ರಸ್ತೆ ಬದಿಗೆ ಚಿಕ್ಕದೊಂದು ಗೂಡಿನಲ್ಲಿ ಚಹಾ ಮಾರುವುದನ್ನು ಕಂಡಿದ್ದೇವೆ. ಆಟೊ, ರಿಕ್ಷಾ, ಓಮ್ನಿಗಳಲ್ಲಿ ಚಹಾ ಮಾರಾಟ ಮಾಡುವುದು ಸಹ ಕಂಡುಬರುತ್ತದೆ. ಆದರೆ, ಆಡಿ ಕಾರಿನಲ್ಲಿ ಬಂದು ಚಹಾ ಮಾರಾಟ ಮಾಡುವವರು ಸಹ ಮುಂಬೈನಲ್ಲಿದ್ದಾರೆ.
ರಸ್ತೆ ಬದಿಯ ಗೂಡಂಗಡಿಗಳಲ್ಲಿ ಚಹಾ ರುಚಿಯಾಗಿರುತ್ತದೆ ಎನ್ನುವುದು ಬಲ್ಲವರ ಮಾತು. ಅವುಗಳಲ್ಲಿ ಕೆಲವು ನೋಡಲಷ್ಟೇ ಸಣ್ಣದೊಂದು ಟೀ ಸ್ಟಾಲ್ಸ್, ಆದರೆ ಅಲ್ಲಿ ಸಾಕಷ್ಟು ವೆರೈಟಿಯ ಚಹಾ ಸಿಗುತ್ತವೆ. ಅಷ್ಟೇ ಅಲ್ಲ, ಇತ್ತೀಚಿನ ದಿನಗಳಲ್ಲಿ ಉತ್ತಮ ಶಿಕ್ಷಣ ಪಡೆದವರೂ ಚಹಾ ಮಾರುವುದರಲ್ಲಿ ಹಿಂದೆ ಬಿದ್ದಿಲ್ಲ. ಅನಿವಾರ್ಯತೆಯೋ, ಉದ್ಯೋಗ ಸಿಗದ ಪರಿಣಾಮವೋ ಅಥವಾ ಆಸಕ್ತಿಯೋ ಗೊತ್ತಿಲ್ಲ. ಅಂತೂ ಎಂಬಿಎ ಮುಗಿಸಿದವರು, ಬಿಟೆಕ್ ಮಾಡಿದವರು ಸಹ ಇಂದಿನ ದಿನಗಳಲ್ಲಿ ಚಹಾ ಮಾರುತ್ತಿದ್ದಾರೆ. ಚಹಾ ಮಾರಾಟ ಕೂಡ ಒಂದು ಗೌರವಾನ್ವಿತ ವೃತ್ತಿಯಾಗಿ ಮಾರ್ಪಟ್ಟಿದೆ. ಸಾಮಾನ್ಯವಾಗಿ ರಸ್ತೆ ಬದಿಯಲ್ಲಿ ಟೀ ಅಂಗಡಿ ಎಂದರೆ ನಮಗೊಂದು ಸ್ವರೂಪ ಕಣ್ಣಿಗೆ ಕಟ್ಟುತ್ತದೆ. ಅಲ್ಲೊಂದು ಸಣ್ಣದಾದ ಸ್ಥಳ ಇರಬಹುದು, ಇಲ್ಲವೇ ಸಣ್ಣದಾದ ಯಾವುದಾದರೊಂದು ವಾಹನದ ಮೂಲಕ ಚಹಾ ಮಾರಬಹುದು ಎಂದು. ಆದರೆ, ನೀವು ಮುಂಬೈನ ಲೋಖಂಡ್ ವಾಲಾ ಹಿಂಭಾಗದ ರಸ್ತೆಗೆ ಹೋದರೆ ಅಲ್ಲೊಂದು ಅಚ್ಚರಿ ಕಾಣುತ್ತೀರಿ. ಸ್ಟೈಲಿಷ್ ಆದ ಇಬ್ಬರು ಯುವಕರು ಐಷಾರಾಮಿ ಆಡಿ ಕಾರಿನಲ್ಲಿ ಚಹಾ ಮಾರುವುದು ಅಲ್ಲಿನ ನಿತ್ಯ ನೋಟವಾಗಿದೆ. ಆಡಿ ಕಾರಿನ ಚಾಯ್ ವಾಲಾ ಇದೀಗ ಅಂತರ್ಜಾಲದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ.
