ಈರುಳ್ಳಿ ಆರೋಗ್ಯಕ್ಕೆ ಒಳ್ಳೆಯದು. ಹಾಗೆಯೇ ಆಹಾರದ ರುಚಿಯನ್ನು ಇದು ಹೆಚ್ಚಿಸುತ್ತದೆ. ಹಸಿ ಈರುಳ್ಳಿ ತಿಂದ್ರೆ ಬಾಯಿ ವಾಸನೆ ಬರುತ್ತೆ ಅಂತಾ ಕೆಲವರು ತಿನ್ನೋದಿಲ್ಲ. ಆದ್ರೆ ವಾಸನೆ ಬರದೆ, ಆರೋಗ್ಯಕ್ಕೆ ಲಾಭ ನೀಡುವ ಹುರಿದ ಈರುಳ್ಳಿ ತಿಂದು ನೋಡಿ.
ಕಣ್ಣಲ್ಲಿ ನೀರು ತರಿಸುವ ಈರುಳ್ಳಿ ರುಚಿ ವಿಷ್ಯದಲ್ಲಿ ಮುಂದಿದೆ. ಈರುಳ್ಳಿ ಇದ್ರೆ ಯಾರು ಬೇಕಾದ್ರೂ ಅಡಿಗೆ ಮಾಡಬಹುದು ಎಂಬ ಮಾತು ಈಗ ಸೂಕ್ತ. ಯಾಕೆಂದ್ರೆ ಈರುಳ್ಳಿ ಇಲ್ಲದೆ ಅನೇಕರಿಗೆ ಅಡುಗೆ ಮಾಡೋಕೆ ಬರೋದಿಲ್ಲ. ಸಾಂಬಾರ್ ದಿಂದ ಹಿಡಿದು ಪಲ್ಯದವರೆಗೆ ಸಲಾಡ್ ನಿಂದ ಹಿಡಿದು ಚಾಟ್ಸ್ ವರೆಗೆ ಎಲ್ಲದಕ್ಕೂ ಈರುಳ್ಳಿ ಬೇಕು. ಹಸಿ ಈರುಳ್ಳಿಯನ್ನು ಮಸಾಲಾ ಪುರಿ ಮೇಲೆ ಉದುರಿಸಿದ್ರೆ ಅದ್ರ ರುಚಿಯೇ ಬೇರೆ. ಎಲ್ಲರ ಅಡುಗೆ ಮನೆಯಲ್ಲಿ ಸ್ಥಾನ ಪಡೆದಿರುವ ಈರುಳ್ಳಿ ಬರೀ ರುಚಿಗೆ ಮಾತ್ರವಲ್ಲ ಔಷಧಿಗೂ ಹೆಸರುವಾಸಿಯಾಗಿದೆ. ಈರುಳ್ಳಿಯನ್ನು ಅನೇಕ ಔಷಧಿಗಳಿಗೆ ಬಳಕೆ ಮಾಡಲಾಗುತ್ತದೆ. ಬೇಸಿಗೆಯಲ್ಲಿ ಹಸಿ ಈರುಳ್ಳಿ ತಿಂದ್ರೆ ಸಾಕಷ್ಟು ಪ್ರಯೋಜನವಿದೆ. ಈರುಳ್ಳಿಯಲ್ಲಿರುವ ಪೋಷಕಾಂಶಗಳು ಮತ್ತು ಗುಣಲಕ್ಷಣಗಳು ಬೇಸಿಗೆ ಕಾಲದಲ್ಲಿ ದೇಹವನ್ನು ತಾಪಮಾನದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ, ಜನರು ಸಾಮಾನ್ಯವಾಗಿ ಈರುಳ್ಳಿಯನ್ನು ಸಲಾಡ್ ಅಥವಾ ಮಸಾಲೆ ರೂಪದಲ್ಲಿ ತಿನ್ನುತ್ತಾರೆ. ಆದ್ರೆ ಎಂದಾದ್ರೂ ನೀವು ಹುರಿದ ಈರುಳ್ಳಿ ಸೇವನೆ ಮಾಡಿದ್ದೀರಾ? ಹುರಿದ ಈರುಳ್ಳಿಯನ್ನು ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಈರುಳ್ಳಿ (onion) ಯಲ್ಲಿರುವ ವಿಟಮಿನ್ ಬಿ 8, ಫೋಲೇಟ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ತಾಮ್ರ, ರಂಜಕ ಮತ್ತು ಮ್ಯಾಂಗನೀಸ್ ದೇಹಕ್ಕೆ ತುಂಬಾ ಪ್ರಯೋಜನಕಾರಿ. ಇಂದು ಹುರಿದ ಈರುಳ್ಳಿ ಪ್ರಯೋಜನವೇನು ಎಂಬುದನ್ನು ನಾವು ಹೇಳ್ತೇವೆ.
ಹುರಿದ ಈರುಳ್ಳಿ (Roasted Onions) ಪ್ರಯೋಜನಗಳು :
ರೋಗ ನಿರೋಧಕ ಶಕ್ತಿ (Immunity Power) ಹೆಚ್ಚಳಕ್ಕೆ ಹುರಿದ ಈರುಳ್ಳಿ : ಹುರಿದ ಈರುಳ್ಳಿಯಲ್ಲಿರುವ ವಿಟಮಿನ್,ಫೋಲೇಟ್ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ರೋಗ ನಿರೋಧಕ ಶಕ್ತಿ ಇದ್ರಿಂದ ಹೆಚ್ಚಾಗುತ್ತದೆ. ದೇಹ ಆರೋಗ್ಯವಾಗಿರಲು ಹುರಿದ ಈರುಳ್ಳಿ ಸಹಾಯ ಮಾಡುತ್ತದೆ.
