ಬೆಂಗಳೂರಿನ ಈ ಜಾಗಗಳಲ್ಲಿ ಬೆಸ್ಟ್ ದೋಸೆ ಸಿಗುತ್ತೆ, ಮಿಸ್ ಮಾಡ್ದೆ ಟೇಸ್ಟ್ ಮಾಡಿ

By Vinutha Perla  |  First Published Dec 16, 2023, 11:38 AM IST

ದೋಸೆ ಅಂದ್ರೆ ಸಾಕು ಕೆಲವರು ತುಂಬಾ ಇಷ್ಟಪಡ್ತಾರೆ. ಮೂರು ಹೊತ್ತು ಬೇಕಿದ್ರೂ ತಿನ್ನೋಕೆ ರೆಡಿಯಿಡ್ತಾರೆ. ನಿಮ್ಗೂ ಅದೇ ಮಸಾಲೆ ದೋಸೆ, ಬೆಣ್ಣೆ, ದೋಸೆ, ತುಪ್ಪ ದೋಸೆ ತಿಂದು ಬೇಜಾರಾಗಿದ್ರೆ, ಬೆಂಗಳೂರಲ್ಲಿ ಬೆಸ್ಟ್ ದೋಸೆ ಎಲ್ಲಿ ಸಿಗುತ್ತೆ ಹೇಳ್ತೀವಿ ಹೋಗ್ಬನ್ನಿ.


ಬೆಂಗಳೂರು ಐಟಿಸಿಟಿ ಆಗಿರೋ ಹಾಗೆಯೇ ಸಖತ್‌ ಟೇಸ್ಟಿ ಟೇಸ್ಟೀ ಫುಡ್‌ಗೆ ಕೂಡಾ ತುಂಬಾ ಫೇಮಸ್‌. ಸೌತ್‌ ಇಂಡಿಯನ್‌, ನಾರ್ತ್ ಇಂಡಿಯನ್‌, ಚೈನೀಸ್ ಹೀಗೆ ಹಲವು ವೆರೈಟಿ ಆಹಾರಗಳು ಇಲ್ಲಿ ಸಿಗುತ್ತವೆ. ಅದ್ರಲ್ಲೂ ಸೌತ್‌ ಇಂಡಿಯನ್ಸ್ ಅಂದ್ರೆ ದೋಸೆ, ಇಡ್ಲಿಯನ್ನು ಇಷ್ಟಪಡ್ತಾರೆ. ಬೆಂಗಳೂರಿಗರಿಗೆ ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ದೋಸೆ ಫೇವರಿಟ್ ಫುಡ್. ಆದ್ರೆ ಬೆಂಗಳೂರಲ್ಲಿ ಟೇಸ್ಟೀ ಟೇಸ್ಟೀ ದೋಸೆ ಎಲ್ಲಿ ಸಿಗುತ್ತೆ ಅನ್ನೋದು ನಿಮ್ಗೆ ಗೊತ್ತಿದ್ಯಾ?

99 ವೆರೈಟಿ ದೋಸೆ
ಹೆಸರೇ ಹೇಳುವಂತೆ ಈ ಹೊಟೇಲ್‌ನಲ್ಲಿ 99 ಬಗೆಯ ದೋಸೆ ಲಭ್ಯವಿದೆ. ಮಸಾಲೆ ದೋಸೆಯಿಂದ ಆರಂಭಿಸಿ ರುಚಿಕರವಾದ ಚಾಕೋಲೇಟ್‌ ದೋಸೆ ಸಹ ಇಲ್ಲಿ ಲಭ್ಯವಿದೆ. ಪ್ರತಿಯೊಬ್ಬರೂ ಇಷ್ಟಪಟ್ಟು ತಿನ್ನಬಹುದಾದಂಥಾ ಹಲವು ಬಗೆಯ ಟೇಸ್ಟೀ ದೋಸೆಗಳು ಇಲ್ಲಿವೆ. ಬೆಂಗಳೂರಿನ ಹಲವೆಡೆ ಈ ಹೊಟೇಲ್‌ಗಳಿವೆ. ಇಬ್ಬರಿಗೆ ತಿನ್ನಲು ಸುಮಾರು 200 ರೂ. ಬೇಕಾಗುತ್ತದೆ. 

