FSSAI ಹೊಸ ನಿಯಮ ಜಾರಿಗೆ ತಂದಿದೆ. ಇದ್ರಿಂದ ಕೆಲ ಜ್ಯೂಸ್ ಕಂಪನಿಗಳಿಗೆ ಹೊಡೆತ ಬಿದ್ದಿದೆ. ಶೇಕಡಾ 100 ರಷ್ಟು ಹಣ್ಣಿನ ರಸ, ಸಕ್ಕರೆ ಪ್ರಮಾಣ ಎಲ್ಲದರ ಮೇಲೂ ನಿಯಮ ಅನ್ವಯವಾಗಲಿದೆ.
ಜ್ಯೂಸ್ ಆರೋಗ್ಯಕ್ಕೆ (Healthy Juice) ಒಳ್ಳೆಯದು. ಪ್ರತಿ ದಿನ ಜ್ಯೂಸ್ ಸೇವನೆ ಮಾಡುವಂತೆ ವೈದ್ಯರು ಸಲಹೆ ನೀಡ್ತಾರೆ. ಫ್ರೆಶ್ ಜ್ಯೂಸ್ ಸೇವನೆ ಮಾಡೋದ್ರಿಂದ ಸಾಕಷ್ಟು ಲಾಭವಿದೆ. ಪ್ರತಿ ದಿನ ಮನೆಯಲ್ಲಿ ಜ್ಯೂಸ್ ತಯಾರಿಸೋದು ಕಷ್ಟ. ಒತ್ತಡ ಜೀವನಶೈಲಿಯಲ್ಲಿ (Stressed Lifestyled) ಅಡುಗೆ ಮಾಡೋದೆ ಕಷ್ಟ, ಇನ್ನು ಜ್ಯೂಸ್ ಮಾಡ್ತಾ ಕುಳಿತ್ರೆ ಟೈಂ ಸಾಲೋದಿಲ್ಲ ಎನ್ನುವ ಜನರು ರೆಡಿಮೆಡ್ ಜ್ಯೂಸ್ ತಂದು ಮನೆಯಲ್ಲಿಡುತ್ತಾರೆ. ಮಾರುಕಟ್ಟೆಯಲ್ಲಿ ಸಾಕಷ್ಟು ಹಣ್ಣಿನ ಜ್ಯೂಸ್‌ಗಳನ್ನು ನೀವು ನೋಡ್ಬಹುದು. ಜ್ಯೂಸ್ ಕವರ್ ಮೇಲೆ ಶೇಕಡಾ 100ರಷ್ಟು ನೈಸರ್ಗಿಕ, ಸಕ್ಕರೆ ಪ್ರಮಾಣ ಕಡಿಮೆ ಇದೆ ಎಂದೆಲ್ಲ ಬರೆದಿರಲಾಗಿರುತ್ತದೆ. ಅದನ್ನು ನಂಬುವ ಜನರು ತಮ್ಮ ಮನೆ ಫ್ರಿಜ್ ಗೆ ಈ ಸಂಸ್ಕರಿಸಿದ ಜ್ಯೂಸ್ ಸೇರಿಸ್ತಾರೆ. ಆದ್ರೆ ಈ ಜ್ಯೂಸ್ ಗಳು ನೂರಕ್ಕೆ ನೂರು ಹಣ್ಣಿನ ರಸವನ್ನು ಹೊಂದಿರೋದಿಲ್ಲ. ಜನರಿಗೆ ತಪ್ಪು ಮಾಹಿತಿ ನೀಡುತ್ತಿರುವ ಕಂಪನಿಗಳಿಗೆ ಎಫ್ ಎಸ್ ಎಸ್ ಎಐ ಹೊಸ ಎರಡು ನಿಯಮವನ್ನು ಜಾರಿಗೊಳಿಸಿದೆ. ಎಲ್ಲ ಜ್ಯೂಸ್ ತಯಾರಿಕಾ ಕಂಪನಿಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
FSSAI ಮಾಡಿದ ಹೊಸ ನಿಯಮಗಳು :
• ಶೇಕಡಾ 100ರಷ್ಟು ಹಣ್ಣಿನ ರಸ ಎಂದು ಬರೆಯುವಂತಿಲ್ಲ : ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಎಲ್ಲಾ ಆಹಾರ (food) ವ್ಯಾಪಾರ ನಿರ್ವಾಹಕರಿಗೆ, ಶೇಕಡಾ 100 ಹಣ್ಣಿನ ರಸ (fruit juice) ಎಂದು ಪ್ಯಾಕ್ ಮೇಲೆ ಬರೆಯದಂತೆ ಸೂಚಿಸಿದೆ. ತಮ್ಮ ಉತ್ಪನ್ನಗಳ ಮೇಲಿರುವ ಈ ಮಾಹಿತಿಯನ್ನು ತೆಗೆದು ಹಾಕುವಂತೆ ಸೂಚಿಸಲಾಗಿದೆ. ಶೇಕಡಾ 100ರಷ್ಟು ಹಣ್ಣಿನ ರಸ ಎಂದು ಪಾಕೆಟ್ ಮೇಲೆ ಬರೆಯುವ ಕಂಪನಿಗಳು ಜನರ ದಾರಿ ತಪ್ಪಿಸಲು ಯತ್ನಿಸಿವೆ, ಎಂದು ಎಫ್ ಎಸ್ ಎಸ್ ಎಐ ಕಂಪನಿಗಳನ್ನು ತರಾಟೆಗೆ ತೆಗೆದುಕೊಂಡಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮಗಳು 2018 ರ ಪ್ರಕಾರ, ಶೇಕಡಾ 100ರಷ್ಟು ಕ್ಲೈಮ್ ಮಾಡಲು ಯಾವುದೇ ಅವಕಾಶವಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಹೊಸ ನಿರ್ದೇಶನದ ಅಡಿಯಲ್ಲಿ 2024 ರ ಸೆಪ್ಟೆಂಬರ್ 1 ರ ಮೊದಲು ಅಸ್ತಿತ್ವದಲ್ಲಿರುವ ಎಲ್ಲಾ ಪೂರ್ವ-ಮುದ್ರಿತ ಪ್ಯಾಕೇಜಿಂಗ್ ವಸ್ತುಗಳನ್ನು ಹಂತಹಂತವಾಗಿ ಹೊರಹಾಕಲು ನಿರ್ದೇಶನ ನೀಡಿದೆ.
