ಅಡುಗೆಮನೆಯಲ್ಲಿ ಹೆಚ್ಚಿನವರು ಅಲ್ಯೂಮಿನಿಯಂ (Aluminum) ಫಾಯಿಲ್ ಬಳಸುತ್ತಾರೆ. ಕೆಲವೊಮ್ಮೆ ಅಡುಗೆ ಮಾಡಲು, ಇನ್ನು ಕೆಲವೊಮ್ಮೆ ಉಳಿದ ಆಹಾರ (Food)ವನ್ನು ತೆಗೆದಿಡಲು ಅಲ್ಯೂಮಿನಿಯಂ ಶೀಟ್‌ನ್ನು ಬಳಸಲಾಗುತ್ತದೆ. ಆದರೆ ಅಡುಗೆಮನೆಯಲ್ಲಿ ಅಲ್ಯುಮಿನಿಯಂ ಫಾಯಿಲ್ ಬಳಕೆ ಆರೋಗ್ಯ (Health)ಕ್ಕೇ ಮಾರಕ ಅನ್ನೋದು ನಿಮಗೆ ಗೊತ್ತಾ ?
ಅಡುಗೆಮನೆಯಲ್ಲಿ ಹಲವು ರೀತಿಯಲ್ಲಿ ಅಲ್ಯೂಮಿನಿಯಂ ಫಾಯಿಲ್ (Aluminum Foil) ಬಳಕೆಯಾಗುತ್ತದೆ. ಅಡುಗೆ ತಯಾರಿಸುವಾಗ, ಉಳಿದಿರುವ ಅಡುಗೆಯನ್ನು ತೆಗೆದಿಡಲು ಅಲ್ಯೂಮಿನಿಯಂ ಫಾಯಿಲ್ ಶೀಟ್ ಬಳಸುತ್ತಾರೆ. ಅಲ್ಯೂಮಿನಿಯಂ ಫಾಯಿಲ್ ಉಳಿದ ಆಹಾರ (Food)ಗಳನ್ನು ದೀರ್ಘಕಾಲದ ವರೆಗೆ ಕೆಡದಂತೆ ತೆಗೆದಿಡಲು ಉತ್ತಮ ಮಾರ್ಗವಾಗಿದೆ. ಆಹಾರವನ್ನು ಈ ರೀತಿ ಫಾಯಿಲ್ ಶೀಟ್‌ನಲ್ಲಿ ಕಟ್ಟಿ, ಫ್ರಿಜ್‌ನಲ್ಲಿ ತೆಗೆದಿಟ್ಟು ಮರುದಿನ ಮತ್ತೆ ಬಿಸಿ ಮಾಡಿ ಸೇವಿಸಬಹುದಾಗಿದೆ. ಆದರೆ, ಅಲ್ಯುಮಿನಿಯಂ ಫಾಯಿಲ್ ಈ ರೀತಿ ಬಳಸುವುದರಿಂದ ಹಲವು ಅಡ್ಡಪರಿಣಾಮಗಳೂ ಇವೆ. ಇಂಥಹಾ ಶೀಟ್‌ನಲ್ಲಿ ಆಹಾರವನ್ನು ತೆಗೆದಿಡುವುದು ಹಲವು ಆರೋಗ್ಯ (Health) ಸಮಸ್ಯೆಗಳಿಗೆ ಕಾರಣವಾಗಬಹುದು.
ಅಲ್ಯೂಮಿನಿಯಂ ಫಾಯಿಲ್ ಯಾಕೆ ಬಳಸಬಾರದು ?
