ಮನೆ ಆಹಾರ ತಿಂದ್ರೂ ಗ್ಯಾಸ್ ಆಗ್ತಿದೆಯಾ? ಬ್ರೇಕ್ ಫಾಸ್ಟ್‌ನಲ್ಲಿದೆ ಗುಟ್ಟು

By Suvarna News  |  First Published Feb 14, 2024, 6:18 PM IST

ಯಾರನ್ನು ಕೇಳಿದ್ರೂ ಗ್ಯಾಸ್ಟ್ರಿಕ್ ಸಮಸ್ಯೆ ಹೇಳ್ತಾರೆ, ಒಂದಿಷ್ಟು ಮಾತ್ರೆ ತೆಗೆದುಕೊಳ್ತಾರೆ. ಗ್ಯಾಸ್ ಕಾಡಬಾರದು ಅಂದ್ರೆ ಹೊರಗಿನ ತಿಂಡಿ ಮಾತ್ರವಲ್ಲ ಮನೆ ಒಳಗಿನ ಉಪಹಾರ ಬದಲಾಗಬೇಕು. ಆಗ್ಲೇ ನೀವು ಆರೋಗ್ಯವಾಗಿರೋದು. 


ಹೊಟೇಲ್, ಹೊರಗಡೆ ಆಹಾರ ತಿಂದು ತುಂಬಾ ದಿನವಾಗಿರುತ್ತೆ, ಪ್ರತಿ ದಿನ ಮನೆಯಲ್ಲಿ ಮಾಡಿದ ಆಹಾರವನ್ನೇ ಸೇವನೆ ಮಾಡ್ತಾ ಇರ್ತೀರಿ, ಆದ್ರೂ ಗ್ಯಾಸ್ಟ್ರಿಕ್ ಸಮಸ್ಯೆ ಹೋಗಿರೋದಿಲ್ಲ. ಮಧ್ಯಾಹ್ನ ಆಗ್ತಿದ್ದಂತೆ ಹೊಟ್ಟೆ ಊದಿಕೊಳ್ಳಲು ಶುರುವಾಗುತ್ತದೆ. ಕೆಲವರಿಗೆ ತೇಗು ಬಂದ್ರೆ ಮತ್ತೆ ಕೆಲವರು ಗ್ಯಾಸ್ ಬಿಡಲು ಶುರು ಮಾಡಿರುತ್ತಾರೆ. ಇಡೀ ದಿನ ಕಿರಿಕಿರಿ ಎನ್ನಿಸುವ ಸಮಸ್ಯೆ ಇದು. ಈಗಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಸರ್ವೆ ಸಾಮಾನ್ಯ ಎನ್ನುವಂತಾಗಿದೆ. ಪ್ರತಿ ದಿನ ಇದಕ್ಕೆ ಮಾತ್ರೆ ತೆಗೆದುಕೊಳ್ಳುವವರಿದ್ದಾರೆ. ಹೊರಗಿನ ಆಹಾರ ಗ್ಯಾಸ್ಟ್ರಿಕ್ ಗೆ ಕಾರಣವಾಗುತ್ತೆ ಎನ್ನುವ ಕಾರಣಕ್ಕೆ ಅನೇಕರು ಬೀದಿ ಬದಿಯಲ್ಲಿ, ಹೊಟೇಲ್ ನಲ್ಲಿ ಆಹಾರ ಸೇವನೆ ಮಾಡೋದನ್ನು ಸಂಪೂರ್ಣ ಬಿಟ್ಟಿರುತ್ತಾರೆ. ಈ ಮೂಲಕ ತಾವು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದೇವೆ ಎಂದು ಭಾವಿಸ್ತಾರೆ. ಆದ್ರೆ ಮನೆ ಆಹಾರ ಕೂಡ ಗ್ಯಾಸ್ಟ್ರಿಕ್ ಗೆ ಕಾರಣವಾಗುತ್ತೆ ಎನ್ನುವುದು ನಿಮಗೆ ಗೊತ್ತಾ?. 

ಪ್ರತಿ ದಿನ ಬೆಳಿಗ್ಗೆ ಉಪಹಾರ (Breakfast) ಸೇವನೆ ಮಾಡೋದು ಬಹಳ ಮುಖ್ಯ. ಬೆಳಿಗ್ಗೆ ಒಂಭತ್ತು ಗಂಟೆಯೊಳಗೆ ಉಪಹಾರ ಮುಗಿಸುವಂತೆ ತಜ್ಞರು ಸಲಹೆ ನೀಡುತ್ತಾರೆ. ನೀವು ಉಪಹಾರಕ್ಕೆ ಏನು ತೆಗೆದುಕೊಳ್ಳುತ್ತೀರಿ ಎಂಬುದೂ ಇಲ್ಲಿ ಮುಖ್ಯವಾಗುತ್ತದೆ. ಮನೆ ಆಹಾರ (Food) ಎನ್ನುವ ಕಾರಣಕ್ಕೆ ಎಲ್ಲ ಆಹಾರ ಒಳ್ಳೆಯದಲ್ಲ. ಕೆಲ ಆಹಾರವನ್ನು ನೀವು ಅಪ್ಪಿತಪ್ಪಿಯೂ ಬೆಳಿಗ್ಗೆ ಬ್ರೇಕ್ ಫಾಸ್ಟ್ ರೂಪದಲ್ಲಿ ಸೇವನೆ ಮಾಡಬಾರದು.

