ನಿಲ್ಲಿ.. ಫುಡ್ ಪ್ಯಾಕೆಡ್ ಹಿಂದಿರೋ ಮಾಹಿತಿ ಓದಿ.. ಅರೆ ಕ್ಷಣವೇ ಖರೀದಿ ನಿಲ್ಲಿಸ್ತೀರಿ

By Suvarna NewsFirst Published Feb 14, 2024, 6:32 PM IST
Highlights

ಹೊಟ್ಟೆ ತುಂಬಬೇಕು, ರುಚಿ, ಆರೋಗ್ಯಕ್ಕೆ ಒಳ್ಳೆಯದು ಹೀಗೆ ನಾನಾ ಕಾರಣ ಹೇಳಿ ನಾವು ಪ್ಯಾಕೆಟ್ ಫುಡ್ ಮನೆಗೆ ಬರ್ತೇವೆ. ಆದ್ರೆ ಅದ್ರಲ್ಲಿ ಏನೇನ್ ಇದೆ ಎನ್ನುವ ಮಾಹಿತಿ ಓದೋದೇ ಇಲ್ಲ. ಹಾಗಾದ್ರೆ ಅದು ಒಳ್ಳೇದು ಅಂತ ಡಿಸೈಡ್ ಹೇಗೆ ಮಾಡ್ತೀರಿ?  
 

ಗೋಧಿ ಹಿಟ್ಟಿರಲಿ, ತೆಂಗಿನ ಎಣ್ಣೆ ಇರಲಿ, ಮ್ಯಾಗಿ ಪ್ಯಾಕ್ ಬೇಕಾಗಿರಲಿ, ಅಂಗಡಿಗೆ ಹೋಗಿ ಅದನ್ನು ಖರೀದಿ ಮಾಡಿ ಬರುವ ನಾವು, ಬೆಲೆಯನ್ನು ಮಾತ್ರ ನೋಡ್ತೇವೆ. ಕೆಲವೇ ಕೆಲವರು ಮಂದಿ ಲಾಸ್ಟ್ ಡೇಟ್ ಚೆಕ್ ಮಾಡ್ತಾರೆ. ಬಹುತೇಕರು ಅದನ್ನೂ ನೋಡೋದಿಲ್ಲ. ಹಾಗಾಗಿ ನಮಗೆ ಇದನ್ನು ಖರೀದಿ ಮಾಡಲು 6-10 ಸೆಕೆಂಡು ಸಾಕಾಗುತ್ತೆ. ಪ್ಯಾಕ್ ಹಿಂದೆ ಅನೇಕ ವಿಷ್ಯಗಳನ್ನು ಬರೆದಿರುತ್ತಾರೆ. ನಾವ್ಯಾರು ಅದನ್ನು ಗಮನಿಸೋದಿಲ್ಲ. ಪ್ಯಾಕೆಟ್ ನಲ್ಲಿರುವ ಎಲ್ಲ ಆಹಾರ ಖಾಲಿಯಾಗಿ ಅದು ಕಸ ಸೇರಿದ್ರೂ ನಾವು ಪ್ಯಾಕೆಟ್ ಹಿಂದೆ ಏನು ಬರೆದಿದೆ ಎನ್ನುವುದನ್ನು ಓದೋದಿಲ್ಲ. 

ಪ್ಯಾಕೆಟ್‌ (Packet) ನ ಹಿಂಭಾಗದಲ್ಲಿ ಬಹಳಷ್ಟು ಮುಖ್ಯವಾದ ಮಾಹಿತಿಗಳಿರುತ್ತವೆ. ನೀವು ಸರಿಯಾಗಿ ಓದಿದ್ರೆ ಕೆಲವೊಂದು ಪದಾರ್ಥವನ್ನು ಖರೀದಿ ಮಾಡೋದೇ ಇಲ್ಲ. ಈ ಮಾಹಿತಿ ನಿಮ್ಮ ಆರೋಗ್ಯ (Health) ದ ಜೊತೆ ಥಳುಕು ಹಾಕಿಕೊಂಡಿದೆ. ಪ್ಯಾಕೆಟ್‌ನಲ್ಲಿರುವ ಪೌಷ್ಟಿಕಾಂಶ (Nutrition) ದ ಸಂಗತಿಗಳನ್ನು ನೋಡುವ ಮೂಲಕ ನೀವು ಆಹಾರದ ಗುಣಮಟ್ಟವನ್ನು ನಿರ್ಣಯಿಸಲು ಕಲಿಯಬಹುದು. ನಾವಿಂದು ಪ್ಯಾಕೆಟ್ ಹಿಂದಿರುವ ಮಾಹಿತಿಯನ್ನು ಹೇಗೆ ತಿಳಿದುಕೊಳ್ಳಬೇಕು ಎಂಬುದನ್ನು ಹೇಳ್ತೇವೆ.

