ವಿಟಮಿನ್ 12 ಹೆಚ್ಚಿರೋ ಮೀನಿನ ಕಣ್ಣಲ್ಲೂ ಇದೆ ಆರೋಗ್ಯದ ಗುಟ್ಟು!

By Suvarna NewsFirst Published Sep 6, 2023, 4:57 PM IST
Highlights

ಸಮುದ್ರದ ಆಹಾರದಲ್ಲಿ ಒಂದಾದ ಮೀನನ್ನು ತಿಂತೇವೆ, ಮೀನಿನ ಕಣ್ಣಿನ ರುಚಿ ನೋಡಿಲ್ಲ ಅನ್ನೋರು ಇದನ್ನೋದಿ. ಮೀನಿನ ಕಣ್ಣು ತಿನ್ನೋದ್ರಿಂದ ಸಾಕಷ್ಟು ಲಾಭವಿದೆ. ಮೀನಿನ ಕಣ್ಣು ಅನೇಕ ರೋಗಕ್ಕೆ ಮದ್ದು.

ಮೀನು ಅಂದ್ರೆ ಅನೇಕರ ಬಾಯಲ್ಲಿ ನೀರು ಬರುತ್ತೆ. ಫ್ರೆಶ್ ಮೀನು ಸಿಕ್ಕಿದ್ರೆ ಮನೆಯಲ್ಲಿ ಹಬ್ಬ ಎನ್ನುವವರಿದ್ದಾರೆ. ಫಿಶ್ ಕರಿ, ಫಿಶ್ ಸಾಂಬಾರನ್ನು ಎರಡು ದಿನ ಇಟ್ಟು ತಿನ್ನುವ ಜನರಿದ್ದಾರೆ. ಮೀನು ತಿನ್ನೋಕೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಮೀನಿ (Fish) ನಲ್ಲಿ ಜೀವಸತ್ವ, ಖನಿಜ ಮತ್ತು ಕೊಬ್ಬಿನಾಮ್ಲಗಳಂತಹ ಅನೇಕ ಪ್ರಮುಖ ಅಂಶಗಗಳಿವೆ.  ಮೀನಿನಲ್ಲಿ ವಿಟಮಿನ್ ಬಿ 12 (Vitamin B12) ಕೂಡ ಹೇರಳವಾಗಿದೆ. ಮೀನು ತಿನ್ನೋದ್ರಿಂದ ಕೆಂಪು ರಕ್ತ ಕಣಗಳ ಬೆಳವಣಿಗೆ ವೇಗ ಪಡೆಯುತ್ತದೆ. ನರಮಂಡಲ  ಉತ್ತಮ ಕಾರ್ಯ ನಿರ್ವಹಿಸಲು ಸಹಾಯವಾಗುತ್ತದೆ. ಕೆಲ ಖಾಯಿಲೆ (disease) ಗೆ ಮೀನು ಸೇವನೆ ಮಾಡುವಂತೆ ವೈದ್ಯರೇ ಸಲಹೆ ನೀಡ್ತಾರೆ.

ಸಾಮಾನ್ಯವಾಗಿ ಮೊದಲು ಮೀನನ್ನು ಸ್ವಚ್ಛವಾಗಿ ವಾಶ್ ಮಾಡಲಾಗುತ್ತದೆ. ನಂತ್ರ ಅದರ ಸಿಪ್ಪೆ ತೆಗೆದು, ಬಾಯಿಗೆ ಕೈ ಹಾಕಿ ಹೊಟ್ಟೆಯಲ್ಲಿರುವ ಎಲ್ಲ ಭಾಗಗಳು, ಕೊಳಕನ್ನು ಹೊರಗೆ ತೆಗೆದು ಸ್ವಚ್ಛಗೊಳಿಸಿ ಆಹಾರ ತಯಾರಿಸಲಾಗುತ್ತದೆ. ಮೀನು ಸೇವನೆ ಮಾಡುವ ಜನರು ಅದರ ಕಣ್ಣಿನಲ್ಲಿರುವ ಲಿಕ್ವಿಡನ್ನು ಒಳಗೆ ಎಳೆದುಕೊಂಡು ನುಗ್ಗೆ ಕಾಯಿಯಂದೆ ಜಿಗುಟನ್ನು ಹೊರಗಿಡ್ತಾರೆ. ಕಣ್ಣಿನ ಗುಡ್ಡೆ ಸೇರಿದಂತೆ ಯಾವುದೇ ಭಾಗದ ಸೇವನೆ ಮಾಡೋದಿಲ್ಲ. ಜನರು ಸೇವನೆ ಮಾಡುವ ಮೀನನ ಕಣ್ಣು ಬಹಳಷ್ಟು ಪ್ರಯೋಜನಕಾರಿ ಎಂಬುದು ಅನೇಕರಿಗೆ ತಿಳಿದಿಲ್ಲ.

100 ವರ್ಷ ಬದುಕಿ ಬಾಳಿದವರಿಂದ ಪಡೆದ್ಕೊಳ್ಳಿ ಅಡುಗೆ ಟಿಪ್ಸ್! 