ಅಲ್ಯೂಮಿನಿಯಂ ಫಾಯಿಲ್ ಶೀಟ್‌ನಲ್ಲಿ ಆಹಾರವನ್ನು ಕಟ್ಟಿಡುವುದು ಬ್ಯಾಕ್ಟೀರಿಯಾವನ್ನು ಬೆಳೆಯಲು ಅನುವು ಮಾಡಿಕೊಡುತ್ತದೆ. ಇದರರ್ಥ ನಿಮ್ಮ ಆಹಾರವು ಮರುದಿನ ಸೇವಿಸಲು ಆರೋಗ್ಯಕರವಾಗಿರುವುದಿಲ್ಲ. ಫಾಯಿಲ್ ಶೀಟ್‌ನಲ್ಲಿ ತೆಗೆದಿಟ್ಟ ಆಹಾರದ ಸೇವನೆ ಹೃದಯರಕ್ತನಾಳದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ರೀತಿಯ ಆಹಾರದ ಸೇವನೆಯು ಮೆದುಳಿನ ಜೀವಕೋಶಗಳ ಬೆಳವಣಿಗೆಯನ್ನು ಕಡಿಮೆ ಮಾಡಲು ಕಾರಣವೆಂದು ಹೇಳಲಾಗುತ್ತದೆ. ಆಹಾರವನ್ನು ಬೇಯಿಸಲು ಅಥವಾ ಸುತ್ತಲು ಅಲ್ಯೂಮಿನಿಯಂ ಫಾಯಿಲ್‌ನ ಬಳಕೆಯು ಹೃದಯ (Heart)ದ ಹೈಪರ್ಟ್ರೋಫಿಗೆ ಕಾರಣವಾಗುತ್ತದೆ. ಇದು ದೇಹದಲ್ಲಿನ ಕೆಂಪು ರಕ್ತ ಕಣಗಳ ಅವನತಿಗೆ ಕಾರಣವಾಗುತ್ತದೆ, ಇದು ನಮ್ಮ ಸಂಪೂರ್ಣ ದೇಹದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ದೇಹದಲ್ಲಿ ರಕ್ತಹೀನತೆ ಉಂಟಾಗುತ್ತದೆ. ಇದು ಅಂತಿಮವಾಗಿ ಯಕೃತ್ತಿನ ವೈಫಲ್ಯದ ಸಮಸ್ಯೆಗೆ ಕಾರಣವಾಗುತ್ತದೆ.
ಕೀಲು ನೋವು, ಕಾಲು ನೋವು... ತಕ್ಷಣ ಪರಿಹಾರ ನೀಡುತ್ತೆ ಅಲ್ಯೂಮಿನಿಯಂ ಫಾಯಿಲ್
ಅಲ್ಯೂಮಿನಿಯಂ ಫಾಯಿಲ್ ಮಾರುಕಟ್ಟೆ ಬರುವ ಮೊದಲು ಆಹಾರಗಳನ್ನು ಸುತ್ತಲು ಟಿನ್ ಫಾಯಿಲ್‌ನ್ನು ಬಳಸಲಾಗುತ್ತಿತ್ತು ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ಆದರೆ ಇದರಿಂದ ಅನೇಕ ಜನರು ಆಹಾರದ ರುಚಿ ಬದಲಾವಣೆಯ ಬಗ್ಗೆ ಮತ್ತು ಟಿನ್ ವಾಸನೆ ಬರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ನಂತರ ಅಲ್ಯೂಮಿನಿಯಂ ಫಾಯಿಲ್ ಶೀಟ್ ಮತ್ತು ಇತರ ರೀತಿಯ ಆಹಾರ ಹೊದಿಕೆಗಳನ್ನು ಅಭಿವೃದ್ಧಿಪಡಿಸಲಾಯಿತು. ನಂತರ ಜನರು ವ್ಯಾಪಕವಾಗಿ ಇದನ್ನೇ ಬಳಸಲು ತೊಡಗಿದರು.
