
ಇದು ಫಾಸ್ಟ್ ಎಂಡ್ ಫ್ಯೂರಿಯಸ್ ಜಗತ್ತು. ಇಲ್ಲಿ ಎಲ್ಲಿ, ಯಾರನ್ನು ನೋಡಿದರೂ ಒತ್ತಡ, ಗಡಿಬಿಡಿ, ಆತುರದಲ್ಲೇ ಇರುತ್ತಾರೆ. ಯಾರ ಬಳಿಯೂ ಸಮಯವಿಲ್ಲ. ಕೆಲಸ ಬ್ಯುಸಿನೆಸ್ ಅಂತ ಎಲ್ಲರೂ ಮನೆಯ ಹೊರಗಡೆಯೇ ಕಾಲ ಕಳೆಯುವುದು ಹೆಚ್ಚು. ಮನೆಯಲ್ಲಿ ಊಟ, ತಿಂಡಿಯನ್ನು ತಯಾರಿಸುವಷ್ಟು ಸಮಯ ಅಥವಾ ತಾಳ್ಮೆ ಯಾರಿಗೂ ಇಲ್ಲ. ಹಾಗಾಗಿ ಎಲ್ಲರೂ ಫಾಸ್ಟ್ ಫುಡ್ ಗಳ ಮೊರೆ ಹೋಗ್ತಾರೆ. ಚಿಕ್ಕ ಮಕ್ಕಳಿಂದ ದೊಡ್ಡವರ ಆದಿಯಾಗಿ ಎಲ್ಲರೂ ಫಾಸ್ಟ್ ಫುಡ್ ಗಳನ್ನು ಇಷ್ಟಪಡುತ್ತಾರೆ.
ಫಾಸ್ಟ್ ಫುಡ್ (Fast Food ) ಎಂದಾಕ್ಷಣ ಪಿಜ್ಜಾ, ಬರ್ಗರ್, ನೂಡಲ್ಸ್ ಮುಂತಾದವು ಕಣ್ಣೆದುರು ಬರ್ತವೆ. ಈ ಪಟ್ಟಿಯಲ್ಲಿ ಇತ್ತೀಚೆಗೆ ಮೊಮೊಸ್ ಕೂಡ ಸೇರಿದೆ. ಮೊಮೊಸ್ ನೇಪಾಳ (Nepal)ದ ಡಿಶ್ ಆಗಿದ್ದು ಇದರ ವಿನ್ಯಾಸವೇ ಎಲ್ಲರನ್ನೂ ಆಕರ್ಷಿಸುತ್ತದೆ. ಮೊಮೊಸ್ (Momos) ಉತ್ತರ ಭಾರತದಲ್ಲಿನ ಅತ್ಯಂತ ಜನಪ್ರಿಯ ಫುಡ್ ಆಗಿದೆ. ಮೊಮೊಸ್ ವೆಜ್, ನಾನ್ ವೆಜ್ ಎರಡು ರೂಪದಲ್ಲೂ ಸಿಗುತ್ತೆ. ಇದರ ಸ್ಟಫಿಂಗ್ ಜನರಿಗೆ ಬಹಳ ಇಷ್ಟವಾಗುತ್ತದೆ. ಅನೇಕ ಕಡೆಗಳಲ್ಲಿ ಸಿಗುವ ಈ ಮೊಮೊಸ್ ಈಗ ಎಲ್ಲರ ಫೇವರಿಟ್. ಅನೇಕ ಮಂದಿ ಮನೆಯಲ್ಲೂ ಇದನ್ನು ತಯಾರಿಸುತ್ತಾರೆ. ಹೊರಗಡೆ ಸಿಗುವ ಫಾಸ್ಟ್ ಫುಡ್ ಗಳು ಆರೋಗ್ಯಕ್ಕೆ ಹಾನಿಕರ ಎನ್ನುವ ಸುದ್ದಿಗಳು ಆಗಾಗ ಬರುತ್ತಲೇ ಇರುತ್ತವೆ. ಹಾಗೆಯೇ ಈ ಮೊಮೊಸ್ ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವೈದ್ಯರು ಹೇಳುತ್ತಾರೆ. ಇದನ್ನು ತಿನ್ನೋದ್ರಿಂದ ದೇಹಕ್ಕೆ ಯಾವ ರೀತಿ ಹಾನಿಯಾಗುತ್ತೆ ಎನ್ನುವುದನ್ನು ವೈದ್ಯರು ಹೇಳಿದ್ದಾರೆ.
ಪುತ್ತೂರಿನ ಸಾವಯವ 'ಕೋಕೊ ಪಾಡ್ಸ್' ಚಾಕ್ಲೇಟ್‌ಗೆ ದೇಶಾದ್ಯಂತ ಬೇಡಿಕೆ: ದಂಪತಿಯ ಸ್ಟಾರ್ಟಪ್ ಯಶೋಗಾಥೆ ನೋಡಿ..