ಮೀನಿನ ಕಣ್ಣು ಸೇವನೆ ಮಾಡುವುದ್ರಿಂದ ಆಗುವ ಪ್ರಯೋಜನಗಳು : 

ಪೋಷಕಾಂಶ : ಮೀನಿನ ಸೇವನೆಯಿಂದ ಎಷ್ಟು ಪ್ರಯೋಜನಗಳಿವೆಯೋ ಅದೇ ರೀತಿ ಅದರ ಕಣ್ಣು ಕೂಡ ಅನೇಕ ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಮೀನಿನ ಕಣ್ಣುಗಳು ಒಮೆಗಾ -3 ಕೊಬ್ಬಿನಾಮ್ಲಗಳು, ಪ್ರೋಟೀನ್ ಮತ್ತು ವಿಟಮಿನ್  ಮತ್ತು ಖನಿಜಗಳಂತಹ ಅನೇಕ ಪ್ರಮುಖ ಪೋಷಕಾಂಶಗಳನ್ನು ಹೊಂದಿರುತ್ತದೆ. ಒಮೆಗಾ -3 ಕೊಬ್ಬಿನಾಮ್ಲಗಳು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.  ಜೀವಸತ್ವಗಳು ಮತ್ತು ಖನಿಜಗಳು ಉತ್ತಮ ಆರೋಗ್ಯಕ್ಕೆ ಸಹಕಾರಿ.  ಚರ್ಮದ ಆರೋಗ್ಯ : ಮೀನಿನಲ್ಲಿ ಕಾಲಜನ್ ಎಂಬ ಅಂಶವಿದೆ. ಕಾಲಜನ್ ಒಂದು ರೀತಿಯ ಪ್ರೋಟೀನ್. ಇದು ಚರ್ಮ, ಕೀಲು, ಕೂದಲು ಮತ್ತು ಉಗುರುಗಳಿಗೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ನಮ್ಮ ದೇಹದಲ್ಲಿ ಕಾಲಜನ್ ಇರುತ್ತದೆ. ಆದ್ರೆ ವಯಸ್ಸಾದಂತೆ ಇದ್ರ ಮಟ್ಟ ಕಡಿಮೆ ಆಗ್ತಾ ಬರುತ್ತದೆ. ನಾವು ಮೀನಿನ ಕಣ್ಣನ್ನು ತಿನ್ನೋದ್ರಿಂದ ಕಾಲಜನ್ ಸ್ವಲ್ಪ ಮಟ್ಟಿಗೆ ನಮ್ಮ ದೇಹವನ್ನು ಸೇರುತ್ತದೆ.  

ಜ್ಞಾಪಕ ಶಕ್ತಿ ಸುಧಾರಣೆ : ಈಗಿನ ದಿನಗಳಲ್ಲಿ ಮೆದುಳಿನ ಆರೋಗ್ಯವನ್ನು ಜನರು ಮರೆಯುತ್ತಿದ್ದಾರೆ. ನಾನಾ ಕೆಲಸ, ಒತ್ತಡದಿಂದಾಗಿ ಮೆದುಳಿಗೆ ಹೆಚ್ಚು ಒತ್ತಡ ಬೀಳ್ತಿದೆ. ಇದ್ರಿಂದ ನೆನಪಿನ ಶಕ್ತಿ ಕಡಿಮೆಯಾಗ್ತಿದೆ. ವಯಸ್ಸಕರು ಸೇರಿದಂತೆ ಮಕ್ಕಳವರೆಗೆ ಎಲ್ಲರ ನೆನಪಿನ ಶಕ್ತಿ ಹೆಚ್ಚಾಗಬೇಕೆಂದ್ರೆ ಮೀನಿನ ಕಣ್ಣಿನ ಸೇವನೆ ಮಾಡಬೇಕು. ಮೀನಿನಲ್ಲಿರುವ ಒಮೆಗಾ -3 ಕೊಬ್ಬಿನಾಮ್ಲಗಳ ಸಹಾಯದಿಂದ ದುರ್ಬಲ ಸ್ಮರಣೆಯನ್ನು ಸುಧಾರಿಸಬಹುದು. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಒಮೆಗಾ -3 ಕೊಬ್ಬಿನಾಮ್ಲಗಳ ಸೇವನೆಯು ಕಲಿಕಾ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಜ್ಞಾಪಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಮೆದುಳಿನಲ್ಲಿ ರಕ್ತದ ಹರಿವನ್ನು ಸುಧಾರಿಸುತ್ತದೆ.   

ಶುಗರ್, ಬಿಪಿ ಇದ್ದೂ ಉಪವಾಸ, ವ್ರತ ಮಾಡ್ತೀರಾ? ಮಾತ್ರೆ ತಗೋಳ್ಳೋದು ಸೇಫಾ?

ಮೀನು ಸೇವನೆ ಮಾಡುವ ಪ್ರತಿಯೊಬ್ಬರೂ ಮೀನಿನ ಕಣ್ಣನ್ನು ತಿನ್ನೋದಿಲ್ಲ. ಕೆಲ ಭಾಗಗಳಲ್ಲಿ ಮೀನಿನ ಕಣ್ಣಿನ ಸೇವನೆ ಮಾಡೋದಿಲ್ಲ. ಮತ್ತೆ ಕೆಲವರ ಆರೋಗ್ಯಕ್ಕೆ ಮೀನಿನ ಕಣ್ಣು ಆಗಿ ಬರೋದಿಲ್ಲ. ಅಲರ್ಜಿಯಂತಹ ಸಮಸ್ಯೆ ಅವರನ್ನು ಕಾಡುತ್ತದೆ. ಅಡುಗೆ ಮಾಡುವ ಮೊದಲು ಮೀನಿನ ಕಣ್ಣುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಇತರ ಸಮಸ್ಯೆಗಳು ಸಹ ಉಂಟಾಗಬಹುದು. ಯಾವುದೇ ಅಲರ್ಜಿ ಅಥವಾ ಇನ್ನಾವುದೇ ಸಮಸ್ಯೆಯಿಲ್ಲ ಎನ್ನುವವರು ಮಾತ್ರ ಮೀನಿನ ಕಣ್ಣನ್ನು ಸೇವನೆ ಮಾಡಿ. ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಬಲವಂತದ ಸೇವನೆ ಬೇಡ. 
 

click me!