100 ವರ್ಷ ಬದುಕಿ ಬಾಳಿದವರಿಂದ ಪಡೆದ್ಕೊಳ್ಳಿ ಅಡುಗೆ ಟಿಪ್ಸ್!

By Suvarna News  |  First Published Sep 5, 2023, 2:28 PM IST

ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಹೆಂಗ್ ಹೆಂಗೋ ತಿಂದ್ರೆ ಅದ್ರಲ್ಲಿರುವ ಪೌಷ್ಟಿಕಾಂಶ ನಮ್ಮ ದೇಹ ಸೇರೋದಿಲ್ಲ. ತರಕಾರಿ ತಿಂದೇ 100 ವರ್ಷ ಬಾಳುವ ಇವರಿಗೆ ಅದನ್ನು ಬೆರೆಸುವ ಕಲೆ ಗೊತ್ತಿದೆ. ಗಟ್ಟಿಮುಟ್ಟಾಗಿರಬೇಕೆಂದ್ರೆ ನೀವೂ ಅವರ ರೆಸಿಪಿ ಟ್ರೈ ಮಾಡಿ. 
 


ಪ್ರತಿ ನಿತ್ಯ ತರಕಾರಿ ಸೇವನೆ ಮಾಡ್ಬೇಕು.. ಎಲ್ಲರೂ ನೀಡುವ ಸಲಹೆ ಕೇಳಿ ನಾವು ಮಾರುಕಟ್ಟೆಯಿಂದ ಒಂದಿಷ್ಟು ತರಕಾರಿಯನ್ನು ಪ್ರತಿ ದಿನ ತರ್ತೇವೆ. ತಂದ ತರಕಾರಿ ಕೆಲವು ಫ್ರಿಜ್ ಸೇರಿದ್ರೆ ಮತ್ತೆ ಕೆಲ ತರಕಾರಿ ಕೊಳೆತು ಹಾಳಾಗಿರುತ್ತದೆ. ಮಾರುಕಟ್ಟೆಯಿಂದ ತರಕಾರಿ ತಂದು ಅದನ್ನು ಚೆನ್ನಾಗಿ ಕ್ಲೀನ್ ಮಾಡಿ, ಅದಕ್ಕೊಂದಿಷ್ಟು ಎಣ್ಣೆ ಸುರಿದು ಸಬ್ಜಿ ಮಾಡಿ ಸೇವನೆ ಮಾಡುವವರು ಇಲ್ಲ ಎಂದಲ್ಲ. ಎಣ್ಣೆ, ಮಸಾಲೆ ಬೆರೆಸಿದ ತರಕಾರಿ ಸೇವನೆಯಿಂದ ನಮ್ಮ ಆರೋಗ್ಯ ಸುಧಾರಿಸೋದಿಲ್ಲ. ತರಕಾರಿಯನ್ನು ಯಾವ ಉರಿಯಲ್ಲಿ, ಎಷ್ಟು ಪ್ರಮಾಣದಲ್ಲಿ ಬೇಯಿಸಬೇಕು, ಅದಕ್ಕೆ ಎಷ್ಟು ಮಸಾಲೆ ಬೆರೆಸಬೇಕು ಎಂಬುದು ನಮಗೆ ಗೊತ್ತಿರಬೇಕು. ನೀವು ಸರಿಯಾದ ಮಾರ್ಗದಲ್ಲಿ ತರಕಾರಿ ಕುಕ್ ಮಾಡಿದಾಗ ಅದು ಆರೋಗ್ಯವನ್ನು ವೃದ್ಧಿಸುವುದು ಮಾತ್ರವಲ್ಲ ಮಾಂಸಾಹಾರ ಮೀರಿಸುವ ರುಚಿ ಪಡೆಯುತ್ತದೆ. ನೀವು ಸರಿಯಾದ ಮಾರ್ಗದಲ್ಲಿ ತರಕಾರಿಗಳನ್ನು ಬೇಯಿಸಿ ತಿಂದ್ರೆ ನೂರು ವರ್ಷ ಆರಾಮವಾಗಿ ಬದುಕಬಹುದು. ಇದನ್ನು ನಾವು ಹೇಳ್ತಿಲ್ಲ. 100 ವರ್ಷ ಬಾಳಿ ಬದುಕುತ್ತಿರುವ ಜನರ ಆಹಾರ ಪದ್ಧತಿಯನ್ನು ಸಂಶೋಧನೆ ಮಾಡಿದ ಸಂಶೋಧಕರು ಹೇಳ್ತಿದ್ದಾರೆ.

