ಭಾರತದಲ್ಲಿ ಬ್ರೌನ್ ಬ್ರೆಡ್ ಒಂದು ಬಿಗ್ ಜೋಕ್, ಆರೋಗ್ಯ ಸುಧಾರಿಸೋ ಬದಲು ಹಾಳಾಗುತ್ತೆ ಎಚ್ಚರ!

By Roopa Hegde  |  First Published Jun 10, 2024, 1:31 PM IST

ಬ್ರೌನ್ ಬ್ರೆಡ್ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ನಂಬಿಕೆ ನಮ್ಮಲ್ಲಿದೆ. ಆದ್ರೆ ಇದು ನಮ್ಮ ಆರೋಗ್ಯ ಸುಧಾರಿಸೋ ಬದಲು ಹಾಳು ಮಾಡ್ತಿದೆ. ಇದ್ರಲ್ಲಿ ಸಕ್ಕರೆ, ಕ್ಯಾಲೋರಿ ಹೆಚ್ಚಿರೋ ಕಾರಣ ತಿನ್ನೋವಾಗ ಎಚ್ಚರ. 
 


ಬ್ರೆಡ್, ತಿನ್ಬೇಡಿ, ಆರೋಗ್ಯಕ್ಕೆ ಹಾಳು ಅಂತಾ ನೀವು ಯಾರ ಮುಂದೆಯಾದ್ರೂ ಹೇಳಿದ್ರೆ ಆ ಕಡೆಯಿಂದ ಟಕ್ ಅಂತ ಒಂದು ಉತ್ತರ ಬರುತ್ತೆ. ನಾವೀಚೆಗೆ ಬಿಳಿ ಬ್ರೆಡ್ ತಿನ್ನೋದೇ ಇಲ್ಲ. ಏನಿದ್ರೂ ಬ್ರೌನ್ ಬ್ರೆಡ್. ಅದನ್ನು ಗೋಧಿಯಿಂದ ಮಾಡಿರ್ತಾರಲ್ಲ…ಸೋ ಅದು ಆರೋಗ್ಯಕ್ಕೆ ಒಳ್ಳೆಯದು. ಮೈದಾ ಬ್ರೆಡ್ ಸೇವನೆ ಮಾಡಿದ್ರೆ ಆರೋಗ್ಯ ಕೆಡುತ್ತೆ.. ಓ ಹೌದಾ ಅಂತ ತಲೆಯಲ್ಲಾಡಿಸಿ, ನಾಳೆಯಿಂದ ನೀವೂ ಬ್ರೌನ್ ಬ್ರೆಡ್ ಆರ್ಡರ್ ಮಾಡೋಕೆ ಹೋದ್ರೆ ದಾರಿ ತಪ್ಪಿದಂತೆ. ಈಗ ಜನರು ಆರೋಗ್ಯಕ್ಕೆ ಹೆಚ್ಚು ಗಮನ ಹರಿಸ್ತಿರೋ ಕಾರಣ, ಆರೋಗ್ಯಕ ಆಹಾರ ಸೇವನೆ ಮಾಡುವ ನಿರ್ಧಾರಕ್ಕೆ ಬರ್ತಿದ್ದಾರೆ. ಆದ್ರೆ ಅವರು ಆರೋಗ್ಯಕ್ಕೆ ಒಳ್ಳೆಯದು ಎಂದ್ಕೊಂಡಿರುವ ಆಹಾರವೇ ಆರೋಗ್ಯ ಹಾಳು ಮಾಡ್ತಿದೆ ಎಂಬುದು ಅವರಿಗೆ ತಿಳಿಯುತ್ತಿಲ್ಲ.  

