Slowest Foods: ತಯಾರಿಸಿ ವರ್ಷದ ನಂತರ ತಿಂದ್ರೇನೆ ಈ ಆಹಾರಗಳಿಗೆ ಹೆಚ್ಚು ರುಚಿ

By Suvarna News  |  First Published Jan 20, 2022, 2:44 PM IST

ಕೆಲವೊಂದು ಆಹಾರ (Food) ಸಿದ್ಧವಾಗಲು ಹೆಚ್ಚು ಸಮಯ (Time)ವನ್ನು ತೆಗೆದುಕೊಳ್ಳುತ್ತದೆ. ತಯಾರಿಸಿಯಾದ ಹಲವು ವಾರಗಳು, ತಿಂಗಳುಗಳ, ವರ್ಷಗಳ ನಂತರ ಇದನ್ನು ಸೇವಿಸಲಾಗುತ್ತದೆ. ಈ ರೀತಿಯ ಆಹಾರಗಳನ್ನು ತಿನ್ನುವುದು ಸುರಕ್ಷಿತ (Safe)ವೇ ? 


ಆಹಾರ (Food)ಗಳನ್ನು ತಯಾರಿಸುವ ವಿಧಾನ ಒಂದು ಆಹಾರಕ್ಕಿಂತ ಮತ್ತೊಂದು ಆಹಾರಕ್ಕೆ ವಿಭಿನ್ನವಾಗಿರುತ್ತದೆ. ಕೆಲವೊಂದು ಆಹಾರಗಳನ್ನು ಕಡಿಮೆ ಹೊತ್ತು ಬೇಯಿಸಬೇಕು, ಇನ್ನು ಕೆಲವೊಂದು ಆಹಾರಗಳನ್ನು ಅತಿ ಹೆಚ್ಚು ಬೇಯಿಸಬೇಕು. ಕೆಲವೊಂದು ತಿನಿಸುಗಳನ್ನು ತಯಾರಿಸುವಾಗ ಪದಾರ್ಥಗಳನ್ನು ಕಡಿಮೆ ಫ್ರೈ ಮಾಡಬೇಕು. ಇನ್ನು ಕೆಲವೊಂದು ಸಾರಿ ಹೆಚ್ಚು ಫ್ರೈ ಮಾಡಬೇಕಾಗುತ್ತದೆ. ಇದೇ ರೀತಿ ಕೆಲವೊಂದು ಆಹಾರಗಳನ್ನು ತಯಾರಿಸಿದ ಕೂಡಲೇ ತಿನ್ನಲು ರುಚಿಕರವಾದರೆ, ಇನ್ನು ಕೆಲವು ಆಹಾರಗಳು ತಯಾರಿಸಿದ ಗಂಟೆಗಳ ನಂತರ ಅಥವಾ ಮರುದಿನ ಮಸಾಲೆಯನ್ನೆಲ್ಲಾ ಹೀರಿಕೊಂಡು ಹೆಚ್ಚು ರುಚಿಕರವಾಗುತ್ತದೆ. ಹೀಗೂ ಅಲ್ಲದೆ, ಕೆಲವೊಂದು ಆಹಾರಗಳು ತಯಾರಿಸಿಟ್ಟ ವಾರದ ನಂತರ, ವರ್ಷಗಳ ನಂತರ ಸ್ವಾದಿಷ್ಟಕರವಾಗಿ ಬದಲಾಗುತ್ತದೆ.

ನಿಧಾನವಾಗಿ ತಯಾರಾಗುವ ಆಹಾರಗಳು, ಪಾನೀಯಗಳು ಮಾಗಲು, ಹುದುಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ ಇದಲ್ಲದೆ, ಈ ಆಹಾರಗಳು ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯಕ್ಕೆ ಉತ್ತಮವಾದ ಪ್ರೋಬಯಾಟಿಕ್ ಬ್ಯಾಕ್ಟೀರಿಯಾವನ್ನು ಸಹ ಅಭಿವೃದ್ಧಿಪಡಿಸುತ್ತವೆ. ಇಂಥಹಾ ಕೆಲವು ಸಾಮಾನ್ಯ ಆಹಾರಗಳೆಂದರೆ ಚೀಸ್, ಉಪ್ಪಿನಕಾಯಿ, ಸೋಯಾ ಸಾಸ್, ವೈನ್ ಮೊದಲಾದವುಗಳಾಗಿವೆ.

