ಸೂಪರ್ ಮಾರ್ಕೆಟ್‌ಗಳಲ್ಲಿ ಯಾವುದೇ ವಸ್ತುವನ್ನು ಖರೀದಿಸುವಾಗ ಸಾಮಾನ್ಯವಾಗಿ ಯಾರೂ ಲೇಬಲ್‌ಗಳನ್ನು ನೋಡುವುದಿಲ್ಲ. ಹಾಗೆಯೇ ಎಕ್ಸ್‌ಪೈಯರಿ ಡೇಟ್ ನೋಡದೆ ಆಹಾರ ಖರೀದಿಸಿದ ವ್ಯಕ್ತಿಗೆ ಫುಡ್ ಪಾಯ್ಸನ್ ಆಗಿದೆ. ಆಮೇಲೆ ಏನಾಯ್ತು?
ಫುಡ್ ಪಾಯ್ಸನ್ ಗೆ ಕಾರಣವಾದ ಅವಧಿ ಮೀರಿದ ಓಟ್ಸ್‌ನ್ನು ಮಾರಾಟ ಮಾಡಿದ್ದಕ್ಕಾಗಿ ಬೆಂಗಳೂರಿನ ವ್ಯಕ್ತಿಯೊಬ್ಬರು ಸೂಪರ್ ಮಾರ್ಕೆಟ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಅನಾರೋಗ್ಯಕ್ಕೆ ಒಳಗಾದ ನಂತರ ಅವರು ಮರುಲೇಬಲ್ ಮಾಡಿದ ಮುಕ್ತಾಯ ದಿನಾಂಕವನ್ನು ಕಂಡು ಹಿಡಿದರು. ಸೂಪರ್ ಮಾರ್ಕೆಟ್ ಅಧಿಕಾರಿಗಳ ಬಗ್ಗೆ ಈ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲ್ಲಿಲ್ಲ. ಹೀಗಾಗಿ ವ್ಯಕ್ತಿ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದರು. ಆ ನಂತರ ಕಾನೂನು ಕ್ರಮ ಅನುಸರಿಸಲಾಗಿದೆ. ಒಂಬತ್ತು ತಿಂಗಳ ನಂತರ, ಗ್ರಾಹಕ ನ್ಯಾಯಾಲಯವು ಅವರ ಪರವಾಗಿ ತೀರ್ಪು ನೀಡಿತು, ಘಟನೆಗೆ ಪರಿಹಾರವಾಗಿ ಸೂಪರ್ ಮಾರ್ಕೆಟ್ 10,000 ರೂ. ಕೊಡುವಂತೆ ನಿರ್ದೇಶಿಸಿತು.
ಸೂಪರ್ ಮಾರ್ಕೆಟ್‌ಗಳಲ್ಲಿ ತಮ್ಮ ತಯಾರಿಕೆ ಮತ್ತು ಮುಕ್ತಾಯ ದಿನಾಂಕಗಳನ್ನು (Expiry date) ಪರಿಶೀಲಿಸದೆ ಜನರು ಸಾಮಾನ್ಯವಾಗಿ ಆಹಾರ ಪದಾರ್ಥಗಳನ್ನು ಖರೀದಿಸುತ್ತಾರೆ. ಹೀಗಾಗಿ ಅವಧಿ ಮೀರಿದ ಆಹಾರ ಸೇವನೆಯಿಂದಾಗಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಬೆಂಗಳೂರಿನ ವ್ಯಕ್ತಿಯೊಬ್ಬರು (Bengaluru men) ತಮ್ಮ ಅಂಗಡಿಯಲ್ಲಿ ಅವಧಿ ಮೀರಿದ ಓಟ್ಸ್ ಮಾರಾಟ (Sale) ಮಾಡಿದ್ದಕ್ಕಾಗಿ ಸೂಪರ್ ಮಾರ್ಕೆಟ್ ವಿರುದ್ಧ ಮೊಕದ್ದಮೆ (Complaint) ಹೂಡಿ ಪ್ರಕರಣವನ್ನು ಗೆದ್ದಿದ್ದಾರೆ.