ಆನ್ ಡ್ರೈವ್ ಟೀ (On Drive Tea)
ಮುಂಬೈನ ಅಮಿತ್ ಕಶ್ಯಪ್ (Amit Kashyap) ಮತ್ತು ಮನ್ನು ಶರ್ಮಾ (Mannu Sharma) ಎಂಬುವರು ಆಡಿ (Audi) ಕಾರಿನಲ್ಲಿ (Car) ಚಹಾದ ಸ್ಟಾಲ್ (Tea Stall) ಸ್ಥಾಪನೆ ಮಾಡಿದ್ದಾರೆ. ಹೈ ಎಂಡ್ ಲಕ್ಸುರಿ ಕಾರಿನಲ್ಲಿ ಚಹಾ ಮಾರುವುದರ ಬಗ್ಗೆ ಅಂತರ್ಜಾಲದಲ್ಲಿ (Internet) ಸಾಕಷ್ಟು ಸುದ್ದಿಯಾಗುತ್ತಿದೆ. ಪ್ರತಿದಿನ ಇಬ್ಬರೂ ಆಡಿ ಕಾರಿನಲ್ಲಿ ತಮ್ಮ ನಿಗದಿತ ಸ್ಥಳಕ್ಕೆ ಬಂದು ಕಾರಿನ ಹಿಂಭಾಗದ ಡೋರ್ ಓಪನ್ ಮಾಡಿ ತಮ್ಮ ಟೀ ಸ್ಟಾಲ್ ಆರಂಭಿಸುತ್ತಾರೆ. ಅವರ ಟೀ ಅಂಗಡಿ ಹೆಸರು “ಆನ್ ಡ್ರೈವ್ ಟೀʼ.
Viral Video: ನಡೆಯಲಾಗದ ತಾಯಿಯನ್ನು ಮಗುವಂತೆ ಎತ್ತಿಕೊಂಡು ಸುತ್ತಾಡಲು ಕರೆದೊಯ್ದ ಮಗ
ಈ ಕುರಿತು ಅವರು ಶೇರ್ ಮಾಡಿರುವ ವಿಡಿಯೋ (Video) ಈಗ ಸಾಕಷ್ಟು ವೈರಲ್ ಆಗಿದೆ. ಪ್ರಮುಖ ರಸ್ತೆಯಲ್ಲಿ ಹೋಗಿ ಬಂದು ಮಾಡುವವರೆಲ್ಲರೂ ಇವರ ಚಹಾ ಸವಿಯುತ್ತಿದ್ದು, ಸಾಕಷ್ಟು ಜನಪ್ರಿಯತೆ ಗಳಿಸಿದೆ. ಎಲ್ಲರೂ ಮೆಚ್ಚುಗೆಯ ಮಾತನಾಡುವುದು ಸಹ ವಿಡಿಯೋದಲ್ಲಿದೆ. ಈ ಪೋಸ್ಟ್ ಸಾವಿರಾರು ಜನರ ವೀಕ್ಷಣೆ (View) ಗಳಿಸಿದೆ. ಇನ್ ಸ್ಟಾಗ್ರಾಮ್ ನಲ್ಲಿ “ಆನ್ ಡ್ರೈವ್ ಟೀʼ ಸ್ಟಾಲಿನ ಖಾತೆಯೂ ಇದೆ. ಅಮಿತ್ ಕಶ್ಯಪ್ ಮತ್ತು ಮನ್ನು ಶರ್ಮಾ ತಮ್ಮ ಗ್ರಾಹಕರು ನೀಡಿದ ಅಭಿಪ್ರಾಯಗಳನ್ನು ನಿಯಮಿತವಾಗಿ ಶೇರ್ (Share) ಮಾಡುತ್ತಾರೆ.