Tap to resize

Latest Videos

undefined

ಗುಡ್‌ಬೈ ಹೇಳ್ತಿದೆ ಬೆಂಗಳೂರಿನ 70 ವರ್ಷ ಹಳೆಯ ನ್ಯೂ ಕೃಷ್ಣ ಭವನ್‌, ರುಚಿಕರ ತಿನಿಸು ಸವಿಯೋಕೆ ಇನ್ನೆರಡೇ ದಿನ ಬಾಕಿ

ಶ್ರೀ ಸಾಯಿ ದೋಸೆ ಸೆಂಟರ್‌
ಶ್ರೀ ಸಾಯಿ ದೋಸೆ ಸೆಂಟರ್‌ ರುಚಿಕರವಾದ ದೋಸೆಗೆ ಹೆಸರುವಾಸಿಯಾಗಿದೆ. ಕಡಿಮೆ ಬೆಲೆಯಲ್ಲಿ ಇಲ್ಲಿ ಬಿಸಿಬಿಸಿಯಾದ, ರುಚಿಕರವಾದ ದೋಸೆಯನ್ನು ಸವಿಯಬಹುದಾಗಿದೆ. ಮಸಾಲೆ ದೋಸೆ, ಶ್ರೀ ಸಾಯಿ ದೋಸೆ ಸೆಂಟರ್‌ನಲ್ಲಿ ಹೆಚ್ಚು ಸ್ಪೆಷಲ್. ಇದನ್ನು ಸವಿಯಲೆಂದೇ ದೂರ ದೂರದಿಂದ ಜನರು ಆಗಮಿಸುತ್ತಾರೆ. ಮಲ್ಲೇಶ್ವರಂನಲ್ಲಿರೋ ಹೊಟೇಲ್‌ನಲ್ಲಿ ಇಬ್ಬರು ದೋಸೆ ಸವಿಯಲು 150 ರೂ. ಇದ್ದರೆ ಸಾಕು. 

ವಿದ್ಯಾರ್ಥಿ ಭವನ
ಬೆಂಗಳೂರಿನಲ್ಲಿ ದೋಸೆಗೆ ಹೆಸರುವಾಸಿಯಾಗಿರುವ ಇನ್ನೊಂದು ಹೆಸರಾಂತ ಹೊಟೇಲ್‌ ವಿದ್ಯಾರ್ಥಿ ಭವನ. ಬಸವನಗುಡಿಯ ಗಾಂಧಿಬಜಾರ್ ರಸ್ತೆಯಲ್ಲಿ ವಿದ್ಯಾರ್ಥಿ ಭವನಕ್ಕೆ ದೇಶ-ವಿದೇಶದ ಸೆಲೆಬ್ರಿಟಿಗಳು, ರಾಜಕೀಯ ನಾಯಕರು ಭೇಟಿ ನೀಡುತ್ತಾರೆ. ಈ ಹೊಟೇಲ್‌1943ರಲ್ಲಿ ಆರಂಭವಾಗಿತ್ತು. ದೋಸೆ ಸರ್ವ್ ಮಾಡೋರು 15ಕ್ಕೂ ಹೆಚ್ಚು ತಟ್ಟೆಯನ್ನು ಒಂದೇ ಕೈಯಲ್ಲಿ ಹಿಡಿದುಕೊಂಡು ಬರುವುದು ಇಲ್ಲಿನ ವಿಶೇಷತೆ. ಬಸವನಗುಡಿಯ ಗಾಂಧಿಬಜಾರ್‌ನಲ್ಲಿ ಈ ಹೊಟೇಲ್‌ ಇದೆ. ಇಬ್ಬರು ದೋಸೆ ತಿನ್ನಲು 150 ರೂ. ಇದ್ದರೆ ಸಾಕು. 

ಎಂಟಿಆರ್‌
1924ರಿಂದ ಆರಂಭವಾಗಿರುವ ಎಂಟಿಆರ್‌ ಇಲ್ಲಿನ ಸ್ವಾದಿಷ್ಟಕರ ದೋಸೆಗೆ ಹೆಚ್ಚು ಹೆಸರುವಾಸಿಯಾಗಿದೆ. ಇಲ್ಲಿನ ರವಾ ಮಸಾಲೆ ದೋಸೆ ಹೆಚ್ಚು ಫೇಮಸ್ ಆಗಿದೆ. ಮಸಾಲೆ ದೋಸೆ ಸವಿಯಲು ಸಹ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ.

