ನೀವು ಬೆಂಗಳೂರಲ್ಲಿದ್ದೀರಾ ? ಈ ಸ್ಪೆಷಲ್‌ ಹೊಟೇಲ್‌ಗಳಿಗೆ ಮಿಸ್ ಮಾಡ್ದೆ ವಿಸಿಟ್ ಮಾಡಿ

By Suvarna News  |  First Published Mar 24, 2022, 8:02 PM IST

ನೀವು ಬೆಂಗಳೂರ (Bangalore)ಲ್ಲಿದ್ದೀರಾ ? ಹಾಗಿದ್ರೆ ಸಿಲಿಕಾನ್ ಸಿಟಿಯಲ್ಲಿರೋ ಈ ಕೆಲವು ಸ್ಪೆಷಲ್ ಹೊಟೇಲ್‌ (Hotel)ಗಳಲ್ಲಿ ಹೋಗಿದ್ದೀರಾ. ಇಲ್ಲಿ ಬೆಳಗ್ಗಾದ್ರೆ ಬಾಯಲ್ಲಿಟ್ರೆ ಕರಗೋ ಇಡ್ಲಿ, ಮಸಾಲೆದೋಸೆ (Masale Dose), ಕಟ್ಲೆಟ್ ಎಲ್ಲಾ ರೆಡಿಯಾಗುತ್ತೆ. ಮಿಸ್ ಮಾಡ್ದೆ ವಿಸಿಟ್ ಮಾಡಿ.


ವೀಕೆಂಡ್ (Weekend) ಆಯ್ತು ಅಂದ್ರೆ ಸಾಕು ಅಡುಗೆ  (Cooking) ಮಾಡೋಕೆ ಬೇಜಾರು. ಆದ್ರೆ ಯಾವಾಗ್ಲೂ ಹೊಟೇಲ್‌ (Hotel) ಫುಡ್ ತಿನ್ನೋಕು ಬೇಜಾರು ಅಂತೀರಾ. ಹಾಗಿದ್ರೆ ಈ ವೀಕೆಂಡ್‌ಗೆ ನಿಮ್ಗೆ ಸ್ಪೆಷಲ್ ಫುಡ್ ಕೊಡಿಸೋ ಜವಾಬ್ದಾರಿ ನಮ್ದು. ಬೆಳಗ್ಗಿನ ತಿಂಡಿಯ ಹೊತ್ತಿಗೆ ಇಲ್ಲಿಗೆ ಹೋಗಿ ಸಾಕು ಬಾಯಲ್ಲಿ ನೀರೂರಿಸೋ ಮೃದುವಾದ ಇಡ್ಲಿ, ವೆರೈಟಿ ದೋಸೆ, ಕಟ್ಲೆಟ್, ಬನ್ಸ್, ಬಜ್ಜಿ..ಇನ್ನೇನು ಬೇಕು ಎಲ್ಲಾನು ಇಲ್ಲಿ ಸಿಗುತ್ತೆ. ಇದೆಲ್ಲಾ ಸಿಗೋದು ಎಲ್ಲಿ. ನೀವೆಲ್ಲಿಗೆ ವಿಸಿಟ್ ಮಾಡ್ಬೇಕು. ಡೀಟೈಲ್ ಆಗಿ ನಾವ್ ಹೇಳ್ತೀವಿ.

1. ಶ್ರೀ ಸಾಗರ್ CTR (ಸೆಂಟ್ರಲ್ ಟಿಫಿನ್ ರೂಮ್), ಮಲ್ಲೇಶ್ವರಂ
ವಿವಿಧ ಬಗೆಯ ಮಸಾಲೆ ದೋಸೆಗಳಿಗೆ ಹೆಸರುವಾಸಿಯಾಗಿರೋದು ಶ್ರೀ ಸಾಗರ್ CTR (ಸೆಂಟ್ರಲ್ ಟಿಫಿನ್ ರೂಮ್). ಸಾದಾ ದೋಸೆಯಿಂದ ಹಿಡಿದು ಬೆಣ್ಣೆ ಮಸಾಲಾ ದೋಸೆಯ ವರೆಗೆ ಇಲ್ಲಿ ಎಲ್ಲಾ ರೀತಿಯ ದೋಸೆಗಳೂ ಸಿಗುತ್ತವೆ. ಮಲ್ಲೇಶ್ವರಂನಲ್ಲಿರುವ ಈ ಆಕರ್ಷಕ ಹಳೆಯ ಕಾಲದ ಉಪಾಹಾರ ಗೃಹವು ಹಲವರ ಫೇವರಿಟ್‌. ಮಂಗಳೂರು ಬಜ್ಜಿ, ಇಡ್ಲಿ, ವಡಾ, ಪೂರಿ ಸಾಗು, ಖಾರಾ ಬಾತ್, ಕೇಸರಿ ಬಾತ್, ಮದ್ದೂರು ವಡಾ ಸೇರಿದಂತೆ ಹಲವು ಖಾದ್ಯಗಳು ಇಲ್ಲಿವೆ.  ಈ ಟಿಫಿನ್ ರೂಮ್ ಬೆಳಗ್ಗೆ 7.30 ಕ್ಕೆ ಸೇವೆ ಸಲ್ಲಿಸಲು ಪ್ರಾರಂಭಿಸುತ್ತದೆ.ಐಕಾನಿಕ್ ರೆಸ್ಟೋರೆಂಟ್ ಅನ್ನು ವೈವಿ ಸುಬ್ರಮಣ್ಯಂ ಮತ್ತು ಅವರ ಸಹೋದರರು 1920ರ ದಶಕದಲ್ಲಿ ಸ್ಥಾಪಿಸಿದರು.

