ವೀಳ್ಯದೆಲೆ ಚಟ್ನಿ ತಯಾರಿಸುವುದು ಹೇಗೆ? ಆರೋಗ್ಯಕ್ಕೆ ಓಕೆ, ಆದ್ರೆ ಇದನ್ನು ಹೇಗೆ ತಿನ್ನಬಾರದು ಗೊತ್ತಾ?

Published : Oct 14, 2026, 06:19 PM IST
Betel Leaf Chutney

ಸಾರಾಂಶ

ಭಾರತೀಯ ಅಡುಗೆಮನೆಯಲ್ಲಿ ವೀಳ್ಯದೆಲೆಗೆ (Betel Leaves) ವಿಶೇಷ ಸ್ಥಾನವಿದೆ. ಸಾಂಪ್ರದಾಯಿಕವಾಗಿ ಪೂಜೆ ಹಾಗೂ ಇತರ ಆಚರಣೆಗಳಲ್ಲಿ ಬಳಸುವ ಈ ಎಲೆ ವಿಶಿಷ್ಟ ಪರಿಮಳವನ್ನೂ ಹೊಂದಿದೆ. ವೀಳ್ಯದೆಲೆಯಿಂದ ಚಟ್ನಿ ತಯಾರಿಸಿ ಅನ್ನ, ದೋಸೆ, ಇಡ್ಲಿ ಹಾಗೂ ರೊಟ್ಟಿಯೊಂದಿಗೆ ಸವಿಯಬಹುದು. ಹಾಗಾದರೆ, ವೀಳ್ಯದೆಲೆ ಚಟ್ನಿ ಮಾಡುವ ವಿಧಾನವೇನು? ಇಲ್ಲಿ ನೋಡಿ..

ವೀಳ್ಯದೆಲೆ ಚಟ್ನಿ ತಯಾರಿಸಿವುದು ಹೀಗೆ-

ಭಾರತೀಯ ಅಡುಗೆಮನೆಯಲ್ಲಿ ವೀಳ್ಯದೆಲೆಗೆ (Betel Leaves) ವಿಶೇಷ ಸ್ಥಾನವಿದೆ. ಸಾಂಪ್ರದಾಯಿಕವಾಗಿ ಪೂಜೆ ಹಾಗೂ ಇತರ ಆಚರಣೆಗಳಲ್ಲಿ ಬಳಸುವ ಈ ಎಲೆ ವಿಶಿಷ್ಟ ಪರಿಮಳವನ್ನೂ ಹೊಂದಿದೆ. ವೀಳ್ಯದೆಲೆಯಿಂದ ಚಟ್ನಿ ತಯಾರಿಸಿ ಅನ್ನ, ದೋಸೆ, ಇಡ್ಲಿ ಹಾಗೂ ರೊಟ್ಟಿಯೊಂದಿಗೆ ಸವಿಯಬಹುದು. ಹಾಗಾದರೆ, ವೀಳ್ಯದೆಲೆ ಚಟ್ನಿ ಮಾಡುವ ವಿಧಾನವೇನು? ಇದರಿಂದ ಆರೋಗ್ಯಕ್ಕೆ ಯಾವ ರೀತಿಯ ಪ್ರಯೋಜನಗಳು ಸಿಗಬಹುದು ಎಂಬುದನ್ನು ತಿಳಿಯೋಣ.

ವೀಳ್ಯದೆಲೆ ಚಟ್ನಿ ತಯಾರಿಸಲು ಬೇಕಾಗುವ ಪದಾರ್ಥಗಳು

- ತಾಜಾ ವೀಳ್ಯದೆಲೆ – 5ರಿಂದ 6

- ತುರಿದ ತೆಂಗಿನಕಾಯಿ – ಅರ್ಧ ಕಪ್

- ಹಸಿಮೆಣಸಿನಕಾಯಿ – 2

- ಶುಂಠಿ – ಸಣ್ಣ ತುಂಡು

- ಹುಣಸೆಹಣ್ಣು – ಸ್ವಲ್ಪ

- ಉಪ್ಪು – ರುಚಿಗೆ ತಕ್ಕಷ್ಟು

- ಎಣ್ಣೆ – 1 ಚಮಚ

- ಸಾಸಿವೆ ಮತ್ತು ಕರಿಬೇವು – ಒಗ್ಗರಣೆಗೆ

ಚಟ್ನಿ ಮಾಡುವ ವಿಧಾನ

ಮೊದಲು ವೀಳ್ಯದೆಲೆಗಳನ್ನು ಚೆನ್ನಾಗಿ ತೊಳೆದು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಹಸಿಮೆಣಸಿನಕಾಯಿ, ಶುಂಠಿ ಮತ್ತು ವೀಳ್ಯದೆಲೆಗಳನ್ನು ಹುರಿಯಿರಿ. ಎಲೆಗಳು ಸ್ವಲ್ಪ ಮೆತ್ತಗಾದ ಬಳಿಕ ಒಲೆಯಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ.