ಬೆಂಗಳೂರಿನಿಂದ ಹೊರಟ ಇಂಡಿಗೋ ವಿಮಾನದಲ್ಲಿ ನೀಡಿದ ಸ್ಯಾಂಡ್‌ವಿಚ್‌ನಲ್ಲಿ ಸಿಕ್ತು ಬೋಲ್ಟ್‌

ಮೊದಲನೆಯದಾಗಿ, ಭಾರತದಲ್ಲಿ ಮಾಡುವ ಆಹಾರದ ಲೇಬಲಿಂಗ್ ಅನ್ನು ವ್ಯಕ್ತಿಯ ಆಹಾರವು 2000 ಕಿಲೋ ಕ್ಯಾಲೋರಿ ಎಂದು ಭಾವಿಸಿ ಮಾಡಲಾಗುತ್ತದೆ. ಇದನ್ನು ಪ್ರಮಾಣಿತವಾಗಿ ಪರಿಗಣಿಸಿ, ಪ್ರತಿ ಆಹಾರ ಪ್ಯಾಕೆಟ್‌ನಲ್ಲಿ ಶಿಫಾರಸು ಮಾಡಲಾದ ಆಹಾರ ಭತ್ಯೆಯನ್ನು ಸಹ ನಿಗದಿಪಡಿಸಲಾಗಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪ್ರಕಾರ, ಕಾರ್ಬೋಹೈಡ್ರೇಟ್‌ಗಳ ಶಿಫಾರಸು ಮಾಡಲಾದ ಆಹಾರದ ಅನುಮತಿ ದಿನಕ್ಕೆ 130 ಗ್ರಾಂ. 

ಮೂಳೆಗಳು ಗಟ್ಟಿಯಾಗಿ ಇರ್ಬೇಕು ಅಂದ್ರೆ ಇಂಥಾ ಆಹಾರ ಮಿಸ್ ಮಾಡ್ದೆ ತಿನ್ನಿ

ಸಂಸ್ಕರಿಸಿದ ಕಡಲೆಕಾಯಿಯ 30 ಗ್ರಾಂ ಪ್ಯಾಕೆಟ್ ಅನ್ನು ತಿಂದಿದ್ದೀರಿ ಎಂದು ಭಾವಿಸೋಣ. ಲೇಬಲ್ ಪ್ರಕಾರ, ಇದು ಶೇಕಡಾ 24ರಷ್ಟು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಆದ್ದರಿಂದ ಇದು ಶಿಫಾರಸು ಮಾಡಲಾದ ಆಹಾರದ ಭತ್ಯೆಯ ಸರಿಸುಮಾರು ಶೇಕಡಾ 18 ರಷ್ಟಾಯಿತು. ಅಂದರೆ ನೀವು ಸಂಸ್ಕರಿಸಿದ ಕಡಲೆಕಾಯಿಯ ಪ್ಯಾಕೆಟ್‌ಗಳಿಂದ 18 ಪ್ರತಿಶತ ಕಾರ್ಬೋಹೈಡ್ರೇಟ್ ಅನ್ನು ಪಡೆದುಕೊಂಡಿದ್ದೀರಿ. ನೀವು 100 ಗ್ರಾಂ ಸೇವಿಸಿದರೆ, ನೀವು ದಿನದ 80 ಪ್ರತಿಶತದಷ್ಟು ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಿದ್ದೀರಿ ಎಂದರ್ಥ.  ದಿನವಿಡೀ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವ ಇತರ ವಸ್ತುಗಳನ್ನು ಸೇವಿಸಿದರೆ, ನೀವು ಖಂಡಿತವಾಗಿಯೂ ದಿನದ ಕಾರ್ಬೋಹೈಡ್ರೇಟ್ ಮಿತಿಯನ್ನು ಮೀರುತ್ತೀರಿ ಎಂದು ನೆನಪಿಟ್ಟುಕೊಳ್ಳಿ. 