Tap to resize

Latest Videos

Pickle Health Benefits: ಊಟದ ಜತೆಗಿರಲಿ ಉಪ್ಪಿನಕಾಯಿ

ಉಪ್ಪಿನಕಾಯಿ (Pickle)
ಈಗೆಲ್ಲಾ ಉಪ್ಪಿನಕಾಯಿಗಳನ್ನು ದಿಢೀರ್ ಆಗಿ ಕೆಲವೇ ನಿಮಿಷಗಳಲ್ಲಿ ತಯಾರಿಸಲಾಗುತ್ತದೆ. ಆದರೆ ಈ ಇನ್ ಸ್ಟೆಂಟ್ ಉಪ್ಪಿನಕಾಯಿಗಳಿಗಿಂತ ರುಚಿ ದೇಸೀ ಶೈಲಿಯಲ್ಲಿ ತಯಾರಿಸುವ ಉಪ್ಪಿನಕಾಯಿ. ಎಲ್ಲಾ ರೀತಿಯ ಮಸಾಲೆ ಪದಾರ್ಥಗಳನ್ನು ಹುರಿದು, ರುಬ್ಬಿ ಇಂಥಹಾ ಉಪ್ಪಿನಕಾಯಿಗಳನ್ನು ಸಿದ್ಧಪಡಿಸಲಾಗುತ್ತದೆ. ಭರಣಿಯಲ್ಲಿ ಹಾಕಿ ಗಟ್ಟಿಯಾಗಿ ಮುಚ್ಚಳ ಹಾಕಿಟ್ಟರೆ ಎಷ್ಟು ವರ್ಷಗಳ ವರೆಗೂ ಏನೂ ಆಗುವುದಿಲ್ಲ. ಎಣ್ಣೆ ಮತ್ತು ಮಸಾಲೆಗಳ ಉಪಸ್ಥಿತಿಯು ಉಪ್ಪಿನಕಾಯಿಯ ತಾಜಾತನವನ್ನು ಹಾಗೆಯೇ ಇರಿಸುತ್ತದೆ. ಉಪ್ಪಿನಕಾಯಿಗಳನ್ನು ಹುದುಗಿಸುವ ಪ್ರಕ್ರಿಯೆಯು ಅವುಗಳನ್ನು ರುಚಿಕರವಾಗಿಸುತ್ತದೆ ಮತ್ತು ಉತ್ತಮವಾದ ಕಟುವಾದ ರುಚಿಯನ್ನು ನೀಡುತ್ತದೆ. ವರ್ಷಗಳು ಕಳೆಯುತ್ತಾ ಹೋದಂತೆ ಉಪ್ಪಿನಕಾಯಿ ಮತ್ತಷ್ಟು ರುಚಿಯನ್ನು ಪಡೆದುಕೊಳ್ಳುತ್ತದೆ.

ಸೋಯಾ ಸಾಸ್ (Soya Sauce)
ಸೋಯಾ ಸಾಸ್ ಹುದುಗಿಸಲು ಐದರಿಂದ ಎಂಟು ತಿಂಗಳುಗಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಸಾಂಪ್ರದಾಯಿಕವಾಗಿ, ಸೋಯಾ ಸಾಸ್ ತಯಾರಿಸಲುಬ್ಯಾರೆಲ್‌ಗಳಲ್ಲಿ ಹುದುಗಿಸಲಾಗುತ್ತದೆ. ಹಲವು ತಿಂಗಳುಗಳ ಕಾಲ ಹುದುಗಿಸಿಟ್ಟ ಬಳಿಕ ಸೋಯಾ ಸಾಸ್ ಸಿದ್ಧಗೊಳ್ಳುತ್ತದೆ. ಹೀಗಿದ್ದೂ ರಾಸಾಯನಿಕಗಳ ಬಳಕೆಯಿಂದಾಗಿ ಕೆಲವೊಂದು ಸಾಸ್‌ಗಳು ರೂಪಾಂತರಗೊಳ್ಳಲು ಕಡಿಮೆ ಸಮಯ ತೆಗೆದುಕೊಳ್ಳುತ್ತವೆ.

