ರೆಸ್ಟೋರೆಂಟ್‌ನಲ್ಲಿ ಆಹಾರ ಸರ್ವ್ ಮಾಡೋ ಬುಲೆಟ್ ಟ್ರೈನ್‌: ವಿಡಿಯೋ ನೋಡಿ

Published : May 17, 2022, 11:31 AM IST
ರೆಸ್ಟೋರೆಂಟ್‌ನಲ್ಲಿ ಆಹಾರ ಸರ್ವ್ ಮಾಡೋ ಬುಲೆಟ್ ಟ್ರೈನ್‌: ವಿಡಿಯೋ ನೋಡಿ

ಸಾರಾಂಶ

ಈ ಹೊಟೇಲ್‌ನಲ್ಲಿ ಸರ್ವರ್ ಇಲ್ಲ  ಮೇಜಿನ ಮೇಲೆ ಓಡುತ್ತೆ ಬುಲೆಟ್ ಟ್ರೈನ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಇಂದು ಹೊಟೇಲ್ ಸಂಸ್ಕೃತಿ ಹೊಟೇಲ್‌ ಅತಿಥ್ಯದಲ್ಲಿ ತುಂಬಾ ಬದಲಾವಣೆ ಆಗಿದೆ. ಅಡುಗೆ ಮಾಡುವುದು ತರಕಾರಿ ಕತ್ತರಿಸುವುದು ಎಲ್ಲದ್ದಕ್ಕೂ ಇಂದು ಯಂತ್ರಗಳಿವೆ. ಕೆಲವು ಹೊಟೇಲ್‌ಗಳಲ್ಲಿ ಭೋಜನವನ್ನು ಗ್ರಾಹಕರಿಗೆ ಪೂರೈಸಲು ರೊಬೊಟ್‌ಗಳನ್ನು ಬಳಸಿದ್ದನ್ನು ನೀವು ಈಗಾಗಲೇ ಕೇಳಿರಬಹುದು. ಆದರೆ ಇಲ್ಲೊಂದು ಕಡೆ ಹೊಟೇಲ್‌ನಲ್ಲಿ ಬುಲೆಟ್‌ ಟ್ರೈನ್‌ ಆಹಾರ ಪೂರೈಸುತ್ತದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಮೇಜಿನ ಮೇಲೆ ರೊಯ್ಯಂನೇ ಬರುವ ಬುಲೆಟ್ ಟ್ರೈನ್ ನೀವು ಆರ್ಡರ್ ಮಾಡಿದ ಆಹಾರವನ್ನು ನಿಮಗೆ ನೀಡುವುದು.

ರೆಸ್ಟೋರೆಂಟೊಂದರಲ್ಲಿ ದೊಡ್ಡದಾದ ಟೇಬಲ್‌  ಸುತ್ತಲೂ ಗ್ರಾಹಕರು ಕುಳಿತಿರುವುದನ್ನು ವೀಡಿಯೊ ತೋರಿಸುತ್ತದೆ. ಮೇಜಿನ ಮೇಲ್ಭಾಗದಲ್ಲಿ ರೈಲು ಚಲಿಸಲು ಟ್ರ್ಯಾಕ್ ಇದೆ. ಮೇಜಿನ ಮೇಲಿರುವ ಟ್ರ್ಯಾಕ್ ಮೇಲೆ ಬರುವ ರೈಲು ನಿಮಗೆ ಆಹಾರ ನೀಡಿ ಮುಂದೆ ಸಾಗುವುದು. ಈ ಮೈಕ್ರೊ ಬುಲೆಟ್ ರೈಲು ಹೇಗೆ ಚಲಿಸುತ್ತದೆ ಮತ್ತು ಗ್ರಾಹಕರಿಗೆ ಅವರ ಕುಳಿತ ಜಾಗಕ್ಕೆ ಹೋಗಿ ಹೇಗೆ ಅವರ ಆರ್ಡರ್‌ನ್ನು ತಲುಪಿಸುತ್ತದೆ ಎಂಬುದನ್ನು Instagram ನಲ್ಲಿ ವೀಡಿಯೊ ತೋರಿಸುತ್ತದೆ.

 

ರೆಸ್ಟೋರೆಂಟ್‌ನಲ್ಲಿ ದೊಡ್ಡ  ಮೇಜಿನ ಸುತ್ತಲೂ ಗ್ರಾಹಕರು ಕುಳಿತಿರುವುದನ್ನು ವೀಡಿಯೊ ತೋರಿಸುತ್ತದೆ. ಮೇಜಿನ ಮೇಲ್ಭಾಗದಲ್ಲಿ ಈಗಾಗಲೇ ರೈಲಿಗಾಗಿ ಟ್ರ್ಯಾಕ್ ಹಾಕಲಾಗಿದೆ. ರೈಲಿನ ಕ್ಯಾರಿಯರ್‌ನಿಂದ ಎದ್ದು ತಮ್ಮ ಆರ್ಡರ್ ಅನ್ನು ತೆಗೆದುಕೊಳ್ಳುವ ಗ್ರಾಹಕರ ಮುಂದೆ ಮೈಕ್ರೋ ಬುಲೆಟ್ ರೈಲು ಓಡುವುದನ್ನು ಮತ್ತು ರೈಲು ನಿಲ್ಲುವುದನ್ನು ನಾವು ನೋಡುತ್ತೇವೆ. ಪ್ಲೇಟ್ ಲೋಡ್ ಆಗಿದೆ ಎಂದು ರೈಲು ಗ್ರಹಿಸುತ್ತಿದ್ದಂತೆ, ಅದು ಮುಂದೆ ಚಲಿಸಲು ಪ್ರಾರಂಭಿಸುತ್ತದೆ ಮತ್ತು ಯು-ಟರ್ನ್ ಮಾಡಿ ಹಿಂದಕ್ಕೆ ತೆಗೆದುಕೊಳ್ಳುತ್ತದೆ.