Tap to resize

Latest Videos

ಇಬ್ಬರ ಬೆಲೆ: ₹150 (ಅಂದಾಜು).

ವರ್ಕೌಟ್ ಬಳಿಕ ಸೇವಿಸಿ ಈ Smoothie, ಇಲ್ಲಿದೆ ರೆಸಿಪಿ

2. ಎಂಟಿಆರ್ (ಮಾವಳ್ಳಿ ಟಿಫಿನ್ ರೂಮ್), ಲಾಲ್‌ಭಾಗ್‌ ಮುಖ್ಯ ರಸ್ತೆ
ಘೀ ರೋಸ್ಟ್ ದೋಸೆ, ಪೋಡಿ ಮಸಾಲಾ ದೋಸೆ, ಸೆಟ್ ದೋಸೆ, ರವಾ ಇಡ್ಲಿ, ಖಾರಾ ಬಾತ್, ಚೌ ಚೌ ಬಾತ್, ಉದ್ದಿನ ವಡಾ ಮತ್ತು ಮೊಸರು ವಡಾ ಸವಿಯಲು ಬೆಂಗಳೂರಿನ ಹೆಚ್ಚಿನ ಜನರು ಎಂಟಿಆರ್‌ಗೆ ಹೋಗುತ್ತಾರೆ. ಈ ರೆಸ್ಟೋರೆಂಟ್ ಕೂಡ ಬೆಳಗ್ಗೆ 6.30ಕ್ಕೆ ತೆರೆಯುತ್ತದೆ. ಇದು ಆಹಾರ ಪ್ರಿಯರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ.

1924 ರಲ್ಲಿ ಸಹೋದರರಾದ ಪರಂಪಳ್ಳಿ ಯಜ್ಞನಾರಾಯಣ ಮೈಯಾ ಮತ್ತು ಗಣಪ್ಪಯ್ಯ ಮೈಯಾ ಅವರು ಬೆಂಗಳೂರಿನ ಲಾಲ್‌ಬಾಗ್ ನೆರೆಹೊರೆಯಲ್ಲಿ ಸ್ಥಾಪಿಸಿದ MTR ಈಗ ಲಂಡನ್‌ನಲ್ಲಿ ಒಂದು ಔಟ್‌ಲೆಟ್ ಅನ್ನು ತೆರೆದಿದೆ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಅಕ್ಕಿಯ ಕೊರತೆ ಉಂಟಾದಾಗ ಅವರು ರಾಗಿ ಇಡ್ಲಿಯನ್ನು ಪರಿಚಯಿಸಿದರು ಎಂದು ಹೇಳಲಾಗುತ್ತದೆ, ಇದನ್ನು ಈಗ ದಕ್ಷಿಣ ಭಾರತದ ರೆಸ್ಟೋರೆಂಟ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಇಬ್ಬರ ಬೆಲೆ: ₹250 (ಅಂದಾಜು).

3. ವಿದ್ಯಾರ್ಥಿ ಭವನ, ಬಸವನಗುಡಿ
1940ರ ದಶಕದ ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಸಣ್ಣ ಕ್ಯಾಂಟೀನ್ ಆಗಿ ಪ್ರಾರಂಭವಾದಾಗಿನಿಂದ ಬೆಂಗಳೂರಿನ ಪ್ರಸಿದ್ಧ ಪರಂಪರೆಯ ಸ್ಥಳಗಳಲ್ಲಿ ಒಂದಾಗಿದೆ. ಇದನ್ನು 1943-44 ರಲ್ಲಿ ವೆಂಕಟರಮಣ ಉರಾಳ್ ಸ್ಥಾಪಿಸಿದರು ಮತ್ತು ನಂತರ ಅವರ ಸಹೋದರ ಪರಮೇಶ್ವರ ಉರಾಲ್ ನಿರ್ವಹಿಸಿದರು. ರಾಮಕೃಷ್ಣ ಅಡಿಗ ಅವರು 1970 ರಲ್ಲಿ ಉಪಾಹಾರ ಗೃಹವನ್ನು ವಹಿಸಿಕೊಂಡರು, ಅವರು ಈಗ ತಮ್ಮ ಮಗ ಅರುಣ್ ಕುಮಾರ್ ಅಡಿಗ ಅವರೊಂದಿಗೆ ಇದನ್ನು ನಿರ್ವಹಿಸುತ್ತಿದ್ದಾರೆ.