Latest Videos

undefined

ಆಯುರ್ವೇದದ ಪ್ರಕಾರ ಬೆಳಗ್ಗೆದ್ದು ಇಂಥಾ ಆಹಾರ ತಿಂದ್ರೆ ಬೇಗ ಸ್ಲಿಮ್ ಆಗ್ಬೋದು

ಬೆಳಿಗ್ಗೆ (Morning) ಈ ಆಹಾರದಿಂದ ದೂರ ಇರಿ : 

ಟೀ – ಕಾಫಿ (Tea–Coffee) : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಅಥವಾ ಕಾಫಿ ಕುಡಿದು ಒಂದು ಬಿಸ್ಕತ್ ತಿನ್ನುವ ಮಂದಿ ಅನೇಕರಿದ್ದಾರೆ. ನಿಮ್ಮ ಈ ಆಹಾರ ಪದ್ಧತಿ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಗೆ ಕಾರಣವಾಗುತ್ತದೆ. ಹೊಟ್ಟೆಯಲ್ಲಿ ಆಮ್ಲ ಉತ್ಪಾದನೆಗೆ ಇದು ಉತ್ತೇಜನ ನೀಡುತ್ತದೆ. ಹಾಲಿನ ಟೀ ಕುಡಿದಾಗ ಲ್ಯಾಕ್ಟೋಸ್ ಅಸಹಿಷ್ಣುತೆಗೆ ಕಾರಣವಾಗುತ್ತದೆ. ಇದು ಜೀರ್ಣಕಾರಿ ಸಮಸ್ಯೆಯನ್ನುಂಟು ಮಾಡುತ್ತದೆ. ಪ್ರತಿ ದಿನ ನೀವು ಹರ್ಬಲ್ ಟೀ ಸೇವನೆ ಅಭ್ಯಾಸ ಮಾಡಿಕೊಳ್ಳಿ.

ಒಂದು ತಿಂಗಳು ಡೈರಿ ಉತ್ಪನ್ನ ತ್ಯಜಿಸಿದ್ರೆ ಏನಾಗುತ್ತೆ? ಪ್ರಯೋಜನ ಕೇಳಿದ್ರೆ ನೀವು ಇಂದೇ ಈ ಡಯಟ್‌ಗೆ ಹೊರಳುತ್ತೀರಿ

ಹೂಕೋಸು – ಎಲೆಕೋಸು ಸೇವನೆ : ಗೋಬಿ ಪರಾಠ ಅಥವಾ ಎಲೆಕೋಸಿನ ಪಲ್ಯ ನಿಮಗೆ ಇಷ್ಟವಾಗಿದ್ದರೆ ಅದನ್ನು ಮಧ್ಯಾಹ್ನದ ಊಟಕ್ಕೆ ಶಿಫ್ಟ್ ಮಾಡಿ. ಇವು ಕಾರ್ಬೋಹೈಡ್ರೇಟ್ ಗಳನ್ನು ಹೊಂದಿವೆ. ಇವು ಜೀರ್ಣವಾಗೋದಿಲ್ಲ. ಇದ್ರಿಂದ ಗ್ಯಾಸ್ ಉತ್ಪತ್ತಿಯಾಗುತ್ತದೆ. ನೀವು ಬೆಳಗಿನ ಬ್ರೇಕ್ ಫಾಸ್ಟ್ ಗೆ ಪಾಲಕ್, ಚೀನಿಕಾಯಿ ಸೇರಿದಂತೆ  ಕಡಿಮೆ ಕಾರ್ಬ್ ಹೊಂದಿರುವ ತರಕಾರಿ ಆಯ್ಕೆ ಮಾಡಿ.

ಸೇಬು ಹಣ್ಣು – ಪೇರಲೆ ಹಣ್ಣು : ಸೇಬು ಹಾಗೂ ಪೇರಲೆ ಹಣ್ಣು ಎರಡೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಪ್ರತಿ ದಿನ ನೀವು ಸೇವನೆ ಮಾಡಬಹುದು. ಹಾಗಂತ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಡಿ. ಈ ಎರಡೂ ಹಣ್ಣಿನಲ್ಲಿ ಫ್ರಕ್ಟೋಸ್ ಮತ್ತು ಫೈಬರ್ ಹೆಚ್ಚಿರುತ್ತದೆ. ಇದು ಗ್ಯಾಸ್ ಉತ್ಪಾದನೆಗೆ ಸಹಾಯ ಮಾಡುತ್ತದೆ.

ಈರುಳ್ಳಿ – ಸೌತೆಕಾಯಿ : ಬೆಳಿಗ್ಗೆ ಬ್ರೇಕ್ ಫಾಸ್ಟ್ ಆರೋಗ್ಯಕರವಾಗಿರಬೇಕು ಎನ್ನುವ ಕಾರಣಕ್ಕೆ ಕೆಲವರು ಸೌತೆಕಾಯಿ, ಈರುಳ್ಳಿ ಸಲಾಡ್ ತಿನ್ನುತ್ತಾರೆ. ಇದು ಒಳ್ಳೆಯದಲ್ಲ. ಇವು ಅನಿಲ ಉತ್ಪತ್ತಿ ಮಾಡುತ್ತವೆ. ಇವುಗಳ ಬದಲು ಬೆಳಿಗ್ಗೆ ಬೇಯಿಸಿದ ತರಕಾರಿ ತಿನ್ನಿ.

ಕಾರ್ನ್ ಕೂಡ ಒಳ್ಳೆಯದಲ್ಲ : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಾರ್ನ್ ತಿನ್ನೋದು ಸೂಕ್ತವಲ್ಲ. ಅದು ಸೆಲ್ಯುಲೋಸ್ ಹೊಂದಿದೆ. ಕೆಲವರಿಗೆ ಇದು ಸುಲಭವಾಗಿ ಜೀರ್ಣವಾಗುವುದಿಲ್ಲ. ಇದ್ರಿಂದ ಗ್ಯಾಸ್ ಉತ್ಪತ್ತಿಯಾಗುತ್ತದೆ. 

click me!