ಈ ಕಾರಣಗಳಿಂದ ಮೊಮೊಸ್ ಜೀವಕ್ಕೆ ಹಾನಿಕರ :
1. ಮೈದಾ ಆರೋಗ್ಯಕ್ಕೆ ಹಾನಿಕರ ಎನ್ನುವುದು ನಮಗೆಲ್ಲ ತಿಳಿದೇ ಇದೆ. ಮೊಮೊಸ್ ತಯಾರಿಸಲು ಮೈದಾವನ್ನೇ ಬಳಸಲಾಗುತ್ತದೆ. ಇದರಿಂದ ಸ್ಥೂಲಕಾಯದ ಸಮಸ್ಯೆ ತಲೆದೋರುತ್ತದೆ. ಮೈದಾ ಗೋಧಿಯ ಉತ್ಪನ್ನವೇ ಆದರೂ ಕೂಡ ಅದರಿಂದ ಪ್ರೋಟೀನ್ ಮತ್ತು ಫೈಬರ್ ಅನ್ನು ತೆಗೆದುಹಾಕಲಾಗುತ್ತದೆ. ಅದರಲ್ಲಿ ಕೇವಲ ಪಿಷ್ಟ ಮಾತ್ರ ಉಳಿಯುತ್ತದೆ.
2. ಮೈದಾದಲ್ಲಿ ಯಾವುದೇ ರೀತಿಯ ಪ್ರೋಟೀನ್ ಇರೋದಿಲ್ಲ. ಇದು ಅಮ್ಲೀಯ ಗುಣವನ್ನು ಹೊಂದಿದೆ ಹಾಗೂ ಮೂಳೆಗಳಲ್ಲಿರುವ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳುತ್ತದೆ.
3. ಮೈದಾ ಸುಲಭವಾಗಿ ಜೀರ್ಣವಾಗೋದಿಲ್ಲ. ಇದು ಕರುಳಿಗೆ ಅಂಟಿಕೊಂಡು ಅದರಿಂದ ಅನೇಕ ರೋಗಗಳು ಬರುತ್ತವೆ.
ಪಾಚಿಯನ್ನೂ ಚಪ್ಪರಿಸಿ ತಿನ್ನುತ್ತಾರೆ ಇವರು! ಯಾವ ದೇಶದವರು ಅಂತ ಗೆಸ್ ಮಾಡ್ತೀರಾ?
4. ಹೊರಗಡೆ ಸಿಗುವ ಮೊಮೊಸ್ ಗಳನ್ನು ಮೃದುವಾಗಿಸಲು ಮತ್ತು ಅವು ಬೆಳ್ಳಗಾಗಿ ಕಾಣಲು ಬ್ಲೀಚ್, ಕ್ಲೋರಿನ್ ಗ್ಯಾಸ್, ಅಜೋ ಕಾರ್ಬಮೈಡ್ ಮತ್ತು ಬೆಂಜಾಯ್ಲ್ ಪೆರಾಕ್ಸೈಡ್ ಅನ್ನು ಸೇರಿಸುತ್ತಾರೆ. ಇದು ಆರೋಗ್ಯಕ್ಕೆ ಹಾನಿಕರವಾಗಿದೆ.
5. ಮೊಮೊಸ್ ನಲ್ಲಿರುವ ರಾಸಾಯನಿಕಗಳು ಮೇದೋಜ್ಜೀರಕ ಗ್ರಂಥಿ ಮತ್ತು ಮೂತ್ರಪಿಂಡಗಳನ್ನು ಹಾನಿಗೊಳಿಸಿ, ಮಧುಮೇಹದ ಅಪಾಯವನ್ನು ಉಂಟುಮಾಡಬಹುದು.
6. ಮೊಮೊಸ್ ಜೊತೆ ಕೊಡಲಾಗುವ ಚಟ್ನಿ ತಿನ್ನಲು ಬಹಳ ರುಚಿ ಎನಿಸಿದರೂ ಇದು ಮೂಲವ್ಯಾಧಿ ಮತ್ತು ಹೊಟ್ಟೆ, ಕರುಳಿನ ರಕ್ತಸ್ರಾವಕ್ಕೆ ಕಾರಣವಾಗುತ್ತದೆ ಹಾಗೂ ಜಠರದ ಉರಿತಕ್ಕೂ ಕಾರಣವಾಗುತ್ತದೆ.
7. ಕೆಲವು ಮೊಮೊಸ್ ತಯಾರಕರು ಅದಕ್ಕೆ ಮೊನೋಸೋಡಿಯಮ್ ಗ್ಲೂಟಾಮೈಟ್ (ಎಮ್ ಎಸ್ ಜಿ) ಎನ್ನುವ ರಾಸಾಯನಿಕವನ್ನು ಸೇರಿಸುತ್ತಾರೆ. ಇದು ಮೊಮೊಸ್ ನ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುತ್ತದೆ. ಇದರಿಂದ ಬೊಜ್ಜು ಬೆಳೆಯುತ್ತದೆ ಜೊತೆಗೆ ಎದೆ ನೋವು, ಮೆದುಳಿನ ಸಮಸ್ಯೆ, ರಕ್ತದೊತ್ತಡ, ಹೃದಯ ಬಡಿತ ಮುಂತಾದವುಗಳ ಸಮಸ್ಯೆ ಹೆಚ್ಚುತ್ತದೆ.
8. ಕೆಲವು ಕಡೆಗಳಲ್ಲಿ ನಾನ್ ವೆಜ್ ಮೆಮೊಸ್ ಗೆ ಸತ್ತ ಪ್ರಾಣಿಯ ಮಾಂಸವನ್ನು ಸೇರಿಸಲಾಗುತ್ತದೆ. ವೆಜ್ ಮೊಮೊಸ್ ಗಳಲ್ಲಿ ಕೊಳೆತ ತರಕಾರಿಗಳನ್ನು ಸೇರಿಸುತ್ತಾರೆ. ಇಂತಹ ಮೊಮೊಸ್ ಗಳ ಸೇವನೆಯಿಂದ ಗಂಭೀರ ಖಾಯಿಲೆಗಳು ಉಂಟಾಗುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.