ದುರಹಂಕಾರಿಯಂತೆ ವರ್ತಿಸುತ್ತಿದ್ದ ಗ್ರಾಹಕನ ಮೇಲೆ ಫಾಸ್ಟ್‌ಫುಡ್ ಸಂಸ್ಥೆ ಮೆಕ್‌ಡೊನಾಲ್ಡ್ ಸಿಬ್ಬಂದಿಯೋರ್ವ ಕಾಫಿ ಎರಚಿದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.
ಸಿಡ್ನಿ: ದುರಹಂಕಾರಿಯಂತೆ ವರ್ತಿಸುತ್ತಿದ್ದ ಗ್ರಾಹಕನ ಮೇಲೆ ಫಾಸ್ಟ್‌ಫುಡ್ ಸಂಸ್ಥೆ ಮೆಕ್‌ಡೊನಾಲ್ಡ್ ಸಿಬ್ಬಂದಿಯೋರ್ವ ಕಾಫಿ ಎರಚಿದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆಸ್ಟ್ರೇಲಿಯಾದ ಮೆಕ್‌ಡೊನಾಲ್ಡ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ಬಿಡುಗಡೆ ಮಾಡಿದ್ದು, ಮೆಕ್‌ಡೊನಾಲ್ಡ್ ಸಿಬ್ಬಂದಿ ಗ್ರಾಹಕರೊಂದಿಗೆ ಪ್ರತೀಕಾರದ ರೀತಿ ವರ್ತಿಸುವುದು ನಮ್ಮ ನೀತಿಗೆ ವಿರುದ್ಧವಾಗಿದೆ ಎಂದು ಹೇಳಿದೆ. ಅಲ್ಲದೇ ಈ ವೀಡಿಯೋದಲ್ಲಿ ಇರುವುದಕ್ಕಿಂತ ದೊಡ್ಡ ಸ್ಟೋರಿ ಘಟನೆ ಹಿಂದೆ ಇದೆ ಎಂದು ಹೇಳಿದೆ.
ಸಿಡ್ನಿಯ ಸೆಂಟ್ರಲ್ ಬ್ಯುಸಿನೆಸ್ ಜಿಲ್ಲೆಯಲ್ಲಿರುವ ಮೆಕ್‌ಡೊನಾಲ್ಡ್ (McDonalds) ಫಾಸ್ಟ್‌ಫುಡ್ ಚೈನ್‌ನ ವೈನ್ಯಾರ್ಡ್ ಸ್ಟೋರ್‌ನಲ್ಲಿ ಈ ಘಟನೆ ನಡೆದಿದೆ. ಕೌಂಟರ್‌ನಲ್ಲಿ ನಿಂತಿದ್ದ ಸಿಬ್ಬಂದಿಯೊಬ್ಬರು ಕೋಪಗೊಂಡ ಗ್ರಾಹಕನ ಮೇಲೆ ಪಾನೀಯ ಎಸೆದಿದ್ದು, ಈ ವೇಳೆ ಆತನೂ ಸುಮ್ಮನಿರದೇ ಮೆಕ್ ಸಿಬ್ಬಂದಿಯ ಮೇಲೆ ಅಲ್ಲಿದ್ದ ಉಳಿದ ಪಾನೀಯ ಗ್ಲಾಸ್ ಅನ್ನು ಎಸೆದಿದ್ದಾನೆ. ಗ್ರಾಹಕ ಹಾಗೂ ಸಿಬ್ಬಂದಿಯ ಈ ಕೆಟ್ಟ ಕಾಳಗ ಆ ಸ್ಟೋರ್‌ನಲ್ಲಿದ್ದ ಕ್ಯಾಮರಾದಲ್ಲಿ ಸೆರೆ ಆಗಿದ್ದು, ವೈರಲ್ ಆಗಿದೆ. ಜೂನ್ 15 ರಂದು ಈ ಘಟನೆ ನನಡೆದಿದೆ ಎಂದು News.com.au ವರದಿ ಮಾಡಿದೆ.