ನಂತರ ಮಿಕ್ಸರ್‌ಗೆ ಹುರಿದ ಪದಾರ್ಥಗಳು, ತೆಂಗಿನಕಾಯಿ, ಹುಣಸೆಹಣ್ಣು ಮತ್ತು ಉಪ್ಪು ಸೇರಿಸಿ ಅಗತ್ಯವಿರುವಷ್ಟು ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಕೊನೆಯಲ್ಲಿ ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ನೀಡಿದರೆ ರುಚಿಕರವಾದ ವೀಳ್ಯದೆಲೆ ಚಟ್ನಿ ಸಿದ್ಧವಾಗುತ್ತದೆ.

ವೀಳ್ಯದೆಲೆ ಚಟ್ನಿಯ ಆರೋಗ್ಯ ಪ್ರಯೋಜನಗಳೇನು?

1. ಉತ್ಕರ್ಷಣ ನಿರೋಧಕ ಗುಣಗಳು: ವೀಳ್ಯದೆಲೆಯಲ್ಲಿ (Antioxidants) ದೇಹದ ಜೀವಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ನೆರವಾಗುವ ಕೆಲವು ಸಸ್ಯ ಸಂಯುಕ್ತಗಳಿವೆ.

2. ಜೀರ್ಣಕ್ರಿಯೆಗೆ ಬೆಂಬಲ: ವೀಳ್ಯದೆಲೆಯಲ್ಲಿರುವ ಪರಿಮಳಯುಕ್ತ ಸಂಯುಕ್ತಗಳು ಜೀರ್ಣಕ್ರಿಯೆಗೆ ಸಂಬಂಧಿಸಿದ ಕೆಲವು ಪ್ರಯೋಜನಗಳನ್ನು ಹೊಂದಿರಬಹುದು. ಆದರೆ ಚಟ್ನಿ ತಿಂದರೆ ಗ್ಯಾಸ್ ಅಥವಾ ಅಜೀರ್ಣ ಖಚಿತವಾಗಿ ಕಡಿಮೆಯಾಗುತ್ತದೆ ಎಂಬುದಕ್ಕೆ ಸಾಕಷ್ಟು ಮಾನವ ಅಧ್ಯಯನಗಳಿಲ್ಲ.

3. ಆಹಾರದಲ್ಲಿ ವೈವಿಧ್ಯ: ತೆಂಗಿನಕಾಯಿ, ಶುಂಠಿ ಮತ್ತು ವೀಳ್ಯದೆಲೆಯನ್ನು ಒಟ್ಟಿಗೆ ಬಳಸುವುದರಿಂದ ಆಹಾರಕ್ಕೆ ವಿಭಿನ್ನ ರುಚಿ ಹಾಗೂ ಕೆಲವು ಪೋಷಕಾಂಶಗಳು ಸೇರುತ್ತವೆ.

ಸೇವಿಸುವಾಗ ಇರಲಿ ಎಚ್ಚರಿಕೆ

ವೀಳ್ಯದೆಲೆ ಚಟ್ನಿಯನ್ನು ಮಿತವಾಗಿ ಸೇವಿಸುವುದು ಉತ್ತಮ. ಚಟ್ನಿಯ ಆರೋಗ್ಯ ಪ್ರಯೋಜನಗಳ ಬಗ್ಗೆ ಇನ್ನಷ್ಟು ಸಂಶೋಧನೆ ಅಗತ್ಯವಿದೆ. ವೀಳ್ಯದೆಲೆಯನ್ನು ತಂಬಾಕು, ಅಡಿಕೆ ಅಥವಾ ಸುಣ್ಣದೊಂದಿಗೆ ಸೇವಿಸುವುದನ್ನು ತಪ್ಪಿಸಿ. ಇವು ಆರೋಗ್ಯಕ್ಕೆ ಗಂಭೀರ ಹಾನಿ ಉಂಟುಮಾಡಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಿನವಿಡೀ ಸುಸ್ತು ಕಾಡ್ತಿದ್ಯಾ? ಕಾರಣ ತಿಳಿಯದೇ ಆತಂಕ ಆಗಿದ್ಯಾ..? ಹಾಗಿದ್ರೆ ಹೀಗ್ ಮಾಡಿ ಹಾಯಾಗಿರಿ!
ಅಕ್ಕಿ-ಉದ್ದಿನಬೇಳೆ ಬೇಡ, ನೆನೆಸುವ ತಲೆನೋವೂ ಬೇಡ.. ದಿಢೀರ್ ಮಾಡಿ ಹತ್ತಿಯಷ್ಟು ಸಾಫ್ಟ್ ರವೆ ಪಡ್ಡು