ಭಾರತೀಯ ಅಡುಗೆಮನೆಯಲ್ಲಿ ನಿಂಬೆ ಹೆಚ್ಚು ಅಗತ್ಯ ಬರುತ್ತದೆ. ಆದರೆ ಹೆಚ್ಚು ನಿಂಬೆಯನ್ನು ತಂದಿಟ್ಟರೆ ಬಹು ಬೇಗನೇ ಹಾಳಾಗುತ್ತದೆ. ಹಾಗಿದ್ರೆ ನಿಂಬೆಯನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಏನ್ ಮಾಡ್ಬೇಕು?
ಭಾರತೀಯ ಅಡುಗೆಮನೆಯಲ್ಲಿ ನಿಂಬೆ ಹಲವು ಬಾರಿ ಬಳಕೆಯಾಗುತ್ತದೆ. ಲೆಮನ್ ರೈಸ್, ಜ್ಯೂಸ್, ನಾನ್‌ವೆಜ್ ಊಟದ ಸಂದರ್ಭ ನಿಂಬೆ ಬೇಕೇ ಬೇಕು. ನಿಂಬೆ ಅಡುಗೆಮನೆಯಲ್ಲಿ ಬಳಸುವ ಮೂಲ ಪದಾರ್ಥವಾಗಿದೆ. ತೂಕ ಇಳಿಸುವ ಪಾನೀಯಗಳಿಂದ ಹಿಡಿದು ಸಲಾಡ್‌ಗಳಿಗೆ ಪರಿಮಳವನ್ನು ಸೇರಿಸುವವರೆಗೆ ಇದನ್ನು ಬಳಸಲಾಗುತ್ತದೆ . ಆದರೆ ಅಗತ್ಯವಿದೆಯೆಂದು ಹೆಚ್ಚು ನಿಂಬೆಯನ್ನು ತಂದಿಟ್ಟರೆ ಬಹು ಬೇಗನೇ ಹಾಳಾಗುತ್ತದೆ. ಆದರೆ ಈ ಕೆಲವು ಕಿಚನ್ ಟ್ರಿಕ್ಸ್ ಅನುಸರಿಸಿದರೆ ದೀರ್ಘಕಾಲದ ವರೆಗೆ ನಿಂಬೆ ತಾಜಾ ಮತ್ತು ರಸಭರಿತವಾಗಿರುತ್ತದೆ
ನಿಂಬೆ (Lemon), ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಂತಹ ಅನೇಕ ಗುಣಲಕ್ಷಣಗಳು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆದರೆ ಅದನ್ನು ಹೇಗೆ ಸಂಗ್ರಹಿಸಬೇಕು ಎಂದು ಗೊತ್ತಿಲ್ಲದ ಕಾರಣ ಅದೆಷ್ಟೋ ಬಾರಿ ಮನೆಯಲ್ಲಿ ನಿಂಬೆ ತಂದಿಟ್ಟರೂ ಬೇಗ ಹಾಳಾಗಿ ಬಿಡುತ್ತದೆ. ಆದ್ದರಿಂದ, ನಿಂಬೆಯನ್ನು ದೀರ್ಘಕಾಲದವರೆಗೆ ತಾಜಾ (Fresh)ವಾಗಿಡಲು ಏನು ಮಾಡಬೇಕು ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು.
undefined
ಶುಂಠಿಯನ್ನು ದೀರ್ಘಕಾಲದವರೆಗೆ ಕೆಡದಂತೆ ಫ್ರೆಶ್ ಇಡೋದು ಹೇಗೆ?
ನಿಂಬೆ ಮೇಲೆ ಎಣ್ಣೆಯನ್ನು ಹಚ್ಚಿ
ನೀವು ಒಂದೇ ಬಾರಿಗೆ ಹಲವಾರು ನಿಂಬೆಹಣ್ಣುಗಳನ್ನು ಖರೀದಿಸಿದ್ದರೆ , ದೀರ್ಘಕಾಲದವರೆಗೆ ಇದನ್ನು ತಾಜಾವಾಗಿರಸಲು ಸಾಸಿವೆ ಅಥವಾ ಸಂಸ್ಕರಿಸಿದ ಎಣ್ಣೆಯನ್ನು ಅನ್ವಯಿಸಿ. ನಂತರ ಅದನ್ನು ಜಿಪ್ ಲಾಕ್ ಬ್ಯಾಗ್‌ನಲ್ಲಿ ಹಾಕಿ ಫ್ರಿಜ್ ಅಥವಾ ಸಾಮಾನ್ಯ ಕೋಣೆಯ ಉಷ್ಣಾಂಶದಲ್ಲಿ ಇರಿಸಿ. ಇದರಿಂದ ನಿಂಬೆ ಹಾಳಾಗದೆ ಹಾಗೆಯೇ ಉಳಿಯುತ್ತದೆ.
