ಸ್ವಿಗ್ಗಿ ಫುಡ್ ಆರ್ಡರ್ ಮಾಡಿದ್ದನ್ನು 6 ಡೆಲಿವರಿ ಹುಡುಗ್ರು ತರೋದಾ?

By Suvarna NewsFirst Published Dec 16, 2023, 4:55 PM IST
Highlights

ಆನ್ ಲೈನ್ ಖರೀದಿಯಲ್ಲಿ ಹಣದ ಕಡಿತಕ್ಕೆ ಸಂಬಂಧಿಸಿ ಏನಾದರೂ ಕಿರಿಕಿರಿಯಾಗುವುದು, ವಸ್ತುಗಳ ಅದಲು ಬದಲಾಗುವ ಸಮಸ್ಯೆಗಳು ಸಾಮಾನ್ಯ. ಆದರೆ, ಪ್ರಣಯ್ ಎನ್ನುವವರ ಅನುಭವ ವಿಭಿನ್ನ. ಇವರು ಆರ್ಡರ್ ಮಾಡಲು ಯತ್ನಿಸಿದ್ದ ಆಹಾರ ಪದಾರ್ಥಗಳು ಬರೋಬ್ಬರಿ 6 ಬಾರಿ ಮನೆಗೆ ಬಂದಿವೆ!
 

ಆನ್ ಲೈನ್ ಖರೀದಿ ಸುಲಭವಾಗಿದ್ದರೂ ಹಲವು ಬಾರಿ ಪೇಚಿಗೆ ಸಿಲುಕಿಸುತ್ತದೆ. ಕೆಲವು ಬಾರಿ ಖಾತೆಯಿಂದ ಹಣ ಕಡಿತವಾಗಿದ್ದರೂ ಆರ್ಡರ್ ಸರಿಯಾಗಿ ಆಗಿರುವುದಿಲ್ಲ. ಕೆಲವೊಮ್ಮೆ ಆರ್ಡರ್ ಮಾಡಿದ ನಿಗದಿತ ವಸ್ತುವಿನ ಬದಲು ಬೇರೆ ಯಾವುದೋ ವಸ್ತು ಕೈಗೆ ಸೇರಬಹುದು. ಹಣ ಕಡಿತಕ್ಕೆ ಸಂಬಂಧಿಸಿ ಸಾಕಷ್ಟು ಎಡವಟ್ಟುಗಳಾಗುತ್ತವೆ. ಸಾಮಾನ್ಯವಾಗಿ ಕಡಿತವಾಗಿ 3 ದಿನಗಳೊಳಗೆ ಮತ್ತೆ ಖಾತೆಗೆ ಹಣ ಬರುತ್ತದೆ. ಬಂದರೆ ಸರಿ. ಇಲ್ಲವಾದರೆ ಕಸ್ಟಮರ್ ಕೇರ್ ಗೆ ಫೋನ್ ಮಾಡುವ ತಲೆನೋವು ನಮ್ಮದಾಗುತ್ತದೆ. ಇಂಥದ್ದೆಲ್ಲ ಆನ್ ಲೈನ್ ಖರೀದಿಯಲ್ಲಿ ಅತಿ ಸಾಮಾನ್ಯ ಅನುಭವಗಳು. ಆದರೆ, ಒಬ್ಬ ವ್ಯಕ್ತಿಗೆ ಇದಕ್ಕಿಂತ ಭಾರೀ ವಿಭಿನ್ನ ಅನುಭವವಾಗಿದೆ. ಅದನ್ನವರು ತಮ್ಮ ಸಾಮಾಜಿಕ ಜಾಲತಾಣದ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. 