ಗ್ರೀಸ್, ಅಮೆರಿಕಾ, ಇಟಲಿ, ಕೋಸ್ಟರಿಯಾದಲ್ಲಿ 100 ವರ್ಷ ಬದುಕುವ ಪ್ರದೇಶಗಳಿವೆ. ಅವುಗಳನ್ನು ಬ್ಲ್ಯೂ ಏರಿಯಾ (Blue Zones) ಎಂದು ಕರೆಯಲಾಗುತ್ತದೆ. ಇಲ್ಲಿನ ಜನರು ಸಂಪೂರ್ಣ ಸಸ್ಯಹಾರಿಗಳು. ಅವರು ಬೀನ್ಸ್, ಸಿರಿಧಾನ್ಯ ಸೇರಿದಂತೆ ಸಸ್ಯಹಾರದಿಂದ ಪೌಷ್ಠಿಕ (Nutritious) ಹಾಗೂ ರುಚಿಕರ ಆಹಾರ ತಯಾರಿಸೋದ್ರಲ್ಲಿ ನಿಪುಣರು.  

Tap to resize

Latest Videos

ಜಪಾನ್ ಚೆರ್ರಿ ಬ್ಲಾಸಮ್ ಇಷ್ಟಪಡುವ ಕಾಜೋಲ್ ಗೆ ಇದು ಫೆವರೆಟ್ ಪ್ಲೇಸ್

ಸರಿಯಾದ ಮಸಾಲೆ ಬಳಕೆ ಕಲೆ : ಇಲ್ಲಿನ ಜನರಿಗೆ ಮಸಾಲೆ ಬಳಕೆ ಹೇಗೆ ಮಾಡಬೇಕು ಎಂಬುದು ಗೊತ್ತು. ಮಾಂಸದಲ್ಲಿ ಉಮಾಮಿ ಎಂಬ ಒಂದು ಅಂಶವಿರುತ್ತದೆ. ಅದು ಆಹಾರದ ಸ್ವಾದವನ್ನು ಹೆಚ್ಚಿಸುತ್ತದೆ. ಆದ್ರೆ ತರಕಾರಿಗಳಲ್ಲಿ ಈ ಉಮಾಮಿ ಇರೋದಿಲ್ಲ. ಸರಿಯಾದ ಪ್ರಮಾಣದಲ್ಲಿ ಮಸಾಲೆ, ಎಳ್ಳು, ಆಲಿವ್ ಆಯಿಲ್, ಎಣ್ಣೆಯನ್ನು ಬಳಕೆ ಮಾಡಿ ಅಣಬೆ, ಕಡಲೆಕಾಳನ್ನು ಬೇಯಿಸಿದ್ರೆ ಮಾಂಸಾಹಾರ ಮೀರಿಸುವ ಪರಿಮಳ,ರುಚಿಯನ್ನು ಪಡೆಯಬಹುದು ಎಂಬ ಗುಟ್ಟು ಇವರಿಗೆ ತಿಳಿದಿದೆ. 

ಬೆಂಡೆಕಾಯಿಗೆ ಈ ಎರಡನ್ನು ಮಿಕ್ಸ್ ಮಾಡಿ ನೋಡಿ : ಅನೇಕರಿಗೆ ಬೆಂಡೆಕಾಯಿ ಸೇರೋದಿಲ್ಲ. ಅದು ಲೂಳೆಯಂತೆ ಇರುತ್ತದೆ ಎನ್ನುವ ಕಾರಣಕ್ಕೆ ಅದನ್ನು ಸೇವಿಸಲು ಹಿಂದೇಟು ಹಾಕ್ತಾರೆ. ಆದ್ರೆ ಬೆಂಡೆಕಾಯಿಯನ್ನು ಅಲ್ಲಿನ ಜನರು ಭಿನ್ನವಾಗಿ ಬೇಯಿಸುವ ಮೂಲಕ ಅದ್ರ ರುಚಿ ಜೊತೆ ಪೌಷ್ಟಿಕಾಂಶದ ಸಂಪೂರ್ಣ ಲಾಭವನ್ನು ಪಡೆಯುತ್ತಾರೆ. 

