ಮಕ್ಳು (Children) ಗೊತ್ತಲ್ಲಾ..ಆಟದಲ್ಲಿ ಫಸ್ಟ್..ಊಟದಲ್ಲಿ ಲಾಸ್ಟ್. ಪ್ಲೇಟ್ (Plate)ನಲ್ಲಿ ಏನು ಹಾಕಿಕೊಟ್ರೂ ಸುಮ್ನೆ ಕೆದಕ್ತಾನೆ ಇರ್ತಾರೆ. ಏನೂ ತಿನ್ನಲ್ಲ. ಮಕ್ಕಳಿಗೆ ತಿನ್ಸೋದೆ ಪೇರೆಂಟ್ಸ್ (Parents)ಗೆ ದೊಡ್ಡ ಟಾಸ್ಕ್. ನಿಮ್ಮ ಮಕ್ಳೂ ಹೀಗೆ ತಿನ್ನೋಕೆ ಹಠ ಮಾಡ್ತಾರಾ ? ಹಾಗಿದ್ರೆ ಆಲೂಗಡ್ಡೆಯ ಈ ಆಹಾರಗಳನ್ನು ಕೊಟ್ಟು ನೀಡಿ. ಖಂಡಿತ ಪ್ಲೇಟ್ ಖಾಲಿ ಮಾಡ್ತಾರೆ.
ಮಕ್ಕಳಿಗೆ ಆಹಾರ (Food) ನೀಡುವುದು ಅಂದ್ರೆ ಪೋಷಕರಿಗೆ ಅತ್ಯಂತ ದೊಡ್ಡ ಸವಾಲಿನ ಕೆಲಸ. ಮಕ್ಕಳು (Children) ಯಾವಾಗಲೂ ಆಹಾರದ ತಟ್ಟೆಯನ್ನು ಮುಂದಿಟ್ಟರೆ ಬೇಡವೆಂದು ನಿರಾಕರಿಸಿ ಬಿಡುತ್ತಾರೆ. ಮಕ್ಕಳಿಗೆ ತಿನ್ಸೋದು ಅಂದ್ರೆ ಸಾಕು ಎಲ್ಲರಿಗೂ ಈ ಕೆಲ್ಸ ಬೇಡಪ್ಪಾ ಅಂತ ಅನಿಸಿಬಿಡುತ್ತೆ. ಬಹಳಷ್ಟು ಒತ್ತಾಯ ಮಾಡಿ ತಿನ್ನಲು ಯತ್ನಿಸಿದರೂ ಬಾಯಿಂದ ಉಗುಳಿ ಬಿಡುತ್ತಾರೆ. ಹೀಗಿದ್ದಾಗ ಮಕ್ಕಳು ತಿನ್ಲಿ ಅಂತ ಪೋಷಕರು ಸ್ಪೆಷಲ್ ಆಗಿ ಏನೇನೋ ರೆಸಿಪಿ (Recipe)ಯನ್ನು ಕೊಟ್ಟು ನೋಡುತ್ತಾರೆ. ಆದರೆ ಹೀಗೆಲ್ಲಾ ಕೊಡುವುದರಿಂದ ಆಹಾರದಲ್ಲಿ ಪೋಷಕಾಂಶಗಳ ಪ್ರಮಾಣ ಕಡಿಮೆಯಾಗು ಸಾಧ್ಯತೆಯಿದೆ.
ಹಾಗಿದ್ರೆ ಮಕ್ಕಳ ದೇಹಕ್ಕೆ ಪೌಷ್ಟಿಕಾಂಶ ಸಿಗಲು, ಬಾಯಿಗೆ ರುಚಿಯೆನಿಸಲು ಏನು ಮಾಡಬಹುದು. ಸುಲಭವಾದ ಕೆಲವೊಂದು ಆಲೂಗಡ್ಡೆ (Potato) ಪಾಕವಿಧಾನಗಳಿವೆ. ಮಕ್ಕಳು ಇದನ್ನು ಬಾಯಿ ಚಪ್ಪರಿಸಿಕೊಂಡು ತಿನ್ನೋದು ಖಂಡಿತ.