ಬರ್ಗರ್‌ನಲ್ಲಿ ಸಿಕ್ತು ಇಲಿಯ ಹಿಕ್ಕೆ, ಗ್ರಾಹಕರು ಶಾಕ್, ಮೆಕ್ಡೊನಾಲ್ಡ್ಗೆ 5 ಕೋಟಿ ರೂ. ದಂಡ!
ಬ್ರೌನ್ ಕಾರ್ಡಿಗನ್ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ವೈರಲ್ ಆಗಿದೆ. ಒಂದು ದಿನದ ಹಿಂದೆ ಹಂಚಿಕೊಂಡ ಈ ವೀಡಿಯೋವನ್ನು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, ಹಲವರು ಕಾಮೆಂಟ್ ಮಾಡಿದ್ದಾರೆ. ಮೆಕ್‌ಡೊನಾಲ್ಡ್ ಆಫರ್‌ನಂತೆ ಇದು ಹ್ಯಾಪಿ ಮಿಲ್ (Happy Mill) ಅಲ್ಲ ಎಂದು ಒಬ್ಬರು ಈ ವೀಡಿಯೋ ನೋಡಿ ಕಾಮೆಂಟ್ ಮಾಡಿದ್ದಾರೆ. ಗ್ರಾಹಕರು ಏನೇ ಮಾಡಿದರು ಸಿಬ್ಬಂದಿ ಆತನ ಮೇಲೆ ಕಾಫಿ ಚೆಲ್ಲುವಂತಿಲ್ಲ ಕಾಫಿ ಬಿಸಿ ಹಾಗೂ ಅಪಾಯಕಾರಿಯಾಗಿರುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಅದೇ ವೀಡಿಯೊದ ಮತ್ತೊಂದು ಭಾಗವನ್ನು ನಾವು ನೋಡಿದ್ದೇವೆ. ಗ್ರಾಹಕ ಮೊದಲಿಗೆ ಮೆಕ್‌ಡೊನಾಲ್ಡ್ ಕೆಲಸಗಾರನ ಮೇಲೆ ಉಗುಳಿದ್ದಾನೆ. ಇದರಿಂದ ಸಿಟ್ಟಿಗೆದ್ದ ಕೆಲಸಗಾರ ಗ್ರಾಹಕನ ಮುಖಕ್ಕೆ ಕಾಫಿ ಎರಚಿದ್ದಾನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಬಗ್ಗೆ ನನ್ನ ಅಭಿಪ್ರಾಯ ಕೇಳಿದರೆ ಇದು ನ್ಯಾಯೋಚಿತವಾಗಿದೆ ಎಂದು ನಾನು ಹೇಳುತ್ತೇನೆ. ನೀವು ನನ್ನ ಮೇಲೆ ಉಗುಳಿದರೆ ನಾನು ನಿಮ್ಮ ಮೇಲೆ ಸಂಪೂರ್ಣ ಆಹಾರ ಎಸೆಯಲಾಗದು ಕೇವಲ ಪಾನೀಯವನ್ನಷ್ಟೇ ಎರಚಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಆಹಾರ ಸೇವಿಸುತ್ತಿದ್ದ ಬಾಲಕನಿಗೆ ಕಚ್ಚಿದ ಇಲಿ: ಹೈದರಾಬಾದ್‌ನ ಮೆಕ್‌ಡೊನಾಲ್ಡ್‌ನಲ್ಲಿ ಆಘಾತಕಾರಿ ಘಟನೆ
