Healthy Food : ಹಸಿವಾದಾಗ ಹಾಳು ಮೂಳು ತಿನ್ನೋದು ಎಷ್ಟು ಸರಿ?

By Suvarna News  |  First Published Dec 9, 2022, 1:01 PM IST

ಸ್ನ್ಯಾಕ್ಸ್ ಯಾರಿಗೆ ಇಷ್ಟವಾಗಲ್ಲ ಹೇಳಿ? ಹಸಿವಾಗ್ಲಿ ಬಿಡಲಿ ಕೆಲವರು ಬಾಯಾಡಿಸ್ತಿರುತ್ತಾರೆ. ಈ ಅಭ್ಯಾಸ ನಮ್ಮ ತೂಕ ಹೆಚ್ಚಾಗೋಕೆ ಕಾರಣವಾಗುತ್ತೆ. ಸರಿಯಾದ ಟೈಂನಲ್ಲಿ ಸರಿಯಾದ ಸ್ನ್ಯಾಕ್ಸ್ ಸೇವನೆ ಮಾಡಿದ್ರೆ ತೂಕ ನಿಯಂತ್ರಿಸಬಹುದು.
 


ನಮಗೆ ತಿಳಿಯದೆ ಫಟಾಫಟ್ ಅಂತ ತೂಕ ಮೇಲೆಕ್ಕೆ ಹೋಗ್ತಿರುತ್ತದೆ. ಅದು ಹೇಗೋ ಗೊತ್ತಿಲ್ಲ, ಭರ್ಜರಿ ದಪ್ಪ ಆಗಿದೆನೆ ಅಂತ ಮಹಿಳೆಯರು ಹೇಳೋದನ್ನು ನೀವು ಕೇಳಿರಬಹುದು. ತೂಕ ಏರೋದು ಗೊತ್ತಾಗದೆ ಇರಬಹುದು ಆದ್ರೆ ತೂಕ ಇಳಿಸುವಾಗ ಮಾತ್ರ ಪ್ರತಿ ಕ್ಷಣ ಕಷ್ಟಪಡಬೇಕು. ಇತ್ತೀಚಿನ ದಿನಗಳಲ್ಲಿ ಬೊಜ್ಜು ಮಹಿಳೆಯರ ಸಾಮಾನ್ಯ ಸಮಸ್ಯೆಯಾಗಿದೆ. ವಾಕಿಂಗ್, ಜಿಮ್ ಅಂತಾ ಮಹಿಳೆಯರು ಕಸರತ್ತು ಮಾಡ್ತಾರೆ. ಇದೆಲ್ಲಕ್ಕಿಂತ ದೊಡ್ಡ ವಿಷ್ಯವೆಂದ್ರೆ ಡಯಟ್. ರುಚಿ ರುಚಿ ಫಾಸ್ಟ್ ಫುಡ್ ಕಣ್ಣಿಗೆ ಬಿದ್ರೂ ಬಾಯಿಗೆ ಹಾಕುವ ಹಾಗಿಲ್ಲ. ಡಯಟ್ ಸಿಕ್ಕಾಪಟ್ಟೆ ಕಷ್ಟ ಎನ್ನುವವ ಮಹಿಳೆಯರು ಕೆಲ ಟಿಪ್ಸ್ ಫಾಲೋ ಮಾಡಬಹುದು. ಡಯಟ್ ಅಂದ್ರೆ ನೀವು ರುಚಿಯಾದ ಆಹಾರ ಬಿಟ್ಟು ಸೆಪ್ಪೆ ಆಹಾರ ಸೇವನೆ ಮಾಡ್ಬೇಕು ಎಂದಲ್ಲ. ಹಾಗಂತ ತೂಕ  ಕಡಿಮೆ ಮಾಡಿಕೊಳ್ಳಲು ಬಟ್ಟಲುಗಟ್ಟಲೆ ಆಹಾರ ಸೇವನೆ ಮಾಡ್ಬೇಕು ಅಂತಾನೂ ಅಲ್ಲ. ತಿಂಡಿಗಳನ್ನು ಯಾವಾಗ ಮತ್ತು ಹೇಗೆ ತಿನ್ನಬೇಕು ಎಂಬುದು ತಿಳಿದಿರಬೇಕು.  

