Healthy Snack : ಸ್ವಾದಿಷ್ಟಕರ ಮಖಾನಾ ಚಾಟ್ ರುಚಿಗೂ ಸೈ ಆರೋಗ್ಯಕ್ಕೂ ಸೈ

By Suvarna News  |  First Published Mar 10, 2023, 5:34 PM IST

ಆರೋಗ್ಯಕ ಆಹಾರ ತಿಂಡಿ ತಿನ್ಬೇಕು ಅಂತಾ ಎಲ್ಲರೂ ಅಂದುಕೊಳ್ತಾರೆ. ಆದ್ರೆ ಯಾವುದು ಒಳ್ಳೆಯದು, ತೂಕ ಇಳಿಸುತ್ತೆ ಎನ್ನುವುದೇ ತಿಳಿದಿರೋದಿಲ್ಲ. ಮಖಾನಾ ಅಂತಾ ಹೆಸರು ಹೇಳಿದ್ರೆ ಮುಖ ಮುಖ ನೋಡುವವರಿದ್ದಾರೆ. ನಿಮಗೂ ಮಖಾನಾ ಹೇಗೆ ತಿನ್ಬೇಕು ಎಂಬುದು ಗೊತ್ತಿಲ್ಲವೆಂದ್ರೆ ಈಗ್ಲೇ   ಟೇಸ್ಟ್ ಮಾಡಿ
 


ಮಖಾನಾ ಹೆಸರಿನ ಪರಿಚಯ ಬಹಳ ಕಡಿಮೆ ಮಂದಿಗೆ ಇರಬಹುದು. ಇದನ್ನು ಎಷ್ಟು ಮಂದಿ ನಿತ್ಯದ ಅಡುಗೆಯಲ್ಲಿ ಬಳಸುತ್ತಾರೋ ಇಲ್ಲವೋ ಎಂಬುದು ಕೂಡ ತಿಳಿದಿಲ್ಲ. ಆದರೆ ಹಲವರ ಕಣ್ಣಿಗೆ ಎಲೆಮರೆಯ ಕಾಯಿಯಂತಿರುವ ಈ ಮಖಾನಾ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು ಮತ್ತು ತಿನ್ನಲು ಕೂಡ ಬಹಳ ರುಚಿಕರ. ಮಖಾನಾವನ್ನು ಸರಳ ಭಾಷೆಯಲ್ಲಿ ತಾವರೆ ಬೀಜ, ಕಮಲದ ಬೀಜ, ಫಾಕ್ಸ್ ನಟ್ಸ್ ಎನ್ನಬಹುದು. ಕಮಲದ ಬೀಜಗಳನ್ನು ಚೆನ್ನಾಗಿ ತೊಳೆದು ಒಣಗಿಸಿ ಹುರಿದ ನಂತರ ಇದು ಮಖಾನಾ ಎಂಬ ಹೆಸರನ್ನು ಪಡೆಯುತ್ತದೆ.

ಪ್ರೋಟೀನ್ (Protein ) ಗಳ ಖಣಜವಾದ ಈ ಮಖಾನಾವನ್ನು ಚೀನೀಯರು ಅನೇಕ ಔಷಧ (Medicine) ಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಕಡಿಮೆ ಕ್ಯಾಲೊರಿ ಹೊಂದಿರುವ ಇದನ್ನು ಡಯಟ್ (Diet ) ಮಾಡುವವರು, ಮಧುಮೇಹಿಗಳು ಯಾವ ಭಯವೂ ಇಲ್ಲದೆ ಸೇವಿಸಬಹುದು. ಹೆರಿಯ ನಂತರ ಮಹಿಳೆಯರು ಇದನ್ನು ತಿಂದರೆ ಬಹಳ ಒಳ್ಳೆಯದು. ಮಖಾನಾ ಸೇವನೆಯಿಂದ ಚರ್ಮದ ಹೊಳಪು (Shine) ಹೆಚ್ಚುತ್ತದೆ ಮತ್ತು ಪಚನ ಶಕ್ತಿ (Power) ಯನ್ನೂ ಸುಧಾರಿಸುತ್ತದೆ. ಮಖಾನಾದಲ್ಲಿರುವ ಎಂಟಿ ಬ್ಯಾಕ್ಟಿರಿಯಲ್ ಗುಣದಿಂದ ಅನೇಕ ಬ್ಯಾಕ್ಟೀರಿಯಾ ಸಂಬಂಧಿ ಖಾಯಿಲೆಗಳು ಇದರಿಂದ ಗುಣಮುಖವಾಗುತ್ತದೆ. ಇಷ್ಟೆಲ್ಲ ಆರೋಗ್ಯಕರ ಗುಣವನ್ನು ಮಖಾನಾವನ್ನು ಚಾಟ್ಸ್ ರೂಪದಲ್ಲಿ ಕೂಡ ಸೇವಿಸಬಹುದು. ಮಖಾನಾ ಚಾಟ್ಸ್ ತಯಾರಿಸುವ ವಿಧಾನ ಇಲ್ಲಿದೆ.

