ಪಶ್ವಿಮಬಂಗಾಳದ ಬೆಲ್ಘಾರಿಯಾದಲ್ಲಿರುವ ಆಕಾಶ್ ಸಹಾ ಟೀ ಅಂಗಡಿ ಇಲ್ಲಿನ ವಿಚಿತ್ರ ಟೀಗಳಿಗೆ ಹೆಸರುವಾಸಿಯಾಗಿದೆ. ಸಹಾ ಅವರ ಟೀ ಅಂಗಡಿಯಲ್ಲಿ ಬಿರಿಯಾನಿ ಚಹಾ ಮತ್ತು ರಸಗುಲ್ಲಾ ಚಹಾ ಸಹ ಲಭ್ಯವಿದೆ. ಆ ಬಗ್ಗೆ ಇಲ್ಲಿದೆ ಒಂದು ಸ್ಟೋರಿ.
ಚಹಾ ವಿಶ್ವದಲ್ಲೇ ನೀರಿನ ನಂತರ ಜನರು ಇಷ್ಟ ಪಟ್ಟು ಕುಡಿಯುವಂತಹ ಎರಡನೇ ಅತ್ಯಂತ ಪ್ರೀತಿಯ ಪಾನೀಯ. ಅದರಲ್ಲೂ ಭಾರತೀಯರಿಗಂತೂ ಟೀ ಇಲ್ಲದೆ ಬೆಳಗ್ಗೆ ಸಂಜೆ ಆಗೋದೆ ಇಲ್ಲ. ಮೊದಲೆಲ್ಲಾ ಟೀ ಅಂದ್ರೆ ವೆರೈಟಿ ಇರುತ್ತಿರಲ್ಲಿಲ್ಲ. ಆದ್ರೆ ಈಗಲೋ ಟೀಯಲ್ಲಿ ಎಷ್ಟು ವೆರೈಟಿ ಬೇಕು ಹೇಳಿ. ನಾನಾ ತರದ ಟೀಗಳು ಲಭ್ಯವಿವೆ. ಮಿಲ್ಕ್ ಟೀ, ಬ್ಲ್ಯಾಕ್ ಟೀ, ಜಿಂಜರ್ ಟೀ, ಮಸಾಲ ಟೀ, ತಂದೂರಿ ಚಹಾ, ಮ್ಯಾಂಗೋ ಟೀ ಹೀಗೆ ಹಲವು. ಇದಲ್ಲದೆ ಇನ್ನೂ ಹಲವು ಟೀಗಳನ್ನು ವ್ಯಾಪಾರಿಗಳನ್ನು ಆಗಾಗ ಮಾಡುತ್ತಲೇ ಇರುತ್ತಾರೆ. ಇಂಥಾ ವಿಚಿತ್ರ ಟೀಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಹಾಗೆಯೇ ಸದ್ಯ ಇಲ್ಲೊಂದು ವಿಚಿತ್ರ ಟೀಯ ವಿಚಾರ ಎಲ್ಲೆಡೆ ವೈರಲ್ ಆಗ್ತಿದೆ.
ಪಶ್ವಿಮಬಂಗಾಳದ ಬೆಲ್ಘಾರಿಯಾದಲ್ಲಿರುವ ಆಕಾಶ್ ಸಹಾ ಟೀ ಅಂಗಡಿ ಇಲ್ಲಿನ ವಿಚಿತ್ರ ಟೀಗಳಿಗೆ (Weird tea) ಹೆಸರುವಾಸಿಯಾಗಿದೆ. ಸಹಾ ಅವರ ಟೀ ಅಂಗಡಿಯಲ್ಲಿ ಬಿರಿಯಾನಿ ಚಹಾ ಮತ್ತು ರಸಗುಲ್ಲಾ ಚಹಾ ಸಹ ಲಭ್ಯವಿದೆ. ಈ ಚಹಾ ಅಂಗಡಿಯು ಬೆಲ್‌ಘಾರಿಯಾ ನಿಲ್ದಾಣದ ನಾಲ್ಕನೇ ಪ್ಲಾಟ್‌ಫಾರ್ಮ್‌ನಲ್ಲಿದೆ ಮತ್ತು ಸರಿಸುಮಾರು 17 ವರ್ಷ ಹಳೆಯದು. ಅಂಗಡಿ ತೆರೆದಾಗಿನಿಂದ ಹಾಲಿನ ಚಹಾ ಮತ್ತು ಮದ್ಯದ ಚಹಾ ಇಲ್ಲಿ ಲಭ್ಯವಿತ್ತು. ಈಗ ಹೊಸ ಚಹಾ ರುಚಿಗಳು (Taste) ಮೆನುಗೆ ಸೇರ್ಪಡೆಗೊಂಡಿವೆ. ಹೀಗಾಗಿ ಈ ಟೀ ಅಂಗಡಿ ಎಲ್ಲರ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.