undefined
ಕ್ಲಾಸಿಕ್ ಆಲೂಗಡ್ಡೆ ಸಲಾಡ್
ಸುಲಭವಾಗಿ ಮಾಡಬಹುದಾದ ಆಲೂಗಡ್ಡೆ ರೆಸಿಪಿಗಳಲ್ಲೊಂದು ಆಲೂಗಡ್ಡೆ ಸಲಾಡ್ (Salad). ಇದನ್ನು ತಯಾರಿಸಲು ಬೇಯಿಸಿದ ಆಲೂಗಡ್ಡೆ, ಮೊಟ್ಟೆ, ಮೇಯನೇಸ್, ಈರುಳ್ಳಿ, ಮೆಣಸು ಇವಿಷ್ಟದ್ದರೆ ಸಾಕು. ಇದನ್ನು ತಯಾರಿಸಲು ಮೊದಲು ಒಂದು ಪಾತ್ರೆಗೆ ನೀರನ್ನು ಸುರಿದು ಆಲೂಗಡ್ಡೆಯನ್ನು ಬೇಯಿಸಿಕೊಳ್ಳಿ. ಆಲೂಗಡ್ಡೆಯನ್ನು ಸಿಪ್ಪೆ ಸುಲಿದ ನಂತರ 15 ನಿಮಿಷಗಳ ಕಾಲ ಪಾತ್ರೆಯಲ್ಲಿ ಇರಿಸಿ. ತಣ್ಣಗಾದ ನಂತರ ಸಿಪ್ಪೆ ತೆಗೆದು ಕತ್ತರಿಸಿ ಇಟ್ಟುಕೊಳ್ಳಿ. ಇದೇ ರೀತಿ ಮೊಟ್ಟೆಗಳನ್ನು ಕುದಿಸಿ. ತಣ್ಣಗಾಗಿಸಿ ಸಣ್ಣ ತುಂಡುಗಳಾಗಿ ಕತ್ತರಿಸಿ.
ಆಲೂಗಡ್ಡೆ ತಿನ್ನುವುದರಿಂದ Weight loss ಆಗುತ್ತಾ
ನಂತರ ಒಂದು ಬೌಲ್ ಅನ್ನು ತೆಗೆದುಕೊಂಡು ಮೊಟ್ಟೆ, ಆಲೂಗಡ್ಡೆ, ಮೇಯನೇಸ್, ಈರುಳ್ಳಿ, ಮೆಣಸು, ಉಪ್ಪು, ಕರಿಮೆಣಸಿನ ಹುಡಿಯನ್ನು ಚೆನ್ನಾಗಿ ಬೆರೆಸಿ. ಕಂಟೇನರ್‌ನಲ್ಲಿಟ್ಟು ಐದು ಗಂಟೆಗಳ ಕಾಲ ಫ್ರಿಜ್ ನಲ್ಲಿಟ್ಟು ನಂತರ ಸರ್ವ್ ಮಾಡಿ. ಈ ಆಲೂಗಡ್ಡೆಯ ಸಲಾಡ್ನಲ್ಲಿ 329 ಕ್ಯಾಲೋರಿಗಳು, 7.4 ಗ್ರಾಂ ಪ್ರೋಟೀನ್, 15.9 ಗ್ರಾಂ ಕೊಬ್ಬು ಮತ್ತು 41.4 ಗ್ರಾಂ ಕಾರ್ಬೋಹೈಡ್ರೇಟ್ ಇರುತ್ತದೆ.
ಎಳ್ಳು ಆಲೂಗಡ್ಡೆ ಚಿಪ್ಸ್
ಎಳ್ಳು ಜೀರ್ಣಕಾರಿ ಫೈಬರ್‌ಗಳಲ್ಲಿ ಸಮೃದ್ಧವಾಗಿದೆ ಮತ್ತು ಮಲಬದ್ಧತೆಯಂತಹ ಕರುಳಿನ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಎಳ್ಳು ಆಲೂಗಡ್ಡೆ ಚಿಪ್ಸ್‌ನ್ನು ತಯಾರಿಸಲು ಆಲೂಗಡ್ಡೆ, ಆಲಿವ್ ಎಣ್ಣೆ, ಉಪ್ಪು, ಎಳ್ಳು ಬೇಕಾಗುತ್ತದೆ. ಇದನ್ನು ತಯಾರಿಸಲು ಮೊದಲು ಒಂದು ಓವೆನ್ ಬಿಸಿ ಮಾಡಿಕೊಂಡು ತೆಳುವಾಗಿ ಕತ್ತರಿಸಿದ ಆಲೂಗಡ್ಡೆ ಸ್ಲೈಸ್‌ಗಳನ್ನು ಹಾಕಿ. ಇದರ ಮೇಲೆ ಆಲಿವ್ ಎಣ್ಣೆ ಮತ್ತು ಎಳ್ಳು, ಉಪ್ಪನ್ನು ಸೇರಿಸಿ. ಎಳ್ಳು ಸೇರಿಸಿ ಹತ್ತು ನಿಮಿಷ ಬೇಯಿಸಿ. ಬಿಸಿಯಾಗಿದ್ದಲೇ ಸರ್ವ್ ಮಾಡಿ. ಮಕ್ಕಳು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ.ಎಳ್ಳು ಆಲೂಗಡ್ಡೆ ಚಿಪ್ಸ್ ನಲ್ಲಿ 15 ಗ್ರಾಂನಿಂದ 50 ಗ್ರಾಂ ಕ್ಯಾಲೋರಿಗಳು, 2 ಗ್ರಾಂ ಪ್ರೋಟೀನ್, 10 ಗ್ರಾಂ ಕಾರ್ಬೋಹೈಡ್ರೇಟ್ ಅಂಶವಿರುತ್ತದೆ.