ಆಡಿ ಕಾರಿನಲ್ಲಿ ಚಹಾ ಮಾರಾಟ (Sell) ಮಾಡುವ ಬಗ್ಗೆ ಹಲವರು ಸಾಕಷ್ಟು ಟೀಕೆ ಮಾಡಿದ್ದಾರೆ, ಬಹಳಷ್ಟು ಜನ ಕುತೂಹಲ ವ್ಯಕ್ತಪಡಿಸಿದ್ದಾರೆ. ಇನ್ನು ಹಲವರು ತಮಾಷೆಯಾಗಿ ಮಾತನಾಡಿದ್ದಾರೆ. “ಯಾವುದೇ ಕೆಲಸ ದೊಡ್ಡದು ಅಥವಾ ಸಣ್ಣದು ಎಂದೇನಿಲ್ಲ. ಶ್ರದ್ಧೆಯಿಂದ, ಪ್ರೀತಿಯಿಂದ (Love) ಕೆಲಸ (Work) ಮಾಡಿದರೆ ಒಂದು ದಿನ ಯಶಸ್ಸು ಗ್ಯಾರೆಂಟಿʼ ಎಂದು ಒಬ್ಬರು ಹೇಳಿದ್ದರೆ, ಮತ್ತೊಬ್ಬರು “ಆಡಿ ಕಂಪೆನಿಯ ಮಾಲೀಕರು (Owner) ತಮ್ಮ ಕಾರು ತಪ್ಪು ಕಾರ್ಯಕ್ಕೆ ಬಳಕೆಯಾಗುತ್ತಿದೆ ಎಂದು ಬೇಸರ ಮಾಡಿಕೊಳ್ಳಬಹುದುʼ ಎಂದು ಹೇಳಿದ್ದಾರೆ.
ಕೊಹ್ಲಿಯನ್ನು ಅನುಕರಿಸಿದ ಪತ್ನಿ ಅನುಷ್ಕಾ ಶರ್ಮಾ: ವಿಡಿಯೋಗೆ ಫ್ಯಾನ್ಸ್ ಫಿದಾ
ತಮಾಷೆ, ಲೇವಡಿ (Tease)
ಯಾರೋ ಒಬ್ಬರು “ಚಹಾ ಮಾರಾಟ ಮಾಡಿ ಆಡಿ ಖರೀದಿಸಿದರೋ ಅಥವಾ ಆಡಿ ಖರೀದಿ ಮಾಡಿದ ಬಳಿಕ ಚಹಾ ಮಾರುವ ಪರಿಸ್ಥಿತಿ ಬಂದಿತೋ ತಿಳಿಯುತ್ತಿಲ್ಲʼ ಎಂದು ಲೇವಡಿ ಮಾಡಿದ್ದಾರೆ. ಒಬ್ಬಾತ, “ಚಹಾ ಮಾರಾಟ ಮಾಡಿ ಪ್ರಧಾನಿ ಆಗಲು ಯತ್ನಿಸುತ್ತಿದ್ದಾರೆ ಎಂದು ಎಲ್ಲರಿಗೂ ಅನಿಸುತ್ತಿದೆ. ರಾತ್ರಿ ಹತ್ತರ ಚಹಾಕ್ಕಾಗಿ ಆಡಿʼ ಎಂದು ತಮಾಷೆ ಮಾಡಿದ್ದಾರೆ. “ಬಡವರು (Poor) ಗಳಿಸುವುದಕ್ಕಾಗಿ ಏನಾದರೂ ಕೆಲಸ ಬಿಡಿ. ಓದುಬರಹ ಬಲ್ಲವರು ಬಡವರ ಕೆಲಸವನ್ನು ಕಸಿದುಕೊಳ್ಳುತ್ತಿದ್ದಾರೆʼ ಎಂದು ರಾಜಕೀಯ ಮಾಡಿದವರೂ ಇದ್ದಾರೆ.