Horror Restaurant: ಇಲ್ಲಿ ದೆವ್ವಗಳೇ ಊಟ ಬಡಿಸುತ್ತವೆ, ಬೆಚ್ಚಿ ಬೀಳಿಸುತ್ತವೆ..

ಈ ಡಬ್ಬಲ್ ಡೆಕ್ಕರ್ ಟೇಬಲ್ ಮೇಲೆ ಟ್ರ್ಯಾಕ್ ಇದ್ದರೆ ಕೆಳಗೆ ಕೆಳ ಹಂತದಲ್ಲಿ ಆಹಾರವನ್ನು ಇರಿಸಿಕೊಂಡು ತಿನ್ನುವಂತಹ ಟೇಬಲ್ ಇದೆ. ಬುಲೆಟ್ ಟ್ರೈನ್ ಆಕಾರದ ಯಂತ್ರ ಫುಡ್ ಆರ್ಡರ್ ನೀಡುತ್ತಿರುವುದು ಕಣ್ಣಿಗೆ ಕಟ್ಟುವಂತಿದೆ. ಈ ವಿಡಿಯೋವನ್ನು 70 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಇದನ್ನು 68 ಸಾವಿರಕ್ಕೂ ಹೆಚ್ಚು ಜನ ಇಷ್ಟ ಪಟ್ಟಿದ್ದು ನೂರಾರು ಜನ ಕಾಮೆಂಟ್ ಮಾಡಿದ್ದಾರೆ. 

ಒಬ್ಬ ಬಳಕೆದಾರ 'ಪ್ರಾಮಾಣಿಕವಾಗಿ ಹೇಳುವುದಾದರೆ, ಈ ಮಟ್ಟದ ಯಾಂತ್ರೀಕರಣವು ನನ್ನನ್ನು ಕಾಡುತ್ತಿದೆ. ಒಬ್ಬ ವ್ಯಕ್ತಿ ಸೇವೆ ನೀಡುವುದು ಹೆಚ್ಚು ಉತ್ತಮವಾಗಿದೆ' ಎಂದು ಬರೆದರೆ, ಇನ್ನೊಬ್ಬ ಬಳಕೆದಾರ 'ವಾವ್ ಅದ್ಭುತ ರೆಸ್ಟೋರೆಂಟ್' ಎಂದು ಬರೆದಿದ್ದಾರೆ. ಇದು ಜನರ ಉದ್ಯೋಗಗಳನ್ನು ಕೊಲ್ಲುತ್ತದೆ ಆದರೆ ಅದೇ ಸಮಯದಲ್ಲಿ ನನ್ನ ಆಹಾರವನ್ನು ಸ್ವಲ್ಪ ರೈಲಿನ ಮೂಲಕ ನನಗೆ ಬಡಿಸುವ ಆಲೋಚನೆ ಚೆನ್ನಾಗಿದೆ ಎಂದು ಮಗದೊಬ್ಬ ಕಾಮೆಂಟ್ ಮಾಡಿದ್ದಾರೆ.

Hubballi| ಭಾರತ ಜಾಗತಿಕ ಆಹಾರ ಪೂರೈಕೆ ಕೇಂದ್ರವಾಗಲಿದೆ: ಕೇಂದ್ರ ಸಚಿವ ಗೋಯಲ್‌
 

ನಮ್ಮ ರಾಜ್ಯದ ಶಿವಮೊಗ್ಗದಲ್ಲಿ ಹೋಟೆಲ್  ಒಂದು ಸಪ್ಲೈಯರ್‌ ಆಗಿ ರೊಬೋಟ್‌ ಅನ್ನು ನೇಮಿಸಿಕೊಂಡ ಸುದ್ದಿ ಇತ್ತೀಚೆಗೆ ವರದಿ ಆಗಿತ್ತು. ಶಿವಮೊಗ್ಗದ ಪೊಲೀಸ್ ಸರ್ಕಲ್‌ನ ಉಪಾಹಾರ ದರ್ಶಿನಿಯಲ್ಲಿ ಈ ರೊಬೋಟ್‌ ಸರ್ವರ್ ಗ್ರಾಹಕರಿಗೆ ಸೇವೆ ನೀಡುತ್ತಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂತಹ ಪ್ರಯೋಗ ಆರಂಭವಾಗಿದೆ. ಈ ಹೊಟೇಲ್‌ನ ಮಾಲೀಕರು ಆಂಧ್ರಪ್ರದೇಶದ ವಿಜಯವಾಡದಿಂದ ಈ ರೊಬೋಟ್‌ನ್ನು ತರಿಸಿದ್ದರು.  
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ
ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?