
ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಆಹಾರದಲ್ಲಿ ಕೂದಲು, ಹಲ್ಲಿ, ಜಿರಳೆ ಮೊದಲಾದವು ಸಿಗುವುದು ಹೊಸದೇನಲ್ಲ. ಈ ಬಗ್ಗೆ ಗ್ರಾಹಕರು ಆಗಾಗ ಸೋಷಿಯಲ್ ಮೀಡಿಯಾಗಳಲ್ಲಿ ದೂರು ಸಲ್ಲಿಸುತ್ತಲೇ ಇರುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿ ಸುಮ್ಮನಾಗಿ ಬಿಡುತ್ತಾರೆ. ಇಂಥಹದ್ದೇ ಘಟನೆಯೊಂದು ಬೆಂಗಳೂರಿನಲ್ಲಿ ಸಹ ನಡೆದಿದೆ. ನಗರದ ನಿವಾಸಿಯೊಬ್ಬರು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ ಆಹಾರದಲ್ಲಿ ಜೀವಂತವಾಗಿರುವ ಬಸವನಹುಳು ಸಿಕ್ಕಿದೆ. ಇದನ್ನು ನೋಡಿದ ಗ್ರಾಹಕರು ದಂಗಾಗಿದ್ದಾರೆ.
ಕಾಲೇಜು, ಆಫೀಸು ಅನ್ನೋ ಗಡಿಬಿಡಿಯಲ್ಲಿ ಇತ್ತೀಚಿಗೆ ಬಹುತೇಕರು ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡೋದೆ ಹೆಚ್ಚು. ಆರ್ಡರ್ ಮಾಡಿದ ಕೆಲವೇ ನಿಮಿಷದಲ್ಲಿ ಮನೆಗೆ ತಲುಪುತ್ತೆ ಅನ್ನೋ ಕಾರಣಕ್ಕೆ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡೋದಕ್ಕೆ ಇಷ್ಟಪಡುತ್ತಾರೆ. ಆದರೆ, ಇತ್ತೀಚಿಗೆ ಬೆಂಗಳೂರಿನ ಸ್ಥಳೀಯ ನಿವಾಸಿಯೊಬ್ಬರು ಆಹಾರ ವಿತರಣಾ ಅಪ್ಲಿಕೇಶನ್ ಸ್ವಿಗ್ಗಿ ಮೂಲಕ ಜನಪ್ರಿಯ ರೆಸ್ಟೋರೆಂಟ್ 'ಲಿಯಾನ್ ಗ್ರಿಲ್'ನಿಂದ ಆರ್ಡರ್ ಮಾಡಿದ ಸಲಾಡ್‌ನಲ್ಲಿ ಜೀವಂತ ಬಸವ ಹುಳುವನ್ನು ಕಂಡು ಅಸಹ್ಯ ವ್ಯಕ್ತಪಡಿಸಿದ್ದಾರೆ.
ಹುಡುಗಿಗೆ ಐಸ್‌ಕ್ರೀಂ ನೀಡಲು 3 ಕಿಲೋ ಮೀಟರ್ ನಡೆದ ಡೆಲಿವರಿ ಬಾಯ್‌ಗೆ ಸಿಕ್ತು ಬೆಸ್ಟ್ ಗಿಫ್ಟ್
ಗ್ರಾಹಕರಾದ ಧವಲ್ ಸಿಂಗ್ ಅವರು ಸ್ವಿಗ್ಗಿಯಲ್ಲಿ ಫುಡ್ ಆರ್ಡರ್ ಮಾಡಿ ತಮಗಾದ ಕೆಟ್ಟ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಪೋಸ್ಟ್‌ನೊಂದಿಗೆ ವೀಡಿಯೊವನ್ನು ಹಂಚಿಕೊಂಡ ಸಿಂಗ್, ತಮ್ಮ ತಾಜಾ ಸಲಾಡ್‌ನಲ್ಲಿ ಬಸವನ ಹುಳು ಸಿಕ್ಕಿದ್ದನ್ನು ಬಹಿರಂಗಪಡಿಸಿದರು. ವೀಡಿಯೋದಲ್ಲಿ ತರಕಾರಿಗಳಿಂದ ತುಂಬಿದ ಬೌಲ್‌ನ್ನು ನೋಡಬಹುದು. ಇದರ ಮೇಲೆ ಸಣ್ಣ ಬಸವನ ಹುಳು ಚಲಿಸುತ್ತಿದೆ.