ಫ್ರೆಂಚ್ ಫ್ರೈಸ್ ಪರಿಮಳವೇ ಪ್ರೇರಣೆ... ಅಲೂಗಡ್ಡೆಯಿಂದ ಫರ್‌ಫ್ಯೂಮ್ ತಯಾರಿಸಿದ ಅಮೆರಿಕಾದ ಸಂಸ್ಥೆ
ಗರಿಗರಿಯಾದ ಆಲೂಗಡ್ಡೆ ತುಂಡುಗಳು
ಗರಿಗರಿಯಾದ ಆಲೂಗಡ್ಡೆ ತುಂಡುಗಳು ಹೆಚ್ಚು ಪ್ರಿಯವಾಗುತ್ತವೆ. ಇದನ್ನು ತಯಾರಿಸಲು ಆಲೂಗಡ್ಡೆ, ಆಲಿವ್ ಎಣ್ಣೆ, ಕೆಂಪುಮೆಣಸು, ಕರಿಮೆಣಸು ಇವಿಷ್ಟಿದ್ದರೆ ಸಾಕು. ಇದನ್ನು ತಯಾರಿಸಲು ಮೊದಲು, ಆಲೂಗಡ್ಡೆಯನ್ನು ತುಂಡು ಮಾಡಿ ಆಲಿವ್ ಎಣ್ಣೆ ಕೆಂಪುಮೆಣಸು, ಕರಿಮೆಣಸು ಹುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಆಲೂಗಡ್ಡೆಯನ್ನು ಬೇಕಿಂಗ್ ಶೀಟ್‌ಗಳಲ್ಲಿ ಇರಿಸಿ. 15 ನಿಮಿಷ ಬೇಯಿಸಿ ಮತ್ತು ತುಂಡುಗಳನ್ನು ಇನ್ನೊಂದು ಬದಿಗೆ ತಿರುಗಿಸಿ. ಬಣ್ಣವು ಪ್ರತಿ ಬದಿಗೆ ತುಕ್ಕು ಕಂದು ಬಣ್ಣಕ್ಕೆ ತಿರುಗುವವರೆಗೆ ಫ್ರೈ ಮಾಡಿ. ಗರಿಗರಿಯಾದ ಆಲೂಗಡ್ಡೆ ತುಂಡುಗಳು 225 ಕ್ಯಾಲೋರಿಗಳು, 37.5 ಗ್ರಾಂ ಕಾರ್ಬ್ಸ್, 4.4g ಪ್ರೋಟೀನ್, 7ಗ್ರಾಂ ಕೊಬ್ಬು ಇರುತ್ತದೆ.
ಬೆಳ್ಳುಳ್ಳಿ ಹಿಸುಕಿದ ಆಲೂಗಡ್ಡೆ
ಬೆಳ್ಳುಳ್ಳಿ (Garlic) ಹಿಸುಕಿದ ಆಲೂಗಡ್ಡೆ ರೆಸಿಪಿಯನ್ನು ತಯಾರಿಸಲು ಸಿಪ್ಪೆ ಸುಲಿದ ಆಲೂಗಡ್ಡೆ, ಬೆಳ್ಳುಳ್ಳಿ, ಲವಂಗ, ಹಾಲು, ಬೆಣ್ಣೆ, ಎಳ್ಳು, ಮೆಣಸಿನ ಹುಡಿ, ಉಪ್ಪು ಬೇಕಾಗುತ್ತದೆ. ಇದನ್ನು ತಯಾರಿಸಲು ಮೊದಲಿಗೆ ದೊಡ್ಡ ಬಾಣಲೆಗೆ ನೀರನ್ನು ಸೇರಿಸಿ ಮತ್ತು ಆಲೂಗಡ್ಡೆಯನ್ನು ಮೃದುವಾದ ಮತ್ತು ಗಟ್ಟಿಯಾಗುವವರೆಗೆ ಕುದಿಸಿ. ಬಳಿಕ ತಣ್ಣಗಾಗಲು ಬಿಡಿ. ಆಲೂಗಡ್ಡೆಗೆ ಹಾಲು, ಬೆಣ್ಣೆ, ಬೆಳ್ಳುಳ್ಳಿ ಲವಂಗ, ಉಪ್ಪು ಮತ್ತು ಮೆಣಸು ಮಿಶ್ರಣ ಮಾಡಿ ಮತ್ತು ಎಲೆಕ್ಟ್ರಿಕ್ ಮಿಕ್ಸರ್ ಅಥವಾ ಮ್ಯಾಶರ್ ಬಳಸಿ ಮ್ಯಾಶ್ ಮಾಡಿ. ನಂತರ ಇದಕ್ಕೆ ಮೆಣಸಿನ ಹುಡಿ, ಉಪ್ಪು ಸೇರಿಸಿ. ಇದರಿಂದ ಬೆಳ್ಳುಳ್ಳಿ ಹಿಸುಕಿದ ಆಲೂಗಡ್ಡೆ ಸವುಯಲು ಸಿದ್ಧ.