ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕಾರ್ಯಕ್ರಮ ಬೊಂಬಾಟ್ ಭೋಜನ. ಈ ಬಾರಿ ಸ್ವಾತಂತ್ರ್ಯೋತ್ಸವದ ವಿಶೇಷ ಕಾರ್ಯಕ್ರಮದಲ್ಲಿ, ಡಿಸಿಎಂ ಡಿ.ಕೆ ಶಿವಕುಮಾರರ್ ಭಾಗಿಯಾಗಿದ್ದು, ಈ ಬಗ್ಗೆ ಡಿಕೆಶಿ ತಮ್ಮ ಟ್ವಿಟರ್ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ಹಾಸ್ಯ ನಟ ಸಿಹಿ ಕಹಿ ಚಂದ್ರು ಕಿರುತೆರೆಯಲ್ಲೂ ಸಾಕಷ್ಟು ಫೇಮಸ್ ಆಗಿದ್ದಾರೆ. ಅದರಲ್ಲೂ ಅವರು ನಡೆಸಿಕೊಡ್ತಿರೋ ಅಡುಗೆ ಕಾರ್ಯಕ್ರಮ, ಬೊಂಬಾಟ್ ಭೋಜನ ತುಂಬಾ ಹೆಸರುವಾಸಿಯಾಗಿದೆ. ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳು ಸಹ ಭಾಗಿಯಾಗಿ ಆಹಾರದ ಬಗೆಗಿನ ತಮ್ಮ ಪ್ರೀತಿ ಹಾಗೂ ಜೀವನದ ಘಟನೆಗಳನ್ನು ಮೆಲುಕು ಹಾಕ್ತಾರೆ. ಹಾಗೆಯೇ ಇತ್ತೀಚಿಗೆ ನಡೆದ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರೆಕಾಳು ಚಿತ್ರಾನ್ನವನ್ನು ಸವಿದು ಖುಷಿ ಪಟ್ಟರು.
ಬೊಂಬಾಟ್ ಭೋಜನ ಕಾರ್ಯಕ್ರಮ ನಡೆಸಿಕೊಡುತ್ತಿರುವ ನಟ ಸಿಹಿಕಹಿ ಚಂದ್ರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಾಲ್ಯದ ಗೆಳೆಯರು. ಈ ಹಿಂದೆ ಖ್ಯಾತ ನಟ ರಮೇಶ್ ಅರವಿಂದ್ ಅವರು ನಡೆಸಿಕೊಡುವ ' ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಇವರಿಬ್ಬರೂ ತಮ್ಮ ಬಾಲ್ಯದ (Childhood) ಹಾಗೂ ಕಾಲೇಜು ದಿನಗಳನ್ನು ನೆನಪಿಸಿಕೊಂಡಿದ್ದರು. ಈ ಬಾರಿ ಸ್ವಾತಂತ್ರ್ಯೋತ್ಸವ ವಿಶೇಷ ಕಾರ್ಯಕ್ರಮ (Special programme) ಬೊಂಬಾಟ್ ಭೋಜನದಲ್ಲಿ, ಡಿಕೆಶಿ ಭಾಗಿಯಾಗಿದ್ದು, ಈ ಬಗ್ಗೆ ಡಿಕೆಶಿ ತಮ್ಮ ಟ್ವಿಟರ್ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
undefined
Avarekai Benifits: ಅವರೆಕಾಳಿನಲ್ಲಿದೆ ಅರಿಯದ ಗುಣಗಳು
ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡ ಡಿಕೆಶಿ
ಆತ್ಮೀಯ ಗೆಳೆಯ ಸಿಹಿಕಹಿ ಚಂದ್ರು ಆಹ್ವಾನದ ಮೇರೆಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗಿ ಶಿವಕುಮಾರ್ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ ಡಿ.ಕೆ ಶಿವಕುಮಾರ್ ಅವರನ್ನು ಸಿಹಿಕಹಿ ಚಂದ್ರು ಕುಚಿಕು ಕುಚಿಕು ಹಾಡು ಪ್ಲೇ ಮಾಡಿ ಆತ್ಮೀಯವಾಗಿ ಬರ ಮಾಡಿಕೊಂಡರು. 'ಆಹಾರವು ಆತ್ಮೀಯತೆ, ಸ್ನೇಹ, ಸಂಬಂಧವನ್ನು (Relationship) ಗಟ್ಟಿಗೊಳಿಸುತ್ತದೆ. ಆತ್ಮೀಯ ಗೆಳೆಯನಾದ ಸಿಹಿಕಹಿ ಚಂದ್ರು ಆಹ್ವಾನದ ಮೇರೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರೆಕಾಳು ಚಿತ್ರಾನ್ನವನ್ನು ಸವಿದೆ' ಎಂದು ಡಿ.ಕೆ. ಶಿವಕುಮಾರ್ ವಿಡಿಯೋ ಸಹಿತ ಫೇಸ್ಬುಕ್ ಪೋಸ್ಟ್ ನಲ್ಲಿ ಬರೆದಿದ್ದಾರೆ.