undefined
ಮೇಕೆ, ಕತ್ತೆ, ಒಂಟೆ ಹಾಲಿನ ಐಸ್ ಕ್ರೀಮ್ ಉತ್ಪಾದಿಸಿ ವರ್ಷಕ್ಕೆ 12 ಕೋಟಿ ಗಳಿಸುತ್ತಿದ್ದಾರೆ ಆಂಧ್ರದ ಈ ಉದ್ಯಮಿ
• FSSAI ಪ್ರಕಾರ, ಒಂದು ಕೆಜಿ ಜ್ಯೂಸ್ ನಲ್ಲಿ ಶೇಕಡಾ 15 ಗ್ರಾಂಗಿಂತ ಹೆಚ್ಚು ಸಕ್ಕರೆ ಪ್ರಮಾಣವಿದ್ರೆ ಅದಕ್ಕೆ ಸ್ವೀಟ್ ಜ್ಯೂಸ್ ಎಂದು ಲೇಬಲ್ ಮಾಡಬೇಕು.
ಇದಕ್ಕೂ ಮೊದಲು, ಏಪ್ರಿಲ್‌ನಲ್ಲಿ, ಎಫ್‌ಎಸ್‌ಎಸ್‌ಎಐ ಎಫ್‌ಬಿಒಗಳನ್ನು ಆರೋಗ್ಯಕರ ಪಾನೀಯಗಳು ಮತ್ತು ಎನರ್ಜಿ ಡ್ರಿಂಕ್ಸ್ (Energy Drinks) ಎಂದು ಮಾರಾಟ ಮಾಡುತ್ತಿರುವ ಸ್ವಾಮ್ಯದ ಆಹಾರಗಳನ್ನು ಮರು ವರ್ಗೀಕರಿಸುವಂತೆ ಕೇಳಿಕೊಂಡಿತ್ತು.
ಅಂಬಾನಿ ಕಿರಿ ಸೊಸೆ ತಂದೆ ವಿರೆನ್ ಮರ್ಚೆಂಟ್ ನೆಟ್‌ವರ್ತ್ ಎಷ್ಷು ಗೊತ್ತಾ?
ಸಂಸ್ಕರಿಸಿದ ಜ್ಯೂಸ್ ನಿಂದಾಗುವ ನಷ್ಟ : ಪ್ಯಾಕೆಟಲ್ಲಿ ಬರುವ ಜ್ಯೂಸ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಸಂಪೂರ್ಣ ಹಣ್ಣಿನ ರಸ ಎಂದು ಅದ್ರಲ್ಲಿ ಬರೆದಿದ್ದರೂ ಅದು ಸಂಪೂರ್ಣ ಹಣ್ಣಿನ ರಸವನ್ನು ಒಳಗೊಂಡಿರೋದಿಲ್ಲ. ಅದಕ್ಕೆ ನೀರನ್ನು ಬೆರೆಸಲಾಗುತ್ತದೆ. ಕೈಗಾರಿಕಾ ಪ್ರದೇಶದಲ್ಲಿ ಈ ಜ್ಯೂಸ್ ತಯಾರಿಸಲಾಗುತ್ತದೆ. ಸಕ್ಕರೆ ಪ್ರಮಾಣ ಇದ್ರಲ್ಲಿ ಹೆಚ್ಚಿರುತ್ತದೆ. ನೀರು, ಸಕ್ಕರೆ ಹಾಗೂ ಹಣ್ಣಿನ ರಸವನ್ನು ಬಹುಕಾಲ ಸುರಕ್ಷಿತವಾಗಿಡಲು ನಡೆಯುವ ಪ್ರೊಸೆಸ್ ನಲ್ಲಿ ಜ್ಯೂಸ್ ರುಚಿ ಹೆಚ್ಚಾಗುತ್ತದೆಯೇ ವಿನಃ ಆರೋಗ್ಯಕ್ಕೆ ಒಳ್ಖೆಯದಲ್ಲ. ಇದ್ರಿಂದ ಬಿಡುಗಡೆಯಾಗುವ ಕೆಮಿಕಲ್, ಕ್ಯಾನ್ಸರ್ ನಂತಹ ಅಪಾಯಕಾರಿ ಹಾಗೂ ದೀರ್ಘಕಾಲದ ರೋಗಕ್ಕೆ ಕಾರಣವಾಗುತ್ತದೆ. ತೂಕ ಹೆಚ್ಚಳ, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಜನರು ನಾನಾ ರೋಗಕ್ಕೆ ಬಲಿಯಾಗ್ತಾರೆ.