ಟೀಗೆ ಮಸಾಲೆ ಬೆರೆಸೋದು ನಮಗೆ ಗೊತ್ತು. ರುಚಿ ಹೆಚ್ಚಿಸೋಕೆ ಆಗಾಗ ಮಸಾಲೆ ಟೀ ಕುಡಿಯೋರಿದ್ದಾರೆ. ಆದ್ರೆ ಚಹಾ ತಯಾರಿಸಲು ಬೆಣ್ಣೆ ಹಾಕ್ತಾರೆ ಅಂದ್ರೆ ನೀವು ನಂಬ್ಲೇಬೇಕು? ಅದನ್ನು ಹೇಗೆ ಮಾಡ್ತಾರೆ ಎನ್ನುವ ವಿವರ ಇಲ್ಲಿದೆ.
ಚಹಾ ತಯಾಟೀ ತಯಾರಿಸೋದು ತುಂಬಾ ಸಿಂಪಲ್. ಟೀ ಪುಡಿ, ಹಾಲು, ಸಕ್ಕರೆ ಇದ್ರೆ ಸುಲಭವಾಗಿ ಟೀ ಸಿದ್ಧವಾಗುತ್ತೆ. ಆದ್ರೆ ಈಗಿನ ದಿನಗಳಲ್ಲಿ ಅವರ ಫೆವರೆಟ್ ಚಹಾ ಮೇಲೆ ಅನೇಕ ಪ್ರಯೋಗಗಳನ್ನು ಮಾಡ್ತಿದ್ದಾರೆ. ಟೀಗೆ ಟೀ ಪುಡಿ ಮಾತ್ರವಲ್ಲದೆ ಬೇರೆ ಬೇರೆ ಆಹಾರ ವಸ್ತುಗಳನ್ನು ಬೆರೆಸುತ್ತಿದ್ದಾರೆ. ಬೆಳಿಗ್ಗೆ ಎದ್ದ ತಕ್ಷಣ ಟೀ ಸೇವನೆ ಶುರು ಮಾಡುವ ಭಾರತೀಯರಿಗೆ ರಾತ್ರಿ ಮಲಗುವವರೆಗೂ ಟೀ ಬೇಕು. ಈ ಟೀ ಸೇವನೆ ಮಾಡೋದ್ರಿಂದ ಮೂಡ್ ಫ್ರೆಶ್ ಆಗುತ್ತೆ ಎನ್ನುವ ಕಾರಣಕ್ಕೆ ಕೆಲಸದ ಮಧ್ಯೆ ಬ್ರೇಕ್ ತೆಗೆದುಕೊಂಡು ಟೀ ಕುಡಿದು ಬರ್ತಾರೆ. ಒಂದೇ ರೀತಿ ಟೀ ಸೇವನೆ ಮಾಡಿ ಬೋರ್ ಆಗಿರುವ ಜನರು ಅದಕ್ಕೆ ಮಸಾಲೆ ಬೆರೆಸಿ ಕುಡಿಯುತ್ತಾರೆ. ಶುಂಠಿ, ತುಳಸಿ, ದಾಲ್ಚಿನಿ ಸೇರಿದಂತೆ ಮಸಾಲೆ ಪದಾರ್ಥ ಬೆರೆಸಿ ಸೇವನೆ ಮಾಡಿದ್ರೆ ಅದ್ರ ಟೇಸ್ಟ್ ಸ್ವಲ್ಪ ಬದಲಾಗುತ್ತದೆ. ಚಹಾ ಟೇಸ್ಟ್ ಬದಲಾವಣೆಗೆ ಈ ಮಸಾಲೆ ಹಾಕೋದು ಸರಿ ಆದ್ರೆ ಬೆಣ್ಣೆ ಹಾಕಿ ಟೀ ಮಾಡೋರನ್ನು ನೀವು ನೋಡಿದ್ದೀರಾ?
ಸಕ್ಕರೆ (Sugar) ಆರೋಗ್ಯಕ್ಕೆ ಹಾಳು ಎನ್ನುವ ಕಾರಣಕ್ಕೆ ಕೆಲವೇ ಕೆಲವು ಮಂದಿ ಬೆಲ್ಲದಲ್ಲಿ ಟೀ (Tea) ತಯಾರಿಸ್ತಾರೆ. ಆದ್ರೆ ಈ ವ್ಯಕ್ತಿ ಟೀಗೆ ಬೆಣ್ಣೆ ಹಾಕಿದ್ದಾನೆ. ಆತನ ಟೀ ಮಾಡುವ ವಿಧಾನ ಭಿನ್ನವಾಗಿದೆ. 16 ವಿಧದ ಮಸಾಲೆ ಹಾಗೂ ಬೆಣ್ಣೆ, ಗುಲಾಬಿ ಎಸಳನ್ನು (Tea Petals) ಈತ ಟೀಗೆ ಸೇರಿಸ್ತಿದ್ದಾನೆ. ಇವೆಲ್ಲವುಗಳ ಜೊತೆ ಟೀ ಪುಡಿ (Tea Powder) ಕೂಡ ಇದೆ ಅನ್ನೋದೆ ನೆಮ್ಮದಿ ಸಂಗತಿ. ಇನ್ಸ್ಟಾಗ್ರಾಮ್ officialsahihai ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ದಾಲ್ ಮಖನಿ ಅಥವಾ ಚಹಾ ಮಖನಿ ಎಂದು ವ್ಯಕ್ತಿ ಶೀರ್ಷಿಕೆ ಹಾಕಿದ್ದಾನೆ.