ನಮಗೆ ಹಸಿವೆ (Hunger) ಯಾದಾಗ ನಾವು ಏನು ತಿನ್ನಬೇಕು ಎಂಬುದರ ಕುರಿತು ಯೋಚಿಸಬೇಕು, ಏನು ಬೇಕು ಎನ್ನುವ ಬಗ್ಗೆ ಅಲ್ಲ ಎನ್ನುತ್ತಾರೆ ತಜ್ಞ (Expert) ರು. ತೂಕ ಇಳಿಸಲು ಬಯಸುವ ಜನರು ಊಟವನ್ನು ಕಡಿಮೆ ಮಾಡ್ತಾರೆ. ಆದ್ರೆ ಸ್ನ್ಯಾಕ್ಸ್ (Snacks) ತಿನ್ನುತ್ತಾರೆ. ಮಸಾಲೆ ಮತ್ತು ಎಣ್ಣೆ (Oil) ಯುಕ್ತ ಸ್ನ್ಯಾಕ್ಸ್ ತೂಕ ಹೆಚ್ಚಿಸುತ್ತದೆ. ತೂಕ (Weight ) ಇಳಿಸಿಕೊಳ್ಳಲು ಸ್ನ್ಯಾಕ್ಸ್ ಸೇವನೆ ಒಳ್ಳೆಯದಾ ಅಥವಾ ಕೆಟ್ಟದ್ದಾ ಎನ್ನುವ ಬಗ್ಗೆ ನಾವಿಂದು ಮಾಹಿತಿ ನೀಡ್ತೆವೆ.  

ಹಾಲು, ಬಾಳೆಹಣ್ಣು ಒಟ್ಟೊಟ್ಟಿಗೆ ಸೇವಿಸುತ್ತೀರಿ ಎಂದರೆ ಇಂದೇ ಬಿಟ್ಟುಬಿಡಿ

Tap to resize

Latest Videos

ಸ್ನ್ಯಾಕ್ಸ್ ಸೇವನೆಯಿಂದ ತೂಕ ಏರುತ್ತಾ? : ಸ್ನ್ಯಾಕ್ಸ್ ಸೇವನೆ ಮಾಡಿದ್ರೆ ನಿಮ್ಮ ಊಟದ ಪ್ರಮಾಣ ಕಡಿಮೆಯಾಗುತ್ತದೆ. ಅದ್ರಿಂದ ತೂಕ ಹೆಚ್ಚಾಗೋದಿಲ್ಲ. ಆದ್ರೆ ಸ್ನ್ಯಾಕ್ಸ್ ಸೇವನೆ ನಂತ್ರವೂ ನೀವು ಹೆಚ್ಚು ಊಟ ಮಾಡಿದ್ರೆ ತೂಕ ಹೆಚ್ಚಾಗೋದನ್ನು ತಪ್ಪಿಸಲು ಸಾಧ್ಯವಿಲ್ಲ. ಇದಲ್ಲದೆ ನೀವು ಎಣ್ಣೆಯುಕ್ತ ಸ್ನ್ಯಾಕ್ಸ್ ಸೇವನೆ ಮಾಡಿದ್ರೆ ನಿಮ್ಮ ತೂಕ ಹೆಚ್ಚಾಗುತ್ತದೆ. ಕಾರ್ಬೋಹೈಡ್ರೇಟ್‌, ಸಕ್ಕರೆ, ವಿಶೇಷವಾಗಿ ಸಂಸ್ಕರಿಸಿದ ಸಕ್ಕರೆ ತಿಂದ್ರೆ ಕೊಬ್ಬು ಏರುತ್ತದೆ. ಮಸಾಲೆಯುಕ್ತ ಮತ್ತು ತುಂಬಾ ಉಪ್ಪು ಇರುವ ಆಹಾರ ಕೂಡ ಅಪಾಯಕಾರಿ. ಪ್ಯಾಕ್ ಮಾಡಿದ ಆಹಾರವನ್ನು ನೀವು ಸೇವನೆ ಮಾಡಿದ್ರೆ ತೂಕ ಇಳಿಸೋದು ಕಷ್ಟವಾಗುತ್ತದೆ. 