Tap to resize

Latest Videos

Kitchen Tips : ತಿಂಗಳಾದರೂ ಹಸಿಮೆಣಸು ಕೆಡ್ಬಾರದು ಅಂದ್ರೆ ಹೀಗ್ ಮಾಡಿ

ಮಖಾನಾ ಚಾಟ್ಸ್ ಗೆ ಬೇಕಾಗುವ ಸಾಮಗ್ರಿ : 2 ಟೊಮೆಟೊ, ಸ್ವಲ್ಪ ಬೇಯಿಸಿದ ಆಲೂಗಡ್ಡೆ 2, ಸೈಂಧವ ಉಪ್ಪು, 1 ಸಣ್ಣ ಚಮಚ ಕೆಂಪು ಮೆಣಸಿನ ಪುಡಿ, 2 ಮುಷ್ಠಿ ಕುತ್ತುಂಬರಿ ಸೊಪ್ಪು, 2 ಮುಷ್ಠಿ ಹುರಿದ ಕಡಲೆಕಾಯಿ, 3 ಹಸಿಮೆಣಸಿನಕಾಯಿ, 2 ಕಪ್ ಕಮಲದ ಬೀಜ, 1 ಸಣ್ಣ ಚಮಚ ಜೀರಿಗೆ ಪುಡಿ, 21/2 ಚಮಚ ನಿಂಬೆ ರಸ, ಅವಷ್ಯಕತೆಗೆ ಬೇಕಾದಷ್ಟು ಸೇವ್, 2 ಚಮಚ ತುಪ್ಪ

ಮಖಾನಾ ಚಾಟ್ ಮಾಡುವ ವಿಧಾನ :
• ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ತುಪ್ಪ ಹಾಕಿ ಕಮಲದ ಬೀಜ ಬ್ರೌನ್ ಬಣ್ಣಕ್ಕೆ ತಿರುಗುವವರೆಗೂ ಹುರಿಯಿರಿ. 
• ಎಲ್ಲ ತರಕಾರಿಗಳನ್ನು ಚೆನ್ನಾಗಿ ತೊಳೆದು ಹೆಚ್ಚಿಕೊಳ್ಳಿ.
• ಒಂದು ಸಣ್ಣ ಪಾತ್ರೆಯಲ್ಲಿ ನಿಂಬೆ ರಸ, ಒಣಮೆಣಸಿನ ಪುಡಿ, ಸೈಂಧವ ಉಪ್ಪು, ಜೀರಿಗೆ ಪುಡಿ ಹಾಕಿ ಎಲ್ಲವನ್ನೂ ಚೆನ್ನಾಗಿ ಬೆರೆಸಿ. ನಂತರ ಕೊತ್ತುಂಬರಿ ಸೊಪ್ಪು, ಹಸಿಮೆಣಸು, ಉಪ್ಪು, ಕಡಲೆಬೀಜ ಮತ್ತು ಕಮಲದ ಬೀಜವನ್ನು ಸೇರಿಸಿ ಚೆನ್ನಾಗಿ ಹೊಂದಿಸಿ. ಹೀಗೆ ಮಾಡಿದಾಗ ಮಖಾನಾ ಚಾಟ್ ತಿನ್ನಲು ಸಿದ್ಧವಾಗುತ್ತೆ. ಪ್ರತಿನಿತ್ಯ ಒಂದೇ ರೀತಿಯ ತಿಂಡಿ ತಿಂದು ಬೇಸತ್ತವರಿಗೆ ಇದು ಹೊಸ ಟೇಸ್ಟ್ ನೀಡುತ್ತದೆ.

Kitchen Tips : ಈರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಬರಬಾರದೆಂದರೆ ಏನ್ಮಾಡ್ಬೇಕು?

ನಿಮಗೆ ಇಂತಹ ತೊಂದರೆ ಇದ್ದರೆ ಮಖಾನಾ ಸೇವಿಸ್ಬೇಡಿ : ಯಾವುದೇ ತಿಂಡಿ ಆಗಿರ್ಲಿ ತಿನ್ಲಿಕ್ಕೆ ತುಂಬ ರುಚಿ ಎನಿಸಿದಾಗ ಅದನ್ನು ನಾವು ಅವಷ್ಯಕತೆಗಿಂತ ಹೆಚ್ಚು ತಿನ್ನುತ್ತೇವೆ. ಇದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಮಖಾನಾ ಕೂಡ ಎಲ್ಲರಿಗೂ ಒಳ್ಳೇದಲ್ಲ. ಈ ಕೆಳಗಿನ ಸಮಸ್ಯೆ ಇರುವವರು ಮಖಾನಾ ತಿನ್ನದೇ ಇರುವುದು ಒಳ್ಳೇದು.
• ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿರುವವರು ಮಖಾನಾ ತಿನ್ನಬೇಡಿ.
• ಕಿಡ್ನಿಯಲ್ಲಿ ಕಲ್ಲುಗಳಿದ್ದರೆ ಮಖಾನಾದಿಂದ ಕಲ್ಲಿನ ಗಾತ್ರ ಹೆಚ್ಚುವ ಸಾಧ್ಯತೆ ಇರುತ್ತದೆ. ಹಾಗಾಗಿ ಕಿಡ್ನಿಯಲ್ಲಿ ಕಲ್ಲು ಇರುವವರು ಇದನ್ನು ದೂರವಿಡಿ.
• ಕೆಲವರಿಗೆ ಮಖಾನಾ ಸೇವಿಸಿದ ನಂತರ ಅಲರ್ಜಿಯ ಸಮಸ್ಯೆ ತಲೆದೋರಬಹುದು. ಅಂತವರು ಮಖಾನಾ ತಿನ್ನಬೇಡಿ
• ಸಕ್ಕರೆ ಖಾಯಿಲೆಯ ಸಮಸ್ಯೆ ಹೊಂದಿರುವವರು ಕಡಿಮೆ ಪ್ರಮಾಣದಲ್ಲಿ ಮಖಾನಾ ಸೇವಿಸಬೇಕು.
 

click me!