ಗರಿಗರಿಯಾದ ಗೋಲ್ಡನ್ ಬ್ರೌನ್ ಬಟರ್ ಮಸಾಲಾ ದೋಸಾ ಇಲ್ಲಿ ಸ್ಪೆಷಲ್. ಜತೆಗೆ ರವೆ ವಡೆ, ಖಾರಾ ಬಾತ್, ಕೇಸರಿ ಬಾತ್, ಉದ್ದಿನ ವಡೆ, ಇಡ್ಲಿ ಮತ್ತು ಪೂರಿ ಸಾಗು ಈ ಹೊಟೇಲ್‌ನಲ್ಲಿ ಟ್ರೈ ಮಾಡ್ಲೇಬೇಕು. ಬೆಳಗ್ಗೆ 6.30ಕ್ಕೆ ಈ ರೆಸ್ಟೋರೆಂಟ್ ಓಪನ್ ಆಗುತ್ತದೆ.

ಇಬ್ಬರ ಬೆಲೆ: ₹100 (ಅಂದಾಜು).

ಈ ಆಹಾರ ಅವಾಯ್ಡ್ ಮಾಡದೇ ಇದ್ದರೆ ಹೃದಯಾಘಾತ ಖಚಿತ

4. ಇಂಡಿಯನ್ ಕಾಫಿ ಹೌಸ್, ಚರ್ಚ್ ಸ್ಟ್ರೀಟ್
ಬೆಂಗಳೂರಿನ ಇಂಡಿಯನ್ ಕಾಫಿ ಹೌಸ್‌ನಲ್ಲಿ ಕಾಫಿ ಮತ್ತು ಗರಿಗರಿಯಾದ ಮಸಾಲೆ ದೋಸೆ ದೊರಕುತ್ತದೆ.  ಈ ರೆಸ್ಟೋರೆಂಟ್ ಮೊದಲು MG ರಸ್ತೆಯಲ್ಲಿತ್ತು. ಆದರೆ 2009 ರಲ್ಲಿ ಚರ್ಚ್ ಸ್ಟ್ರೀಟ್‌ಗೆ ಸ್ಥಳಾಂತರಗೊಂಡಿತು. ಇದು ಬೆಳಗ್ಗೆ 8 ಗಂಟೆಗೆ ಸೇವೆಯನ್ನು ಪ್ರಾರಂಭಿಸುತ್ತದೆ. ಇಲ್ಲಿ ದೊರಕುವ ಕಟ್ಲೆಟ್, ಆಮ್ಲೆಟ್, ಇಡ್ಲಿ, ವಡಾ ಮತ್ತು ರೋಸ್ ಮಿಲ್ಕ್ ಹೆಚ್ಚು ಫೇಮಸ್ ಆಗಿದೆ..

ಹಳೆಯ ಕಾಲದಂತೆಯೇ, ಇಲ್ಲಿನ ಮಾಣಿಗಳು ಇನ್ನೂ ವಿಶೇಷ ಸಮವಸ್ತ್ರ ಮತ್ತು ಪೇಟವನ್ನು ಧರಿಸುತ್ತಾರೆ, ಕಾಫಿ ಸೆಸ್ ಸಮಿತಿಯು 1930 ರ ದಶಕದಲ್ಲಿ ಆರಂಭ ಮಾಡಿತು. 1936 ರಲ್ಲಿ ಬಾಂಬೆಯಲ್ಲಿ ಮಳಿಗೆಯನ್ನು ತೆರೆಯಲಾಯಿತು. ಇದನ್ನು ಭಾರತೀಯ ಕಾಫಿ ಮಂಡಳಿಯು ನಡೆಸಿತು.

ಇಬ್ಬರ ಬೆಲೆ: ₹200 (ಅಂದಾಜು).

5. ಬ್ರಾಹ್ಮಣರ ಕಾಫಿ ಬಾರ್, ಶಂಕರಪುರ
ಇಡ್ಲಿ ವಡಾ, ಖಾರಾ ಬಾತ್, ಕೇಸರಿ ಬಾತ್ ಬ್ರಾಹ್ಮಣರ ಕಾಫಿ ಬಾರ್‌ನ ಸ್ಪೆಷಾಲಿಟಿ. 1965 ರಲ್ಲಿ ಕೆ.ವಿ.ನಾಗೇಶ್ ರಾವ್ ಸ್ಥಾಪಿಸಿದ ಈ ಐಕಾನಿಕ್ ಬೆಂಗಳೂರಿನ ಉಪಾಹಾರ ಗೃಹದ ಪ್ರಮುಖ ಆಯ್ಕೆಗಳಲ್ಲಿ ಸೇರಿವೆ. ಈ ಸ್ಥಳವು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ತೆರೆಯುತ್ತದೆ. ಸರಳವಾದ ವಾತಾವರಣ ಹೊಂದಿರುವ ಈ ಕಾಫಿ ಬಾರ್ ಚಟ್ನಿಗಳಿಗೆ ಹೆಸರುವಾಸಿಯಾಗಿದೆ.

ಇಬ್ಬರ ಬೆಲೆ: ₹100 (ಅಂದಾಜು).

click me!