ಅವರೆಕಾಳು ಚಿತ್ರಾನ್ನ ಮಾಡುವ ವಿಧಾನ
ಬೇಕಾದ ಪದಾರ್ಥಗಳು
4 ಹಸಿಮೆಣಸಿನಕಾಯಿ
1 ಮಾವಿನಕಾಯಿ
ತೆಂಗಿನಕಾಯಿ ತುರಿ 2 ಕಪ್
ಸಾಸಿವೆ ಸ್ಪಲ್ಪ
ಉದ್ದಿನಬೇಳೆ ಸ್ಪಲ್ಪ
ಕಡಲೇಬೇಳೆ ಸ್ಪಲ್ಪ
ಅವರೇಕಾಳು 1 ಕಪ್
ಉಪ್ಪು ಸ್ಪಲ್ಪ
ಅರಿಶಿನ ಸ್ಪಲ್ಪ
ಅನ್ನ
ಮಾಡುವ ವಿಧಾನ
ಮಿಕ್ಸಿಂಗ್ ಬೌಲ್‌ಗೆ ಹಸಿಮೆಣಸಿನಕಾಯಿ, ಮಾವಿನಕಾಯಿ, ತೆಂಗಿನಕಾಯಿ ತುರಿ, ಸ್ಪಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ ಒಂದು ಮಿಶ್ರ ರೆಡಿ ಮಾಡಿಕೊಳ್ಳಿ. ಈಗ ಭಾಣಲೆಗೆ ಎಣ್ಣೆ ಹಾಕಿ ಸಾಸಿವೆ ಹಾಕಿ. ಸಾಸಿವೆ ಸಿಡಿಯುತ್ತಿದ್ದಂತೆ ಉದ್ದಿನಬೇಳೆ, ಕಡಲೇಬೇಳೆ ಅದು ಹೊಂಬಣ್ಣ ಬರುವವರೆಗೆ ಕರಿಯಿರಿ. ಕಡಲೇಕಾಯಿ ಬೀಜ ಸೇರಿಸಿ ಬಾಡಿಸಿ. ಈಗ ರುಬ್ಬಿಟ್ಟ ಮಿಶ್ರಣ ಸೇರಿಸಿ ನೀಟಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಬೇಯಿಸಿಟ್ಟ ಅವರೇಕಾಳು ಸೇರಿಸಿ, ರುಚಿಗೆ ಬೇಕಾದಷ್ಟು ಉಪ್ಪು, ಸ್ಪಲ್ಪ ಅರಿಶಿನ ಸೇರಿಸಿ ಮಿಕ್ಸ್ ಮಾಡಿ. ಅವರೇಕಾಳು ಬಾಡಿದ ನಂತರ ಒಂದು ದೊಡ್ಡ ಪಾತ್ರೆಗೆ ಈ ಮಿಶ್ರಣವನ್ನು ಮಿಕ್ಸ್ ಮಾಡಿ ಇದಕ್ಕೆ ಈಗಾಗಲೇ ಬೇಯಿಸಿಟ್ಟ ಅನ್ನ, ತೆಂಗಿನ ತುರಿ ಸೇರಿಸಿ. ಈಗ ರುಚಿ ರುಚಿಯಾದ ಅವರೆಕಾಳು ಚಿತ್ರಾನ್ನ ಸವಿಯಲು ಸಿದ್ಧವಾಗಿದೆ.
ಸಂಡೇ ಹೊರಗಡೆನೇ ತಿನ್ಬೇಕು ಅಂತೇನಿಲ್ಲ..ಮಸಾಲೆ ದೋಸೆ ಮನೆಯಲ್ಲೇ ಮಾಡಿ ತಿನ್ನಿ..
ಆಹಾರವು ಆತ್ಮೀಯತೆ, ಸ್ನೇಹ, ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಆತ್ಮೀಯ ಗೆಳೆಯನಾದ ಸಿಹಿ ಕಹಿ ಚಂದ್ರು ಆಹ್ವಾನದ ಮೇರಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರೆಕಾಳು ಚಿತ್ರಾನ್ನವನ್ನು ಸವಿದೆ. pic.twitter.com/qrjh7BfDWG
— DK Shivakumar (@DKShivakumar)