ಅಡುಗೆ ಮನೆಯಲ್ಲಿ ಅಲ್ಯೂಮಿನಿಯಂ ಫಾಯಿಲ್ ಶೀಟ್ ಬಳಸಬಾರದು ಎಂದು ಹಲವರಿಗೆ ತಿಳಿದಿದೆ. ಆದರೆ ಅದರ ಬದಲಾಗಿ ಏನನ್ನು ಬಳಸಬಹುದು ಎಂಬ ಗೊಂದಲವಿದೆ. ಹೀಗಾಗಿ ಅಲ್ಯೂಮಿನಿಯಂ ಫಾಯಿಲ್ ಪರ್ಯಾಯವಾಗಿ ಏನನ್ನು ಬಳಸಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಟಪ್ಪರ್ ವೇರ್ ಪಾತ್ರೆ ಬಳಸಬಹುದು
ಅಲ್ಯೂಮಿನಿಯಂ ಫಾಯಿಲ್ ಬದಲಿಗೆ ಆಹಾರವನ್ನು ತೆಗೆದಿಡಲು ಡಬ್ಬಗಳನ್ನು, ಪಾತ್ರೆಗಳನ್ನು ಬಳಸಬಹುದಾಗಿದೆ. ಅಥವಾ ಬೌಲ್‌ನಲ್ಲಿ ತೆಗೆದಿಟ್ಟು ಪ್ಲೇಟ್ ಮುಚ್ಚಿಡಬಹುದಾಗಿದೆ. ಆಹಾರವನ್ನು ತೆಗೆದಿಡಲು ಟಪ್ಪರ್ ವೇರ್ (Tupper Wear) ಬಳಸುವುದಾದರೆ, ದೊಡ್ಡದಾದ ಪಾತ್ರೆಯನ್ನು ಬಳಸಬೇಕು. ಇದರಿಂದ ಆಹಾರವು ಹಾಳಾಗದೆ ಹೆಚ್ಚು ಸಮಯ ಉಳಿಯುತ್ತದೆ.
Kithecn Hacks: ಈ 8 ಆಹಾರ ಪದಾರ್ಥಗಳನ್ನು ಎಂದಿಗೂ ಫ್ರೀಜರ್ ನಲ್ಲಿ ಇಡಬೇಡಿ
ಸಹಜವಾಗಿ, ಅಲ್ಯೂಮಿನಿಯಂ ಫಾಯಿಲ್‌ಗಿಂತ ಮುಚ್ಚಳವನ್ನು ಬಳಸುವುದು ಯಾವಾಗಲೂ ಉತ್ತಮವಾಗಿದೆ. ಇದು ನಿಮ್ಮ ಆಹಾರವು ಹೆಚ್ಚು ಆಮ್ಲಜನಕವನ್ನು ಪಡೆಯದಂತೆ ರಕ್ಷಿಸುತ್ತದೆ. ಬೆಚ್ಚಗಿನ ಆಹಾರವನ್ನು ಕೋಣೆಯ ಉಷ್ಣಾಂಶದಲ್ಲಿ ಎರಡು ಗಂಟೆಗಳ ಕಾಲ ಸಂಗ್ರಹಿಸಿದರೆ, ಬ್ಯಾಕ್ಟೀರಿಯಾವು ತ್ವರಿತವಾಗಿ ಬೆಳೆಯಲು ಪ್ರಾರಂಭಿಸುತ್ತದೆ. ಹೀಗಾಗಿ ಉಳಿದ ಆಹಾರಗಳನ್ನು ಪಾತ್ರೆಯಲ್ಲಿ ತೆಗೆದಿಡುವುದು ಒಳ್ಳೆಯದು.
ಫ್ರೀಜರ್ ಬಳಸಬಹುದು
ಅಗತ್ಯಕ್ಕಿಂತ ಹೆಚ್ಚು ಆಹಾರ ಬೇಯಿಸಿದಾಗ, ಫ್ರಿಜ್‌ಗಿಂತ ಫ್ರೀಜರ್ (Freezer) ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ದೀರ್ಘಕಾಲ ಆಹಾರವನ್ನು ತೆಗೆದಿಡಬಹುದು. ಡಬ್ಬಗಳು. ಪಾತ್ರೆಗಳಲ್ಲಿ ಆಹಾರವನ್ನು ಇಟ್ಟು ಫ್ರೀಜರ್‌ನಲ್ಲಿ ಇಡಬಹುದು. ಆದರೆ, ಈ ರೀತಿ ಆಹಾರವನ್ನು ತಿಂಗಳುಗಟ್ಟಲೆ ಫ್ರೀಜರ್‌ನಲ್ಲಿ ತೆಗೆದಿಡಲು ಸಾಧ್ಯವಿಲ್ಲ. ಇದರಿಂದ, ಆಹಾರದ ಗುಣಮಟ್ಟವೂ ಕಳಪೆಯಾಗಬಹುದು.