ಸಿಂಗ್, ತಮ್ಮ ಟ್ವೀಟ್‌ನಲ್ಲಿ, 'ಲಿಯಾನ್ ಗ್ರಿಲ್‌ನಿಂದ ಮತ್ತೆ ಎಂದಿಗೂ ಆರ್ಡರ್ ಮಾಡುವುದಿಲ್ಲ' ಎಂದು ಹೇಳಿದ್ದಾರೆ. ಅಂಥಾ ಘಟನೆಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸ್ವಿಗ್ಗಿಗೆ ಒತ್ತಾಯಿಸಿದ್ದಾರೆ. ಕಾಮೆಂಟ್‌ಗಳ ವಿಭಾಗದಲ್ಲಿ, 'ನಾನು ಹುಳುವಿದ್ದ ಸಲಾಡ್ ಸ್ವೀಕರಿಸಿದ್ದು ಮಾತ್ರವಲ್ಲದೆ, ಆರ್ಡರ್ ಮಾಡಿದ ಪಾನೀಯ ಸಹ ಕೆಟ್ಟದಾಗಿತ್ತು ಎಂದು ಸಿಂಗ್ ಬಹಿರಂಗಪಡಿಸಿದ್ದಾರೆ.
'22 ಪ್ಲೇಯರ್ ಮಾತ್ರವೇ ಆಡ್ತಿಲ್ಲ..' ಐಪಿಎಲ್ ಫೈನಲ್ ಟೈಮ್‌ನಲ್ಲಿ 'ಕಾಂಡಮ್' ಬೇಡಿಕೆ ಟ್ರೋಲ್ ಮಾಡಿದ ಸ್ವಿಗ್ಗಿ!
ಘಟನೆಗೆ ಪ್ರತಿಕ್ರಿಯಿಸಿದ ಸ್ವಿಗ್ಗಿ, ಎಕ್ಸ್‌ನಲ್ಲಿ ಧವಲ್ ಸಿಂಗ್‌ನ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿ, ಘಟನೆಯನ್ನು ಭಯಾನಕ ಎಂದು ತಿಳಿಸಿದೆ. ಸ್ವಿಗ್ಗಿ, ಆರಂಭದಲ್ಲಿ ಕೇವಲ ಭಾಗಶಃ ಮರುಪಾವತಿಯನ್ನು ಮಾತ್ರ ನೀಡಿತು. ಆದರೆ ನಂತರ ಸಂಪೂರ್ಣ ಆರ್ಡರ್‌ಗೆ ಸಂಪೂರ್ಣ ಮರುಪಾವತಿಯನ್ನು ಒದಗಿಸುವ ಮೂಲಕ ಅದನ್ನು ಸರಿಪಡಿಸಿತು ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಧವಲ್ ಸಿಂಗ್ ಹಂಚಿಕೊಂಡಿರುವ ವೀಡಿಯೋಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. 'ಕಳಪೆ ನೈರ್ಮಲ್ಯ ಮತ್ತು ಸೇವೆಯ ಹಿಂದಿನ ನಿದರ್ಶನಗಳನ್ನು ಉಲ್ಲೇಖಿಸಿ ರೆಸ್ಟೋರೆಂಟ್ ಅನ್ನು ತಕ್ಷಣವೇ ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸಬೇಕೆಂದು' ಒಬ್ಬ ಬಳಕೆದಾರರು ಒತ್ತಾಯಿಸಿದ್ದಾರೆ. ಇನ್ನೊಬ್ಬರು, 'ಇದನ್ನು ನೋಡಿ ನನಗೆ ಆಶ್ಚರ್ಯವಾಗುತ್ತಿಲ್ಲ. ಇಂಥಾ ಘಟನೆ ಈಗಾಗಲೇ ಸಂಭವಿಸಿದೆ' ಎಂದು ಬರೆದುಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.