ಚಾಕೊಲೇಟ್ (Chocolate) ಅಂದ್ರೆ ಇಷ್ಟ. ಆದ್ರೆ ಕ್ಯಾಲೋರಿ ಹೆಚ್ಚಾಗುತ್ತೆ ಅನ್ನೋ ಭಯಾನ. ಹಾಗಿದ್ರೆ ಇಲ್ಲಿದೆ ಉಪಾಯ. ಸ್ಪಲ್ಪ ಚಾಕೊಲೇಟ್, ಸ್ಪಲ್ಪ ಹಾಲು (Milk), ಸ್ಪಲ್ಪ ಕೋಕೋ ಪೌಡರ್ ಸೇರಿಸಿ ಸುಲಭವಾಗಿ ರುಚಿಕರವಾದ ಈ ಹಾಟ್ ಚಾಕೊಲೇಟ್ ರೆಸಿಪಿ (Recipe)ಗಳನ್ನು ತಯಾರಿಸಬಹುದು.
ಚಾಕೊಲೇಟ್ (Chocolate) ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಅದರಲ್ಲೂ ಹಾಟ್ ಚಾಕೊಲೇಟ್‌ಗಳು ಹಲವರ ಫೇವರಿಟ್. ಹಾಟ್ ಚಾಕೊಲೇಟ್ ಸೇವನೆ ನಾಲಗೆಗೆ ರುಚಿಯಾಗಿರುವ ಹಾಗೆಯೇ, ಆರೋಗ್ಯ (Health)ಕ್ಕೂ ಉತ್ತಮ. ಚಾಕೊಲೇಟ್ ಸೇವನೆ ಒತ್ತಡವನ್ನು ನಿವಾರಿಸಿ, ಮನಸ್ಥಿತಿಯನ್ನು ಉತ್ತಮಗೊಳಿಸುತ್ತದೆ. ತಂಪಾದ ವಾತಾವರಣದಲ್ಲಿ ಬೆಚ್ಚಗಾಗಲು, ಹಾಟ್ ಚಾಕೊಲೇಟ್ ಬೆಸ್ಟ್. ಇದು ಅತ್ಯುತ್ತಮ ಉತ್ಕರ್ಷಣ ನಿರೋಧಕ ಅಂಶವನ್ನು ಸಹ ಹೊಂದಿದೆ. ಹಾಟ್ ಚಾಕೊಲೇಟ್ ತಯಾರಿಸಲು ಬಳಸುವ ಕೋಕೋ ಪಾಲಿಫಿನಾಲ್‌ಗಳು ಮತ್ತು ಫ್ಲಾವನಾಲ್‌ಗಳಲ್ಲಿ ಸಮೃದ್ಧವಾಗಿದೆ, ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳು ಮತ್ತು ರೋಗನಿರೋಧಕ ಶಕ್ತಿ, ಕೋಶಗಳ ಪುನರುತ್ಪಾದನೆಗೆ ಉತ್ತಮವಾಗಿದೆ. ಆಕ್ಸಿಡೇಟಿವ್ ಒತ್ತಡದಿಂದ ಉಂಟಾಗುವ ಜೀವಕೋಶದ ಹಾನಿಯನ್ನು ಕಡಿಮೆ ಮಾಡುತ್ತದೆ ಮತ್ತು ಆಂಟಿಕಾನ್ಸರ್ ಗುಣಲಕ್ಷಣಗಳನ್ನು ಹೊಂದಿದೆ.
ಚಾಕೊಲೇಟ್ ಕಾಫಿ
ಈ ದಪ್ಪ ಕೆನೆ ಪಾನೀಯವು ಚಾಕೊಲೇಟ್ ಮತ್ತು ಕಾಫಿ (Coffee) ಪ್ರಿಯರ ಫೇವರಿಟ್ ಆಗಿದೆ. ಈ ಸೂಪರ್ ಸುಲಭ ಪಾನೀಯವನ್ನು ತಯಾರಿಸುವ ವಿಧಾನ ಕೂಡಾ ಸುಲಭವಾಗಿದೆ. ಇದನ್ನು ತಯಾರಿಸಲು ಮೊದಲಿಗೆ ಒಂದು ಪ್ಯಾನ್ ತೆಗೆದುಕೊಂಡು 2 ಕಪ್ ಹಾಲು ಹಾಗೂ 2 ಟೇಬಲ್ ಸ್ಪೂನ್ ಕೋಕೋ ಪೌಡರ್, 1 ಟೀ ಚಮಚ ಕಾಫಿ ಪುಡಿ ಸೇರಿಸಿ. ಪಾನೀಯವು ಕೆನೆ ಮತ್ತು ದಪ್ಪವಾಗುವ ವರೆಗೆ ಮಿಕ್ಸ್ ಮಾಡುತ್ತಲೇ ಇರಿ.
undefined
ತೂಕ ಇಳಿಸೋಕೆ ವೈಟ್ ಚಾಕೊಲೇಟ್ ಬೆಸ್ಟ್..!