Butter vs Cheese: ಬೆಣ್ಣೆ ಅಥವಾ ಚೀಸ್, ಆರೋಗ್ಯಕ್ಕೆ ಯಾವುದು ಉತ್ತಮ

ಚೀಸ್ (Cheese)
ಸಾಮಾನ್ಯವಾಗಿ ಜಂಕ್ ಫುಡ್‌ (Junk Food)ಗಳಲ್ಲಿ ಎಲ್ಲದರಲ್ಲೂ ಚೀಸ್‌ನ್ನು ಬಳಸಲಾಗುತ್ತದೆ. ರುಚಿಕರವಾದ ಚೀಸ್ ಬಳಕೆ ಆಹಾರಕ್ಕೆ ಹೆಚ್ಚು ರುಚಿಯನ್ನು ಸೇರಿಸುತ್ತದೆ. ಚೀಸ್ ಎಂಬುದು ಹಾಲನ್ನು ಕುದಿಸಿ ಅಚ್ಚಾಗಿ ಪರಿವರ್ತಿಸುವ ಪ್ರಕ್ರಿಯೆಯಾಗಿದೆ. ಆದರೆ ಪ್ಯಾಕೆಟ್‌ಗಳಲ್ಲಿ ಸಿದ್ಧವಾಗಿ ಸಿಗುವ ಈ ಚೀಸ್ ಅದರ ರುಚಿ ಮತ್ತು ವಿನ್ಯಾಸವನ್ನು ಪಡೆಯಲು ಹಲವು ವಾರಗಳನ್ನು ತೆಗೆದುಕೊಳ್ಳುತ್ತದೆ. ಆಶ್ಚರ್ಯಕರವೆನಿಸಿದರೂ ಇದು ನಿಜ. ಡಾರ್ಕ್ ರೂಮ್ ನಲ್ಲಿ ಚೀಸ್ ಅನ್ನು ಮಾಗಿಸಿ ಸಿದ್ಧಪಡಿಸಲಾಗುತ್ತದೆ. ಚೀಸ್ ಮಾಗಿದ ಪ್ರಕ್ರಿಯೆಯು ಕೆನೆ ಮತ್ತು ವಿಶಿಷ್ಟವಾದ ವಿನ್ಯಾಸವನ್ನು ಪಡೆಯಲು ಕೆಲವು ವಾರಗಳು ತೆಗೆದುಕೊಳ್ಳುತ್ತದೆ. ಆದರೆ, ಕಾಟೇಜ್ ಚೀಸ್, ರಿಕೊಟ್ಟಾ ಅಥವಾ ಮೊಝ್ಝಾರೆಲ್ಲಾ ಚೀಸ್‌ನಂತಹ ಪ್ರಭೇದಗಳು ತಮ್ಮ ಮೂಲ ವಿನ್ಯಾಸವನ್ನು ಪಡೆಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.

ವೈನ್ (Wine)
ಚಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಈ ಪಾನೀಯವನ್ನು ಸೇವಿಸುತ್ತಾರೆ. ಆದರೆ ರುಚಿಕರವಾದ ವೈನ್ (Wine) ತಯಾರಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಅರ್ಥಾತ್ ಆಗಷ್ಟೇ ತಯಾರಿಸಿದ ವೈನ್ ಕುಡಿಯಲು ಯಾರೂ ಇಷ್ಟಪಡುವುದಿಲ್ಲ. ತಯಾರಿಸಿದ ಸುಮಾರು ವರ್ಷಗಳಷ್ಟು ಹಳೆಯ ವೈನ್‌ಗೆ ಹೆಚ್ಚು ಬೇಡಿಕೆಯಿದೆ. ಹಣ್ಣು (Fruits)ಗಳನ್ನು ಚೆನ್ನಾಗಿ ಮಾಗಿಸಿ, ಹುದುಗಿಸಿ ವೈನ್ ತಯಾರಿಸಲಾಗುತ್ತದೆ.
 

click me!