
ಮೊಟ್ಟೆ, ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಹೀಗಾಗಿಯೇ ವೈದ್ಯರು ಸಹ ಉತ್ತಮ ಆರೋಗ್ಯಕ್ಕಾಗಿ ಮೊಟ್ಟೆಯನ್ನು ತಿನ್ನಲು ಸಲಹೆ ನೀಡುತ್ತಾರೆ. ಅದಕ್ಕಾಗಿಯೇ ಜನರು ಇದನ್ನು ನಿಯಮಿತವಾಗಿ ತಿನ್ನುತ್ತಾರೆ. ಆದರೆ ಎಲ್ಲರೂ ಮೊಟ್ಟೆಯನ್ನು ವಿಭಿನ್ನವಾದ ವಿಧಾನದಲ್ಲಿ ತಿನ್ನುತ್ತಾರೆ. ಕೆಲವರು ಬೇಯಿಸಿದ ಮೊಟ್ಟೆಯನ್ನು ತಿನ್ನುತ್ತಾರೆ. ಇನ್ನು ಕೆಲವರು ಆಮ್ಲೆಟ್ ಮಾಡಿ ತಿನ್ನುತ್ತಾರೆ. ಇನ್ನೂ ಹಲವರು ಎಗ್ ಭುರ್ಜಿ, ಎಗ್ ಕರಿ ಮಾಡಿ ತಿನ್ನುತ್ತಾರೆ. ಆದರೆ ಮೊಟ್ಟೆಯ ಪ್ರಯೋಜನ ನಿಜಕ್ಕೂ ಆರೋಗ್ಯಕ್ಕೆ ಸಿಗಬೇಕಾದರೆ ಯಾವ ರೀತಿ ತಿನ್ನೋದು ಉತ್ತಮ ತಿಳಿಯೋಣ.
ಮೊಟ್ಟೆಯ ಆರೋಗ್ಯ ಪ್ರಯೋಜನಗಳು
ಪ್ರತಿದಿನ ಮೊಟ್ಟೆ (Egg)ಗಳನ್ನು ತಿನ್ನಲು ವೈದ್ಯರು ಮತ್ತು ಆರೋಗ್ಯ ತಜ್ಞರು ಹೇಳುತ್ತಾರೆ. ಏಕೆಂದರೆ ಮೊಟ್ಟೆ ಆರೋಗ್ಯಕ್ಕೆ (Health) ಅತ್ಯುತ್ತಮವಾಗಿದೆ. ಇದು ನಮ್ಮ ದೇಹ (Body)ವನ್ನು ಆರೋಗ್ಯಕರವಾಗಿಡುತ್ತದೆ. ಸ್ನಾಯುಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಬೆಳಗ್ಗಿನ ತಿಂಡಿಯಲ್ಲಿ ಮೊಟ್ಟೆ ತಿಂದರೆ ದಿನವಿಡೀ ಎನರ್ಜಿಟಿಕ್ ಆಗಿರಲು ಸಾಧ್ಯವಾಗುತ್ತದೆ. ಮೊಟ್ಟೆ ಸಂಪೂರ್ಣ ಆಹಾರವಾಗಿದೆ. ಅವು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಮೊಟ್ಟೆ ಸ್ನಾಯುಗಳನ್ನು ಸರಿಪಡಿಸುತ್ತದೆ. ಮಕ್ಕಳ ಬೆಳವಣಿಗೆಗೂ ಸಹಾಯ ಮಾಡುತ್ತದೆ.
ಪ್ರೊಟೀನ್‌ಗಾಗಿ ಹಸಿ ಮೊಟ್ಟೆ ತಿನ್ನೋ ಅಭ್ಯಾಸವಿದ್ಯಾ? ಇಷ್ಟೆಲ್ಲಾ ತೊಂದ್ರೆ ಆಗುತ್ತೆ ಗೊತ್ತಿರ್ಲಿ
ಮೊಟ್ಟೆಗಳಲ್ಲಿ ವಿಟಮಿನ್ ಡಿ, ವಿಟಮಿನ್ ಬಿ12 ಮತ್ತು ರೈಬೋಫ್ಲಾವಿನ್ ಸಮೃದ್ಧವಾಗಿದೆ. ಇವು ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ. ಅಲ್ಲದೆ ಅವುಗಳಲ್ಲಿರುವ ಕೋಲೀನ್ ಮೆದುಳನ್ನು (Brain) ಆರೋಗ್ಯವಾಗಿಡಲು ಮತ್ತು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮೊಟ್ಟೆಯಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಕಣ್ಣಿಗೆ ತುಂಬಾ ಒಳ್ಳೆಯದು. ಮೊಟ್ಟೆಗಳು ಆರೋಗ್ಯಕರ ಅಪರ್ಯಾಪ್ತ ಕೊಬ್ಬನ್ನು ಸಹ ಹೊಂದಿರುತ್ತವೆ. ಇದು ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್‌ನ್ನು ಹೆಚ್ಚಿಸುತ್ತದೆ.