ಪ್ರಣಯ್ ಲೋಯ ಎನ್ನುವವರು ಇಂಥದ್ದೊಂದು ವಿಚಿತ್ರ ಅನುಭವಕ್ಕೆ ಸಾಕ್ಷಿಯಾಗಿದ್ದಾರೆ. ಅವರು ಸ್ವಿಗ್ಗಿಯಲ್ಲಿ (Swiggy) ಕೆಲವು ವಸ್ತುಗಳನ್ನು ಆರ್ಡರ್ ಮಾಡಿದ್ದರು. ಕೆಲ ಸಮಯದಲ್ಲಿ ಅವರ ಒಂದು ಆರ್ಡರ್ (Order) ಆಧರಿಸಿ ಬರೋಬ್ಬರಿ 6 ಡೆಲಿವರಿ ಹುಡುಗರು (Delivery Boys) ಬಂದು ವಸ್ತುಗಳನ್ನು ಅವರ ಕೈಲಿಟ್ಟು ಹೋಗಿದ್ದಾರೆ. ಪ್ರಣಯ್ ಅವರಿಗೆ ಕಕ್ಕಾಬಿಕ್ಕಿಯಾಗುವುದೊಂದೇ ಕೆಲಸವಾಗಿತ್ತು! ಏಕೆಂದರೆ, ಅವರು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ ವಸ್ತುಗಳು 6 ಬಾರಿ ಮನೆಗೆ ತಲುಪಿದ್ದವು!

ಸ್ವಿಗ್ಗಿಯಲ್ಲಿ ಅವರು ಆಹಾರ ಪದಾರ್ಥಗಳನ್ನು (Food Items) ಆರ್ಡರ್ ಮಾಡಿದ ಸಮಯದಲ್ಲಿ ಯಾವುದಾದರೂ ತಾಂತ್ರಿಕ ಸಮಸ್ಯೆ ಆಗಿದ್ದಿರಬೇಕು. ಅದಕ್ಕಾಗಿಯೋ ಏನೊ, ಅವರ ಖಾತೆಯಿಂದ ಹಣ (Money) ಕಡಿತವಾಗಿದ್ದರೂ ಆರ್ಡರ್ ಮಾತ್ರ ಕ್ಯಾನ್ಸಲ್ (Cancel) ಎಂದೇ ತೋರಿಸುತ್ತಿತ್ತು. ಹೀಗಾಗಿ, ಅವರು ಮತ್ತೆ ಆರ್ಡರ್ ಮಾತ್ರಲು ಯತ್ನಿಸಿದರು. ಬಳಿಕ, ಕ್ಯಾಶ್ ಆನ್ ಡೆಲಿವರಿ ಆಯ್ಕೆಯನ್ನು ಬುಕ್ (Book) ಮಾಡಿದರು. ಆದರೂ ಸಫಲವಾಗಲಿಲ್ಲ. ಪ್ರತಿ ಯತ್ನವೂ ವಿಫಲವಾಗಿ, ಆರ್ಡರ್ ಕ್ಯಾನ್ಸಲ್ ಎಂದೇ ತೋರಿಸುತ್ತಿತ್ತು! ಕೊನೆಗೆ, ಅವರು ಮತ್ತೊಂದು ಡೆಲಿವರಿ ಆಪ್ ಜೆಪ್ಟೊ ಮುಖಾಂತರ ತಮಗೆ ಬೇಕಾದ ಆಹಾರ ಪದಾರ್ಥಗಳನ್ನು ಖರೀದಿಸಿದರು. 

I unintentionally broke down Swiggy’s app. 6 delivery executives brought the same order! 🤔

Here is what happened: ⬇️ pic.twitter.com/M18LS6KYrR

— Praanay Loya (@pranayloya)

6 ಡೆಲಿವರಿ ಬಾಯ್ಸ್
ವಸ್ತುಗಳ ಬುಕಿಂಗ್ ಸಮಯದಲ್ಲಿ ಆಗಿದ್ದ ಸಮಸ್ಯೆಯ ಪರಿಣಾಮ ಕೆಲ ಸಮಯದ ಬಳಿಕ ಕಂಡುಬಂತು. ಅವರ ಒಂದು ಆರ್ಡರ್ ಆಧರಿಸಿ 6 ಡೆಲಿವರಿ ಹುಡುಗರು ಮನೆಯ ಬಾಗಿಲನ್ನು ತಟ್ಟಿದರು. ಪ್ರಣಯ್ ದಂಗಾದರು. ಅವರಿಗೆ ಈ ಅನುಭವವಾಗಿದ್ದು ಡಿಸೆಂಬರ್ 10ರಂದು. ಸ್ವಿಗ್ಗಿ ಆಪ್ (App) ನಲ್ಲಾದ ಯಾವುದೋ ತೊಂದರೆಯಿಂದ ಆದ ಅನುಭವವನ್ನು ಅವರು ಹಲವು ಪೋಸ್ಟ್ (Post) ಗಳ ಮುಖಾಂತರ ಹೇಳಿಕೊಂಡಿದ್ದಾರೆ. 

