ಕಾಲಲ್ಲೇ ತುಳಿದು ಹದ ಮಾಡ್ತಾರೆ, ಬೆವರೂ ಒರೆಸಿ ಹಾಕ್ತಾರೆ; ಚಾಕೊಲೇಟ್ ಮೇಕಿಂಗ್ ವಿಡಿಯೋ ವೈರಲ್

By Vinutha Perla  |  First Published Jun 13, 2023, 3:57 PM IST

ಚಾಕೋಲೇಟ್ ತಿನ್ನೋಕೆ ಕುಳಿತ್ರೆ ಬಾಯಿ ನಿಲ್ಲೋದಿಲ್ಲ. ಆದ್ರೆ ಈ ಚಾಕೋಲೇಟ್ ಬಗ್ಗೆ ಕೇಳಿದ್ರೆ ಸರಿಯಾಗಿ ಯಾರಿಗೂ ಗೊತ್ತಿಲ್ಲ. ಅದನ್ನು ಯಾವುದ್ರಿಂದ ತಯಾರಿಸಲಾಗುತ್ತೆ ಎಂಬುದು ಅನೇಕರಿಗೆ ತಿಳಿದಿಲ್ಲ. ನೀವು ಕೂಡಾ ಚಾಕೊಲೇಟ್ ಪ್ರಿಯರಾ. ಹಾಗಿದ್ರೆ ಚಾಕೊಲೇಟ್ ತಯಾರಿಸೋದು ಹೇಗೆ ಅಂತ ಒಮ್ಮೆ ನೋಡ್ಕೊಂಡು ಕಣ್ಣು ಪಾವನ ಮಾಡ್ಕೊಳ್ಳಿ. 


ಚಾಕೋಲೇಟ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ? ಪುಟ್ಟ ಮಕ್ಕಳಿಂದ ಹಿರಿಯರವರೆಗೂ ಎಲ್ಲರಿಗೂ ಚಾಕೋಲೆಟ್ ಅಂದ್ರೆ ಇಷ್ಟದ ಸಿಹಿ ತಿನಿಸು. ಕೆಲವೊಂದು ಬಗೆಯ ಹಣ್ಣುಗಳು, ಫ್ಲೇವರ್‌, ಒಣ ಹಣ್ಣುಗಳನ್ನು ಸೇರಿಸಿ ರುಚಿಕರವಾದ ಚಾಕೋಲೆಟ್ ತಯಾರಿಸುತ್ತಾರೆ. ಎಲ್ಲರೂ ತಮಗಿಷ್ಟವಾದ ಬಗೆಯ ಚಾಕೊಲೇಟ್‌ ಖರೀದಿಸಿ ತಿನ್ನುತ್ತಾರೆ. ಆದ್ರೆ ಚಾಕೊಲೇಟ್ ಹೇಗೆ ತಯಾರಿಸ್ತಾರೆ, ಅದಕ್ಕೆ ಏನೆಲ್ಲಾ ಸೇರಿಸುತ್ತಾರೆ ಎಂಬುದರ ಬಗ್ಗೆ ನಿಮಗೆಷ್ಟು ಗೊತ್ತಿದೆ. ಕೋಕೋ ಬೀನ್ಸ್ ನಿಂದ ಚಾಕೊಲೇಟ್ ಮಾಡ್ತಾರೆ ಅನ್ನೋದು ಸಾಮಾನ್ಯವಾಗಿ ಎಲ್ಲರೂ ತಿಳಿದುಕೊಂಡಿರುವ ವಿಚಾರ. ಆದ್ರೆ ಚಾಕೊಲೇಟ್ ಮಾಡೋ ಪ್ರೊಸೆಸ್ ಹೇಗಿದೆ ಎಂಬುದನ್ನು ನೋಡಿದವರು ಕಡಿಮೆ. ಆ ಕುರಿತಾದ ಮಾಹಿತಿ ಇಲ್ಲಿದೆ.

