ಬಾಬಾ ರಾಮ್‌ದೇವ್ ಯೋಗ, ಪಾರಂಪರಿಕ ವೈದ್ಯ ಪದ್ಧತಿ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸೋ ಕೆಲಸ ಮಾಡುತ್ತಾ ಬಂದಿದ್ದಾರೆ. ಅವರ ಮಾತುಗಳಿಗೆ ಸಾಕಷ್ಟು ಕೇಳುಗರಿದ್ದಾರೆ. ಇದೀಗ ಅವರು ಊಟ, ಚಪಾತಿ ಜೊತೆಗೇ ತಿನ್ನಬೇಡಿ ಅಂತಿದ್ದಾರೆ. ಇದ್ಯಾಕಿರಬಹುದು?
ಬಾಬಾ ರಾಮ್ ದೇವ್ ಅವರು ಆಹಾರ ಆರೋಗ್ಯಕ್ಕೆ ಸಂಬಂಧಿಸಿ ಸಲಹೆ ಸೂಚನೆ ನೀಡುತ್ತಲೇ ಇರುತ್ತಾರೆ. ಅದರಲ್ಲಿ ನಾವು ತೆಗೆದುಕೊಳ್ಳುವ ಆಹಾರದಲ್ಲಿ ನಾವು ಫಾಲೋ ಮಾಡುವ ಕೆಲವು ತಪ್ಪು ಕ್ರಮಗಳ ಬಗ್ಗೆ ಅವರು ಎಚ್ಚರಿಕೆ ನೀಡುತ್ತಾರೆ. ಅದೇ ರೀತಿ ಸರಿಯಾದ ಆಹಾರ ಕ್ರಮ ಯಾವುದು ಅನ್ನೋದನ್ನೂ ಸರಿಯಾಗಿ ಹೇಳುತ್ತಾರೆ. ಈಗ ಬೊಜ್ಜು ಸಾರ್ವತ್ರಿಕ ಸಮಸ್ಯೆ. ಇದರಿಂದ ಉಂಟಾಗುವ ಹಾನಿ ಸಣ್ಣ ಪ್ರಮಾಣದ್ದಲ್ಲ. ಬೊಜ್ಜಿನ ಸಮಸ್ಯೆಯಿಂದ ನೀವು ಮಧುಮೇಹ, ಕೊಲೆಸ್ಟ್ರಾಲ್, ಪಾರ್ಶ್ವವಾಯು ಮತ್ತು ಬಂಜೆತನದಂತಹ ಕಾಯಿಲೆಗಳಿಗೆ ಬಲಿಯಾಗಬಹುದು. ಬಾಬಾ ರಾಮ್‌ದೇವ್ ಈ ಬೊಜ್ಜಿನ ನಿವಾರಣೆಗೆ ಅನೇಕ ಪರಿಹಾರಗಳನ್ನು ಸೂಚಿಸುತ್ತಾರೆ. ಅವರು ಈ ಸಮಸ್ಯೆಗೆ ಪರಿಹಾರವಾಗಿ ಹಲವಾರು ಆಯುರ್ವೇದ ಚಿಕಿತ್ಸೆಗಳನ್ನು ತಿಳಿಸಿದ್ದಾರೆ ಮತ್ತು ಒಬ್ಬ ವ್ಯಕ್ತಿಯು ಅವುಗಳನ್ನು ಸರಿಯಾಗಿ ಅನುಸರಿಸಿದರೆ, ಅವನು ತೂಕವನ್ನು ಕಳೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ನಾವು ಊಟ ಮಾಡುವಾಗ ಮೊದಲಿಗೆ ಚಪಾತಿ ಪಲ್ಯ ತಿಂದು ಆಮೇಲೆ ಅನ್ನ ಸಾಂಬಾರು ಮಜ್ಜಿಗೆ ತಿನ್ನುತ್ತೇವೆ. ಆದರೆ ಇದು ಒಳ್ಳೆಯ ಆಹಾರ ಕ್ರಮ ಅಲ್ಲ ಎಂದು ಬಾಬಾ ರಾಮ್‌ದೇವ್ ಹೇಳುತ್ತಾರೆ. ಇದರಿಂದ ಏನೆಲ್ಲ ಸಮಸ್ಯೆ ಉಂಟಾಗಬಹುದು ಎಂಬುದನ್ನೂ ಪಟ್ಟಿ ಮಾಡುತ್ತಾರೆ. ಅದೇ ರೀತಿ ಬೊಜ್ಜಿನ ನಿವಾರಣೆಗೆ ಬೆಳಿಗ್ಗೆ ಉಗುರುಬೆಚ್ಚನೆಯ ನೀರಿನಲ್ಲಿ ನಿಂಬೆ ರಸ ಬೆರೆಸಿ ಕುಡಿಯುವುದು ಬೆಸ್ಟ್ ಅನ್ನುವುದು ಇವರ ಟಿಪ್ಸ್. ಇದರಿಂದ ನಮ್ಮ ದೇಹದಲ್ಲಿರುವ ಹೆಚ್ಚುವರಿ ಕೊಬ್ಬು ಕ್ರಮೇಣ ಹೊರಬರುತ್ತದೆ ಮತ್ತು ತೂಕ ಕಡಿಮೆಯಾಗಲು ಪ್ರಾರಂಭಿಸುತ್ತದೆ. ದೇಹದಲ್ಲಿ ಕೊಬ್ಬನ್ನು ಕರಗಿಸಲು ಇದು ಉತ್ತಮ ಆಯುರ್ವೇದ ಚಿಕಿತ್ಸೆಯಾಗಿದೆ ಎಂದು ಅವರು ಹೇಳುತ್ತಾರೆ. ಜೊತೆಗೆ ನಿಯಮಿತವಾಗಿ ದಾಲ್ಚಿನ್ನಿಯನ್ನು ಬಿಸಿ ನೀರಿನಲ್ಲಿ ಕುದಿಸಿ ನಂತರ ಅದನ್ನು 1 ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯುತ್ತಿದ್ದರೆ ಅದು ನಮ್ಮ ತೂಕವನ್ನು ಕಡಿಮೆ ಮಾಡುತ್ತದೆ. ಅದೇ ರೀತಿ ರಾತ್ರಿಯಲ್ಲಿ 1 ಚಮಚ ತ್ರಿಫಲವನ್ನು ಬೆಚ್ಚಗಿನ ನೀರಿನೊಂದಿಗೆ ಸೇವಿಸುವುದರಿಂದ ತೂಕವು ನಿಯಂತ್ರಣದಲ್ಲಿರುತ್ತದೆ ಎನ್ನುತ್ತಾರವರು.
