Cooking Oil : ಆರೋಗ್ಯ ಹಾಳು ಮಾಡುತ್ತೆ ಅಡುಗೆ ಎಣ್ಣೆ..! ಆಯಿಲ್ ಆಯ್ಕೆಗೆ ಮುನ್ನ ಇದನ್ನೋದಿ..

By Suvarna News  |  First Published Jan 1, 2022, 2:33 PM IST

ಇದು ಕಲಬೆರಕೆ ಯುಗ. ಇಲ್ಲಿ ಅಕ್ಕಿಯಿಂದ ಹಿಡಿದು ಮಣ್ಣಿನವರೆಗೆ ಎಲ್ಲವೂ ಕಲಬೆರಕೆ ಆಗ್ತಿದೆ. ನಾವು ಸೇವಿಸುವ ಆಹಾರದ ಆಯ್ಕೆ ತುಂಬ ಕಷ್ಟವಾಗಿದೆ. ಮಾರುಕಟ್ಟೆಗೆ ನೂರಾರು ಪ್ರಾಡೆಕ್ಟ್ ಲಗ್ಗೆಯಿಟ್ಟಿದ್ದು ಯಾವುದು ಉತ್ತಮ ಎಂಬ ಗೊಂದಲ ಮನೆ ಮಾಡಿದೆ.
 


ಇತ್ತೀಚಿನ ಕೆಲವು ವರ್ಷಗಳಲ್ಲಿ, ನಮ್ಮ ಆಹಾರ (Food )ಪದ್ಧತಿಯಲ್ಲಿ ತ್ವರಿತ ಬದಲಾವಣೆಯಾಗಿದೆ. ಇದರೊಂದಿಗೆ ಆರೋಗ್ಯಕ (Healthy)ರ ಆಹಾರದ ಬಗ್ಗೆ ಜನರಲ್ಲಿ ಜಾಗೃತಿಯೂ ಹೆಚ್ಚಾಗಿದೆ. ಎಣ್ಣೆ (Oil) ಮತ್ತು ತುಪ್ಪವನ್ನು ಭಾರತೀಯರು ಹೆಚ್ಚಾಗಿ ಬಳಸ್ತಾರೆ. ಹಸುವಿನ ತುಪ್ಪವನ್ನು ಹೊರತುಪಡಿಸಿ ಕಡಲೆಕಾಯಿ, ಸೋಯಾಬೀನ್ (Soybean), ಸೂರ್ಯಕಾಂತಿ (Sunflower),ತೆಂಗಿನಕಾಯಿ (Coconut), ಸಾಸಿವೆ ಇತ್ಯಾದಿಗಳ ಎಣ್ಣೆಯನ್ನು ಅಡುಗೆಗೆ ಬಳಸಲಾಗುತ್ತದೆ. ಪಾಕ ವಿಧಾನ ಪ್ರಪಂಚದಾದ್ಯಂತ ವಿಭಿನ್ನವಾಗಿದೆ. ಕೆಲವರು ಆಹಾರದಲ್ಲಿ ಬೆಣ್ಣೆಯನ್ನು ಬಳಸುತ್ತಾರೆ. ಮತ್ತೆ ಕೆಲವರು ಆಲಿವ್ ಎಣ್ಣೆ (Olive oil)ಯನ್ನು ಬಳಸುತ್ತಾರೆ. ಆರೋಗ್ಯಕ್ಕೆ ಯಾವ ಎಣ್ಣೆ ಉತ್ತಮ ಎಂಬುದು ಬಹಳ ದಿನಗಳಿಂದ ಚರ್ಚೆಯ ವಿಷಯವಾಗಿದೆ. ಪ್ರತಿಯೊಬ್ಬರೂ ಈ ಬಗ್ಗೆ ವಿಭಿನ್ನ ಅಭಿಪ್ರಾಯವನ್ನು ಹೊಂದಿದ್ದಾರೆ.  ಯಾವುದು ಉತ್ತಮ ಎಣ್ಣೆ? ಯಾವುದು ಆರೋಗ್ಯಕ್ಕೆ ಒಳ್ಳೆಯದು? ಪ್ರತಿ ನಿತ್ಯ ಯಾವ ಎಣ್ಣೆ ಬಳಸಬೇಕು ಎಂಬ ಬಗ್ಗೆ ಜನರಲ್ಲಿ ಗೊಂದಲವಿದೆ.  

ತೈಲ ಮತ್ತು ಆರೋಗ್ಯ
ಪೌಷ್ಟಿಕಾಂಶಕ್ಕೆ ತುಪ್ಪದಂತೆಯೇ ಎಣ್ಣೆಯನ್ನು ಸಮತೋಲಿತ ಪ್ರಮಾಣದಲ್ಲಿ ಬಳಸುವುದು ಅಗತ್ಯ. ಪ್ರತಿದಿನ ಸ್ವಲ್ಪ ಪ್ರಮಾಣದ ಎಣ್ಣೆಯನ್ನು ಬಳಸುವುದು ಆರೋಗ್ಯಕ್ಕೆ ಒಳ್ಳೆಯದು. ಆಹಾರದಲ್ಲಿ ಎಣ್ಣೆಯ ಬಳಕೆ ಹೆಚ್ಚಾದಾಗ ತೊಂದರೆ ಉಂಟಾಗುತ್ತದೆ. 