ಚಾಕೊಲೇಟ್‌ ತಯಾರಿ ಕಂಪೆನಿಯಲ್ಲಿ ದೊಡ್ಡ ದೊಡ್ಡ ಯಂತ್ರಗಳಲ್ಲಿ (Machine) ಚಾಕೊಲೇಟ್ ತಯಾರಾಗುವುದನ್ನು ನೋಡಬಹುದು. ಇಲ್ಲಿ ಕಾರ್ಮಿಕರು (Workers) ಕೈಗಳಲ್ಲಿ ಅಲ್ಲ ಬದಲಿಗೆ ಕಾಲಲ್ಲಿ ಈ  ಹಿಟ್ಟನ್ನು ತುಳಿದು ಮಿಕ್ಸ್ ಮಾಡುತ್ತಾರೆ. ಕೆಸರನ್ನು ತುಳಿದಂತೆ ಚಾಕೊಲೇಟ್‌ ಹಿಟ್ಟನ್ನು ತುಳಿದು ಹದಕ್ಕೆ ತರಿಸುವುದನ್ನು ನೋಡಬಹುದು. ಎಲ್ಲರೂ ಚಾಕೊಲೇಟ್ ಮಿಶ್ರಣ (Chocolate mixing) ಮಾಡುತ್ತಾ ಅದರಲ್ಲೇ ಉರುಳಾಡ್ತಾರೆ. ಮೈ ಮೇಲಿಂದ ಬೆವರನ್ನೂ ಅದರಲ್ಲೇ ತೊಡೆದು ಹಾಕ್ತಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಕೆಲವೊಬ್ಬರು ಇದು ಚಾಕೊಲೇಟ್ ಅಲ್ಲ ಗ್ರೀಸ್ ಎಂದು ಸಹ ಹೇಳುತ್ತಿದ್ದಾರೆ.

Tap to resize

Latest Videos

ಪಾನಿಪುರಿ ನೀರಿಗೆ ಮೂತ್ರ ಬೆರೆಸಿದ 'ಅಂಕಲ್': ತೆರೆ ಹಿಂದಿನ ವಿಡಿಯೋ ವೈರಲ್!

ಕಾಲಲ್ಲಿ ತುಳಿದೂ ತುಳಿದೂ ಮಂಡಕ್ಕಿ ಮಾಡ್ತಾರೆ!
ಸ್ಟ್ರೀಟ್‌ಫುಡ್ ಅಂದ್ರೆ ನಾವು ಸಾಕಷ್ಟು ಹೈಜೀನ್‌ ಇರಬೇಕು ಅಂತ ಎಕ್ಸ್‌ಪೆಕ್ಟ್ ಮಾಡೋ ಹಾಗಿಲ್ಲ. ಯಾಕಂದ್ರೆ ರಸ್ತೆಬದಿಯಲ್ಲಿ ಹೆಚ್ಚು ವ್ಯವಸ್ಥೆ ಇಲ್ಲದ ಕಾರಣ ಸಹಜವಾಗಿಯೇ ಅಲ್ಲಿ ಹೆಚ್ಚು ಸ್ವಚ್ಛತೆ (Hygeine) ಕಾಪಾಡಲು ಸಾಧ್ಯವಾಗುವುದಿಲ್ಲ. ಆದರೆ ಸ್ಪಲ್ಪ ಮಟ್ಟಿಗಾದರೂ ಹೈಜೀನ್‌ ಆಗಿರಬೇಕಲ್ಲ. ಆದರೆ ಕಾರ್ಖಾನೆಯಲ್ಲಿ (Factory) ಅಕ್ಕಿಯಿಂದ ಈ ಫಪ್ಡ್‌ ರೈಸ್‌ನ್ನು ಎಷ್ಟು ಕೆಟ್ಟದಾಗಿ ತಯಾರಿಸ್ತಾರೆ ನೋಡಿ. 