ದೋಷಯುಕ್ತ ವಾಷಿಂಗ್ ಮಷಿನ್ ಪೂರೈಕೆ: ಅಮೆಜಾನ್ ಕಂಪನಿಗೆ ದಂಡ, ಪರಿಹಾರ
ಓಟ್ಸ್ ಸೇವಿಸಿದ ನಂತರ, ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿ
ವ್ಯಕ್ತಿ ಓಟ್ಸ್ ಸೇವಿಸಿದ ನಂತರ, ಅನಾರೋಗ್ಯಕ್ಕೆ ಒಳಗಾಗಿದ್ದರು ಮತ್ತು ಆಹಾರ ವಿಷಪೂರಿತವಾಗಿದೆ ಎಂದು ಗುರುತಿಸಲಾಯಿತು, ವೈದ್ಯರನ್ನು ಸಂಪರ್ಕಿಸಿದ ನಂತರ, ಅವರು ಓಟ್ಸ್‌ನ ತಯಾರಿಕೆ ಮತ್ತು ಮುಕ್ತಾಯ ದಿನಾಂಕವನ್ನು ಪರಿಶೀಲಿಸಿದರು, ಉತ್ಪನ್ನದ ಅವಧಿ ಮುಗಿದಿದೆ ಎಂದು ಕಂಡುಕೊಂಡರು. ಉತ್ಪನ್ನವನ್ನು (Product) ಮೂಲ ಲೇಬಲ್‌ನಲ್ಲಿ ತಾಜಾ ದಿನಾಂಕಗಳೊಂದಿಗೆ ಮರುಲೇಬಲ್ ಮಾಡಲಾಗಿದೆ ಎಂಬುದು ಗೊತ್ತಾಯಿತು. ಸೂಪರ್ ಮಾರ್ಕೆಟ್ ಸಿಬ್ಬಂದಿಯನ್ನು ಸಂಪರ್ಕಿಸಿದರೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ, ಅವರು ನವೆಂಬರ್ 7, 2021 ರಂದು ಅನ್ಯಾಯದ ವ್ಯಾಪಾರ ಅಭ್ಯಾಸಗಳಲ್ಲಿ ತೊಡಗಿದ್ದಕ್ಕಾಗಿ ಕಾನೂನು ನೋಟಿಸ್ ಕಳುಹಿಸಿದ್ದಾರೆ. ಶಾಂತಿನಗರದ ಗ್ರಾಹಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು.
ವ್ಯಕ್ತಿಯ ವಕೀಲರು ಈ ಪ್ರಕರಣವನ್ನು ನ್ಯಾಯಾಲಯಕ್ಕೆ ಪ್ರಸ್ತುತಪಡಿಸಿದರು, ಆದರೆ ಸೂಪರ್‌ಮಾರ್ಕೆಟ್‌ನ್ನು ಪ್ರತಿನಿಧಿಸುವ ಅವರ ಪ್ರತಿಪಕ್ಷದ ವಕೀಲರು ಕಂಪನಿಯು ಹಲವು ವರ್ಷಗಳಿಂದ ವ್ಯವಹಾರವನ್ನು ನಡೆಸುತ್ತಿರುವುದರಿಂದ ಆರೋಪಗಳು ಸುಳ್ಳು ಎಂದು ಪ್ರತಿಪಾದಿಸಿದರು. ಒಂಬತ್ತು ತಿಂಗಳುಗಳ ಕಾಲ ಪ್ರಕರಣ ಮುಂದುವರೆಯಿತು.
ಸಿನಿಮಾ ಥಿಯೇಟರ್‌ನಲ್ಲಿ ಮಹಿಳೆಗೆ ಕಚ್ಚಿದ ಇಲಿ: ಪ್ರೇಕ್ಷಕಿಗೆ 67 ಸಾವಿರ ರೂ. ಪರಿಹಾರ ನೀಡಲು ಸೂಚನೆ
ಗ್ರಾಹಕ ನ್ಯಾಯಾಲಯವು ಓಟ್ಸ್ ಪ್ಯಾಕೆಟ್‌ನ ಮರುಹಂಚಿಕೆಗೆ ಸಂಬಂಧಿಸಿದಂತೆ ಸರಿಯಾದ ಸಾಕ್ಷ್ಯವನ್ನು ಒದಗಿಸಿದ ಕಾರಣ ಗ್ರಾಹಕರ ಪರವಾಗಿ ನಿರ್ಧಾರ ತೆಗೆದುಕೊಂಡಿತು. ಕಂಪನಿಯು ಗ್ರಾಹಕರಿಗೆ ರೂ.5000 ಪರಿಹಾರ ಮತ್ತು ಆತನ ನ್ಯಾಯಾಲಯದ ವೆಚ್ಚಕ್ಕಾಗಿ ರೂ.5000 ಹೆಚ್ಚುವರಿಯಾಗಿ ನೀಡುವಂತೆ ಕೋರ್ಟ್ ಆದೇಶಿಸಿದೆ. ದಂಡ ಪಾವತಿಸಲು ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ.