ಆರೋಗ್ಯ ವರ್ಧಕ ಹೆಸರು ಕಾಳಿನ ದೋಸೆ- ಶುಂಠಿ ಚಟ್ನಿ ರೆಸಿಪಿ ತಿಳಿಸಿದ ನಟಿ ಅದಿತಿ ಪ್ರಭುದೇವ

By Suvarna NewsFirst Published Nov 15, 2023, 6:32 PM IST
Highlights

ಆರೋಗ್ಯ ವರ್ಧಕ ಹೆಸರು ಕಾಳಿನ ದೋಸೆ ಹಾಗೂ ಅದಕ್ಕೆ ತಕ್ಕ ಶುಂಠಿ ಚಟ್ನಿ ರೆಸಿಪಿ ತಿಳಿಸಿಕೊಟ್ಟಿದ್ದಾರೆ  ನಟಿ ಅದಿತಿ ಪ್ರಭುದೇವ. 
 

ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ್​ (Aditi Prabhudev) ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ,  ಸ್ಯಾಂಡಲ್‌ವುಡ್​ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಸಿನಿಮಾ ಜೊತೆಗೆ ವೈವಾಹಿಕ ಬದುಕನ್ನು ಬ್ಯಾಲೆನ್ಸ್ ಮಾಡ್ತಿದ್ದಾರೆ. ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ  ಅದಿತಿ ಪ್ರಭುದೇವ ಅವರು ಸದ್ಯ ಗೃಹಿಣಿಯಾಗಿದ್ದಾರೆ.  ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ, ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದವರು. ಇದರ ಹೊರತಾಗಿಯೂ ಅಡುಗೆಯಲ್ಲಿಯೂ ಇವರದ್ದು ಎತ್ತಿದ ಕೈ. ಅಡುಗೆ, ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು ಟಿಪ್ಸ್​ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ.  

ಇದೀಗ ಪ್ರೊಟೀನ್​ಯುಕ್ತ ಹೆಸರಕಾಳಿನ ದೋಸೆ ಮತ್ತು ಅದಕ್ಕೆ ಸಕತ್​ ಕಾಂಬಿನೇಷನ್​ ಶುಂಠಿ ಚಟ್ನಿ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ಒಂದು ಬಟ್ಟಲು ಹೆಸರು ಕಾಳಿಗೆ ನಾಲ್ಕರಿಂದ ಐದು ಚಮಚ ಅಕ್ಕಿ ಹಾಕಿ ಚೆನ್ನಾಗಿ ವಾಷ್ ಮಾಡಿ ನೀರು ಹಾಕಿ ನೆನೆಯಲು ಬಿಡಬೇಕು. ಶುಂಠಿ, ಹಸಿ ಮೆಣಸಿನ ಕಾಯಿ, ಉಪ್ಪು, ಜೀರಿಗೆ ಹಾಕಿ ನೆನೆಸಿದ ಹೆಸರಿನ ಕಾಳಿಗೆ ಸೇರಿಸಿ ರುಬ್ಬಿಕೊಳ್ಳಬೇಕು. ಪರ್ಫೆಕ್ಟ್​ ಶುಂಠಿ ಚಟ್ನಿ ಮಾಡಬೇಕು. ಸ್ವಲ್ಪ ಎಣ್ಣೆ ಹಾಕಿಕೊಳ್ಳಬೇಕು. ಅದು ಬಿಸಿಯಾದ ಮೇಲೆ ಜೀರಿಗೆ, ಹಸಿಮೆಣಸಿನ ಕಾಯಿ, ಶುಂಠಿ, ಬ್ಯಾಡಗಿ ಎರಡು ಮೆಣಸಿನ ಕಾಯಿ, ಈರುಳ್ಳಿ ಹಾಕಿಕೊಂಡು ಫ್ರೈ ಮಾಡಬೇಕು. ನಂತರ ಸ್ವಲ್ಪ ಹುರಿಗಡಲೆ ಹಾಕಿಕೊಂಡು ಫ್ರೈ ಮಾಡಬೇಕು. ಹುಣಸೆ ಹಣ್ಣು ಸ್ವಲ್ಪ ಜಾಸ್ತಿ ಹಾಕಿಕೊಂಡು ಟೊಮ್ಯಾಟೋ ಹಾಗೂ ಉಪ್ಪು ಹಾಕಿ ಎರಡು ನಿಮಿಷ ಫ್ರೈ ಮಾಡಿಕೊಳ್ಳಬೇಕು. ಇದಕ್ಕೆ ಸ್ವಲ್ಪ ನೀರು ಹಾಕಬೇಕು. ಬೇಯಲು ಬಿಡಿ. ನಾಲ್ಕೈದು ನಿಮಿಷ ಆದ ಮೇಲೆ ಆರಲು ಬಿಟ್ಟು, ಮಿಕ್ಸಿ ಮಾಡಿಕೊಳ್ಳಬೇಕು. ದೋಸೆ ಮೇಲೆ ಬೇಕಿದ್ದರೆ ಕ್ಯಾರೆಟ್​, ಈರುಳ್ಳಿ, ಕ್ಯಾಪ್ಸಿಕಂ ಹಾಕಿ ತಿಂದರೆ ಅದರ ಟೇಸ್ಟೇ ಬೇರೆ ಎಂದ ನಟಿ. 

