ಚಹಾ ಜೊತೆ ಪರೋಟ ತಿಂತೀರಾ? ಹೊಟ್ಟೆ ಸಮಸ್ಯೆ ಖಚಿತ
ಚಹಾದೊಂದಿಗೆ ಪರೋಟ ತಿನ್ನೋದು ಭಾರತೀಯರ ನೆಚ್ಚಿನ ತಿಂಡಿ. ಆದರೆ ಈ ಎರಡರ ಕಾಂಬಿನೇಶನ್ ಮಾತ್ರ ಬಹಳ ಅಪಾಯ ಎಂದು ಪರಿಗಣಿಸಲಾಗಿದೆ. ತಜ್ಞರ ಪ್ರಕಾರ, ಬೆಳಿಗ್ಗೆ ಉಪಾಹಾರದಲ್ಲಿ ಚಹಾ ಮತ್ತು ಪರೋಟ ಸೇವಿಸುವುದರಿಂದ ದೇಹದಲ್ಲಿ ಅನೇಕ ರೋಗಗಳಿಗೆ ಕಾರಣವಾಗಬಹುದು.
ಉಪಾಹಾರಕ್ಕೆ (morning breakfast) ಬಿಸಿ ಪರೋಟವನ್ನು ತಿನ್ನಲು ಯಾರು ತಾನೆ ಇಷ್ಟಪಡುವುದಿಲ್ಲ ಅಲ್ವಾ? ಅದು ಆಲೂಗಡ್ಡೆ ಅಥವಾ ಈರುಳ್ಳಿ, ಎಲೆಕೋಸು ಅಥವಾ ಚೀಸ್ ಆಗಿರಲಿ. ಬೆಣ್ಣೆ ತುಂಬಿದ ಈ ಪರೋಟಗಳು ತುಂಬಾ ಟೇಸ್ಟಿಯಾಗಿರುತ್ತೆ. ನೀವು ಉಪಾಹಾರಕ್ಕಾಗಿ ಪರೋಟ ಜೊತೆ ಚಹಾ ಕುಡಿಯೋದ್ರಿಂದ ತುಂಬಾನೆ ಖುಷಿ ಸಿಗುತ್ತೆ ನಿಜಾ. ಉಪಾಹಾರವು ಆರೋಗ್ಯಕರ ಮತ್ತು ಹೆವಿಯಾಗಿರಬೇಕೆಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಪರೋಟವ ಜನರ ನೆಚ್ಚಿನ ಉಪಾಹಾರವಾಗಿದೆ. ಆದರೆ ಚಹಾ ಮತ್ತು ಪರೋಟದ (Paratha and Tea) ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ?
ಚಹಾದೊಂದಿಗೆ ಪರೋಟ ತಿನ್ನುವುದು ತುಂಬಾ ರುಚಿಕರವಾಗಿದ್ದರೂ, ಆರೋಗ್ಯದ ದೃಷ್ಟಿಯಿಂದ ಇದು ಉತ್ತಮ ಕಾಂಬಿನೇಶನ್ ಅಲ್ಲ. ಚಹಾದೊಂದಿಗೆ ಪರೋಟ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಪರೋಟವನ್ನು ಎಂದಿಗೂ ಚಹಾದೊಂದಿಗೆ ಏಕೆ ಸೇವಿಸಬಾರದು ಎಂದು ಅವರು ಇಲ್ಲಿ ಹೇಳಿದ್ದಾರೆ. ನೀವು ಚಹಾ ಮತ್ತು ಪರೋಟಗಳನ್ನು ಇಷ್ಟಪಡುತ್ತಿದ್ದರೆ, ನೀವು ಅದರ ಬಗ್ಗೆ ಗಮನ ಹರಿಸಬೇಕು.
ಚಹಾ ಮತ್ತು ಪರೋಟ ತಿಂದ್ರೆ ಏನೆಲ್ಲಾ ಸಮಸ್ಯೆ ಉಂಟಾಗಬಹುದು?