ಬೇಯಿಸಿದ ಮೊಟ್ಟೆ
ಬೇಯಿಸಿದ ಮೊಟ್ಟೆ ಪೌಷ್ಟಿಕಾಂಶದ ಉತ್ತಮ ಮೂಲವಾಗಿದೆ. ಈ ಮೊಟ್ಟೆಯಲ್ಲಿ ಸುಮಾರು 78 ಕ್ಯಾಲೋರಿಗಳಿವೆ. ಇದು ದೇಹಕ್ಕೆ ಅಗತ್ಯವಿರುವ ಕೊಬ್ಬು, ಪ್ರೋಟೀನ್, ಕೊಬ್ಬು, ವಿಟಮಿನ್ ಡಿ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಮೊಟ್ಟೆಯನ್ನು ಕುದಿಸುವುದು ಅದರ ಪೋಷಕಾಂಶಗಳನ್ನು ಉಳಿಸಿಕೊಳ್ಳುತ್ತದೆ. ಅದಕ್ಕಾಗಿಯೇ ಬೇಯಿಸಿದ ಮೊಟ್ಟೆಯನ್ನು ತಿನ್ನುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಬೇಯಿಸಿದ ಮೊಟ್ಟೆಗಳಲ್ಲಿ ವಿಟಮಿನ್ ಬಿ 12, ವಿಟಮಿನ್ ಡಿ ಮತ್ತು ರೈಬೋಫ್ಲಾವಿನ್ ಸಮೃದ್ಧವಾಗಿದೆ. ಇವು ನಮಗೆ ಶಕ್ತಿಯನ್ನು ನೀಡುತ್ತವೆ. ಮೂಳೆಗಳನ್ನು ಆರೋಗ್ಯವಾಗಿಡುತ್ತದೆ. ಇದಲ್ಲದೆ, ಬೇಯಿಸಿದ ಮೊಟ್ಟೆಯಲ್ಲಿರುವ ಕೋಲೀನ್ ಮೆದುಳನ್ನು ಆರೋಗ್ಯಕರವಾಗಿರಿಸುತ್ತದೆ.
Winter Food: ಚಳಿಗಾಲದಲ್ಲಿ ಹೃದಯಾಘಾತ ಅಪಾಯ ತಪ್ಪಿಸಲು ಮೊಟ್ಟೆ ತಿನ್ನಿ
ಆಮ್ಲೆಟ್
ಅನೇಕ ಜನರು ಆಮ್ಲೆಟ್ ತಿನ್ನಲು ಇಷ್ಟಪಡುತ್ತಾರೆ. ಏಕೆಂದರೆ ಇದು ತುಂಬಾ ರುಚಿಕರವಾಗಿರುತ್ತದೆ. ಆದರೆ ಇದರಲ್ಲಿರುವ ಪೋಷಕಾಂಶಗಳು ಬದಲಾಗುವ ಸಾಧ್ಯತೆ ಇದೆ. ಆಮ್ಲೆಟ್‌ಗೆ ಇತರ ಪದಾರ್ಥಗಳನ್ನು ಸೇರಿಸುವುದರಿಂದ ಹೆಚ್ಚಿನ ಪ್ರೋಟೀನ್ ಇದೆ. ಇದರಲ್ಲಿ ಹೆಚ್ಚಿನ ಕ್ಯಾಲೋರಿ ಮತ್ತು ಕೊಬ್ಬಿನಂಶವೂ ಇದೆ. ವಿಶೇಷವಾಗಿ ಅದನ್ನು ಹೆಚ್ಚು ಎಣ್ಣೆ (Oil) ಅಥವಾ ಬೆಣ್ಣೆಯಿಂದ ತಯಾರಿಸಿದಾಗ. ಆಮ್ಲೆಟ್‌ಗಳಲ್ಲಿ ಬಳಸಲಾಗುವ ತರಕಾರಿಗಳು ಮತ್ತು ನೇರ ಪ್ರೋಟೀನ್ ನಮಗೆ ವಿವಿಧ ಪೋಷಕಾಂಶಗಳನ್ನು ಒದಗಿಸುತ್ತದೆ. ಇವು ನಮ್ಮ ಆರೋಗ್ಯಕ್ಕೆ ಉಪಯುಕ್ತ.
ಆರೋಗ್ಯಕ್ಕೆ ಯಾವುದು ಉತ್ತಮ?
ಆಮ್ಲೆಟ್, ಬೇಯಿಸಿದ ಮೊಟ್ಟೆ ಇವೆರಡನ್ನೂ ಹೋಲಿಸಿ ನೋಡಿದಾಗ ಬೇಯಿಸಿದ ಮೊಟ್ಟೆ ಆರೋಗ್ಯಕ್ಕೆ ಪ್ರಯೋಜನಕಾರಿ. ಏಕೆಂದರೆ ಇದು ದೇಹಕ್ಕೆ ಕೊಬ್ಬು ಅಥವಾ ಇತರ ಅನುಪಯುಕ್ತ ಪದಾರ್ಥಗಳನ್ನು ಸೇರಿಸುವುದಿಲ್ಲ. ಅವುಗಳನ್ನು ಕುದಿಸುವುದರಿಂದ ಮೊಟ್ಟೆಯಲ್ಲಿರುವ ಎಲ್ಲಾ ಪೋಷಕಾಂಶಗಳನ್ನು ಸಂರಕ್ಷಿಸುತ್ತದೆ. ಆದ್ದರಿಂದ ಇದನ್ನು ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.