ತಲೆಗೂದಲು ಸೋಂಪಾಗಿ, ಹೊಟ್ಟಿಲ್ಲದೇ ಬೆಳೆಯಲು ಸಿಂಪಲ್​ ಟಿಪ್ಸ್​ ತಿಳಿಸಿದ ನಟಿ ಅದಿತಿ ಪ್ರಭುದೇವ

ಇದೇ ವಿಡಿಯೋದಲ್ಲಿ ನಟಿ,  ತಲೆಗೂದಲು ಸೋಂಪಾಗಿ ಏನು ಮಾಡಬೇಕು ಎಂಬುದನ್ನು ತಿಳಿಸಿ ಕೊಟ್ಟಿದ್ದಾರೆ. ಮನೆಯಲ್ಲಿಯೇ ಮಾಡಿಕೊಳ್ಳುವ ಸಿಂಪಲ್​ ಎಣ್ಣೆ ಹಾಗೂ ಅದನ್ನು ಬಳಸುವ ಬಗೆಯನ್ನು ಅವರು ಹೇಳಿಕೊಟ್ಟಿದ್ದಾರೆ. ಮೊದಲಿಗೆ ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಸ್ವಲ್ಪ ಬದಾಮಿ ಎಣ್ಣೆಯನ್ನು ಸೇರಿಸಬೇಕು. ಅದಕ್ಕೆ ಕಡಿಮೆ ಪ್ರಮಾಣದಲ್ಲಿ ಹರಳೆಣ್ಣೆ ಮಿಕ್ಸ್ ಮಾಡಬೇಕು. 

ಇದು ಜಿಡ್ಡುಜಿಡ್ಡಾಗಿ ಇರುವ ಕಾರಣ, ಸ್ವಲ್ಪವೇ ಬಳಸಬೇಕು. ಸ್ವಲ್ಪ ಮೆಂತೆ ಕಾಳು ಹಾಕಿ ಕಾಯಿಸಬೇಕು. ಅದಕ್ಕೆ ಬೇಕಿದ್ದರೆ ದಾಸವಾಳದ ಎಲೆ ಅಥವಾ  ಕರಿಬೇವಿನ ಎಲೆ ಹಾಕಬಹುದು. ನಂತರ ನಾಲ್ಕೈದು ಹನಿ ನಿಂಬೆ ರಸವನ್ನು ಮಿಕ್ಸ್​ ಮಾಡಬೇಕು. ಈಗ ಇದನ್ನು ಚೆನ್ನಾಗಿ ತಲೆಯ ಬುಡದವರೆಗೆ ಮಸಾಜ್​ ಮಾಡಬೇಕು. ತಲೆಯ ಜಿಡ್ಡು, ಹೊಟ್ಟು ಹೋಗುತ್ತದೆ. ಸ್ಕಾಪ್​ ಫ್ರೆಷ್​ ಆಗಿರುತ್ತದೆ. ಎಣ್ಣೆ ಹಚ್ಚಿಕೊಳ್ಳುವುದು ಮಾತ್ರವಲ್ಲದೇ ಮಸಾಜ್​ ಸರಿಯಾಗಿ ಮಾಡಿದರೆ ಕೂದಲು ಬೆಳೆಯಲು ಸಹಾಯವಾಗುತ್ತದೆ. 

ಚಿಕ್ಕ ಬಾಲ್ಕನಿಯಲ್ಲೇ ಬ್ಯೂಟಿಫುಲ್ಲಾಗಿ ಗಿಡ ಬೆಳೆಸುವುದು ತೋರಿಸಿದ ನಟಿ ಅದಿತಿ ಪ್ರಭುದೇವ

click me!