ಆದರೆ ಮೆಕ್‌ಡೊನಾಲ್ಡ್ ಸಂಸ್ಥೆಯ ನಿಯಮಗಳ ಪ್ರಕಾರ ಸಿಬ್ಬಂದಿ ಗ್ರಾಹಕರ ಮೇಲೆ ಪ್ರತೀಕಾರ ತೀರಿಸಿಕೊಳ್ಳುವಂತಿಲ್ಲ, ಅದರೂ ವೀಡಿಯೋದಲ್ಲಿ ಕಾಣಿಸುವುದಕ್ಕಿಂತ ಬೇರೆಯೇ ಕತೆ ಇದೆ . ಗ್ರಾಹಕ ರೆಸ್ಟೋರೆಂಟ್‌ಗೆ ಪ್ರವೇಶಿಸಿ ಕೌಂಟರ್ ಒಳಗೆ ಹೋಗಿ ಅಲ್ಲಿ ಅಡುಗೆ ಮನೆಯ ಕೆಲಸಕ್ಕೆ ಅಡ್ಡಿಪಡಿಸಲು ಮುಂದಾಗಿದ್ದಲ್ದೇ ಅಲ್ಲಿನ ಸಿಬ್ಬಂದಿಗೆ ಬೆದರಿಕೆಯೊಡ್ಡಿದ್ದ ಎಂದು ಮೆಕ್‌ಡೊನಾಲ್ಡ್‌ನ ಆಸ್ಟ್ರೇಲಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಫ್ರಾಂಚೈಸಿ ಜೊತೆ ಈ ವಿಚಾರದ ಬಗ್ಗೆ ಮಾತನಾಡುವುದಾಗಿ ಸಂಸ್ಥೆ ಹೇಳಿದೆ. ಈ ವೀಡಿಯೊದಲ್ಲಿನ ನಮ್ಮ ಉದ್ಯೋಗಿಗಳ ನಡವಳಿಕೆಯು ನಮ್ಮ ನೀತಿಗಳಿಗೆ ಅನುಗುಣವಾಗಿಲ್ಲ ಮತ್ತು ನಾವು ಈ ವಿಚಾರದ ಬಗ್ಗೆ ರೆಸ್ಟೋರೆಂಟ್ ಪ್ರಾಂಚೈಸಿ ಜೊತೆ ಪರಿಶೀಲಿಸುತ್ತಿದ್ದೇವೆ. ನಮ್ಮ ರೆಸ್ಟೋರೆಂಟ್‌ಗಳಲ್ಲಿ ಸಮಾಜ ವಿರೋಧಿ ನಡವಳಿಕೆಯನ್ನು ಸಹಿಸಲಾಗುವುದಿಲ್ಲ ಮತ್ತು ನಮ್ಮ ಗ್ರಾಹಕರನ್ನು ಎಲ್ಲಾ ಸಮಯದಲ್ಲೂ ಗೌರವದಿಂದ ನಡೆಸಿಕೊಳ್ಳಬೇಕೆಂದು ನಾವು ನಿರೀಕ್ಷಿಸುತ್ತೇವೆ. ನಾವು ಯಾವಾಗಲೂ ನಮ್ಮ ಗ್ರಾಹಕರಿಗಾಗಿ ನಮ್ಮ ಕೈಲಾದದ್ದನ್ನು ಮಾಡುತ್ತೇವೆ, ಆದರೆ ಅದರ ಜೊತೆ ಜೊತೆಗೆ ನಮ್ಮ ಉದ್ಯೋಗಿಗಳ ವಿರುದ್ಧ ನಿಂದನೆ, ಬೆದರಿಕೆ ಅಥವಾ ಹಿಂಸೆಯನ್ನು ನಾವು ಸ್ವೀಕರಿಸುವುದಿಲ್ಲ ಎಂದು ಮೆಕ್‌ಡೊನಾಲ್ಡ್ಸ್ ಹೇಳಿದೆ. ಘಟನೆಗೆ ಸಂಬಂಧಿಸಿದಂತೆ ನ್ಯೂ ಸೌತ್ ವೆಲ್ಸ್‌ನ ಪೊಲೀಸರು ವೈನ್ಯಾರ್ಡ್‌ಗೆ ಭೇಟಿ ನೀಡಿ ಪರಿಶೀಲಿಸಿದ್ದು 17 ವರ್ಷದ ಹಾಗೂ 15 ವರ್ಷದ ಇಬ್ಬರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿಡಿಯೋ ಇಲ್ಲಿ ವೀಕ್ಷಿಸಿ: https://www.instagram.com/p/Ctq1nezLgMC/