ಬ್ರೌನ್ ಬ್ರೆಡ್ (Brown Bread), ಬ್ರೌನ್ ಬ್ರೆಡ್ ಸ್ಯಾಂಡ್ವಿಜ್ ಸೇವನೆ ಮಾಡೋರು ನೀವೂ ಆಗಿದ್ರೆ ಇಂದೇ ಅದ್ರಿಂದ ದೂರ ಸರಿಯೋದು ಬೆಸ್ಟ್. ನೀವು ಸೇವನೆ ಮಾಡುವ ಮೈದಾ (Maida) ಬೆರೆಸಿದ ಬಿಳಿ ಬ್ರೆಡ್ ಗಿಂತ ಬ್ರೌನ್ ಬ್ರೆಡ್ ಅಪಾಯಕಾರಿ. ನೀವು ಅಂದಕೊಂಡಂತೆ ಅದನ್ನು ಬರೀ ಗೋಧಿಯಿಂದ ತಯಾರಿಸೋಕೆ ಸಾಧ್ಯವೇ ಇಲ್ಲ. ಮೈದಾ, ಸಕ್ಕರೆ (Sugar) ಈ ಬ್ರೆಡ್ ನಲ್ಲಿರುತ್ತೆ ಅಂದ್ರೆ ನೀವು ನಂಬ್ಲೇಬೇಕು. 

Tap to resize

Latest Videos

undefined

ಅತಿ ಹೆಚ್ಚು ಜೀವಿತಾವಧಿ ಹೊಂದಿರುವ ಜಪಾನಿಗರು ಹೊಟ್ಟೆಗೇನ್ ತಿಂತಾರೆ?

ಬಿಳಿ ಬ್ರೆಡ್ ಗಿಂತ ಬ್ರೌನ್ ಬ್ರೆಡ್ ಅಪಾಯಕಾರಿ : ಬ್ರೌನ್ ಬ್ರೆಡ್, ಮೈದಾದಿಂದ ಮಾಡಿದ ಬ್ರೆಡ್ ಗಿಂತ ಹೆಚ್ಚು ಸಕ್ಕರೆ ಅಂಶವನ್ನು ಹೊಂದಿರುತ್ತದೆ. ಯುಎಸ್ಡಿಎ ಪ್ರಕಾರ, ಜೆನೆರಿಕ್ ಬ್ರೌನ್ ಬ್ರೆಡ್ ನ ಒಂದು ಸ್ಲೈಸ್ 3 ಗ್ರಾಂ ಸಕ್ಕರೆಯನ್ನು ಹೊಂದಿರುತ್ತದೆ. ಅದೇ ಬಿಳಿ ಬ್ರೆಡ್ ನ ಒಂದು ಸ್ಲೈಸ್ 1. 64 ಗ್ರಾಂ ಸಕ್ಕರೆಯನ್ನು ಹೊಂದಿರುತ್ತದೆ.

ಕ್ಯಾಲೋರಿ ವಿಷ್ಯದಲ್ಲೂ ಬ್ರೌನ್ ಬ್ರೆಡ್ (Brown Bread) ಮೊದಲ ಸ್ಥಾನದಲ್ಲಿದೆ. ಬ್ರೌನ್ ಬ್ರೆಡ್ ನ  ಪ್ರತಿ ಸ್ಲೈಸ್‌ ನಲ್ಲಿ 110 ಕ್ಯಾಲೋರಿ ಇದ್ರೆ ಬಿಳಿ ಬ್ರೆಡ್ ನಲ್ಲಿ 77 ಕ್ಯಾಲೋರಿ ಇರುತ್ತೆ. ಬ್ರೌನ್ ಬ್ರೆಡನ್ನು ಸಾಮಾನ್ಯವಾಗಿ ಸಂಸ್ಕರಿಸಿದ ಮೈದಾ ಮತ್ತು ಗೋಧಿ ಹಿಟ್ಟಿನ ಮಿಶ್ರಣದಿಂದ ತಯಾರಿಸಲಾಗುತ್ತದೆ. ಎಣ್ಣೆಗಳೊಂದಿಗೆ ಬಣ್ಣಕ್ಕಾಗಿ ಕ್ಯಾರಮೆಲ್ ನಂತಹ ಪದಾರ್ಥಗಳನ್ನು ಇದಕ್ಕೆ ಸೇರಿಸಲಾಗುತ್ತದೆ. ಬ್ರೌನ್ ಬಣ್ಣದಲ್ಲಿ ಬ್ರೆಡ್ ಇದೆ ಎಂದ ಮಾತ್ರಕ್ಕೆ ಅದು ಸ್ವಯಂಚಾಲಿತವಾಗಿ ಬಂದಿದ್ದಲ್ಲ. ಅದಕ್ಕೆ ಬಣ್ಣ ಬೆರೆಸಲಾಗುತ್ತದೆ. ಹಾಗಾಗಿ ಹೆಚ್ಚು ಗಾಢ ಬಣ್ಣ ಹೊಂದಿರುವ ಬ್ರೆಡ್ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದಲ್ಲ. ನೀವು ಈ ನಂಬಿಕೆಯಲ್ಲಿ ಬ್ರೆಡ್ ಖರೀದಿ ಮಾಡಿದ್ರೆ ಇದು ನಿಮ್ಮ ಆರೋಗ್ಯವನ್ನು ಹದಗೆಡಿಸಬಹುದು. 