ಬಲ ಪಡೆಯುವ ಮೂಳೆ (Bone) ಗಳು : ಹುರಿದ ಈರುಳ್ಳಿ ಸೇವನೆ ಮಾಡುವುದ್ರಿಂದ ನಿಮ್ಮ ಮೂಳೆಗಳು ಬಲ ಪಡೆಯುತ್ತವೆ. ಹುರಿದ ಈರುಳ್ಳಿ, ದೇಹಕ್ಕೆ ಬೇಕಾಗುವ ಕ್ಯಾಲ್ಸಿಯಂ (Calcium) ಅನ್ನು ನೀಡುತ್ತದೆ. ಇದ್ರಿಂದ ಮೂಳೆ ಬಲಗೊಳ್ಳುತ್ತದೆ. ಮೂಳೆಗೆ ಸಂಬಂಧಿಸಿದ ಎಲ್ಲ ಸಮಸ್ಯೆ ದೂರ ಮಾಡಲು ಹುರಿದ ಈರುಳ್ಳಿ ಉತ್ತಮ.
ಬಿಳಿ ದೇಸಿ ಕಾರ್ನ್ V/S ಹಳದಿ ಕಾರ್ನ್ ಆರೋಗ್ಯಕ್ಕೆ ಯಾವ್ದು ಒಳ್ಳೇದು ?
ಜೀರ್ಣಕ್ರಿಯೆಗೆ ಒಳ್ಳೆಯದು ಹುರಿದ ಈರುಳ್ಳಿ : ಹುರಿದ ಈರುಳ್ಳಿಯ ಸೇವನೆಯಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಜೀರ್ಣಾಂಗಕ್ಕೆ ಬಲ ನೀಡುವ ಕೆಲಸವನ್ನು ಹುರಿದ ಈರುಳ್ಳಿ ಮಾಡುತ್ತದೆ. ಜೀರ್ಣಕ್ರಿಯೆ ಸರಿಯಾದ್ರೆ ಹೊಟ್ಟೆಗೆ ಸಂಬಂದಿಸಿದ ಸಮಸ್ಯೆ ದೂರವಾಗುತ್ತದೆ.
ದೇಹದ ವಿಷ ಹೊರಹಾಕುತ್ತೆ ಹುರಿದ ಈರುಳ್ಳಿ : ಹುರಿದ ಈರುಳ್ಳಿ ಸೇವನೆ ಮಾಡುವುದ್ರಿಂದ ದೇಹದಲ್ಲಿರುವ ವಿಷ ಹೊರಗೆ ಹೋಗುತ್ತದೆ. ಇದನ್ನು ಸಲಾಡ್ ರೂಪದಲ್ಲಿ ನೀವು ಸೇವನೆ ಮಾಡಬಹುದು. ಹುರಿದ ಈರುಳ್ಳಿಯಲ್ಲಿರುವ ಗುಣಗಳು ದೇಹವನ್ನು ನಿರ್ವಿಷಗೊಳಿಸುತ್ತದೆ.
ಊತ ಕಡಿಮೆ ಮಾಡುವ ಶಕ್ತಿ : ಹುರಿದ ಈರುಳ್ಳಿ ಗಾಯ ಹಾಗೂ ನೋವಿಗೆ ಒಳ್ಳೆಯದು. ಇದು ನೋವಿನ ಊತವನ್ನ ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಹುರಿದ ಈರುಳ್ಳಿಯಲ್ಲಿ ಉರಿಯೂತ ಕಡಿಮೆ ಮಾಡುವ ಗುಣಲಕ್ಷಣಗಳಿವೆ.
ಬಿಸಿ ಆಹಾರಕ್ಕೆ ಅಪ್ಪಿತಪ್ಪಿಯೂ ನಿಂಬೆಹಣ್ಣಿನ ರಸ ಸೇರಿಸಬೇಡಿ !
ಕಿಡ್ನಿ ಆರೋಗ್ಯಕ್ಕೆ (Kidney Health) ಒಳ್ಳೆಯದು ಹುರಿದ ಈರುಳ್ಳಿ : ಹುರಿದ ಈರುಳ್ಳಿಯಲ್ಲಿ ಪೋಟ್ಯಾಶಿಯಂನಂತಹ ಮಿನರಲ್ ಇರುತ್ತದೆ. ಇದು ಕಿಡ್ನಿ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಇತರ ಪ್ರಯೋಜನ : ಹುರಿದ ಈರುಳ್ಳಿಯನ್ನು ತಿನ್ನುವುದ್ರಿಂದ ಒತ್ತಡ ಕಡಿಮೆಯಾಗುತ್ತದೆ. ಮಧುಮೇಹದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ತುಂಬಾ ಪ್ರಯೋಜನಕಾರಿ ಎನ್ನಲಾಗಿದೆ. ಈರುಳ್ಳಿಯನ್ನು ಬಿಸಿ ಬೂದಿಯಲ್ಲಿ ಬೇಯಿಸಿ ತಿಂದ್ರೆ ಅದ್ರ ಪ್ರಯೋಜನ ಹೆಚ್ಚು. ಆದ್ರೆ ಅದು ಈಗ ಸಾಧ್ಯವಿಲ್ಲ. ಅಂಥವರು ಬಾಣೆಲೆಗೆ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿ, ಈರುಳ್ಳಿಯನ್ನು ಹುರಿದು ಸೇವನೆ ಮಾಡಬಹುದು.