ರುಚಿರುಚಿಯಾಗಿ ತಿಂದ್ರು 61ರಲ್ಲೂ ಫಿಟ್ & ಫೈನ್ ಆಗಿರುವುದು ಹೇಗೆ? : ಸೀಕ್ರೆಟ್ ಬಿಟ್ಟುಕೊಟ್ಟ ಖ್ಯಾತ ಬಾಣಸಿಗ

Published : Sep 08, 2025, 06:18 PM IST
Sanjeev Kapoor

ಸಾರಾಂಶ

ಸಂಜೀವ್‌ ಕಪೂರ್ ಯಾರಿಗೆ ಗೊತ್ತಿಲ್ಲ ಹೇಳಿ. ಅವರು ಭಾರತದ ಪ್ರಸಿದ್ಧ ಬಾಣಸಿಗರಲ್ಲಿ ಒಬ್ಬರು. ಅಡಿಗೆಯನ್ನು ಚೆನ್ನಾಗಿ ಮಾಡುವ ಜೊತೆಗೆ ಅಷ್ಟೇ ಚೆನ್ನಾಗಿ ತಿಂದು ರುಚಿ ನೋಡುವ ಕಪೂರ್ ತಮ್ಮ 61ರ ಹರೆಯದಲ್ಲೂ ಫಿಟ್ & ಫೈನ್ ಆಗಿದ್ದಾರೆ. ಅವರ ಫಿಟ್‌ನೆಸ್ ಸೀಕ್ರೇಟ್ ಏನು ಎಂಬ ಬಗ್ಗೆ ಈಗ ಅವರೇ ಹೇಳಿದ್ದಾರೆ ನೋಡಿ

ಸಂಜೀವ್‌ ಕಪೂರ್ ಯಾರಿಗೆ ಗೊತ್ತಿಲ್ಲ ಹೇಳಿ. ಅವರು ಭಾರತ ಪ್ರಸಿದ್ಧ ಬಾಣಸಿಗರಲ್ಲಿ ಒಬ್ಬರು. ಅಡಿಗೆಯನ್ನು ಚೆನ್ನಾಗಿ ಮಾಡುವ ಜೊತೆಗೆ ಅಷ್ಟೇ ಚೆನ್ನಾಗಿ ಅಡುಗೆಯನ್ನು ತಿಂದು ರುಚಿ ನೋಡುವ ಸಂಜೀವ್ ಕಪೂರ್ ತಮ್ಮ 61ರ ಹರೆಯದಲ್ಲೂ ಫಿಟ್ & ಫೈನ್ ಆಗಿರುವ ವ್ಯಕ್ತಿ. ನಮ್ಮಲ್ಲಿ ಕೆಲವರು ಚೂರೇ ಚೂರು ತಿಂದರೂ ದಪ್ಪವಾಗಿ ಬಿಡುತ್ತೇನೆ ಎಂಬ ಭಯದಿಂದ ತಿನ್ನುವುದನ್ನೇ ಬಿಡುತ್ತಾರೆ. ಆದರೂ ದಪ್ಪವಾಗುತ್ತಾರೆ. ಆದರೆ ಎಲ್ಲವನ್ನು ತಿಂದು ರುಚಿ ನೋಡುವ ಸಂಜೀವ್ ಕಪೂರ್ ಅವರು 61ರ ಹರೆಯದಲ್ಲೂ ಇಷ್ಟೊಂದು ಫಿಟ್ ಆಗಿ ಇರುವುದು ಹೇಗೆ ಎಂಬ ಕುತೂಹಲ ಅನೇಕರದ್ದು, ಆದರೆ ಈಗ ಅವರು ತಮ್ಮ ಫಿಟ್‌ನೆಸ್ ಸೀಕ್ರೇಟ್‌ ರಿವೀಲ್ ಮಾಡಿದ್ದಾರೆ.