 

ಇದು ಬಾತ್‌ರೂಮ್‌ ಅಲ್ಲ.. ಈ ಸ್ಟೈಲ್‌ನಲ್ಲಿ ಪೋಸ್ ಬೇರೆ ಕೊಡ್ತಿಯಾ: ರಶ್ಮಿಕಾ ವಿಡಿಯೋಗೆ ಬಂತು ವೈರಲ್‌ ಕಾಮೆಂಟ್‌!

ಒಂದಾದ ಮೇಲೆ ಒಂದು ಕರೆಗಳು
ಡೆಲಿವರಿ ಹುಡುಗರ ಫೋನ್ ಕರೆಗಳು (Phone Calls) ಒಂದಾದ ಮೇಲೆ ಒಂದರಂತೆ ಬರಲು ಆಗಮಿಸಿದಾಗ ಅವರಿಗೆ ಪರಿಸ್ಥಿತಿ ಅರ್ಥವಾಗತೊಡಗಿತ್ತು. “ತಮಗಾದ ಸಮಸ್ಯೆಯ ವಿಚಾರದಲ್ಲಿ ಕಸ್ಟಮರ್ ಸ್ಪೋರ್ಟ್  ಜನ ಏನೂ ಮಾಡಲಿಲ್ಲ, ಹೀಗಾಗಿ, ಡೆಲಿವರಿ ಹುಡುಗರು ಒಬ್ಬರಾದ ಮೇಲೆ ಒಬ್ಬರಂತೆ ಆಗಮಿಸಿದ್ದರು’ ಎಂದವರು ಹೇಳಿದ್ದಾರೆ. ಕೆಲವು ಗಂಟೆಗಳ ಬಳಿಕ, ಈಗ ತಮ್ಮ ಬಳಿ 20 ಲೀಟರ್ ಹಾಲು ((Milk), 6 ಕೆಜಿ ದೋಸೆ ಹಿಟ್ಟು, 6 ಪ್ಯಾಕೆಟ್ ಅನಾನಸ್ ಇವೆ. ಇಷ್ಟು ಪ್ರಮಾಣದ ಪದಾರ್ಥಗಳನ್ನು ಏನು ಮಾಡಬೇಕು? ಎಂದೂ ಕೇಳಿದ್ದಾರೆ!

ಕಾವ್‌ ಕಾವ್ ಕರಿತೈತಿ ಗೋವಾ.., ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಮತ್ತೊಂದು ಹಾಡು!

ಇವರ ಪೋಸ್ಟ್ ಅಂತರ್ಜಾಲದಲ್ಲಿ ವೈರಲ್ (Viral) ಆಗಿದ್ದು, ಚರ್ಚೆಯೂ ಆಗುತ್ತಿದೆ. ಸುಮಾರು 2.45 ಲಕ್ಷಕ್ಕೂ ಅಧಿಕ ಜನ ಇದನ್ನು ವೀಕ್ಷಿಸಿದ್ದಾರೆ. ಕೆಲವರು ಸ್ವಿಗ್ಗಿ ಆಪ್ ಅನ್ನು ದೂರ ಇಡುವುದಾಗಿ ಹೇಳಿದ್ದರೆ, ಕೆಲವರು ಪರಿಸ್ಥಿತಿಯನ್ನು ವಿನೋದದಿಂದ (Fun) ಪರಿಗಣಿಸಿದ್ದಾರೆ. 

click me!