undefined
ಜಾಸ್ತಿ ನಿಂಬೆ ತಂದಿಟ್ರೆ ಹಾಳಾಗ್ತಿದ್ಯಾ? ಈ ಟಿಪ್ಸ್ ಬಳಸಿದ್ರೆ ಎಷ್ಟ್ ದಿನ ಆದ್ರೂ ಫ್ರೆಶ್ ಆಗಿರುತ್ತೆ
ಬೆಣ್ಣೆ (Butter) ಟೀ ತಯಾರಿಸಿದ್ದು ಹೇಗೆ? : ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿ ಮೊದಲು ಒಂದು ಪಾತ್ರೆಗೆ ಬೆಣ್ಣೆ ಕತ್ತರಿಸಿ ಹಾಕ್ತಾರೆ. ಬೆಣ್ಣೆ ಬಿಸಿ ಆಗ್ತಿದ್ದಂತೆ ಅದಕ್ಕೆ ಹಾಕು ಮತ್ತು ಗುಲಾಬಿ ಎಸಳುಗಳನ್ನು ಹಾಕ್ತಾರೆ. ಜೊತೆಗೆ 16 ಬಗೆಯ ಮಸಾಲೆಗಳನ್ನು ಸೇರಿಸುತ್ತಾರೆ. ಕೊನೆಗೆ ಟೀ ಪುಡಿ, ಸಕ್ಕರೆ ಮತ್ತು ಬಾದಾಮಿಯನ್ನು ಸೇರಿಸುತ್ತಾರೆ. ಕೆಲ ಸಮಯದ ಟೀ ಮಿಶ್ರಣ ಬಿಸಿಯಾದ್ಮೇಲೆ ಅದನ್ನು ಸೋಸಿ ಸರ್ವ್ ಮಾಡ್ತಾರೆ.
48 ಸಿಂಪಿ ತಿಂದ ಗರ್ಲ್ ಫ್ರೆಂಡ್! ಬಿಲ್ ನೋಡಿ ಬಾಯ್ ಫ್ರೆಂಡ್ ಪರಾರಿ
ಇದು ಟೀ ಹೊಸ ವಿಧಾನವಲ್ಲ : ಸಾಮಾಜಿಕ ಜಾಲತಾಣದಲ್ಲಿ ಆಹಾರ ಮೇಲೆ ಹೊಸ ಹೊಸ ಪ್ರಯೋಗ ನಡೆಯುತ್ತಿರುವ ವಿಡಿಯೋ ವೈರಲ್ ಆಗ್ತಿರೋದನ್ನು ನೀವು ನೋಡ್ಬಹುದು. ಆದ್ರೆ ಟೀಗೆ ಬೆಣ್ಣೆ ಬೆರೆಸಿ ನೀಡ್ತಿರುವ ಈ ಟೀ ರೆಸಿಪಿ ಹೊಸದಲ್ಲ. ಇದಕ್ಕೆ ಬಹಳ ಹಿಂದಿನ ಇತಿಹಾಸವಿದೆ. ೧೯೪೫ರಲ್ಲಿ ಟೀ ಮಾರಾಟ ಮಾಡ್ತಿರುವ ವ್ಯಕ್ತಿ ಅಜ್ಜ ಈ ಟೀ ಮಾರಾಟವನ್ನು ಶುರು ಮಾಡಿದ್ದರಂತೆ. ಅಲ್ಲಿಂದ ಇಲ್ಲಿಯವರೆಗೂ ಬೆಣ್ಣೆ ಟೀ ಮಾರಾಟವಾಗ್ತಿದೆ.
ನೋಡೋಕೆ ಟೀ ಅಧ್ಬುತವಾಗಿದ್ದು, ಅದನ್ನು ಸೇವನೆ ಮಾಡೋದಷ್ಟೆ ಬಾಕಿ ಇದೆ. ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಈವರೆಗೆ 1 ಲಕ್ಷದ ನೂರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಅನೇಕರು ಈಟೀ ವಿಡಿಯೋಕ್ಕೆ ಕಮೆಂಟ್ ಮಾಡಿದ್ದಾರೆ. ಅನೇಕರು ತಮಾಷೆಯಾಗೂ ಕಮೆಂಟ್ ಮಾಡಿದ್ದಾರೆ. ಈ ಚಹಾಕ್ಕೆ ಜಿರಿಗೆ ಹಾಗೂ ಬೆಳ್ಳುಳ್ಳಿಯನ್ನೂ ಹಾಕಿ ಎಂದು ಕೆಲವರು ಸಲಹೆ ನೀಡಿದ್ದಾರೆ. ಪಂಜಾಬ್ ನ ಅಮೃತ್ ಸರದಲ್ಲಿ ಈ ಚಹಾವನ್ನು ಮಾರಾಟ ಮಾಡಲಾಗ್ತಿದೆ. ನೀವೂ ಅಲ್ಲಗೆ ಹೋದಾಗ ಟೇಸ್ಟ್ ಮಾಡಿ ಬನ್ನಿ.