ಹೌದು ಸಂಜೀವ್ ಕಪೂರ್ ಅವರ ಆರೋಗ್ಯ ಮತ್ತು ಚೈತನ್ಯದ ರಹಸ್ಯ ಆಹಾರ ಮತ್ತು ಫಿಟ್‌ನೆಸ್‌ನ ಕಡೆಗೆ ಸರಳ, ಸಮತೋಲಿತ ಮತ್ತು ಸಂತೋಷದಾಯಕ ವಿಧಾನವಂತೆ. ಅನೇಕರು ತಮಗೆ ತಾವೇ ಹಲವು ನಿರ್ಬಂಧಗಳನ್ನು ಹೇರಿಕೊಳ್ಳುತ್ತಾರೆ. ಆದರೆ ಸಂಜೀವ್‌ ಕಪೂರ್ ಹಾಗಲ್ಲ,ಇಷ್ಟವಾಗುವುದನ್ನೆಲ್ಲಾ ಇಷ್ಟಪಟ್ಟು ತಿನ್ನುತ್ತಾರೆ. ನವದೆಹಲಿಯಲ್ಲಿ ವಂಡರ್‌ಚೆಫ್ ಅಂಗಡಿಯನ್ನು ಉದ್ಘಾಟಿಸಿ ಮಾತನಾಡಿದ ಬಾಣಸಿಗ ಸಂಜೀವ್ ಕಪೂರ್, ತಮ್ಮ ಜೀವನಶೈಲಿಯ ಆಯ್ಕೆಗಳು ಮತ್ತು ತಿನ್ನುವ ತತ್ವಶಾಸ್ತ್ರದ ಕೆಲ ವಿಚಾರಗಳನ್ನು ಪ್ರೇಕ್ಷಕರ ಜೊತೆ ಹಂಚಿಕೊಂಡರು.

ಸಂಜೀವ್ ಕಪೂರ್ ಅವರ ಹೆಲ್ತ್‌ ಸೀಕ್ರೇಟ್ ಇದು

ನನ್ನ 60 ರ ದಶಕದಲ್ಲಿ ಫಿಟ್ ಮತ್ತು ಆರೋಗ್ಯವಾಗಿರಲು ನನ್ನ ಕಂಡುಕೊಂಡ ರಹಸ್ಯವೆಂದರೆ ನಾನು ಇಷ್ಟಪಡುವ ಆಹಾರಕ್ಕೆ ನಿರ್ಬಂಧ ಹೇರದೇ ತಿನ್ನುವುದಾಗಿದೆ. ನನ್ನ ಹೃದಯವು ಆಸೆ ಪಡುವ ಎಲ್ಲವನ್ನೂ ಮತ್ತು ಯಾವುದನ್ನಾದರೂ ತಿನ್ನುವುದರಲ್ಲಿ ನಾನು ನಂಬಿಕೆ ಇಡುತ್ತೇನೆ ಎಂದು ಅವರು ಹೇಳುತ್ತಾರೆ. ಕಪೂರ್ ಅವರಿಗೆ ಆಹಾರವೆಮದರೆ ಬರೀ ಪೌಷ್ಟಿಕಾಂಶವಲ್ಲ, ಅದೊಂದು ಭಾವನಾತ್ಮಕ ಅನುಭವ

ನನಗೆ, ಆಹಾರವು ಕ್ಯಾಲೊರಿಗಳಿಗಿಂತ ಹೆಚ್ಚು, ಇದು ನೆನಪುಗಳು, ಭಾವನೆಗಳು ಮತ್ತು ಹಂಚಿಕೊಳ್ಳುವ ಸಂತೋಷವನ್ನು ಒಳಗೊಂಡಿರುತ್ತದೆ. ಕೆಲವರು ಕೆಲವು ಆಹಾರಗಳನ್ನು ಬಿಟ್ಟೇ ಬಿಡುತ್ತಾರೆ. ಆದರೆ ತಾವು ಏನನ್ನಾದರು ಸಂಪೂರ್ಣವಾಗಿ ಬಿಡುವ ಬದಲು ಸಮತೋಲನವಾಗಿ ಮಿತವಾಗಿ ತಿನ್ನಲು ಬಯಸುತ್ತಾರೆ. ನನ್ನ ನೆಚ್ಚಿನ ಆಹಾರಗಳನ್ನು ಬಿಟ್ಟುಬಿಡುವುದಕ್ಕೆ ನನಗೆ ಇಷ್ಟವಿಲ್ಲ, ಬದಲಾಗಿ ತುಸುವಾಗಿ ಮಿತವಾಗಿ ತಿನ್ನುತ್ತೇನೆ. ನಿಮ್ಮಿಷ್ಟದ ಒಂದು ಸಣ್ಣ ತಟ್ಟೆಯ ತಿನ್ನಿಸು ನಿಮಗೆ ನಿಮ್ಮ ನಾಲಗೆಯನ್ನು ಸಂತೃಪ್ತಿಪಡಿಸುವುದಕ್ಕೆ ಸಾಕಾಗುತ್ತದೆ ಎಂದು ಅವರು ಹೇಳುತ್ತಾರೆ.