ಈ ರೀತಿ ಸ್ನ್ಯಾಕ್ಸ್ ಸೇವನೆ ಮಾಡಿ : ತೂಕ ಇಳಿಸಿಕೊಳ್ಳಲು ಬಯಸುವವರು, ಪ್ರೋಟೀನ್ ಭರಿತ ಆಹಾರ ಸೇವನೆ ಮಾಡಿ.  ಹಗುರವಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರ ತಿನ್ನಿ. ಸ್ವಲ್ಪ ಪ್ರಮಾಣದಲ್ಲಿ ಸ್ನ್ಯಾಕ್ಸ್ ಸೇವನೆ ಮಾಡಿ.  ಮಸಾಲೆಯುಕ್ತ ಆಹಾರದ ಪ್ರಮಾಣ ಅತಿ ಕಡಿಮೆಯಿರಲಿ.  

ಸ್ನ್ಯಾಕ್ಸ್ ಸೇವನೆಗೆ ಒಳ್ಳೆಯ ಸಮಯ : ನೀವು ಬೆಳಿಗ್ಗೆ ಹತ್ತು ಗಂಟೆ ಮೂವತ್ತು ನಿಮಿಷದಿಂದ ಹನ್ನೊಂದುವರೆ ತನಕ ಸ್ನ್ಯಾಕ್ಸ್ ಸೇವನೆ ಮಾಡಬಹುದು. ಸಂಜೆ ಸಮಯದಲ್ಲಿ ಲಘು ಉಪಾಹಾರ ಸೇವಿಸುತ್ತಿದ್ದರೆ, ಸಂಜೆ 4 ರಿಂದ 5 ಗಂಟೆ ಬೆಸ್ಟ್ ಟೈಂ. ಈ ಸಮಯದಲ್ಲಿ   ಹಸಿವು ಹೆಚ್ಚಾಗುತ್ತದೆ. ಎಲ್ಲರಿಗೂ ಇದೇ ಸಮಯದಲ್ಲಿ ಹಸಿವಾಗಬೇಕೆಂದೇನಿಲ್ಲ. ನಿಮ್ಮ ದೇಹ ಪ್ರಕೃತಿ ತಿಳಿದು ನೀವು ಆರೋಗ್ಯಕರ ಆಹಾರ ಸೇವನೆ ಮಾಡಿ.   

ಬಾಡಿ ಬಿಲ್ಡ್ ಮಾಡಲು ಸಸ್ಯಾಹಾರದೊಂದಿಗೆ…. ಈ ನಾನ್ ವೆಜ್ ಸೇವಿಸಿ

ಊಟವಿರಲಿ ಇಲ್ಲ ಸ್ನ್ಯಾಕ್ಸ್ ಇರಲಿ ಯಾವುದೇ ಆಹಾರ ಸೇವನೆ ಮಾಡಿದ ತಕ್ಷಣ ನಾವು ಮಲಗಬಾರದು. ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುವುದು ಮುಖ್ಯವಾಗುತ್ತದೆ. ಇದಲ್ಲದೆ ಹಸಿವಾದಾಗ ಮಾತ್ರ ಸ್ನ್ಯಾಕ್ಸ್ ಸೇವನೆ ಮಾಡಬೇಕು. ಬಾಯಿ ರುಚಿಗೆ ಆಹಾರ ತಿನ್ನುತ್ತಿದ್ದರೆ ತೂಕ ನಿಯಂತ್ರಣ ಅಸಾಧ್ಯವಾಗುತ್ತದೆ ಎಂಬುದನ್ನು ನೆನಪಿಡಿ. 
 

click me!