ಭಾರತದಲ್ಲಿ ನಿಮಗೆ ಎರಡು ರೀತಿಯ ಬ್ರೆಡ್ ಸಿಗುತ್ತೆ. ಒಂದು ಸಂಪೂರ್ಣ ಮೈದಾದಿಂದ ಮಾಡಿದ ಅನಾರೋಗ್ಯಕರ ಬ್ರೆಡ್. ಇನ್ನೊಂದು ಗೋಧಿ, ಮೈದಾ, ಧಾನ್ಯಗಳನ್ನು ಬೆರೆಸಿ ಮಾಡಿದ, ಆರೋಗ್ಯಕರ ಎಂದು ಹಣೆಪಟ್ಟಿಹೊತ್ತಿರುವ ಬ್ರೆಡ್. ಬಿಳಿ ಬ್ರೆಡ್ ನಂತೆಯೇ ಬ್ರೌನ್ ಬ್ರೆಡನ್ನು ಕೂಡ ಕಾರ್ಖಾನೆಯಲ್ಲಿ ತಯಾರಿಸಲಾಗುತ್ತದೆ. ಅನೇಕ ಕಂಪನಿಗಳು ಬಿಳಿ ಬ್ರೆಡ್ ಬಣ್ಣ ಬದಲಿಸಿ ಬ್ರೌನ್ ಬ್ರೆಡ್ ಹೆಸರಿನಲ್ಲಿ ಅದನ್ನು ಮಾರಾಟ ಮಾಡುತ್ತವೆ. 

ಕೇಕ್ ವಿಥ್ ಐಸ್‌ಕ್ರೀಮ್, ಕುಕಿಂಗ್ ಟಿಪ್ಸ್ ನೀಡಿದ ಪೂನಂ ಪಾಂಡೆ ಏಪ್ರನ್ ಮೇಲೆ ಎಲ್ಲ ಕಣ್ಣು!

ಬೇರೆ ಬೇರೆ ಕಂಪನಿಗಳು ಬ್ರೆಡ್ ತಯಾರಿಸುವ ವಿಧಾನ ಭಿನ್ನ. ಹಾಗಾಗಿ ನೀವು ಯಾವ ಬ್ರೆಡ್ಡನ್ನು ಶುದ್ಧ ಗೋಧಿಯಿಂದ ತಯಾರಿಸಲಾಗಿದೆ ಎಂಬುದನ್ನು ಪತ್ತೆ ಮಾಡೋದು ಕಷ್ಟ. ಇದ್ರ ಬದಲು ಮನೆಯಲ್ಲಿಯೇ ಬ್ರೆಡ್ ತಯಾರಿಸಿ ತಿನ್ನೋದು ಉತ್ತಮ ಮಾರ್ಗ. ಇದು ಎಲ್ಲರಿಗೂ ಸಾಧ್ಯವಿಲ್ಲ. ಅಂಥ ಸಂದರ್ಭದಲ್ಲಿ ಬ್ರೆಡ್ ಖರೀದಿಸುವ ಮೊದಲು ಲೇಬಲ್ ಓದಿ. ಪೋಶಕಾಂಶ ಹೆಚ್ಚಿರುವ ಬ್ರೆಡ್ ಆಯ್ಕೆ ಮಾಡಿಕೊಳ್ಳಿ. 

click me!