ಕಾಲಕಾಲಕ್ಕೆ ಸ್ಥಳೀಯವಾಗಿ ಸಿಗುವ ಆಹಾರಗಳ ಮಹತ್ವ:

ಸೀಸನಲ್ ಫುಡ್ ಅಥವಾ ಕಾಲ ಕಾಲಕ್ಕೆ ಸಿಗುವಂತಹ ಆಹಾರಗಳು ಆಹಾರಗಳನ್ನು ತಿನ್ನುವುದು ಎಷ್ಟು ಅಗತ್ಯ ಎಂಬುದನ್ನು ಕಪೂರ್ ಹೇಳಿದ್ದಾರೆ. ಕಾಲಕ್ಕೆ ತಕ್ಕಂತೆ ಸಿಗುವ ಆಹಾರಗಳು ನಮ್ಮ ಆಹಾರದ ಒಂದು ಅವಿಭಾಜ್ಯ ಅಂಗವಾಗಿರಬೇಕು. ಅಂತಹ ಹಣ್ಣುಗಳು ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತವೆ, ಉತ್ತಮ ರುಚಿಯನ್ನು ಹೊಂದಿರುತ್ತವೆ ಮತ್ತು ಜೀರ್ಣಿಸಿಕೊಳ್ಳಲು ತುಂಬಾ ಸುಲಭ ಎಂದು ಅವರು ಹೇಳಿದರು.

ಸಂಜೀವ್ ಕಪೂರ್‌ಗೆ ಚೋಲೆ ಭಟುರೆ ಎಂದರೆ ಬಲು ಪ್ರೀತಿ

ಅಂದಹಾಗೆ ಸಂಜೀವ್‌ ಕಪೂರ್‌ಗೆ ಫಿಟ್‌ನೆಸ್ ಎಂದರೆ ಆಸೆಪಟ್ಟಿದ್ದನ್ನು ತಿನ್ನದೇ ನಿರಾಕರಿಸುವುದಲ್ಲ, ಬದಲಿಗೆ ಯಾವಾಗ ಮತ್ತು ಎಷ್ಟು ತಿನ್ನಬೇಕು ಎಂದು ತಿಳಿದುಕೊಳ್ಳುವುದು. ನಾನು ಮಧ್ಯಾಹ್ನದ ಊಟಕ್ಕೆ ಚೋಳೆ ಭಟುರೆ ತಿಂದರೆ, ಅದನ್ನು ಸೂಪ್ ಅಥವಾ ಬೇಯಿಸಿದ ತರಕಾರಿಗಳಂತಹ ಲಘು ಭೋಜನದೊಂದಿಗೆ ಸಮತೋಲನಗೊಳಿಸುತ್ತೇನೆ ಎಂದು ಅವರು ವಿವರಿಸಿದರು. ಅವರ ಪ್ರಕಾರ, ಈ ಆಹಾರದ ತತ್ವಶಾಸ್ತ್ರವು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವಾಗ ತನ್ನ ನೆಚ್ಚಿನ ಭಕ್ಷ್ಯಗಳನ್ನು ತಿನ್ನುವುದಕ್ಕೆ ಅವಕಾಶ ಮಾಡಿಕೊಡುತ್ತದೆ.

ಇದನ್ನೂ ಓದಿ: ಬಿದಿರಿನ ಟ್ರೈಪಾಡ್ ಬಳಸಿ ಗ್ರಾಮೀಣ ಕ್ರೀಡೆಗಳ ಟೆಲಿಕಾಸ್ಟ್ ಮಾಡ್ತಿದ್ದವನಿಗೆ ಬಂತು ಅಂತಾರಾಷ್ಟ್ರೀಯ ಆಹ್ವಾನ

ಇದನ್ನೂ ಓದಿ:ಬೀಚ್‌ ಸ್ವಚ್ಛತೆ ವೇಳೆ ಮಹಾರಾಷ್ಟ್ರ ಸಿಎಂ ಪತ್ನಿ ಅಮೃತಾ ಫಡ್ನವೀಸ್ ಧರಿಸಿದ ಬಟ್ಟೆಗೆ ತೀವ್ರ ಆಕ್ರೋಶ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?
ಫ್ರಿಡ್ಜ್ ಎಷ್ಟು ವರ್ಷ ಬಾಳಿಕೆ ಬರುತ್ತೆ?, ನಿಮ್ಗೆ ಈ ವಿಚಾರ ಗೊತ್ತಿಲ್ಲವೆಂದ್ರೆ ಕರೆಂಟ್ ಬಿಲ್ ಜಾಸ್ತಿ ಬರುತ್ತೆ