ಚಹಾ ಜೊತೆ ಪರೋಟ ತಿಂತೀರಾ? ಹೊಟ್ಟೆ ಸಮಸ್ಯೆ ಖಚಿತ
ಪಶ್ಚಿಮ ಬಂಗಾಳದ ಬೆಲ್‌ಘಾರಿಯಾ ಸ್ಟೇಷನ್‌ನಲ್ಲಿನ ಬಿರಿಯಾನಿ ಟೀ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ. ಇಲ್ಲಿ ಬಿರಿಯಾನಿ ಟೀ ಮಾತ್ರವಲ್ಲದೇ ರಸಗುಲ್ಲ ಟೀ, ತಂದೂರು ಟೀ ಹೀಗೆ ನಾನಾ ಬಗೆಯ ಟೀಗಳು ಲಭ್ಯವಿದೆ. ನೀವಿಲ್ಲಿ 6 ರಿಂದ 50 ರೂ.ವರೆಗೆ ಚಹಾವನ್ನು ಸವಿಯಬಹುದು. ಕೊರೋನಾ ನಂತರ ಜನರನ್ನು ಅಂಗಡಿಯತ್ತ ಸೆಳೆಯುವ ಸಲುವಾಗಿ ಸ್ಪೆಷಲ್ ಟೀ ಆರಂಭಿಸಿದೆವು. ಸದ್ಯ ಎಗ್ ಟೀ,ಚಿಲ್ಲಿ ಟೀ,ರಸೊಗೊಲ್ಲ ಟೀ, ಚಾಕೊಲೇಟ್ ಟೀ, ಕೋಲ್ಡ್ ಕಾಫಿ ಮತ್ತು ಬಿರಿಯಾನಿ ಟೀ ಪ್ರಾರಂಭಿಸಿದೆವು ಎಂಬ ಚಹಾ ಅಂಗಡಿಯ ಮಾಲೀಕರಾದ ಆಕಾಶ್ ಸಹಾ ಹೇಳುತ್ತಾರೆ.
ಈ ಚಹಾ ಅಂಗಡಿಯು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 11 ಗಂಟೆಯ ವರೆಗೂ ತೆರೆದಿರುತ್ತದೆ. ಹಸಿ ಮೊಟ್ಟೆಗಳನ್ನು ಬಿಸಿ ಹಾಲಿನ ಚಹಾದಲ್ಲಿ ಕುದಿಸಿ ತಯಾರಿಸುವ ಮೊಟ್ಟೆ ಟೀ ಇಲ್ಲಿ ತುಂಬಾ ಫೇಮಸ್. ಬಗೆಬಗೆಯ ಟೀಗಳನ್ನು ನೀಡುವ ಈ ರೆಸ್ಟೋರೆಂಟ್ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗಿದೆ. ಪ್ರತಿಯೊಂದು ವಿಧದ ಚಹಾವು ಯಾವಾಗಲೂ ಲಭ್ಯವಿರುತ್ತದೆ. ಆದರೆ, ಎಗ್ ಟೀ ಮತ್ತು ಗ್ರೀನ್ ಟೀ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾದ ನಂತರ ಅಂಗಡಿಯಲ್ಲಿ ಬೇಡಿಕೆ ಹೆಚ್ಚಿದೆ ಎಂದು ಸ್ಟಾಲ್ ಮಾಲೀಕರು ಹೇಳುತ್ತಾರೆ.
ತೂಕ ಇಳಿಸೋದು ಮಾತ್ರ ಅಲ್ಲ ಟೆನ್ಶನ್ ಕೂಡ ದೂರ ಮಾಡುತ್ತೆ ರೋಸ್ ಟೀ
ಹಸಿ ಮೆಣಸಿನಕಾಯಿಯ ಗ್ರೀನ್ ಚಿಲ್ಲಿ ಚಹಾದ ಬೆಲೆ ಸುಮಾರು 20 ರೂಪಾಯಿಗಳು, ಆದರೆ ಮೊಟ್ಟೆಯ ಚಹಾವು 20 ರಿಂದ 50 ರೂಪಾಯಿಗಳವರೆಗೆ ಇರುತ್ತದೆ. ಈ ಮೊಟ್ಟೆಯ ಚಹಾವನ್ನು ತಯಾರಿಸಲು, ಕಚ್ಚಾ ಮೊಟ್ಟೆಗಳನ್ನು ಬಿಸಿ ಹಾಲಿನ ಚಹಾದಲ್ಲಿ ಬೇಯಿಸಲಾಗುತ್ತದೆ. ಹೊಸ ತಲೆಮಾರಿನ ಯುವಕ-ಯುವತಿಯರು ದಿನದ ವಿವಿಧ ಸಮಯಗಳಲ್ಲಿ ತಮ್ಮ ಇಷ್ಟದ ಚಹಾವನ್ನು ಹೀರಲು ಇಲ್ಲಿಗೆ ಆಗಮಿಸುತ್ತಾರೆ. ಸ್ಟಾಲ್ ದಿನವೊಂದಕ್ಕೆ ಸುಮಾರು 200 ಕಪ್ ಚಹಾವನ್ನು ಮಾರಾಟ ಮಾಡುತ್ತದೆ ಎಂದು ತಿಳಿದುಬಂದಿದೆ.