undefined
ನಿಲ್ಲಿ.. ಫುಡ್ ಪ್ಯಾಕೆಡ್ ಹಿಂದಿರೋ ಮಾಹಿತಿ ಓದಿ.. ಅರೆ ಕ್ಷಣವೇ ಖರೀದಿ ನಿಲ್ಲಿಸ್ತೀರಿ
ಊಟದಲ್ಲಿ ಚಪಾತಿ ಮತ್ತು ಅನ್ನವನ್ನು ತಿನ್ನಬೇಡಿ ಎಂದು ಬಾಬಾ ರಾಮದೇವ್ ಸಲಹೆ (suggestion) ನೀಡುತ್ತಾರೆ. ಏಕೆಂದರೆ ಇದನ್ನು ತಿನ್ನುವುದರಿಂದ ಬೊಜ್ಜು ಹೆಚ್ಚಾಗುವ ಅಪಾಯವಿದೆ. ವಾಸ್ತವವಾಗಿ ಈ ಎರಡೂ ಧಾನ್ಯಗಳು ಹೆಚ್ಚಿನ ಕ್ಯಾಲೋರಿಗಳನ್ನು (calory) ಹೊಂದಿರುತ್ತವೆ. ಇದರಿಂದಾಗಿ ದೇಹದಲ್ಲಿ ಕೊಬ್ಬು ಹೆಚ್ಚಾಗಲು ಪ್ರಾರಂಭಿಸುತ್ತದೆ. ಎರಡನ್ನೂ ತಿಂದ ನಂತರ ಚಯಾಪಚಯ ನಿಧಾನವಾಗುತ್ತದೆ ಮತ್ತು ಬೊಜ್ಜು ಹೆಚ್ಚಾಗುತ್ತದೆ. ಹೀಗಾಗಿ ಅನ್ನ ಮತ್ತು ಚಪಾತಿಗಳನ್ನ ಜೊತೆಯಾಗಿ ತಿನ್ನುವ ಅಭ್ಯಾಸ ನಿಮಗಿದ್ದರೆ ನಿಧಾನಕ್ಕೆ ಇದನ್ನು ಕಡಿಮೆ ಮಾಡುತ್ತಾ ಬನ್ನಿ. ಸಲಾಡ್ಸ್ ಹೆಚ್ಚೆಚ್ಚು ಸೇವನೆ ಮಾಡಿ. ಆದರೆ ಚಪಾತಿ, ಅನ್ನ ಎರಡನ್ನೂ ಒಟ್ಟೊಟ್ಟಿಗೆ ಸೇವಿಸಬೇಡಿ.
ತಡವಾಗಿ ಊಟ ಮಾಡುವುದರಿಂದ ಕೊಬ್ಬನ್ನು ಸುಡುವ ದೇಹದ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದರಿಂದಾಗಿ ತೂಕ (wait gain) ಹೆಚ್ಚಾಗಬಹುದು. ಅಷ್ಟೇ ಅಲ್ಲ, ಈ ಅಭ್ಯಾಸದಿಂದ ನಮ್ಮ ರಕ್ತದಲ್ಲಿನ ಸಕ್ಕರೆ (sugar level) ಪ್ರಮಾಣವೂ ಹೆಚ್ಚಾಗಬಹುದು. ಅದಕ್ಕಾಗಿಯೇ ಬಾಬಾ ರಾಮ್‌ದೇವ್ ಸಂಜೆ ಏಳರ ಮೊದಲು ರಾತ್ರಿಯ ಊಟ ಮಾಡಿ ಎಂದು ಸಲಹೆ ನೀಡುತ್ತಾರೆ.
ಮನೆ ಆಹಾರ ತಿಂದ್ರೂ ಗ್ಯಾಸ್ ಆಗ್ತಿದೆಯಾ? ಬ್ರೇಕ್ ಫಾಸ್ಟ್‌ನಲ್ಲಿದೆ ಗುಟ್ಟು
ರಾಮ್‌ದೇವ್ ಅವರು ನೀಡುವ ಈ ಟಿಪ್ಸ್ ಅನ್ನು ಸಾಧ್ಯವಾದಷ್ಟರ ಮಟ್ಟಿಗೆ ಫಾಲೋ ಮಾಡಿ. ಆದರೆ ಪ್ರತೀ ಸಲ ತಟ್ಟೆಗೆ ಚಪಾತಿ ಅನ್ನ (Rice) ಜೊತೆಯಾಗಿ ಹಾಕಿಕೊಳ್ಳುವಾಗ ರಾಮ್ ದೇವ್ ಮಾತು ನೆನಪಿಸಿಕೊಳ್ಳಿ.