
ನವದೆಹಲಿ: ಬಟರ್ ಚಿಕನ್ ಮತ್ತು ದಾಲ್ ಮಖಾನಿಯನ್ನು ಕಂಡುಹಿಡಿದವರು ಯಾರು ಎಂಬ ವಿಚಾರ ಎರಡು ಪ್ರಮುಖ ರೆಸ್ಟೋರೆಂಟ್‌ಗಳ ನಡುವಿನ ಕಾನೂನು ಹೋರಾಟಕ್ಕೆ ಕಾರಣವಾಗಿದೆ. ಮೋತಿ ಮಹಲ್ ಮತ್ತು ದರಿಯಾಗಂಜ್ ರೆಸ್ಟೋರೆಂಟ್‌ಗಳ ನಡುವೆ ಈ ಜಗಳ ಆರಂಭವಾಗಿದೆ. ಈ ವಿಚಾರ ಸಂಬಂಧ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ಕೂಡಾ ಸಮ್ಮತಿ ಸೂಚಿಸಿದೆ. ಎರಡೂ ಕಡೆಯ ವಕೀಲರು ತಮ್ಮದೇ ಆದ ರೀತಿ ವಾದ ಮಂಡಿಸಲು ಸಿದ್ದತೆ ನಡೆಸಿದ್ದಾರೆ.
ಬಟರ್ ಚಿಕನ್ ಮತ್ತು ದಾಲ್ ಮಖಾನಿ ಕಂಡುಹಿಡಿದವರು ಯಾರು? ಎಂಬ ವಿಚಾರವಾಗಿ ಹೆಸರಾಂತ ಉಪಾಹಾರ ಗೃಹ ಮೋತಿ ಮಹಲ್, ದರಿಯಾಗಂಜ್ ವಿರುದ್ಧ ಮೊಕದ್ದಮೆ ಹೂಡುವುದರೊಂದಿಗೆ ದೆಹಲಿ ಹೈಕೋರ್ಟ್‌ನಲ್ಲಿ ಈ ಪ್ರಶ್ನೆಯು ತೀರ್ಪಿಗಾಗಿ ಬಂದಿದೆ. ಬಟರ್ ಚಿಕನ್ ಮತ್ತು ದಾಲ್ ಮಖಾನಿಯನ್ನು ಕಂಡುಹಿಡಿದವರು ತಮ್ಮ ಹಿಂದಿನ ಕುಂಡಲ್ ಲಾಲ್ ಗುಜ್ರಾಲ್ ಎಂದು ಮೋತಿ ಮಹಲ್ ಮಾಲೀಕರು ನ್ಯಾಯಾಲಯದ ಮುಂದೆ ಪ್ರತಿಪಾದಿಸಿದ್ದಾರೆ. ದರಿಯಾಗಂಜ್ ತಮ್ಮ ಹಿಂದಿನವರು ಎರಡು ಭಕ್ಷ್ಯಗಳನ್ನು ಕಂಡುಹಿಡಿದವರು ಎಂದು ಜನರನ್ನು ನಂಬುವಂತೆ ದಾರಿ ತಪ್ಪಿಸುತ್ತಿದ್ದಾರೆ ಎಂದು ಮೋತಿ ಮಹಲ್ ಮಾಲೀಕರು ಆರೋಪಿಸಿದ್ದಾರೆ.
ವಿಶ್ವದ ಟಾಪ್ 100 ಫುಡ್ ಲಿಸ್ಟ್‌ನಲ್ಲಿ ಭಾರತದ ಈ ಆಹಾರಗಳಿಗೂ ಇದೆ ಸ್ಥಾನ
ಪ್ರಕರಣದ ಸಂಬಂಧ ಜನವರಿ 16ರಂದು ಮೊದಲ ಬಾರಿಗೆ ವಿಚಾರಣೆ ನಡೆದಿತ್ತು. ಎರಡೂ ಕಡೆಯವರಿಗೆ ದೆಹಲಿ ಹೈಕೋರ್ಟ್‌ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಸಂಜೀವ್ ನರುಲಾ ಸಮನ್ಸ್ ಜಾರಿ ಮಾಡಿದ್ದರು. ಮೋತಿ ಮಹಲ್‌ನ ವಾದಕ್ಕೆ ಪ್ರತಿಯಾಗಿ ದರ್ಯಾಗಂಜ್ ರೆಸ್ಟೋರೆಂಟ್ ಮಾಲೀಕರ ಪ್ರತಿಕ್ರಿಯೆ ಏನು ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದರು. ಈ ಸಂಬಂಧ ಒಂದು ತಿಂಗಳ ಒಳಗೆ ತಮ್ಮ ಲಿಖಿತ ಪ್ರತಿಕ್ರಿಯೆ ಸಲ್ಲಿಸುವಂತೆ ಆದೇಶ ನೀಡಿದ್ದರು.