ರಾತ್ರಿ ಮಲಗೋ ಮುಂಚೆ ಹಾಲು ಕುಡೀತೀರಾ? ತೂಕ ಹೆಚ್ಚಳದ ಜೊತೆ ಇಷ್ಟೆಲ್ಲಾ ಸಮಸ್ಯೆಯಾಗುತ್ತೆ

ಬೆಂಡೆಕಾಯಿಗೆ ಅವರು ಎಳ್ಳಿನ ಬೀಜ ಮತ್ತು ಕೆಂಪು ಮೆಣಸಿನಕಾಯಿಯನ್ನು ಸೇರಿಸುತ್ತಾರೆ. ಆಸಿಡ್ ಹಾಗೂ ಶಾಖವನ್ನು ಇದು ಸಮತೋಲದಲ್ಲಿಡುತ್ತದೆ.  ಪ್ರೋಟೀನ್, ಕಾರ್ಬೋಹೈಡ್ರೇಟ್, ಫೈಬರ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಬಿ 6 ನಂತಹ ಎಲ್ಲಾ ಅಗತ್ಯ ಪೋಷಕಾಂಶಗಳು ಎಳ್ಳಿನಲ್ಲಿ ಕಂಡು ಬರುತ್ತದೆ. ಇದರ ಸೇವನೆಯು ಹೃದಯ, ಮೆದುಳು ಮತ್ತು ಮೂಳೆಗಳನ್ನು ಬಲವಾಗಿ ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಮೆಣಸಿನಕಾಯಿಯಲ್ಲಿ ವಿಟಮಿನ್ ಸಿ ಇದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಮೆಣಸಿನಕಾಯಿ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಬೆಂಡೆಕಾಯಿಗೆ ಈ ಎರಡು ಪದಾರ್ಥ ಬೆರೆಸೋದ್ರಿಂದ ಬೆಂಡೆಕಾಯಿ ಜೊತೆ ಈ ಎರಡೂ ಪದಾರ್ಥದ ಪೌಷ್ಠಿಕಾಂಶ ನಮ್ಮ ದೇಹ ಸೇರುತ್ತದೆ.

ಒಂದೇ ವಿಧಾನದ ಅಗತ್ಯವಿಲ್ಲ : ಜನರು ಒಂದೇ ವಿಧಾನದಲ್ಲಿ ಅಡುಗೆ ಮಾಡ್ತಾರೆ. ಹಾಗೆ ಮಾಡುವ ಅಗತ್ಯವಿಲ್ಲ ಎನ್ನುತ್ತಾರೆ ಸಂಶೋಧಕರು. ತರಕಾರಿ ಸಿಪ್ಪೆಗಳನ್ನು ತೆಗೆದು, ಹೆಚ್ಚಿನ ಮಸಾಲೆ ಹಾಕಿ ರುಚಿ ಹೆಚ್ಚಿಸುವ ಕೆಲಸ ಮಾಡ್ತಾರೆ. ಆದ್ರೆ ಮಸಾಲೆ ಮತ್ತು ಗಿಡಮೂಲಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕಾಗಿಲ್ಲ. ಸರಿಯಾದ ಪ್ರಮಾಣದಲ್ಲಿ ಬಳಸಬೇಕು. ಅಲ್ಲಿನ ಜನರು ಸಸ್ಯಜನ್ಯ ಆಹಾರವನ್ನೇ ಹೆಚ್ಚು ಸೇವನೆ ಮಾಡೋದು ಕೂಡ ಅವರ ದೀರ್ಘಾಯಸ್ಸಿಗೆ ಕಾರಣವಾಗಿದೆ ಎನ್ನುತ್ತಾರೆ ಸಂಶೋಧಕರು.  

click me!