ಸಂಡೇ ಹೊರಗಡೆನೇ ತಿನ್ಬೇಕು ಅಂತೇನಿಲ್ಲ..ಮಸಾಲೆ ದೋಸೆ ಮನೆಯಲ್ಲೇ ಮಾಡಿ ತಿನ್ನಿ..

ಶ್ರೀಸಾಗರ್‌
ಸಿಟಿಆರ್, ಸೆಂಟ್ರಲ್ ಟಿಫಿನ್ ರೂಮ್‌ ಅಥವಾ ಶ್ರೀಸಾಗರ್ ಎಂದು ಕರೆಯಲ್ಪಡುವ ಹೊಟೇಲ್‌ ಮಲ್ಲೇಶ್ವರಂನಲ್ಲಿದ್ದು, ಹಲವು ವರ್ಷಗಳಿಂದಲೂ ಜನರಿಗೆ ರುಚಿಕರವಾದ ಆಹಾರವನ್ನು ಉಣಬಡಿಸುತ್ತಿದೆ. ಇಲ್ಲಿನ ಮಸಾಲಾ ದೋಸೆ ಎಲ್ಲರೂ ಮಸ್ಟ್ ಟ್ರೈ ಮಾಡಲೇಬೇಕಾದ ರುಚಿಕರವಾದ ದೋಸೆಯಾಗಿದೆ. ಮಲ್ಲೇಶ್ವರಂನಲ್ಲಿ ಶ್ರೀ ಸಾಗರ್ ಹೊಟೇಲ್‌ ಇದ್ದು, ಇಬ್ಬರುತ ತಿನ್ನಲು 200 ರೂ. ಬೇಕಾಗುತ್ತದೆ. 

ಸಿದ್ಧಪ್ಪ ಹೊಟೇಲ್‌
ಹಲವರಿಗೆ ಗೊತ್ತಿಲ್ಲದ ಬೆಂಗಳೂರಿನ ಸಿದ್ದಪ್ಪ ಹೊಟೇಲ್‌ ತನ್ನ ಬಗೆಬಗೆಯ ದೋಸೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ  ಮಿನಿ ದೋಸೆಯನ್ನಂತೂ ದೋಸೆಪ್ರಿಯರು ಮಸ್ಟ್ ಆಗಿ ಟ್ರೈ ಮಾಡ್ಲೇಬೇಕು. ರಿಚ್ಮಂಡ್ ರಸ್ತೆಯಲ್ಲಿರುವ ಈ ಹೊಟೇಲ್‌ನಲ್ಲಿ ಇಬ್ಬರು ತಿನ್ನಲು 150 ರೂ. ಇದ್ದರೆ ಸಾಕು.

ಆರ್‌ಕೆ ದೋಸೆ ಕ್ಯಾಂಪ್
ಆರ್‌ಕೆ ದೋಸೆ ಕ್ಯಾಂಪ್‌ನಲ್ಲಿ ಹಲವು ವಿಧದ ದೋಸೆ ರೀಸನೆಬಲ್‌ ಪ್ರೈಸ್‌ಗೆ ಲಭ್ಯವಿದೆ. ಮಸಾಲೆ ದೋಸೆ, ಬೆಣ್ಣೆ ದೋಸೆ ಮೊದಲಾದವುಗಳು ಕ್ರಿಸ್ಪೀಯಾಗಿರುತ್ತವೆ. ಇಲ್ಲಿನ ವಿಶೇಷತೆ ನೂಡಲ್ಸ್ ದೋಸೆ. ವಿಲ್ಸನ್‌ ಗಾರ್ಡನ್‌ನಲ್ಲಿರುವ ಈ ಹೊಟೇಲ್‌ನಲ್ಲಿ ಇಬ್ಬರು ದೋಸೆ ಸವಿಯಲು 200 ರೂ. ನಿಗದಿಪಡಿಸಲಾಗಿದೆ.

ಇನ್ಯಾಕೆ ತಡ, ನೀವೂ ಸಹ ಬೆಂಗಳೂರಿನ ಈ ಜಾಗಗಳಿಗೆ ಹೋಗಿ ಗಡದ್ದಾಗಿ ದೋಸೆ ಸವಿದು ಬನ್ನಿ. ವೀಕೆಂಡ್‌ನಲ್ಲಿ ಸಣ್ಣ ವಜೆಟ್‌ಗೆ ರುಚಿಕರವಾದ ದೋಸೆಗಳನ್ನು ಸವಿಯೋನ್ನು ಮಿಸ್ ಮಾಡ್ಬೇಡಿ. 

click me!