ಈ ರೀತಿ ಫ್ರಿಜ್ ನಲ್ಲಿ ಸಂಗ್ರಹಿಸಿ
ನಿಂಬೆಯನ್ನು ಸರಿಯಾಗಿ ಸಂಗ್ರಹಿಸದಿದ್ದರೆ, ರೆಫ್ರಿಜರೇಟರ್‌ನಲ್ಲಿಯೂ ಒಣಗುತ್ತದೆ. ಹೀಗಾಗಿ, ಮೊದಲು ನಿಂಬೆಹಣ್ಣುಗಳನ್ನು ಪ್ರತ್ಯೇಕವಾಗಿ ಪೇಪರ್‌ನಲ್ಲಿ ಕಟ್ಟಿಕೊಳ್ಳಿ. ನಂತರ ಅದನ್ನು ಗಾಳಿಯಾಡದ ಪಾತ್ರೆಯಲ್ಲಿ ಹಾಕಿ, ರೆಫ್ರಿಜರೇಟರ್‌ನಲ್ಲಿ ಇರಿಸಿ.
ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿಡಿ
ನಿಂಬೆಹಣ್ಣನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಬಯಸಿದರೆ, ಅದನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿಡುವುದು ಉತ್ತಮ ಪರಿಹಾರವಾಗಿದೆ. ಹೀಗೆ ಮಾಡುವುದರಿಂದ ನಿಂಬೆ ತೇವಾಂಶದ ಸಂಪರ್ಕಕ್ಕೆ ಬರುವುದಿಲ್ಲ ಮತ್ತು ದೀರ್ಘಕಾಲದವರೆಗೆ ತಾಜಾವಾಗಿರುತ್ತದೆ.
Beauty Tips: ಸ್ಕಿನ್‌ಗೆ ನಿಂಬೆ ರಸ ಬೆಸ್ಟ್ ಹೌದು, ಹಾಗಂಥ ಡೈರೆಕ್ಟ್ ಆಗಿ ಹಚ್ಬಹುದಾ?
ರೆಫ್ರಿಜರೇಟರ್ ಇಲ್ಲದೆ ನಿಂಬೆ ಸಂಗ್ರಹಿಸುವುದು ಹೇಗೆ?
ಮನೆಯಲ್ಲಿ ಫ್ರಿಡ್ಜ್ ಇಲ್ಲದಿದ್ದರೆ, ನಿಂಬೆಯನ್ನು ಹೆಚ್ಚು ಕಾಲ ತಾಜಾವಾಗಿಡಲು ಈ ಉಪಾಯವನ್ನು ಬಳಸಬಹುದು. ಒಂದು ಜಾರ್‌ನಲ್ಲಿ ನೀರು, ಉಪ್ಪು ಮತ್ತು ಜೇನುತುಪ್ಪದ ಮಿಶ್ರಣವನ್ನು ತಯಾರಿಸಿ ಮತ್ತು ನಿಂಬೆಯನ್ನು ದೊಡ್ಡ ತುಂಡುಗಳಾಗಿ ಕತ್ತರಿಸಿ ಅದರಲ್ಲಿ ಇರಿಸಿ. ನಂತರ 10-12 ಗಂಟೆಗಳ ನಂತರ, ಈ ಮಿಶ್ರಣವನ್ನು ಪ್ರತ್ಯೇಕಿಸಿ, ನಿಂಬೆಯನ್ನು ಸಾಮಾನ್ಯ ಕೋಣೆಯ ಉಷ್ಣಾಂಶದಲ್ಲಿ ಇರಿಸಿ ಮತ್ತು ಅಗತ್ಯಕ್ಕೆ ಅನುಗುಣವಾಗಿ ಬಳಸಿ.