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಕಾರ್ಖಾನೆಯಲ್ಲಿ ಕೊಳಕು ಬಟ್ಟೆಯನ್ನು ಧರಿಸಿದ ವ್ಯಕ್ತಿ ಕಾಲಲ್ಲಿ ತುಳಿದು ಅಕ್ಕಿಯಿಂದ ಮಂಡಕ್ಕಿಯನ್ನು ತಯಾರಿಸುವುದನ್ನು ನೋಡಬಹುದು. ಆಹಾರ ಬ್ಲಾಗರ್ ಅಮರ್ ಸಿರೋಹಿ ಅವರು ತಮ್ಮ Instagram ಪುಟದ foodie_incarnateನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅಕ್ಕಿ (Rice)ಯಿಂದ ಮಂಡಕ್ಕಿಯನ್ನು ತಯಾರಿಸುವ ಸಂಪೂರ್ಣ ವಿಧಾನವಿದೆ. ಕೆಟ್ಟದಾಗಿ ಮಂಡಕ್ಕಿ ತಯಾರಿಸುವ ರೀತಿ ಚಾಟ್ಸ್‌ ಪ್ರಿಯರು ಬೆಚ್ಚಿಬೀಳುವಂತೆ ಮಾಡಿದೆ. 

ಆಹಾರ ನೋಡಿದ್ರೇನೆ ಭಯ..! ಅರೆ ಇದೆಂಥಾ ವಿಚಿತ್ರ ಫೋಬಿಯಾ ?

ಮೊದಲಿಗೆ ಕಾರ್ಖಾನೆಯ ಕೆಲಸಗಾರನು ಅಕ್ಕಿಯನ್ನು ನೀರಿನಲ್ಲಿ ನೆನೆಸಿ ತನ್ನ ಕಾಲುಗಳಿಂದ ಹಿಸುಕುವ ಮೂಲಕ ಹೆಚ್ಚುವರಿ ಸಿಪ್ಪೆಯನ್ನು ತೊಡೆದುಹಾಕುತ್ತಾನೆ. ನಂತರ ಅಕ್ಕಿ ರಾಶಿಯಾಗಿ ಕೆಳಕ್ಕೆ ಬೀಳುತ್ತದೆ. ನಂತರ ಈ ಮಿಶ್ರಣಕ್ಕೆ ಉಪ್ಪು ಸೇರಿಸಲಾಗುತ್ತದೆ. ನಂತರ ಕೆಲಸಗಾರನು ತನ್ನ ಕಾಲುಗಳೊಂದಿಗೆ ಇದನ್ನು ಮಿಶ್ರಣ ಮಾಡುತ್ತಾನೆ. ಮುಂದಿನ ಹಂತವು ಭತ್ತದ ಕಾಳುಗಳನ್ನು ಯಂತ್ರಕ್ಕೆ (Machine) ನೀಡುವುದನ್ನು ತೋರಿಸಿತು, ತುಪ್ಪುಳಿನಂತಿರುವ, ಉಬ್ಬಿದ ಅಕ್ಕಿ ಬಳಕೆಗೆ ಸಿದ್ಧವಾಗಿದೆ. ಸಂಪೂರ್ಣ ವಿಧಾನ ಅನೈರ್ಮಲ್ಯದಿಂದ (Unhygienic) ಕೂಡಿರುವುದನ್ನು ನೋಡಬಹುದು. ಈ ವಿಡಿಯೋವನ್ನು ನೋಡಿದ ವೀಕ್ಷಕರು ಆಘಾತಕ್ಕೊಳಗಾಗಿದ್ದಾರೆ. ಫಪ್ಡ್‌ ರೈಸ್‌ನ್ನು ಇಷ್ಟು ಕೆಟ್ಟದಾಗಿ ತಯಾರಿಸುತ್ತಾರಾ ಎಂದು ಆಘಾತ ವ್ಯಕ್ತಪಡಿಸಿದ್ದಾರೆ. 

 
 
 
 
 
 
 
 
 
 
 
 
 
 
 

A post shared by Dev (@street_prasadam)

click me!