ಆಮ್ಲೀಯತೆ ಉಂಟಾಗಬಹುದು (acidity problem)
ನೀವು ಸ್ಟಫ್ಡ್ ಪರೋಟಾದೊಂದಿಗೆ ಚಹಾ ಕುಡಿದರೆ, ನೀವು ಆಮ್ಲೀಯತೆ ಮತ್ತು ಉರಿಯೂತದ ಜೊತೆಗೆ ಆಸಿಡ್ ರಿಫ್ಲಕ್ಸ್ ಸಮಸ್ಯೆಗಳನ್ನು ಹೊಂದಿರಬಹುದು. ಚಹಾ ಹೊಟ್ಟೆಯಲ್ಲಿನ ಆಮ್ಲ ಪ್ರತ್ಯಾಮ್ಲದ ಸಮತೋಲನವನ್ನು ಹಾನಿಗೊಳಿಸುತ್ತದೆ ಎಂದು ತಿಳಿದುಬಂದಿದೆ. ಮತ್ತು ನೀವು ಅದರೊಂದಿಗೆ ಪರೋಟ ಸೇವಿಸಿದರೆ, ಹೊಟ್ಟೆಯ ಆರೋಗ್ಯ ಕೆಡುತ್ತೆ.
ರಕ್ತಹೀನತೆ (anemia) ಸಂಭವಿಸಬಹುದು
ಅಧ್ಯಯನದ ಪ್ರಕಾರ, ಚಹಾದಲ್ಲಿರುವ ಫಿನೋಲಿಕ್ ರಾಸಾಯನಿಕದಿಂದಾಗಿ, ಹೊಟ್ಟೆಯ ಒಳಪದರದಲ್ಲಿ ಕಬ್ಬಿಣದ ಸಂಕೀರ್ಣಗಳು ಬೆಳೆಯುತ್ತವೆ, ಇದು ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ನಿಲ್ಲಿಸುತ್ತದೆ. ಆದ್ದರಿಂದ, ಚಹಾವನ್ನು ಆಹಾರದೊಂದಿಗೆ ಸೇವಿಸಬಾರದು, ವಿಶೇಷವಾಗಿ ಕಬ್ಬಿಣದ ಕೊರತೆಯಿಂದಾಗಿ ರಕ್ತಹೀನತೆ ಇರುವವರು ಇದನ್ನು ಸೇವಿಸಲೇಬಾರದು.
ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ತಡೆಯುತ್ತೆ
ಚಹಾದಲ್ಲಿರುವ ಟ್ಯಾನಿನ್ ಗಳು ಪ್ರೋಟೀನ್ ಗಳೊಂದಿಗೆ ದೇಹದಲ್ಲಿ ಹೀರಿಕೊಳ್ಳುವುದನ್ನು ತಡೆಯುವ ಮೂಲಕ ಆಂಟಿನ್ಯೂಟ್ರಿಯೆಂಟ್ ಗಳಾಗಿ ಕಾರ್ಯನಿರ್ವಹಿಸುತ್ತವೆ. ಒಂದು ಅಧ್ಯಯನದ ಪ್ರಕಾರ, ಟ್ಯಾನಿನ್ ಗಳು ಪ್ರೋಟೀನ್ ಗಳ ಜೀರ್ಣಕ್ರಿಯೆಯನ್ನು 38% ವರೆಗೆ ನಿಧಾನಗೊಳಿಸುತ್ತವೆ. ಇದರಿಂದ ಪೋಷಕಾಂಶಗಳು ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಸಿಗೋದಿಲ್ಲ. ಹಾಗಾಗಿ ಚಹಾ ಜೊತೆ ಪರೋಟ ಸೇವಿಸಬೇಡಿ.
ಹಾಗಾದರೆ ಚಹಾ ಯಾವಾಗ ಕುಡಿಯಬೇಕು?
ನೀವು ಚಹಾ ಕುಡಿಯಲು ಇಷ್ಟಪಡುತ್ತಿದ್ದರೆ, ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಯಾವುದೇ ಆಹಾರವನ್ನು ಸೇವಿಸಿದ ಕನಿಷ್ಠ 45 ನಿಮಿಷಗಳ ನಂತರ ಚಹಾ ಕುಡಿಯಿರಿ. ಬೆಳಗಿನ ಉಪಾಹಾರ ಅಥವಾ ಮಧ್ಯಾಹ್ನದ ಊಟದ ಒಂದು ಗಂಟೆಯ ನಂತರ ಅಥವಾ ಸಂಜೆ ಕೆಲವು ತಿಂಡಿಗಳೊಂದಿಗೆ ನೀವು ಚಹಾವನ್ನು ಕುಡಿಯಬಹುದು.