೀಸರಿಗೆ 987 ಕರೆಗಳನ್ನು ಮಾಡಲಾಗಿದೆ, ಅದರಲ್ಲಿ 237 ಅನ್ನು ಮಾತ್ರ ತುರ್ತು ಎಂದು ವರ್ಗೀಕರಿಸಲಾಗಿದೆ.

ಎರಡು ಬಾಟಲ್‌ ಬಿಯರ್ ಬೇಕಿತ್ತು ಸಾರ್.. ಮಧ್ಯರಾತ್ರಿ 100 ಡಯಲ್ ಮಾಡಿ ಕಾಟ ಕೊಟ್ಟ ಭೂಪ !

ಪೊಲೀಸರ ತುರ್ತು ಸಂಖ್ಯೆಯನ್ನು ಮಿಸ್ ಯೂಸ್ ಮಾಡಿಕೊಂಡಿರುವುದು ಇದು ಮೊದಲ ಬಾರಿಯಲ್ಲ. ಈ ಹಿಂದೆ ವ್ಯಕ್ತಿಯೊಬ್ಬರು ಕರೆ ಮಾಡಿ ಸಮಯ ಎಷ್ಟೆಂದು ಕೇಳಿದ್ದರು. ಹೈದಾರಾಬಾದ್‌ನಲ್ಲಿ ವ್ಯಕ್ತಿಯೊಬ್ಬರು ಹೆಂಡ್ತಿ ಭಾನುವಾರ ಮಟನ್ ಕರಿ ಮಾಡಿಲ್ಲವೆಂದು ಪೊಲೀಸರಿಗೆ ಕರೆ ಮಾಡಿ ಕಂಪ್ಲೇಟ್ ಮಾಡಿದ್ದರು. 

ಈ ಹಿಂದೆ ತೆಲಂಗಾಣದಲ್ಲಿ ವ್ಯಕ್ತಿಯೊಬ್ಬ ರಾತ್ರಿ ತುರ್ತು ಸೇವೆಗಳಿಗೆ ಕರೆ ಮಾಡಿ, ತುರ್ತಾಗಿ ಸ್ಥಳಕ್ಕೆ ಹಾಜರಾಗುವಂತೆ ಹೇಳಿದ್ದರು  ಜನರ ಗುಂಪು ತನ್ನನ್ನು ನಿಂದಿಸುತ್ತಿದೆ ಮತ್ತು ದಾಳಿ ಮಾಡುವುದಾಗಿ ಬೆದರಿಕೆ ಹಾಕುತ್ತಿದೆ ಎಂದು ವ್ಯಕ್ತ ಪೊಲೀಸರಿಗೆ ಕರೆ ಮಾಡಿದಾಗ ಹೇಳಿದ್ದನು. ನಂತರ, ತೆಲಂಗಾಣ ಪೊಲೀಸರು ಹೇಳಿದ ಸ್ಥಳಕ್ಕೆ ಧಾವಿಸಿದಾಗ,ವ್ಯಕ್ತಿ ಸಂಪೂರ್ಣವಾಗಿ ಪಾನಮತ್ತನಾಗಿದ್ದ. ಆತ ಜನರು ದಾಳಿ ನಡೆಸುತ್ತಿರುವುದಾಗಿ ಹೇಳಿದ್ದು ಸುಳ್ಳಾಗಿತ್ತು. ವೈನ್ ಶಾಪ್‌ಗಳು ಮುಚ್ಚಿದ್ದರಿಂದ ಎರಡು ಬಿಯರ್‌ಗಳನ್ನು ತೆಗೆದುಕೊಂಡುವಂತೆ ವ್ಯಕ್ತಿಪೊಲೀಸರಿಗೆ  ಸೂಚಿಸಿದ್ದ ಪೊಲೀಸರು ನಿರಾಕರಿಸಿ ಕೋಪಗೊಂಡಾಗ, ಕುಡಿದು ಪಾನಮತ್ತನಾಗಿದ್ದ ವ್ಯಕ್ತಿ ಪೊಲೀಸರು ಜನರ ಎಲ್ಲಾ ಅಗತ್ಯಗಳನ್ನು ಪರಿಹರಿಸಬೇಕು ಮತ್ತು ತನಗೆ ಮದ್ಯದ ವ್ಯವಸ್ಥೆ ಮಾಡುವುದು ತನ್ನ ಅಗತ್ಯ ಎಂದು ವಾದಿಸಿದ್ದ. ಈ ಸುದ್ದಿಯೂ ಎಲ್ಲೆಡೆ ವೈರಲ್ ಆಗಿತ್ತು.

click me!