Latest Videos

undefined

ಸರಿಯಾದ ಎಣ್ಣೆ ಆಯ್ಕೆ 
ಆರೋಗ್ಯದ ದೃಷ್ಟಿಯಿಂದ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ನಿಮಗೆ ಸೂಕ್ತವಾದ ಎಣ್ಣೆಯನ್ನು ನೀವು ಆಯ್ಕೆ ಮಾಡಬಹುದು. ಹಾಗೆ ನಾವೆಲ್ಲರೂ ಸಂಸ್ಕರಿಸಿದ ತೈಲಗಳನ್ನು ಬಳಸುತ್ತೇವೆ, ಆದರೆ ಅವುಗಳ ಸಂಸ್ಕರಣೆಯ ಸಮಯದಲ್ಲಿ ಹೆಚ್ಚಿನ ಪೋಷಕಾಂಶಗಳು ನಾಶವಾಗುತ್ತವೆ ಎಂಬುದನ್ನು  ನೆನಪಿನಲ್ಲಿಡಬೇಕು.ಸಂಸ್ಕರಿಸದ ಎಣ್ಣೆಗಳು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರಬಹುದು.ಆದರೆ ಕಡಿಮೆ ಸ್ಮೋಕಿಂಗ್ ಅಂಶ  ಹೊಂದಿರುತ್ತವೆ. ಆದ್ದರಿಂದ ಅವುಗಳನ್ನು ಎಚ್ಚರಿಕೆಯಿಂದ ಬಳಸಬೇಕು. ಖರೀದಿಸುವ ಎಣ್ಣೆಯನ್ನು ಬೀಜಗಳು ಮತ್ತು ಸಸ್ಯಗಳಿಂದ ಹೊರತೆಗೆಯಲಾಗಿದೆಯೇ ಅಥವಾ ರಾಸಾಯನಿಕ ಪದಾರ್ಥವನ್ನು ಬಳಸಿ ಹೊರತೆಗೆಯಲಾಗಿದೆಯೇ ಎಂಬುದನ್ನು ಪರಿಶೀಲಿಸಿ.

ಆಲಿವ್ ಎಣ್ಣೆಯ ಪ್ರಯೋಜನಗಳು 
ಆಲಿವ್ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ವಿಟಮಿನ್-ಇ ತುಂಬಿದೆ. ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಹೆಚ್ಚಿನ ಪ್ರಮಾಣದ ಮೊನೊಸ್ಯಾಚುರೇಟೆಡ್ ಕೊಬ್ಬುಗಳ ಕಾರಣ, ಇದು ಕ್ಯಾನ್ಸರ್ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಸಹ ಹೊಂದಿದೆ. ಇದು ಕೆಟ್ಟ ಕೊಲೆಸ್ಟ್ರಾಲ್  ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

Unhealthy Food: ಕರಿದ ತಿಂಡಿ ಬಯಕೆ ಯಾವಾಗ ಕಾಡುತ್ತೆ?

ಅಗಸೆಬೀಜನದ ಎಣ್ಣೆ
ಅಗಸೆ ಬೀಜದ ಎಣ್ಣೆ ಅನೇಕ ಗುಣಗಳನ್ನು ಹೊಂದಿದೆ.ಇದರಲ್ಲಿ  ಒಮೆಗಾ -3 ಕೊಬ್ಬಿನಾಮ್ಲಗಳ ಸಮೃದ್ಧವಾಗಿದೆ. ಒಮೆಗಾ-3  ಸಸ್ಯಾಹಾರದಲ್ಲಿ ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತದೆ. ಇದು ವಿಶೇಷವಾಗಿ ಸಂಧಿವಾತದ ಲಕ್ಷಣಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಒಮೆಗಾ -3  ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ರೈಸ್ ಬ್ರಾನ್ ಆಯಿಲ್  
ರೈಸ್ ಬ್ರಾನ್ ಆಯಿಲ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಳಕೆಗೆ ಬಂದಿದೆ. ಇದರಲ್ಲಿ  ಮೊನೊ ಅನ್‌ಸ್ಯಾಚುರೇಟೆಡ್ ಕೊಬ್ಬು ಸಮೃದ್ಧವಾಗಿದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದರ ಜೊತೆಗೆ ಹೃದಯ ಕಾಯಿಲೆಗಳನ್ನು ತಡೆಯಲು ನೆರವಾಗುತ್ತದೆ. ಟೈಪ್ -2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

Birth Control: ಅನಗತ್ಯ ಗರ್ಭಧಾರಣೆ ತಪ್ಪಿಸಲು ಇಲ್ಲಿವೆ ಉಪಾಯ

ಈ ತೈಲಗಳು ಸಹ ಪ್ರಯೋಜನಕಾರಿ

ಎಳ್ಳಿನ ಎಣ್ಣೆಯು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ವಿಶೇಷವಾಗಿ  ನರವೈಜ್ಞಾನಿಕ ಸಮಸ್ಯೆಗಳ ವಿರುದ್ಧ ರಕ್ಷಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. 

ಸೂರ್ಯಕಾಂತಿ ಎಣ್ಣೆಯನ್ನು ಅನೇಕ ವರ್ಷಗಳಿಂದ ಬಳಸಲಾಗುತ್ತಿದೆ. ಇದರಲ್ಲಿ ಕಡಿಮೆ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳಿರುವುದರಿಂದ, ಇದು ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಇದು ರಕ್ತದಲ್ಲಿನ ಸಕ್ಕರೆ, ಕೊಲೆಸ್ಟ್ರಾಲ್ ಮತ್ತು ಬೊಜ್ಜನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಇವುಗಳಲ್ಲದೆ ಆವಕಾಡೊ ಎಣ್ಣೆ, ಸೋಯಾಬೀನ್ ಎಣ್ಣೆ, ಕೆನೋಲಾ ಎಣ್ಣೆ ಮುಂತಾದವುಗಳು ಹಲವಾರು ಗುಣಗಳಿಂದ ಕೂಡಿದ್ದು, ಇವುಗಳನ್ನು ಬಳಸಬಹುದು.
 

click me!