ಕಡಲೇಕಾಯಿ ಬಿಸಿ ಚಾಕೊಲೇಟ್
ನೀವು ಹೆಚ್ಚಿನ ಪ್ರೋಟೀನ್ (Protein) ಆಹಾರವನ್ನು ಸೇವಿಸುವ ಮೂಲಕ ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಈ ಪಾನೀಯವು ನಿಮಗೆ ಸೂಕ್ತವಾಗಿದೆ. ಇದನ್ನು ಮಾಡಲು, ಮೊದಲಿಗೆ ಒಂದು ಪ್ಯಾನ್ ತೆಗೆದುಕೊಂಡು 2 ಟೇಬಲ್ ಸ್ಪೂನ್ ಕಡಲೆಕಾಯಿ ಬೆಣ್ಣೆಯನ್ನು ಕರಗಿಸಿ. ಅದಕ್ಕೆ ½ ಕಪ್ ಡಾರ್ಕ್ ಚಾಕೊಲೇಟ್ ಬಾರ್‌ಗಳು ಮತ್ತು 1 ಕಪ್ ಹಾಲನ್ನು ಸೇರಿಸಿ, ಚಿನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಡಾರ್ಕ್ ಚಾಕೊಲೇಟ್ ಬಾರ್‌ಗಳ ಬದಲಿಗೆ ಚಾಕೊಲೇಟ್ ಪೌಡರ್ ಸಹ ಬಳಸಬಹುದು.
ಬಾದಾಮಿ ಚಾಕೊಲೇಟ್ ಪಾನೀಯ
ಬಾದಾಮಿ (Almond) ಚಾಕೊಲೇಟ್ ಪಾನೀಯವನ್ನು ಸುಲಭವಾಗಿ ತಯಾರಿಸಬಹುದಾಗಿದೆ. ಇದಕ್ಕೆ ಮೊದಲಿಗೆ ಪಾತ್ರೆಯನ್ನು ತೆಗೆದುಕೊಂಡು 1 ½ ಕಪ್ ಬಾದಾಮಿ ಹಾಲನ್ನು ಸೇರಿಸಿ, ನಂತರ ½ ಕಪ್ ಚಾಕೊಲೇಟ್ ಚಿಪ್ಸ್ ಸೇರಿಸಿ. ಮಿಶ್ರಣವನ್ನು ಸ್ವಲ್ಪ ಕೆನೆಯಾಗುವ ವರೆಗೆ ಬೆರೆಸಿ. ನಂತರ ½ ಟೀ ಚಮಚ ವೆನಿಲ್ಲಾ ಎಸೆನ್ಸ್ ಸೇರಿಸಿ ಮತ್ತು ಈ ಬಿಸಿ ಪಾನೀಯವನ್ನು ಸುರಿಯಿರಿ ಮೇಲಿನಿಂದ ಬಾದಾಮಿ ಪುಡಿಯನ್ನು ಸೇರಿಸಿ ಅಲಂಕರಿಸಿ.
ಡಾರ್ಕ್ ಚಾಕಲೇಟ್ ಎಂಬ ಮ್ಯಾಜಿಕಲ್ ಪವರ್ ಇರುವ ಸಿಹಿ ಔಷಧ
ಮಸಾಲೆಯುಕ್ತ ಚಾಕೊಲೇಟ್
ಈ ಪಾನೀಯವನ್ನು ತಯಾರಿಸಲು, ಪ್ಯಾನ್ ಅನ್ನು ಬಿಸಿ ಮಾಡಿ 1 ½ ಕಪ್ ಹಾಲನ್ನು ಸೇರಿಸಿ. ಇದಕ್ಕೆ 2 ಟೇಬಲ್ ಸ್ಪೂನ್ ಕೋಕೋ ಪೌಡರ್ (Coco Powder) ಸೇರಿಸಿ. ಈ ಪಾನೀಯವು ದಪ್ಪವಾದ ನಂತರ, ಅರ್ಧ ಚಮಚ ಮಸಾಲೆ ಪುಡಿ (ಕುಂಬಳಕಾಯಿ ಮಸಾಲೆ) ಸೇರಿಸಿ. ಬೆರೆಸಿ ಕುಡಿಯಿರಿ.
ಹಾಟ್ ಚಾಕೊಲೇಟ್
ನಿಮ್ಮ ರಕ್ತದ ಮಟ್ಟವನ್ನು ಸುಧಾರಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಟ್ ಚಾಕೊಲೇಟ್ ಸೇವನೆ ಉತ್ತಮವಾಗಿದೆ. ಇದನ್ನು ತಯಾರಿಸಲು 1 ಗ್ಲಾಸ್ ಬೆಚ್ಚಗಿನ ಹಾಲನ್ನು ತೆಗೆದುಕೊಂಡು ಇದಕ್ಕೆ 4 ಬೀಜ ತೆಗೆದ ಖರ್ಜೂರವನ್ನು ಸೇರಿಸಿ. ಸ್ವಲ್ಪ ಸಮಯ ಅಥವಾ ರಾತ್ರಿಯಿಡೀ ಅವುಗಳನ್ನು ನೆನೆಸಿ. ಮರುದಿನ, ಇದನ್ನು ತಯಾರಿಸುವಾಗ ಪ್ಯಾನ್ ಅನ್ನು ಬಿಸಿ ಮಾಡಿ ಮತ್ತು ಖರ್ಜೂರ ಮತ್ತು ಹಾಲಿನ ಮಿಶ್ರಣವನ್ನು ಇದಕ್ಕೆ ಸುರಿಯಿರಿ. ನಂತರ, 1 ಚಮಚ ಕೋಕೋ ಪೌಡರ್ ಸೇರಿಸಿ, ಚೆನ್ನಾಗಿ. ತಂಪಾದ ವಾತಾವರಣದಲ್ಲಿ ಬೆಚ್ಚಗಾಗಲು ನೀವು ಒಂದು ಚಿಟಿಕೆ ದಾಲ್ಚಿನ್ನಿ ಅಥವಾ ಜಾಯಿಕಾಯಿಯನ್ನು ಕೂಡಾ ಸೇರಿಸಬಹುದು.