ಇದೇ ವೇಳೆ ಮಧ್ಯಂತರ ತಡೆಯಾಜ್ಞೆ ಆದೇಶವನ್ನೂ ನೀಡಿದ್ದ ನ್ಯಾಯಮೂರ್ತಿಗಳು ಮೋದಿ ಮಹಲ್ ರೆಸ್ಟೊರೆಂಟ್‌ನ ಅರ್ಜಿಯನ್ನು ವಿಚಾರಣೆ ನಡೆಸೋದಾಗಿ ಹೇಳಿದ್ದರು. ಈ ಪ್ರಕರಣದ ಮುಂದಿನ ವಿಚಾರಣೆ ಮೇ 29ರಂದು ನಿಗದಿಯಾಗಿದೆ.
ರೆಸ್ಟೋರೆಂಟ್ ಮಧ್ಯೆ ನಡೀತಿರೋ ವಿವಾದವೇನು?
ದರ್ಯಾಗಂಗ್ ರೆಸ್ಟೋರೆಂಟ್‌ನ ಮಾಲೀಕರು ತಮ್ಮ ಹೋಟೆಲ್‌ನಲ್ಲಿ ತಯಾರಾಗುವ ಬಟರ್ ಚಿಕನ್ ಹಾಗೂ ದಾಲ್ ಮಖನಿ ಕುರಿತಾಗಿ ವಿಶಿಷ್ಟ ರೀತಿಯಲ್ಲಿ ಜಾಹೀರಾತು ನೀಡಿದ್ದರು. ಬಟರ್ ಚಿಕನ್ ಹಾಗೂ ದಾಲ್ ಮಖನಿಯನ್ನು ಕಂಡು ಹಿಡಿದಿದ್ದು ನಾವೇ ಎಂದು ದರ್ಯಾಗಂಜ್ ರೆಸ್ಟೋರೆಂಟ್ ಮಾಲೀಕರು ಜಾಹೀರಾತಿನಲ್ಲಿ ಬರೆದುಕೊಂಡಿದ್ದರು. ಈ ಜಾಹೀರಾತಿನಿಂದ ಸಿಟ್ಟಿಗೆದ್ದ ಮೋತಿ ಮಹಲ್ ಮಾಲೀಕರು ಈ ಸಂಬಂಧ ನ್ಯಾಯಾಲಯದಲ್ಲಿ ಆಕ್ಷೇಪ ಎತ್ತಿದ್ಧಾರೆ.
Food Trend of 2023: ಇವುಗಳೇ ನೋಡಿ ಈ ವರ್ಷ ಹೆಚ್ಚು ಟ್ರೆಂಡ್‌ನಲ್ಲಿದ್ದ ಆಹಾರ
ಮೋತಿ ಮಹಲ್ ಮಾಲೀಕರ ಪೂರ್ವಜರಾದ ದಿವಂಗತ ಕುಂದಲ್ ಲಾಲ್ ಗುಜ್ರಾಲ್ ಅವರು ದಾಲ ಮಖನಿ ಹಾಗೂ ಬಟರ್ ಚಿಕನ್ ಖಾದ್ಯವನ್ನು ಮೊದಲ ಬಾರಿಗೆ ತಯಾರಿಸಿ ಅದನ್ನ ಜನಪ್ರಿಯಗೊಳಿಸಿದ್ದಾಗಿ ಹೇಳಿಕೊಂಡಿದ್ದಾರೆ. ಆ ನಂತರ ಇದು ಭಾರತ ಹಾಗೂ ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಯಿತು ಎಂದು ವಾದಿಸಿದ್ದಾರೆ. ಈ ಉತ್ತರಕ್ಕೆ ಪ್ರತಿಕ್ರಿಯೆಯಾಗಿ ದರ್ಯಾಗಂಜ್ ರೆಸ್ಟೋರೆಂಟ್ ತನ್ನ ಲಿಖಿತ ಪ್ರತಿಕ್ರಿಯೆಯನ್ನು ನ್ಯಾಯಾಲಯಕ್ಕೆ ಇನ್ನಷ್ಟೇ ಸಲ್ಲಿಸಬೇಕಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.