ಪ್ಯಾಕೆಟ್‌ನ ಹಿಂಭಾಗದಲ್ಲಿ ನೀವು ಸರ್ವಿಂಗ್ ಸೈಜ್  ಲೇಬಲ್ ಅನ್ನು ಕಾಣಬಹುದು. ಎಲ್ಲಾ ಇತರ ಮಾಹಿತಿಯು ಸೇವೆಯ ಪ್ರಮಾಣವನ್ನು ಆಧರಿಸಿದೆ. ಅನೇಕ ಪ್ಯಾಕೆಟ್‌ಗಳು ಒಂದಕ್ಕಿಂತ ಹೆಚ್ಚು ಸೇವೆಗಳನ್ನು ಒಳಗೊಂಡಿರುತ್ತವೆ. ಭಾರತದಲ್ಲಿ, ಆಹಾರ ಪ್ಯಾಕೆಟ್ ಲೇಬಲ್‌ಗಳಲ್ಲಿ 100 ಗ್ರಾಂಗೆ ಪೋಷಕಾಂಶಗಳನ್ನು ಬರೆಯಲಾಗುತ್ತದೆ. ನೀವು ಒಂದೇ ಬಾರಿಗೆ 100 ಗ್ರಾಂಗಿಂತ ಹೆಚ್ಚು ತಿನ್ನುತ್ತಿದ್ದರೆ, ಅದೇ ಪ್ರಮಾಣದ ಪೋಷಕಾಂಶಗಳು ನಿಮ್ಮ ದೇಹವನ್ನು ಪ್ರವೇಶಿಸುತ್ತವೆ. ಯಾವ ಅಂಶವು ಹೆಚ್ಚಿನ ಪ್ರಮಾಣದಲ್ಲಿರುತ್ತದೆಯೋ ಅದನ್ನು ಮೊದಲು ಬರೆಯಲಾಗುತ್ತದೆ. ಕಡಿಮೆ ಇರುವದು ಕೊನೆಯಲ್ಲಿರುತ್ತದೆ.  

ನೀವು ಯಾವುದೇ ಪ್ಯಾಕೆಟ್ ಖರೀದಿ ಮಾಡುವ ವೇಳೆ ಒಟ್ಟು ಕೊಬ್ಬು, ಸ್ಯಾಚುರೇಟೆಡ್ ಕೊಬ್ಬು, ಉಪ್ಪು, ಸೋಡಿಯಂ ಮತ್ತು ಸಕ್ಕರೆ ಪ್ರಮಾಣವನ್ನು ಪರೀಕ್ಷೆ ಮಾಡಿ. ಈ ಎಲ್ಲಾ ಘಟಕಗಳು ನಿಮ್ಮ ತೂಕ ಮತ್ತು ರಕ್ತದೊತ್ತಡದಲ್ಲಿ ಬದಲಾವಣೆಗಳನ್ನು ಉಂಟುಮಾಡಬಹುದು, ಇದು ಹೃದಯ ಕಾಯಿಲೆಗಳು ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸಬಹುದು

ಆರೋಗ್ಯವಂತ ವಯಸ್ಕನು ದಿನಕ್ಕೆ 25 ಗ್ರಾಂ ಗಿಂತ ಹೆಚ್ಚು ಸಕ್ಕರೆಯನ್ನು ಸೇವಿಸಬಾರದು. ನೀವು ಪ್ಯಾಕೆಟ್ ನಲ್ಲಿರುವ 100 ಮಿಲಿಲೀಟರ್ ಜ್ಯೂಸ್ ಸೇವನೆ ಮಾಡಿದರೆ  ಅದರಲ್ಲಿ ನೀವು ಪಡೆಯುವ ಒಟ್ಟು ಸಕ್ಕರೆ 12.6 ಗ್ರಾಂ. ಇದರಲ್ಲಿ ಪ್ರತ್ಯೇಕವಾಗಿ ಸೇರಿಸಲಾದ ಸಕ್ಕರೆ 8.3 ಗ್ರಾಂ. ಇದು ನಿಮ್ಮ ದೇಹಕ್ಕೆ ಅಗತ್ಯವಿರೋದಿಲ್ಲ. ಎಲ್ಲ ಪೋಷಕಾಂಶವನ್ನು ನೀವು ಹೀಗೆ ನೋಡಿ, ಖರೀದಿ ಮಾಡಿ, ಸೇವನೆ ಮಾಡಿದಾಗ ನಿಮ್ಮ ಆರೋಗ್ಯದಲ್ಲಿ ಯಾವುದೇ ವ್ಯತ್ಯಯವಾಗೋದಿಲ್ಲ.

click me!